• Home
 • »
 • News
 • »
 • entertainment
 • »
 • Ekta Kapoor: ಏಕ್ತಾ ಕಪೂರ್ ಹಾಗೂ ಶೋಭಾ ಕಪೂರ್​ಗೆ ಬಂಧನ ಭೀತಿ, ಅರೆಸ್ಟ್ ವಾರೆಂಟ್ ಜಾರಿ!

Ekta Kapoor: ಏಕ್ತಾ ಕಪೂರ್ ಹಾಗೂ ಶೋಭಾ ಕಪೂರ್​ಗೆ ಬಂಧನ ಭೀತಿ, ಅರೆಸ್ಟ್ ವಾರೆಂಟ್ ಜಾರಿ!

ಏಕ್ತಾ ಕಪೂರ್ ಮತ್ತ ಶೋಭಾ ಕಪೂರ್ ಗೆ ಅರೆಸ್ಟ್ ವಾರೆಂಟ್ ಜಾರಿ

ಏಕ್ತಾ ಕಪೂರ್ ಮತ್ತ ಶೋಭಾ ಕಪೂರ್ ಗೆ ಅರೆಸ್ಟ್ ವಾರೆಂಟ್ ಜಾರಿ

ನಿರ್ಮಾಪಕಿ ಮತ್ತು ನಿರ್ದೇಶಕಿ ಏಕ್ತಾ ಕಪೂರ್ ಮತ್ತ ಅವರ ತಾಯಿ ಶೋಭಾ ಕಪೂರ್ ಗೆ ಬಿಹಾರದ ಬೇಗುಸರಾಯ್ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. ತಮ್ಮ 'XXX' ವೆಬ್ ಸರಣಿಯ ಎರಡನೇ ಸೀಸನ್‍ನಲ್ಲಿ ಹಲವಾರು ದೃಶ್ಯಗಳಲ್ಲಿ ಸೈನಿಕರನ್ನು ಮತ್ತು ಅವರ ಕುಟುಂಬದವರಿಗೆ ಅವಮಾನಿಸಿದ್ದಾರೆ.

 • Share this:

  ನಿರ್ಮಾಪಕಿ ಮತ್ತು ನಿರ್ದೇಶಕಿ ಏಕ್ತಾ ಕಪೂರ್ (Ekta Kapoor) ಮತ್ತು ಅವರ ತಾಯಿ ಶೋಭಾ ಕಪೂರ್ ಗೆ  (Shobha Kapoor ) ಬಿಹಾರದ (Bihar) ಬೇಗುಸರಾಯ್ ಕೋರ್ಟ್ (Court) ಅರೆಸ್ಟ್ ವಾರೆಂಟ್ (Arrest Warrant) ಜಾರಿ ಮಾಡಿದೆ. ತಮ್ಮ 'XXX' ವೆಬ್ ಸರಣಿಯ ಎರಡನೇ ಸೀಸನ್‍ನಲ್ಲಿ ಹಲವಾರು ದೃಶ್ಯಗಳಲ್ಲಿ ಸೈನಿಕರನ್ನು (Soldiers ) ಮತ್ತು ಅವರ ಕುಟುಂಬದವರಿಗೆ ಅವಮಾನಿಸಿದ್ದಾರೆ. ಅಲ್ಲದೇ ಅವರ ಭಾವನೆಗಳಿಗೆ ನೋವುಂಟು (Hurting) ಮಾಡಿದ್ದಾರೆ. ಆ ಆರೋಪದ ಮೇಲೆ ನಿನ್ನೆ ರಾತ್ರಿ ವಾರೆಂಟ್ ಹೊರಡಿಸಲಾಗಿದೆ. ಈ ಸರಣಿಯಲ್ಲಿ ಸೈನಿಕನ ಪತ್ನಿಗೆ ಸಂಬಂಧಿಸಿದ ಆಕ್ಷೇಪಾರ್ಹ ದೃಶ್ಯಗಳಿವೆ ಎಂದು ಮಾಜಿ ಸೈನಿಕ ಶಂಭುಕುಮಾರ್ ಆರೋಪಿಸಿದ್ದರು. ಅಲ್ಲದೇ ಈ ಸರಣಿ ಸೈನಿಕರ ವಿರುದ್ಧವೇ ಮಾಡಿದ್ದಾರೆ ಎಂದು ಆಕ್ಷೇಪಿಸಿದ್ದರು. ಅದಕ್ಕೆ ಇಬ್ಬರಿಗೂ ವಾರೆಂಟ್ ಜಾರಿ ಆಗಿದೆ.


  'XXX' ವೆಬ್ ಸರಣಿಯಲ್ಲಿ ಸೈನಿಕರಿಗೆ ಅವಮಾನ


  ಏಕ್ತಾ ಕಪೂರ್ ಮತ್ತ ಅವರ ತಾಯಿ ಶೋಭಾ ಅವರ 'XXX' ವೆಬ್ ಸರಣಿ ಸೀಸನ್ ಎರಡರಲ್ಲಿ ಬಹಳ ದೃಶ್ಯಗಳಲ್ಲಿ ನಮ್ಮ ದೇಶ ಕಾಯೋ ಹೆಮ್ಮೆಯ ಸೈನಿಕರನ್ನು ಅಗೌರವಿಸಲಾಗಿದೆಯಂತೆ. ಅದಲ್ಲದೇ ಸೈನಿಕನ ಪತ್ನಿಗೆ ಸಂಬಂಧಿಸಿದಂತೆ ಕೆಲವು ದೃಶ್ಯಗಳು ಆಕ್ಷೇಪಾರ್ಹವಾಗಿವೆಯಂತೆ. ಇದರಲ್ಲಿ ಸೈನಿಕರು ಮತ್ತು ಅವರ ಕುಟುಂಬದ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಗಳು ಕೇಳಿ ಬಂದಿವೆ.


  ಮಾಜಿ ಸೈನಿಕ ಶಂಭುಕುಮಾರ್ ದೂರು
  'XXX' ವೆಬ್ ಸರಣಿ ಸೀಸನ್ 2 ನಲ್ಲಿ ಸೈನಿಕರಿಗೆ ಅವಮಾನಿಸಿದ್ದಕ್ಕೆ ಮಾಜಿ ಸೈನಿಕ ಶಂಭುಕುಮಾರ್ ಅವರು ದೂರು ನೀಡಿದ್ದರು. ಸೈನಿಕರು ಮತ್ತು ಅವರ ಕುಟುಂಬಕ್ಕೆ ನೋವಾಗಿದೆ. ಸರಿಯಾದ ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ಬರೆದಿದ್ದಾರಂತೆ.


  ಇದನ್ನೂ ಓದಿ: Prabhas: ಪ್ರಭಾಸ್ ನನ್ನನ್ನು ದೂರ ಮಾಡಿದ್ದಾರಾ? ಖ್ಯಾತ ನಟ ಹೀಗಂದಿದ್ದೇಕೆ?


  ಒಟಿಟಿ ಪ್ಲಾಟ್‍ಫಾರ್ಮ್ ನಲ್ಲಿ ಸರಣಿ
  ಏಕ್ತಾ ಕಪೂರ್ ಅವರ ಬಾಲಾಜಿ ಟೆಲಿಫಿಲ್ಮ್ಸ್ ಲಿಮಿಟೆಡ್ ಒಡೆತನದ ಒಟಿಟಿ ಪ್ಲಾಟ್‍ಫಾರ್ಮ್ ಎಎಲ್‍ಟಿ ಬಾಲಾಜಿಯಲ್ಲಿ ಈ ಸರಣಿಯನ್ನು ಪ್ರಸಾರ ಮಾಡಲಾಗಿದೆ. ಶೋಭಾ ಕಪೂರ್ ಬಾಲಾಜಿ ಟೆಲಿಫಿಲ್ಮ್ ಗಳೊಂದಿಗೆ ಸಹ ಸಂಬಂಧ ಹೊಂದಿದ್ದಾರೆ ಎಂದು ಶಂಭು ಕುಮಾರ್ ಅವರ ವಕೀಲ ಹೃಷಿಕೇಶ್ ಪಾಠಕ್ ಹೇಳಿದ್ದಾರೆ.


  ನ್ಯಾಯಾಲಯವು ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಮತ್ತು ಈ ವಿಷಯಕ್ಕೆ ಸಂಬಂಧಿಸಿದಂತೆ ಅವರ ಮುಂದೆ ಹಾಜರಾಗುವಂತೆ ಹೇಳಿತ್ತು. ಆದರೆ ಅವರು ಆಕ್ಷೇಪಣೆಯ ನಂತರ ಸರಣಿಯಲ್ಲಿನ ಕೆಲವು ದೃಶ್ಯಗಳನ್ನು ತೆಗೆದುಹಾಕಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಆದರೆ ಅವರು ಅದನ್ನು ಮಾಡಲಿಲ್ಲ. ಅವರ ವಿರುದ್ಧ ವಾರೆಂಟ್ ಹೊರಡಿಸಿದ ನಂತರ ನ್ಯಾಯಾಲಯದ ಮುಂದೆ ಹಾಜರಾಗ ಬೇಕು ಎಂದು ಶ್ರೀ ಪಾಠಕ್ ಹೇಳಿದ್ದಾರೆ.


  2018 ರಲ್ಲಿ  ಮೊದಲ ಸೀಸನ್ 


  ಇದು ಹಾಸ್ಯ-ನಾಟಕವಾಗಿದ್ದು, ಪ್ರತಿ ಸಂಚಿಕೆಯು ಲೈಂಗಿಕ ಸಂಬಂಧಗಳ ವಿಭಿನ್ನ ಅಂಶಗಳನ್ನು ಸುತ್ತುವ ವಿಭಿನ್ನ ಕಥೆಯನ್ನು ಒಳಗೊಂಡಿದೆ. ಮೊದಲ ಸೀಸನ್ 2018 ರಲ್ಲಿ ಹೊರಬಂದರೆ, ಎರಡನೆಯದು ಜನವರಿ 2020 ರಲ್ಲಿ ಪ್ರೀಮಿಯರ್ ಆಗಿತ್ತು.


  ಇದನ್ನೂ ಓದಿ: Mahesh Babu: ಹಿರಿಯ ಪುತ್ರನ ಸಾವಿನ ದುಃಖದಲ್ಲಿಯೇ ಕೊನೆಯುಸಿರೆಳೆದ ಮಹೇಶ್ ಬಾಬು ತಾಯಿ; ಮದರ್ಸ್​ ಡೇಗೆ ಸರ್ಪ್ರೈಸ್ ನೀಡಿದ್ದ ಮಗ


  ಶಂಭುಕುಮಾರ್ ಅವರು ನೀಡಿದ ದೂರಿನ ಆಧಾರದ ಮೇಲೆ ನ್ಯಾಯಾಧೀಶ ವಿಕಾಸ್ ಕುಮಾರ್ ಅವರು ವಾರಂಟ್ ಹೊರಡಿಸಿದ್ದಾರೆ. ಮಾಜಿ ಸೈನಿಕ ಮತ್ತು ಬೇಗುಸರೈ ನಿವಾಸಿ ಕುಮಾರ್ ಅವರು 2020 ರಲ್ಲಿ ನೀಡಿದ ದೂರಿನಲ್ಲಿ ವೆಬ್ ಸರಣಿಯಲ್ಲಿ ಸೈನಿಕನ ಹೆಂಡತಿಗೆ ಸಂಬಂಧಿಸಿದ ಹಲವಾರು ಆಕ್ಷೇಪಾರ್ಹ ದೃಶ್ಯಗಳಿವೆ ಎಂದು ಹೇಳಿದ್ದಾರೆ.

  Published by:Savitha Savitha
  First published: