ರಕ್ಷಿತ್​ ಶೆಟ್ಟಿ ವಿರುದ್ಧ ಬಂಧನದ ವಾರೆಂಟ್​ ಹೊರಡಿಸಿದ ನ್ಯಾಯಾಲಯ; ಸಂಕಷ್ಟದಲ್ಲಿ ನಟ, ಏಕೆ ಗೊತ್ತಾ?

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಹಾಜರಾಗುವಂತೆ ನ್ಯಾಯಾಲಯ ಹಲವಾರು ಬಾರಿ ನಟ ರಕ್ಷಿತ್​ ಶೆಟ್ಟಿ ಅವರಿಗೆ ಸಮನ್ಸ್​ ಜಾರಿ ಮಾಡಿತ್ತು. ಆದರೆ, ರಕ್ಷಿತ್​ ಶೆಟ್ಟಿ ನ್ಯಾಯಾಲಯದ ಸಮನ್ಸ್​ಗೆ ಲಿಖಿತ ಉತ್ತರ ನೀಡಿರಲಿಲ್ಲ. ಅಲ್ಲದೆ, ವಿಚಾರಣೆಗೂ ಹಾಜರಾಗಿರಲಿಲ್ಲ.

news18-kannada
Updated:February 25, 2020, 8:43 PM IST
ರಕ್ಷಿತ್​ ಶೆಟ್ಟಿ ವಿರುದ್ಧ ಬಂಧನದ ವಾರೆಂಟ್​ ಹೊರಡಿಸಿದ ನ್ಯಾಯಾಲಯ; ಸಂಕಷ್ಟದಲ್ಲಿ ನಟ, ಏಕೆ ಗೊತ್ತಾ?
ರಕ್ಷಿತ್​ ಶೆಟ್ಟಿ
  • Share this:
ಸ್ಯಾಂಡಲ್​ವುಡ್​ ಖ್ಯಾತ ನಟ ನಿರ್ದೇಶಕ ರಕ್ಷಿತ್​ ಶೆಟ್ಟಿ ವಿರುದ್ಧ ಬಂಧನದ ವಾರೆಂಟ್​ ಜಾರಿಯಾಗಿದೆ. ‘ಕಿರಿಕ್​ ಪಾರ್ಟಿ‘ ಸಿನಿಮಾದಲ್ಲಿ ಲಹರಿ ಸಂಸ್ಥೆಯ ಆಡಿಯೋವನ್ನು ಬಳಸಲಾಗಿದೆ ಎಂಬ ಆರೋಪದಡಿ ನ್ಯಾಯಾಲಯ​ ರಕ್ಷಿತ್​ ಶೆಟ್ಟಿ ಅವರ ವಿರುದ್ಧ ಬಂಧನ ವಾರೆಂಟ್​ ಜಾರಿ ಮಾಡಿದೆ.

2016ರಲ್ಲಿ 'ಕಿರಿಕ್​ ಪಾರ್ಟಿ' ಸಿನಿಮಾ ಬಿಡುಗಡೆಯಾಗಿತ್ತು. ಆದರೆ, ಈ ಸಿನಿಮಾ ಬಿಡುಗಡೆಗೆ ಇನ್ನೂ 2 ದಿನ ಬಾಕಿ ಇರುವ ಸಂದರ್ಭದಲ್ಲಿ ಚಿತ್ರದಲ್ಲಿರುವ "ಹೇ.... ಹೂ ಆರ್​ ಯೂ" ಹಾಡು ಸಾಕಷ್ಟು ವಿವಾದಕ್ಕೀಡಾಗಿತ್ತು.

ರವಿಚಂದ್ರನ್​ ನಟನೆಯ ‘ಶಾಂತಿ ಕ್ರಾಂತಿ‘ ಚಿತ್ರಕ್ಕೆ ಬಳಸಿದ್ದ ‘ಮಧ್ಯರಾತ್ರಿಲಿ‘ ಹಾಡಿನ ಮ್ಯೂಸಿಕ್​ ಟ್ರ್ಯಾಕ್​ ಅನ್ನು ನಕಲು ಮಾಡಿ ಈ ಚಿತ್ರಕ್ಕೆ ಬಳಸಿಕೊಳ್ಳಲಾಗಿದೆ ಎಂದು ಲಹರಿ ಆಡಿಯೋ ಸಂಸ್ಥೆ ಚಿತ್ರ ತಂಡದ ಮೇಲೆ ಆಪಾದನೆ ಹೊರಿಸಿತ್ತು. ಅಲ್ಲದೆ, ಸಂಸ್ಥೆಯ ಮುಖ್ಯಸ್ಥ ಲಹರಿ ವೇಲು ಈ ಕುರಿತು ನ್ಯಾಯಕೇಳಿ ಕೋರ್ಟ್​ ಮೆಟ್ಟಿಲೇರಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಹಾಜರಾಗುವಂತೆ ನ್ಯಾಯಾಲಯ ಹಲವಾರು ಬಾರಿ ನಟ ರಕ್ಷಿತ್​ ಶೆಟ್ಟಿ ಅವರಿಗೆ ಸಮನ್ಸ್​ ಜಾರಿ ಮಾಡಿತ್ತು. ಆದರೆ, ರಕ್ಷಿತ್​ ಶೆಟ್ಟಿ ನ್ಯಾಯಾಲಯದ ಸಮನ್ಸ್​ಗೆ ಲಿಖಿತ ಉತ್ತರ ನೀಡಿರಲಿಲ್ಲ. ಅಲ್ಲದೆ, ವಿಚಾರಣೆಗೂ ಹಾಜರಾಗಿರಲಿಲ್ಲ. ಹೀಗಾಗಿ ನಗರದ 9ನೇ ಎಸಿಎಂಎಂ ನ್ಯಾಯಾಲಯ ರಕ್ಷಿತ್​ ಶೆಟ್ಟಿ ವಿರುದ್ಧ ಬಂಧನದ ವಾರೆಂಟ್​ ಹೊರಡಿಸಿದೆ.

ವಾರೆಂಟ್​
ಹೀಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ 20.ರಂದು ಕೋರ್ಟ್​ಗೆ ಹಾಜರಾಗುವಂತೆ ನ್ಯಾಯಾಲಯ ಪರಮ್‍ವ್ಹಾ ಸ್ಟುಡಿಯೋಸ್​,  ರಕ್ಷಿತ್ ಶೆಟ್ಟಿ ಹಾಗೂ  ಕಿರಿಕ್ ಪಾರ್ಟಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್​ಗೆ ಸಮನ್ಸ್​ ಜಾರಿ ಮಾಡಿತ್ತು. ಆದರೆ, ಈ ಬಾರಿಯೂ ವಿಚಾರಣೆಗೆ ಹಾಜರಾಗದ ಕಾರಣ ಇದೀಗ ಬಂಧನದ ವಾರೆಂಟ್​ ಹೊರಡಿಸಲಾಗಿದೆ.
First published:February 25, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading