• Home
  • »
  • News
  • »
  • entertainment
  • »
  • ಚಿರು ಮಗನನ್ನು ಲಾಂಚ್‌ ಮಾಡುವುದು ನಾನೇ ಎಂದ ಅರ್ಜುನ್​ ಸರ್ಜಾ: ಮೊಮ್ಮಗನನ್ನು ಕಂಡ ಖುಷಿಯಲ್ಲಿ ಆ್ಯಕ್ಷನ್​ ಕಿಂಗ್​..!

ಚಿರು ಮಗನನ್ನು ಲಾಂಚ್‌ ಮಾಡುವುದು ನಾನೇ ಎಂದ ಅರ್ಜುನ್​ ಸರ್ಜಾ: ಮೊಮ್ಮಗನನ್ನು ಕಂಡ ಖುಷಿಯಲ್ಲಿ ಆ್ಯಕ್ಷನ್​ ಕಿಂಗ್​..!

ಮೇಘನಾ ಹಾಗೂ ಮಗುವನ್ನು ಭೇಟಿ ಮಾಡಿದ ಅರ್ಜುನ್​ ಸರ್ಜಾ

ಮೇಘನಾ ಹಾಗೂ ಮಗುವನ್ನು ಭೇಟಿ ಮಾಡಿದ ಅರ್ಜುನ್​ ಸರ್ಜಾ

ಆಸ್ಪತ್ರೆಗೆ ಬಂದ ಅರ್ಜುನ್ ಸರ್ಜಾ ಹಾಗೂ ಕುಟುಂಬದವರು ಸುಮಾರು ಒಂದು ಗಂಟೆ ಕಾಲ ಮೇಘನಾ ಹಾಗೂ ಮಗುವಿನ ಜತೆ ಕಾಲ ಕಳೆದು ಸಂಭ್ರಮಿಸಿದರು. ನಂತರ ಹೊರಬಂದು ಮಾಧ್ಯಮಗಳವ ಜತೆ ಸಂತಸ ಹಂಚಿಕೊಂಡಿದ್ದಾರೆ.

  • Share this:

ಅಕ್ಟೋಬರ್‌ 22ರಂದು ಚಿರು ಸರ್ಜಾ ಹಾಗೂ ಮೇಘನಾ ರಾಜ್‌ ನಿಶ್ಚಿತಾರ್ಥವಾಗಿದ್ದ ದಿನ. ಅಂದೇ ಮೇಘನಾ ರಾಜ್​ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಚಿರು ಅಗಲಿಕೆಯಿಂದ ಕಳೆದ ನಾಲ್ಕು ತಿಂಗಳಿನಿಂದ ನೋವುಂಡಿದ್ದ ಸರ್ಜಾ ಹಾಗೂ ಮೇಘನಾ ರಾಜ್​ ಅವರ ಕುಟುಂಬದಲ್ಲಿ ಹೊಸ ಹುರುಪು ತುಂಬಿದೆ. ಜೂನಿಯರ್‌ ಚಿರು ಬಂದ ಅಂತ ಎರಡೂ ಕುಟುಂಬಗಳು ಹಾಗೂ ಅಭಿಮಾನಿಗಳು ಸಂಭ್ರಮಿಸುವಂತೆ ಮಾಡಿದೆ. ಆದರೆ ಚೆನ್ನೈನಲ್ಲಿ ಶೂಟಿಂಗ್‌ ಒಂದರಲ್ಲಿ ಬ್ಯುಸಿಯಿದ್ದ ಕಾರಣ ತಕ್ಷಣವೇ ಚಿರು ಮಾವ ಅರ್ಜುನ್‌ ಸರ್ಜಾ ಅಲ್ಲಿಂದ ಬೆಂಗಳೂರಿಗೆ ಹೊರಡಲು ಸಾಧ್ಯವಾಗಿರಲಿಲ್ಲ. ಆದರೂ ಶೂಟಿಂಗ್‌ನಿಂದ ಬ್ರೇಕ್‌ ಪಡೆದು ಅರ್ಜುನ್ ಸರ್ಜಾ ನಿನ್ನೆಯೇ ಕಾರಿನಲ್ಲಿ ತಮ್ಮ ಕುಟುಂಬ ಸಮೇತರಾಗಿ ಬೆಂಗಳೂರಿಗೆ ತಲುಪಿದರು. ಜೋರು ಮಳೆಯಿಂದಾಗಿ ನಿನ್ನೆ ರಾತ್ರಿ ಮೇಘನಾ ದಾಖಲಾಗಿರುವ ಆಸ್ಪತ್ರೆಗೆ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿಯೇ. ಪತ್ನಿ ಆಶಾರಾಣಿ, ಪುತ್ರಿಯರಾದ ಐಶ್ವರ್ಯಾ ಅರ್ಜುನ್‌ ಹಾಗೂ ಅಂಜನಾ ಅರ್ಜುನ್‌ ಜೊತೆ ಅರ್ಜುನ್‌ ಸರ್ಜಾ ಇವತ್ತು ಅಕ್ಷ ಆಸ್ಪತ್ರೆಗೆ ಭೇಟಿ ನೀಡಿದರು.


ಆಸ್ಪತ್ರೆಗೆ ಬಂದ ಅರ್ಜುನ್ ಸರ್ಜಾ ಹಾಗೂ ಕುಟುಂಬದವರು ಸುಮಾರು ಒಂದು ಗಂಟೆ ಕಾಲ ಮೇಘನಾ ಹಾಗೂ ಮಗುವಿನ ಜತೆ ಕಾಲ ಕಳೆದು ಸಂಭ್ರಮಿಸಿದರು. ನಂತರ ಹೊರಬಂದು ಮಾಧ್ಯಮಗಳವ ಜತೆ ಸಂತಸ ಹಂಚಿಕೊಂಡಿದ್ದಾರೆ.

View this post on Instagram

chiru anna ❤❤❤❤


A post shared by Allu Raghu (@allu__raghu) on

36 ವರ್ಷಗಳ ಹಿಂದೆ ಚಿರು ಹುಟ್ಟಿದಾಗಲೂ ನಾನು ಚೆನ್ನೈನಲ್ಲಿ ಶೂಟಿಂಗ್‌ ಮಾಡುತ್ತಿದ್ದೆ. ಅವನು ಹುಟ್ಟಿದ ವಿಷಯ ತಿಳಿದು ಶೂಟಿಂಗ್‌ ನಿಲ್ಲಿಸಿ ಬೆಂಗಳೂರಿಗೆ ಬಂದಿದ್ದೆ. ಈಗ 36 ವರ್ಷಗಳ ಬಳಿಕ ಚಿರು ಮಗು ಹುಟ್ಟಿದ ಸಮಯದಲ್ಲೂ ನಾನು ಚೆನ್ನೈನಲ್ಲಿ ಶೂಟಿಂಗ್‌ ಮಾಡುತ್ತಿದ್ದೆ. ಚಿರುರನ್ನು  ಕೂಡ ನಾನೇ ಚಿತ್ರರಂಗದಲ್ಲಿ ಲಾಂಚ್‌ ಮಾಡಿದ್ದು. 20 ವರ್ಷಗಳ ಬಳಿಕ ಬಹುಶಃ ನಾನೇ ಚಿರು ಮಗನನ್ನೂ ಲಾಂಚ್‌ ಮಾಡುತ್ತೇನೆʼ ಎಂದು ಖುಷಿ ಹಂಚಿಕೊಂಡಿದ್ದಾರೆ ಅರ್ಜುನ್‌ ಸರ್ಜಾ.


ಇದನ್ನೂ ಓದಿ: ರಾತ್ರಿ ಫೋನ್​ ಮಾಡಿ ಎರಡು ಗಂಟೆ ಜಗ್ಗೇಶ್​ ಜೊತೆ ಮಾತನಾಡಿದ ಯುವರತ್ನ ನಿರ್ದೇಶಕ ಸಂತೋಷ್ ಆನಂದ್​ ರಾಮ್​


ಸೀಮಂತದ ಸಮಯದಲ್ಲಿ ಹಾರ್ಟಿಲಿ ವೆಲ್ಕಮ್‌ ಜೂನಿಯರ್‌ ಚಿರು ಎಂದು ನಾವೆಲ್ಲವೂ ಹಾಡುತ್ತಿದ್ದೆವು, ಗಂಡು ಮಗು ಆಗುತ್ತೆ ಅಂತ ನಮಗೂ ಗೊತ್ತಿರಲಿಲ್ಲ. ಚಿರು ಅಗಲಿಕೆ ನಮ್ಮ ಕುಟುಂಬದ ಪ್ರತಿಯೊಬ್ಬರಿಗೂ ಜೀರ್ಣಿಸಿಕೊಳ್ಳಲು ಆಗದಷ್ಟು ನೋವು ನೀಡಿತ್ತು. ಈಗ ಎಲ್ಲರ ಮುಖದಲ್ಲಿ ಕಾಂತಿ ಬಂದಿದ್ದು, ಸಣ್ಣ ನಗು ಕಾಣಿಸಿಕೊಂಡಿದೆ. ಚಿರು ಈ ಸಮಯದಲ್ಲಿ ಇರಬೇಕಿತ್ತು. ಈ ಸಂಭ್ರಮವನ್ನು ನೋಡಬೇಕಿತ್ತು ಎಂದು ಚಿರು ಅವರನ್ನು ನೆನೆದಿದ್ದಾರೆ ಅರ್ಜುನ್‌ ಸರ್ಜಾ.


Actor Arjun Sarja wrote emotional post on Chiranjeevi Sarjas death
ಅರ್ಜುನ್​ ಸರ್ಜಾ ಹಾಗೂ ಚಿರು


ಇದೇ ಸಮಯದಲ್ಲಿ ಮಾತನಾಡಿದ ಅರ್ಜುನ್‌ ಸರ್ಜಾ ಪತ್ನಿ ಆಶಾರಾಣಿ, ಅಜ್ಜಿ ಆಗರುವ ಸಂಭ್ರಮ ಹೇಳೋಕೆ ಆಗುತ್ತಿಲ್ಲ. ಮಗು ಬಂದಿರುವುದು ಎಲ್ಲರಿಗೂ ಸಂತೋಷವಾಗಿದೆ. ನನಗಂತೂ ತುಂಬಾ ಖುಷಿಯಾಗಿದೆ ಎಂದು ಸಂಭ್ರಮ ವ್ಯಕ್ತಪಡಿಸಿದರು. ಹಾಗೇ, ಅರ್ಜುನ್‌ ಸರ್ಜಾ ಅವರ ಮಗಳು ಐಶ್ವರ್ಯಾ ಅರ್ಜುನ್‌ ಮಾತನಾಡಿ, ಮಗ ತುಂಬಾ ಮುದ್ದಾಗಿದ್ದಾನೆ. ಚಿರಂಜೀವಿಯಂತೆಯೇ ಕಾಣುತ್ತಾನೆ. ಮೂಗಂತೂ ಅಪ್ಪನಂತೆಯೇ ಇದೆ ಎಂದರು.

Published by:Anitha E
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು