Army of the Dead: ಆರ್ಮಿ ಆಫ್ ದ ಡೆಡ್ ಚಿತ್ರ ವಿಮರ್ಶೆ: ಬೇಸರ ತರಿಸುವ ಸ್ನೈಡರ್‌ನ ಝೋಂಬಿಗಳು

ಆರ್ಮಿ ಆಫ್ ದ ಡೆಡ್‍ನಲ್ಲಿ ಅವರು ಮತ್ತದೇ ಹಳೆಯ, ಕಥೆ ಹೇಳುವ ತಂತ್ರಗಳನ್ನು ಮುಂದುವರೆಸಿದ್ದಾರೆ. ಈ ದಿನಗಳಲ್ಲಿ ತೆರೆ ಕಾಣುವ ಹೆಚ್ಚಿನ ಸಿನಿಮಾಗಳಲ್ಲಿ ಅಂತದ್ದೇ ಕಥೆ ಇರುತ್ತದೆ. ಆದರೆ, ಎಂದಿನಂತೆ ಅವರು ಸಿನಿಮಾದ ಅವಧಿಯ ಕುರಿತು ಯಾವುದೇ ರಾಜಿ ಮಾಡಿಕೊಂಡಿಲ್ಲ.

ಆರ್ಮಿ ಆಫ್ ದ ಡೆಡ್ ಸಿನಿಮಾದ  ಪೋಸ್ಟರ್​

ಆರ್ಮಿ ಆಫ್ ದ ಡೆಡ್ ಸಿನಿಮಾದ ಪೋಸ್ಟರ್​

  • Share this:
ಸಿನಿಮಾ: ಆರ್ಮಿ ಆಫ್ ದ ಡೆಡ್

ನಿರ್ದೇಶಕ: ಝಾಕ್​ ಸ್ನೈಡರ್

ರೇಟಿಂಗ್​: 1.5/5

ಝಾಕ್​ ಸ್ನೈಡರ್ ಅವರ ಸಿನಿಮಾಗಳಿಂದ ಇತ್ತೀಚಿನ ದಿನಗಳಲ್ಲಿ ಹೊಸದನ್ನೇನೂ ನಿರೀಕ್ಷಿಸುವಂತಿಲ್ಲ. 'ಆರ್ಮಿ ಆಫ್ ದ ಡೆಡ್‌' ಚಿತ್ರಕ್ಕಿಂತ ಮೊದಲು ತೆರೆ ಕಂಡಿರುವ ಜಸ್ಟೀಸ್‌ ಲೀಗ್ – ದ ಸ್ನೈಡರ್ ಕಟ್ ಸಿನಿಮಾವನ್ನು ವೀಕ್ಷಿಸಿದ ಮೇಲಂತೂ ಅದು ಸಾಧ್ಯವೇ ಇಲ್ಲ ಎಂದೆನಿಸಿತ್ತು. ಝಾಕ್​ ಸ್ನೈಡರ್ ಅವರು ಪ್ರಸ್ತುತ ವಿಷಯಗಳ ಬಗ್ಗೆ ವಿಚಿತ್ರ, ಶೈಲೀಕೃತ ಮತ್ತು ಕುಹಕದ ಪ್ರತಿಕ್ರಿಯೆಗಳನ್ನು ನೀಡುತ್ತಾರೆ. ಹಾಗಾಗಿ, ಆರ್ಮಿ ಆಫ್ ದ ಡೆಡ್‍ನಲ್ಲಿ ಅವರು, ಅಪೋಕಲಿಪ್ಸ್ ಝೋಂಬಿಯಂತ, ಈ ಹಿಂದೆ ಬಂದು ಹೋಗಿರುವ ಬೇಜಾರು ತರಿಸುವಂತಹ ಕಥಾವಸ್ತುವನ್ನು ಆರಿಸಿಕೊಂಡದ್ದು ತಮಾಷೆಯಾಗಿ ಕಾಣುತ್ತಿದೆ. ಡಾನ್ ಆಫ್ ದ ಡೆತ್ ಮತ್ತು 300 ನಂತಹ ಅದ್ಭುತ ಸಿನಿಮಾಗಳನ್ನು ನೀಡಿರುವ ಸ್ನೈಡರ್‌ನಂತಹ ನಿರ್ದೇಶಕ ಈಗ ಇಂತಹ ಸಿನಿಮಾಗಳನ್ನು ಮಾಡುತ್ತಿದ್ದಾರೆ ಎಂದರೆ ನಂಬಲಿಕ್ಕಾಗುತ್ತಿಲ್ಲ.

ಆರ್ಮಿ ಆಫ್ ದ ಡೆಡ್‍ನಲ್ಲಿ ಅವರು ಮತ್ತದೇ ಹಳೆಯ, ಕಥೆ ಹೇಳುವ ತಂತ್ರಗಳನ್ನು ಮುಂದುವರೆಸಿದ್ದಾರೆ. ಈ ದಿನಗಳಲ್ಲಿ ತೆರೆ ಕಾಣುವ ಹೆಚ್ಚಿನ ಸಿನಿಮಾಗಳಲ್ಲಿ ಅಂತದ್ದೇ ಕಥೆ ಇರುತ್ತದೆ. ಆದರೆ, ಎಂದಿನಂತೆ ಅವರು ಸಿನಿಮಾದ ಅವಧಿಯ ಕುರಿತು ಯಾವುದೇ ರಾಜಿ ಮಾಡಿಕೊಂಡಿಲ್ಲ. ಹಾಗಾಗಿ, 150 ನಿಮಿಷಗಳ, ತಲೆಚಿಟ್ಟು ಹಿಡಿಸುವಂತ ಈ ಸಿನಿಮಾವು ಅಂತೂ ಇಂತೂ ಹೇಗೋ ಕೊನೆಗೊಳ್ಳುತ್ತದೆ.

Zack Snyder, Army of the Dead, Zombie, Army of the Dead, dave bautista, Ella Purnell, movie review, Netflix, rating, review, Rohit Vats, stars, Zack Snyder, ಝಾಕ್ ಸ್ನೈಡರ್, ಆರ್ಮಿ ಆಫ್ ದ ಡೆಡ್, ಝೋಂಬಿ, Army of the Dead Movie Review these zombies can totally bore us to death ae
ಆರ್ಮಿ ಆಫ್ ದ ಡೆಡ್ ಸಿನಿಮಾದ ಪೋಸ್ಟರ್​


ಬೆಂಗಾವಲು ಮಿಲಿಟರಿ ಪಡೆಯೊಂದು ,ಅತೀ ಭದ್ರತಾ ಹಡಗು ಸರಕನ್ನು ಲಾಸ್ ವೆಗಾಸ್‍ಗೆ ತರುವ ಮೂಲಕ ಸಿನಿಮಾ ಆರಂಭಗೊಳ್ಳುತ್ತದೆ. ಅದರ ಒಂದು ಕಡೆಯಲ್ಲಿ ಭಾರಿ ಶಸ್ತ್ರ ಸಜ್ಜಿತ ವಾಹನಗಳು ಬರುತ್ತಿದ್ದರೆ, ಇನ್ನೊಂದು ಕಡೆಯಲ್ಲಿ ಅತೀ ಸಂತೋಷದ ವ್ಯಕ್ತಿಯೊಬ್ಬ ತನ್ನ ಗೆಳೆತಿಯೊಂದಿಗೆ ವಾಹನ ಚಲಾಯಿಸುತ್ತಿರುತ್ತಾನೆ. ಮುಂದೇನಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತೇ ಇರುತ್ತದೆ. ಆದರೂ ಇದು ಸ್ನೈಡರ್ ಸಿನಿಮಾ ಆಗಿರುವುದರಿಂದ ಬೇರೇನಾದರೂ ವಿಶೇಷ ತಿರುವನ್ನು ನಾನು ನಿರೀಕ್ಷಿಸಿದ್ದೆ. ನನ್ನ ನಿರೀಕ್ಷೆ ಹುಸಿಯಾಯಿತು. ಅಷ್ಟು ಮಾತ್ರವಲ್ಲ, ಮೆಶಿನ್‍ಗನ್ ಹಿಡಿದಿರುವ ಡೇವ್ ಬೆಟಿಸ್ಟಾರನ್ನು 500 ವಿವಿಧ ಕೋನಗಳಲ್ಲಿ ಸೆರೆಹಿಡಿದಿರುವ ಮತ್ತು ಝೋಂಬಿ ರಾಜ ಪ್ರತಿ 30 ಸೆಕೆಂಡಿಗೆ ಬೆಳೆಯುವ ದೃಶ್ಯಗಳುಳ್ಳ ಕೊನೆಯೇ ಇಲ್ಲವೇನೋ ಎಂಬಂತೆ ಸಿನಿಮಾವನ್ನು ನೋಡಬೇಕಾಗಿ ಬಂತು.

ಇದನ್ನೂ ಓದಿ: ಬಾಲಿವುಡ್​ ಸಿನಿಮಾದಲ್ಲಿ ಕನ್ನಡದ ನಟ ಜೆಕೆ: ಕ್ರಿಕೆಟರ್​ ಪಾತ್ರದಲ್ಲಿ ಕಾರ್ತಿಕ್​ ಜಯರಾಮ್

ಸಾಮಾನ್ಯ ನಿರೂಪಣೆಯುಳ್ಳ ಈ ಸಿನಿಮಾದಲ್ಲಿ, ಹುಮಾ ಖುರೇಶಿ ತಮ್ಮ ಉಪಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂಬುದಷ್ಟೇ ಒಬ್ಬ ಭಾರತೀಯ ವೀಕ್ಷಕನಾಗಿ ನಾನು ಸಮಾಧಾನ ಪಟ್ಟುಕೊಳ್ಳುವಂತ ವಿಷಯ. ಈ ಸಿನಿಮಾದಲ್ಲಿ ಗೀತಾ ಎಂಬ ಹುಡುಗಿಯ ಪಾತ್ರವನ್ನು ನಿರ್ವಹಿಸಿರುವ ಹುಮಾ, ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಅಂದರೆ, ಅವರಿಗೆ ಏನನ್ನು ಮಾಡಲು ಹೇಳಿದ್ದಾರೋ, ಅದನ್ನು ಚಾಚೂ ತಪ್ಪದೇ ಪಾಲಿಸಿದ್ದಾರೆ. ಆ ಬಗ್ಗೆ ಯಾವುದೇ ಆಕ್ಷೇಪಗಳಿಲ್ಲ.

ಇದನ್ನೂ ಓದಿ: Pranitha Subhash: ಒಟಿಟಿಯಲ್ಲಿ ರಿಲೀಸ್ ಆಗಲಿದೆಯಂತೆ ಕನ್ನಡದ ನಟಿ ಪ್ರಣೀತಾ ಅಭಿನಯದ ಈ ಹೊಸ ಸಿನಿಮಾ..!

ಸಿನಿಮಾದಲ್ಲಿ ನೀರಸ ಸಂಭಾಷಣೆಗಳು ಹೆಚ್ಚಾಗಿದ್ದು, ಹಾಸ್ಯದ ದೃಶ್ಯಗಳು ನಗು ತರಿಸುವಲ್ಲಿ ಸೋತಿವೆ. ಇದನ್ನು ನಮ್ಮಿಂದ ಸಂಪೂರ್ಣ ಮನರಂಜನೆಯನ್ನು ಕಸಿದುಕೊಂಡ ಝೋಂಬಿ ಹೈಸ್ಟ್ - ಹೈಬ್ರೀಡ್ ಚಿತ್ರ ಎನ್ನಬಹುದು. ನಾವು ತಲೆ ತಲೆ ಚಚ್ಚಿಕೊಳ್ಳುವಷ್ಟರ ಮಟ್ಟಿಗೆ ನಮ್ಮನ್ನು ಝೋಂಬಿಗಳು ಬೇಸರ ತರಿಸುತ್ತವೆ. ಆರ್ಮಿ ಆಫ್ ದ ಡೆಡ್ ಎಲ್ಲ ಆಯಾಮಗಳಲ್ಲಿ ಸ್ನೈಡರ್ ನಿರ್ದೇಶನದ ಅತ್ಯಂತ ಕೆಟ್ಟ ಸಿನಿಮಾವೆಂದು ಪರಿಗಣಿಸಿದರೆ ತಪ್ಪಾಗುವುದಿಲ್ಲ.

ವಿಮರ್ಶೆ: ರೋಹಿತ್​ ವತ್ಸ್​
Published by:Anitha E
First published: