Jote Jotheyali: ಅನಿರುದ್ಧ್‌ಗೆ ಸ್ಟಾರ್‌ ಹೋಟೆಲ್ ಬೇಕು, ಕಾಲು ಹಿಡಿದು ಆ್ಯಕ್ಟ್ ಮಾಡಿಸ್ಬೇಕು! ಜೊತೆ ಜೊತೆಯಲಿ ನಿರ್ಮಾಪಕರ ಗಂಭೀರ ಆರೋಪ

ಪ್ರತಿದಿನ ಶೂಟಿಂಗ್​ನಲ್ಲಿ ಗಲಾಟೆ ಮಾಡ್ತಿದ್ರು. ಶೂಟಿಂಗ್​ ಸರಿಯಾಗಿ ನಡೆಸಲು ಬಿಡುತ್ತಿರಲಿಲ್ಲ. ಸಹ ನಟರನ್ನು ಕೂಡ ತನ್ನ ಜೊತೆ ಸೇರಿಸಿಕೊಳ್ಳುತ್ತಿದ್ರು. ಇವರಿಂದಲೇ ಹೀರೋಯಿನ್ ವರ್ತನೆಯೂ ಬದಲಾಯ್ತು ಎಂದು ಆರೂರು ಜಗದೀಶ್​ ಆರೋಪಿಸಿದ್ದಾರೆ.

ಜೊತೆ ಜೊತೆಯಲ್ಲಿ ಸೀರಿಯಲ್ ಗಲಾಟೆ

ಜೊತೆ ಜೊತೆಯಲ್ಲಿ ಸೀರಿಯಲ್ ಗಲಾಟೆ

  • Share this:
ಜೀ ಕನ್ನಡದ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ (Jote Jotheyali) ನಾಯಕ ನಟ ಅನಿರುದ್ಧ್​​ಗೆ (Aniruddha) ಸೀರಿಯಲ್​ನಿಂದ ಗೇಟ್​ ಪಾಸ್​ ನೀಡಲಾಗಿದೆ. ನಟ ಅನಿರುದ್ಧ್​ ವಿರುದ್ಧ ಇಡೀ ಸೀರಿಯಲ್​ ತಂಡ ತಿರುಗಿಬಿದ್ದಿದೆ. ಜೊತೆ ಜೊತೆಯಲಿ ಸೀರಿಯಲ್​ನ ನಿರ್ದೇಶಕ ಹಾಗೂ ನಿರ್ಮಾಪಕ ಆರೂರು  ಜಗದೀಶ್ (Arooru Jagadish)​ ಅವರು ನಟ ಅನಿರುದ್ಧ್​ ಅವರಿಂದ ಸೀರಿಯಲ್​ ಶೂಟಿಂಗ್​ಗೆ ಆಗುತ್ತಿದ್ದ ತೊಂದರೆಯನ್ನು ಸ್ವತಃ ಅವ್ರೇ ಹೇಳಿಕೊಂಡಿದ್ದಾರೆ. ಆಡಿಯೋ ಒಂದನ್ನು ರಿಲೀಸ್​ ಮಾಡೋ ಮೂಲಕ ಆರೂರು ಜಗದೀಶ್​ ಅವರು ತಮ್ಮ ನೋವು ಹೊರಹಾಕಿದ್ದಾರೆ. ಸೀರಿಯಲ್ ಹಿಟ್ ಆಗಿ​ ಸ್ಟಾರ್ ಗಿರಿ ಬರ್ತಿದ್ದಂತೆ ನಟ ಅನಿರುದ್ದ್​​ ಬದಲಾದ್ರು ಎಂದು ಆರೂರು ಜಗದೀಶ್ ಹೇಳಿದ್ದಾರೆ.

 ಸೀರಿಯಲ್​ ಹಿಟ್​​ ಆಗ್ತಿದ್ದಂತೆ ಬದಲಾಯ್ತು ವರ್ತನೆ

ವಿಷ್ಣುವರ್ಧನ್​ ಅವರ ಅಳಿಯ ಅನ್ನೋ ಗೌರವ ಇತ್ತು. ಆರ್ಯವರ್ಧನ್​ ಪಾತ್ರಕ್ಕೂ ಅವರು ಜೀವ ತುಂಬಿದ್ರೆ. ಆದ್ರೆ ದಿನ ಕಳೆದಂತೆ ಅವರ ವರ್ತನೆ ಬದಲಾಯ್ತು, ಮೊದಲು ಆರ್, ಆರ್​ ನಗರ, ಗಾಂಧಿ ಬಜಾರ್ ಬೀದಿಯಲ್ಲಿ ಕುಳಿತು, ಅಲ್ಲೇ ತಿಂಡಿ ತಿಂದು ಕೆಲಸ ಮಾಡ್ತಿದ್ವಿ. ಆದ್ರೆ ಈಗ ಅನಿರುದ್ಧ್​ ಅವರಿಗೆ ಕ್ಯಾರವನ್ ಬೇಕೇ ಬೇಕು ಇಲ್ಲ ಶೂಟಿಂಗ್​ಗೆ ಬರಲ್ಲ. ತಿನ್ನಲು ಸ್ಟಾರ್​ ಹೋಟೆಲ್​ಗಳೇ ಬೇಕಿತ್ತು. ಸರ್​ ಇದು ಸಿನಿಮಾ ಅಲ್ಲ, ಸೀರಿಯಲ್ ಅಂದ್ರು ಕೇಳಲಿಲ್ಲ.

zee kannada jothe jotheyali serial hero Anirudha wrote a letter to PM Modi regarding Bangalore
ನಟ ಅನಿರುದ್ಧ್


ಕಥೆಯನ್ನೇ ತಿದ್ದುತ್ತಿದ್ದ ಅನಿರುದ್ದ್

ನಿರ್ದೇಶಕ, ನಿರ್ಮಾಪಕರಿಗೂ ಬೆಲೆ ಕೊಡುತ್ತಿರಲಿಲ್ಲ. ಕಥೆಯನ್ನೇ ತಿದ್ದುತ್ತಿದ್ದರು. ಅನೇಕರು ಇವ್ರಿಂದ ಕೆಲಸ ಬಿಟ್ಟು ಹೋದ್ರು. ಇವರಿಗಾಗಿ ಎಷ್ಟೋ ಜನರನ್ನು ಕೆಲಸದಿಂದ ತೆಗೆದಿದ್ದೇವೆ. ನನ್ನ ಬಗ್ಗೆ ಗಾಸಿಪ್​ ಮಾಡ್ತಿದ್ದಾರೆ ಎಂದು 5 ದಿನ ಶೂಟಿಂಗ್​ಗೆ ಬರಲಿಲ್ಲ. ಇವರ ಬಳಿ ಸಾರಿ ಕೇಳಿ ಕೇಳಿ, ಇವ್ರ ಕಾಲಿಡಿದು ಕೆಲಸ ಮಾಡ್ಸಿದ್ವಿ. ಅಷ್ಟೆ ಅಲ್ಲದೇ ಕಥೆಯನ್ನೇ ಬದಲಾಯಿಸುತ್ತಿದ್ದರು.

ಅನೇಕ ಬಾರಿ ಕೂಗಾಡಿ ಗಲಾಟೆ ಮಾಡ್ತಿದ್ರು

ಪ್ರತಿದಿನ ಶೂಟಿಂಗ್​ನಲ್ಲಿ ಗಲಾಟೆ ಮಾಡ್ತಿದ್ರು. ಶೂಟಿಂಗ್​ ಸರಿಯಾಗಿ ನಡೆಸಲು ಬಿಡುತ್ತಿರಲಿಲ್ಲ. ಸಹ ನಟರನ್ನು ಕೂಡ ತನ್ನ ಜೊತೆ ಸೇರಿಸಿಕೊಳ್ಳುತ್ತಿದ್ರು. ಇವರಿಂದಲೇ ಹೀರೋಯಿನ್ ವರ್ತನೆಯೂ ಬದಲಾಯ್ತು. ಇವರು ಇದ್ದಾಗ ಯಾರು ಮಾತಾಡುವಂತಿಲ್ಲ. ಕ್ಯಾಮಾರ ಅಕ್ಕ-ಪಕ್ಕ ಓಡಾಡುವಂತಿಲ್ಲ. ಪದೇ ಪದೇ ಒನ್ಸ್ ಮೋರ್ ಕೇಳ್ತಿದ್ರು. ಶೂಟಿಂಗ ಸಮಯ ಹಾಳು ಮಾಡ್ತಿದ್ರು ಎಂದು ನಿರ್ದೇಶಕ ಆರೂರು ಜಗದೀಶ್ ಆರೋಪಿಸಿದ್ದಾರೆ.

ಊಟಕ್ಕೆ ಸ್ಟಾರ್​ ಹೋಟೆಲ್​ಗಳೇ ಬೇಕು

ಆರ್​ಎಫ್​ಸಿಯಲ್ಲಿ ಶೂಟಿಂಗ್ ಮಾಡಲು ಹೋದ್ವಿ, ಅಲ್ಲು ತುಂಬಾ ತೊಂದರೆ ಕೊಟ್ಟರು. ಎಲ್ಲರೂ ಅಲ್ಲೇ ಊಟ ಮಾಡಿದ್ರೆ. ಇವ್ರಿಗೆ ಮಾತ್ರ ಸ್ಟಾರ್ ಹೋಟೆಲ್​ ಬೇಕು ಅಂತಿದ್ರು. ಬರೀ ಇವ್ರ ಊಟದ ಖರ್ಚೆ 2 ಲಕ್ಷ ದಾಟಿತ್ತು. ಹೀಗೆ ಆದ್ರೆ ನಾವು ಹಣ ತರೋದೆಲ್ಲಿ ಅನ್ನೋ ಭಯ ಶುರುವಾಗಿತ್ತು. ಅನೇಕ ಬಾರಿ ಮಧ್ಯದಲ್ಲೇ ಶೂಟಿಂಗ್​​ನಿಂದ ಎದ್ದು ಹೋಗಿದ್ದಾರೆ.

ಕಥೆಯನ್ನೇ ಬದಲಾಯಿಸಲು ಮುಂದಾದ್ರು

ಹೀಗೊಂದು ಗಂಭೀರ ಆರೋಪ ನಟ ಅನಿರುದ್ಧ್ ಮೇಲೆ ಕೇಳಿ ಬಂದಿದೆ. ಶೂಟಿಂಗ್‌ ಸೆಟ್‌ನಲ್ಲಿ ಅನಿರುದ್ಧ್ ಕಿರಿಕಿರಿ ಮಾಡುತ್ತಿದ್ದುದ್ದು ಒಂದೇ ಅಲ್ಲದೇ ತಮ್ಮ ಪಾತ್ರದ ಕಥೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು ಎನ್ನಲಾಗಿದೆ. ತಮಗೆ ಬೇಕಾದಂತೆ ಕಥೆ, ಸಂಭಾಷಣೆ ಬದಲಾಯಿಸುತ್ತಿದ್ದರರು ಎಂದು ಹೇಳಿದ್ದಾರೆ.

ನಾನು ಎಲ್ಲಿಂದ ಹಣ ತರೋದು

ನಾವು ಜೊತೆ ಜೊತೆಯಲಿ ಸೀರಿಯಲ್​ ಮೇಲೆ ಬಹಳ ಹಣ ಹಾಕಿದ್ದೇವೆ. ಮನೆಯಲ್ಲೇ ಚಿನ್ನವೆಲ್ಲಾ ಹಡವಿಟ್ಟು ಸೀರಿಯಲ್​ನಲ್ಲಿ ಅದ್ಧೂರಿ ತನ ತೋರಿಸಿದ್ದೇವೆ. ಆದ್ರೆ ಇವರು ಸರಿಯಾಗಿ ಶೂಟಿಂಗ್​ ನಡೆಯಲು ಬಿಟ್ಟಿಲ್ಲ ಹೀಗೆ ಆದ್ರೆ ನಮ್ಮ ಬದುಕು ಬೀದಿಗೆ ಬರುತ್ತೆ ಎಂದು ಆರೂರು ಜಗದೀಶ್​ ನೊಂದುಕೊಂಡ್ರು. ಅವ್ರು ಆಡೋ ಮಾತೇ ಬೇರೆ ನಡೆದುಕೊಳ್ಳೋ ರೀತಿಯೇ ಬೇರೆ ಎಂದು ಆರೂರು ಜಗದೀಶ್​ ಬೇಸರ ಹೊರಹಾಕಿದ್ದಾರೆ.
Published by:Pavana HS
First published: