Aishwarya Arjun: ಟಾಲಿವುಡ್​ನಲ್ಲಿ ಅದೃಷ್ಟ ಪರೀಕ್ಷೆಗಿಳಿದ ಐಶ್ವರ್ಯಾ, ಅರ್ಜುನ್ ಸರ್ಜಾ ಮಗಳಿಗೆ ಶುಭ ಹಾರೈಸಿದ ಪವನ್ ಕಲ್ಯಾಣ್

Aishwarya Arjun Tollywood Entry: ಈ ಸಿನಿಮಾ ಅರ್ಜುನ್ ಸರ್ಜಾ ಅವರ ಶ್ರೀರಾಮ್ ಫಿಲ್ಮ್ಸ್ ಇಂಟರ್​ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ 15ನೇ ಚಿತ್ರವಾಗಿದ್ದು, ಜಗಪತಿ ಬಾಬು ಈ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಐಶ್ವರ್ಯಾ ಅರ್ಜುನ್

ಐಶ್ವರ್ಯಾ ಅರ್ಜುನ್

  • Share this:
ನಟ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ (Arjun Sarja) ಮತ್ತೆ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಆದರೆ ಈ ಬಾರಿ ನಿರ್ದೇಶನ (Direction) ಮಾತ್ರವಲ್ಲದೇ ನಿರ್ಮಾಣವನ್ನು ಕೂಡ ಮಾಡುತ್ತಿದ್ದಾರೆ. ಹೌದು, ಕನ್ನಡದಲ್ಲಿ ಪ್ರೇಮಬರಹ ಸಿನಿಮಾವನ್ನು ಮಗಳಿಗಾಗಿ ನಿರ್ದೇಶಿಸಿದ್ದ ಅರ್ಜುನ್ ಸರ್ಜಾ, ಮಗಳನ್ನು ಸ್ಯಾಂಡಲ್​ವುಡ್​ಗೆ (Sandalwood) ಪರಿಚಯಿಸಿದ್ದರು. ಈಗ ತೆಲುಗು ಚಿತ್ರರಂಗಕ್ಕೆ ಪರಿಚಯಿಸಲು ಹೊರಟಿದ್ದಾರೆ. ಹೌದು, ಅರ್ಜುನ್ ಸರ್ಜಾ ಮಗಳು ಐಶ್ವರ್ಯಾ ಅರ್ಜುನ್ (Aishwarya Arjun)  ತೆಲುಗು ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮಗಳು ನಾಯಕಿಯಾಗಿ ಹೆಜ್ಜೆ ಇಡುತ್ತಿರುವ ಮೊದಲ ತೆಲುಗು ಸಿನಿಮಾಗೆ ಅರ್ಜುನ್ ಸರ್ಜಾ ಅವರೇ ನಿರ್ದೇಶನ ಮಾಡುವುದಲ್ಲದೇ, ನಿರ್ಮಾಣವನ್ನು ಸಹ ಮಾಡುತ್ತಿದ್ದಾರೆ.

ಮೊದಲ ಸೀನ್​ಗೆ ಕ್ಲ್ಯಾಪ್ ಮಾಡಿದ ಟಾಲಿವುಡ್​ ಪವರ್ ಸ್ಟಾರ್ 

ಐಶ್ವರ್ಯಾ ಜೊತೆ ಈ ಚಿತ್ರಕ್ಕೆ ಹೀರೋ ಆಗಿ ವಿಶ್ವಕ್ ಸೇನ್ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ನೆರವೇರಿದ್ದು,  ಟಾಲಿವುಡ್​ ಪವರ್ ಸ್ಟಾರ್ ಪವನ್‌ ಕಲ್ಯಾಣ್ ಬಂದು, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಅಲ್ಲದೇ ಮೊದಲ ಸೀನ್​ಗೆ ಪವನ್ ಕಲ್ಯಾಣ್ ಕ್ಲ್ಯಾಪ್ ಮಾಡಿದ್ದಾರೆ. ಇನ್ನು ಈ ಸಮಯದಲ್ಲಿ  ಹಿರಿಯ ನಿರ್ದೇಶಕ ಕೆ. ರಾಘವೇಂದ್ರ ರಾವ್, ನಟ ಪ್ರಕಾಶ್ ರಾಜ್ ಕೂಡ ಆಗಮಿಸಿ ಚಿತ್ರತಂಡಕ್ಕೆ ಶುಭಕೋರಿದ್ದು, ಚಿತ್ರಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.



ಈ ಸಿನಿಮಾ ಅರ್ಜುನ್ ಸರ್ಜಾ ಅವರ ಶ್ರೀರಾಮ್ ಫಿಲ್ಮ್ಸ್ ಇಂಟರ್​ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ 15ನೇ ಚಿತ್ರವಾಗಿದ್ದು, ಜಗಪತಿ ಬಾಬು ಈ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೆ ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ ನೀಡುತ್ತಿದ್ದಾರೆ.

ಇದನ್ನೂ ಓದಿ: ರಾಮ್​ ಚರಣ್ ಮನೆಯಲ್ಲಿ ಸಲ್ಮಾನ್​ ಖಾನ್​, ಪೂಜಾ ಹೆಗ್ಡೆ ಜೊತೆ ಬೊಂಬಾಟ್​ ಊಟ ಮಾಡಿದ್ರಂತೆ ಸಲ್ಲು

ಇದೊಂದು ರೋಡ್ ಟ್ರಿಪ್ ಆಧಾರಿತ ಕತೆಯಾಗಿದ್ದು, ಹೀಗಾಗಿ ಇಲ್ಲೂ ಕೂಡ ಜರ್ನಿ ಇರಲಿದ್ದು, ಕುತೂಹಲ ಮೂಡಿಸಿದೆ. ಸಿನಿಮಾದ ಉಳಿದ ಪಾತ್ರಗಳ ಆಯ್ಕೆ ಆಗಬೇಕಿದ್ದು, ಶೀಘ್ರದಲ್ಲಿಯೇ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.



ಇನ್ನು ವಿಶ್ವಕ್ ಸೇನ್ ತೆಲುಗು ಚಿತ್ರರಂಗದಲ್ಲಿ ಇತ್ತೀಚೆಗೆ ಹೆಸರು ಗಳಿಸುತ್ತಿರುವ ಯುವ ನಟ. ಈಗಾಗಲೇ ವಿಶ್ವಕ್ ನಟಿಸಿರುವ ಸಿನಿಮಾಗಳು ಬಾಕ್ಸಾಫೀಸ್‌ನ ಹಿಟ್ ಲಿಸ್ಟ್ ಸೇರಿದ್ದು, ಭರವಸೆಯ ನಾಯಕ ನಟ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅವರ 'ಅಶೋಕ ವನಂಲೋ ಅರ್ಜುನ ಕಲ್ಯಾಣಂ' ಸಿನಿಮಾ ಜನರಿಗೆ ಬಹಳ ಇಷ್ಟವಾಗಿದೆ. ಹಾಗೆಯೇ ನಿರ್ದೇಶನದಲ್ಲೂ ಹೆಸರು ಮಾಡಿರುವ ವಿಶ್ವಕ್ ಸೇನ್, 'ಫಲಕ್ನುಮಾ ದಾಸ್ ಎನ್ನುವ ಸಿನಿಮಾ ಮಾಡಿದ್ದು, ಭರ್ಜರಿ ಸಕ್ಸಸ್​ ಪಡೆದುಕೊಂಡಿದೆ. ಸದ್ಯ 'ದಾಸ್ ಕಾ ಧಮ್ಕಿ' ಸಿನಿಮಾದಲ್ಲಿ ನಟಿಸುತ್ತಿದ್ದು, ಈಗ ಐಶ್ವರ್ಯಾ ಜೊತೆ ನಟಿಸುತ್ತಿದ್ದಾರೆ.

ಯಶಸ್ಸಿನ ನಿರೀಕ್ಷೆಯಲ್ಲಿ ಅರ್ಜುನ್ ಸರ್ಜಾ ಮಗಳು 

ಐಶ್ವರ್ಯಾ ಹಾಗೂ ಕಿರುತೆರೆಯ ನಟ ಚಂದನ್​ ಕುಮಾರ್​ ತೆರೆ ಹಂಚಿಕೊಂಡಿದ್ದ 'ಪ್ರೇಮ ಬರಹ' ಸಿನಿಮಾ ಬಾಕ್ಸಾಫಿಸ್​ನಲ್ಲಿ ಸದ್ದು ಮಾಡಲೇ ಇಲ್ಲ. 'ಪಟ್ಟತ್ತು ಯಾನೈ' ತಮಿಳು ಸಿನಿಮಾದಲ್ಲಿ ನಟ ವಿಶಾಲ್​ ಜತೆ ಐಶ್ವರ್ಯಾ ಮೊದಲ ಬಾರಿಗೆ ಬಣ್ಣದ ಲೋಕಕ್ಕೆ ಪರಿಚಯವಾಗಿದ್ದರು. ಆದರೆ ಈ ಎರಡೂ ಸಿನಿಮಾಗಳಿಂದ ನಿರೀಕ್ಷಿಸಿದ ಗೆಲವು ಸಿಗದ ಕಾರಣಕ್ಕೆ ಈಗ ಐಶ್ವರ್ಯಾ ಟಾಲಿವುಡ್​ನತ್ತ ಮುಖ ಮಾಡಿದ್ದಾರೆ.

ಇದನ್ನೂ ಓದಿ: ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿ ಆಲಿಯಾ ಭಟ್​ - ರಣಬೀರ್ ಕಪೂರ್

ಇನ್ನು ಐಶ್ವರ್ಯಾ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟೀವ್ ಇದ್ದು, ಸದಾ ತಮ್ಮ ಲೆಟೆಸ್ಟ್​ ಫೋಟೋಗಳನ್ನು ಹಂಚಿಕೊಳ್ಳುವ ನಟಿ, ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ. ಅಭಿಮಾನಿಗಳು ಈ ಹೊಸ ಚಿತ್ರಕ್ಕೆ ಹಾರೈಸಿದ್ದು, ಯಶಸ್ಸು ಸಿಗಲಿ ಎಂದಿದ್ದಾರೆ.
Published by:Sandhya M
First published: