ಲೈಂಗಿಕ ಕಿರುಕುಳ ಪ್ರಕರಣಕ್ಕೆ ರಾಜಕೀಯ ತಿರುವು?; ಪೊಲೀಸ್ ಠಾಣೆಯಲ್ಲಿ ಅರ್ಜುನ್ ಸರ್ಜಾ ಹೇಳಿದ್ದೇನು ಗೊತ್ತಾ

ನಾನು ಶ್ರುತಿ ಅವರನ್ನು ಕೇವಲ ಕಲಾವಿದೆಯಾಗಿ ನೋಡಿದ್ದೇನೆ ಹೊರತು, ಕೆಟ್ಟ ದೃಷ್ಟಿಯಿಂದ ನೋಡಿಲ್ಲ. | ರಿಹರ್ಸಲ್ ಅಂದರೆ ನಾವಿಬ್ಬರೇ ಮಾಡುವುದಲ್ಲ. ಅಲ್ಲಿ ಸಾಕಷ್ಟು ಜನರಿರುತ್ತಾರೆ. ಅವರ ಮುಂದೆ ಆ ರೀತಿ ಮಾಡಲು ಸಾಧ್ಯವೇ?

Rajesh Duggumane | news18
Updated:November 5, 2018, 2:43 PM IST
ಲೈಂಗಿಕ ಕಿರುಕುಳ ಪ್ರಕರಣಕ್ಕೆ ರಾಜಕೀಯ ತಿರುವು?; ಪೊಲೀಸ್ ಠಾಣೆಯಲ್ಲಿ ಅರ್ಜುನ್ ಸರ್ಜಾ ಹೇಳಿದ್ದೇನು ಗೊತ್ತಾ
ನಾನು ಶ್ರುತಿ ಅವರನ್ನು ಕೇವಲ ಕಲಾವಿದೆಯಾಗಿ ನೋಡಿದ್ದೇನೆ ಹೊರತು, ಕೆಟ್ಟ ದೃಷ್ಟಿಯಿಂದ ನೋಡಿಲ್ಲ. | ರಿಹರ್ಸಲ್ ಅಂದರೆ ನಾವಿಬ್ಬರೇ ಮಾಡುವುದಲ್ಲ. ಅಲ್ಲಿ ಸಾಕಷ್ಟು ಜನರಿರುತ್ತಾರೆ. ಅವರ ಮುಂದೆ ಆ ರೀತಿ ಮಾಡಲು ಸಾಧ್ಯವೇ?
  • News18
  • Last Updated: November 5, 2018, 2:43 PM IST
  • Share this:
ನ್ಯೂಸ್​ 18 ಕನ್ನಡ

ನಟಿ ಶ್ರುತಿ ಹರಿಹರನ್​ ಮಾಡಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ನಟ ಅರ್ಜುನ್ ಸರ್ಜಾ ಇಂದು ಬೆಳಗ್ಗೆ ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಗೆ ಆಗಮಿಸಿದ್ದಾರೆ. ಇನ್​ಸ್ಪೆಕ್ಟರ್​ ಅಣ್ಣಯ್ಯ ರೆಡ್ಡಿ ಅವರು ಅರ್ಜುನ್​​ರನ್ನು ವಿಚಾರಣೆ ನಡೆಸಿದ್ದಾರೆ. ಅಷ್ಟಕ್ಕೂ ಠಾಣೆಯಲ್ಲಿ ಅವರು ಏನು ಹೇಳಿದ್ದಾರೆ ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.

‘ನನ್ನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ನಟಿಯೊಬ್ಬರು ನನ್ನ ವಿರುದ್ಧ ಈ ಆರೋಪ ಮಾಡಿದ್ದಾರೆ. ಆದರೆ, ಇದೊಂದು ಉದ್ದೇಶ ಪೂರಕ ಆರೋಪ. ಈ ಕುರಿತು ನಾನು ಈಗಾಗಲೇ ಕಾನೂನು ಹೋರಾಟ ಮಾಡುತ್ತಿದ್ದೇನೆ’ ಎಂದಿದ್ದಾರೆ ಅರ್ಜುನ್​.

ಇದನ್ನೂ ಓದಿ: ಪೊಲೀಸರ ಎದುರು ವಿಚಾರಣೆಗೆ ಹಾಜರಾದ ಅರ್ಜುನ್​​​ ಸರ್ಜಾ

ಶ್ರುತಿ ಅವರನ್ನು ಈ ಮೊದಲು ಭೇಟಿ ಮಾಡಿದ್ದಿರಾ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಅರ್ಜುನ್​, ‘ನಾನು ‘ವಿಸ್ಮಯ’ ಚಿತ್ರದಲ್ಲಿಯೇ ಅವರನ್ನು ಮೊದಲು ನೋಡಿದ್ದು. ನಾನು ಆಡಿಷನ್​​ನಲ್ಲಿ ಇರಲಿಲ್ಲ. ನಿರ್ದೇಶಕ ಅರುಣ್ ಅವರೇ ಆಡಿಷನ್ ಮಾಡಿದ್ದರು. ಅರುಣ್ ಹೆಸರು ಹೇಳಿದಾಗಲೇ ನನಗೆ ಗೊತ್ತಾಗಿದ್ದು’ ಎಂದು ಅರ್ಜುನ್​ ಸ್ಪಷ್ಟನೆ ನೀಡಿದ್ದಾರೆ.

ಚಿತ್ರದಲ್ಲಿ ಅನವಶ್ಯಕವಾಗಿ ರೊಮ್ಯಾಂಟಿಕ್ ಸೀನ್ ಬಳಸಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಅರ್ಜುನ್​, ‘ಅದು ನಿರ್ದೇಶಕರಿಗೆ ಬಿಟ್ಟ ವಿಚಾರ, ನಾನು ಹೇಳಿದಂತೆ ನಿರ್ದೇಶಕ ಸಿನಿಮಾ ಚಿತ್ರೀಕರಣ ಮಾಡುವುದಿಲ್ಲ. ಅವರು ಹೇಳಿದಂತೆ ನಾನು ನಟಿಸಬೇಕಾಗುತ್ತದೆ. ನಾನು ಶ್ರುತಿ ಅವರನ್ನು ಕೇವಲ ಕಲಾವಿದೆಯಾಗಿ ನೋಡಿದ್ದೇನೆ ಹೊರತು, ಕೆಟ್ಟ ದೃಷ್ಟಿಯಿಂದ ನೋಡಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ: ರಿಷಿ ಈಗ ಎಂಬಿಎ ವಿದ್ಯಾರ್ಥಿ; ಸಾರ್ವಜನಿಕರಿಗೆ ನೀಡಿದ್ದಾರೆ ಸುವರ್ಣಾವಕಾಶರಿಹರ್ಸಲ್​ ಸಮಯದಲ್ಲಿ ಅರ್ಜುನ್​ ಅನುಚಿತವಾಗಿ ವರ್ತಿಸಿದ್ದರು ಎನ್ನುವ ಆರೋಪವನ್ನು ಶ್ರುತಿ ಮಾಡಿದ್ದರು. ಈ ಸಂಬಂಧ ಸ್ಪಷ್ಟನೆ ನೀಡಿರುವ ಅರ್ಜುನ್​, ‘ರಿಹರ್ಸಲ್ ಅಂದರೆ ನಾವಿಬ್ಬರೇ ಮಾಡುವುದಲ್ಲ. ಅಲ್ಲಿ ನಮ್ಮ ಮುಂದೆ ಸಾಕಷ್ಟು ಜನರಿರುತ್ತಾರೆ. ಅವರ ಮುಂದೆ ಆ ರೀತಿ ಮಾಡಲು ಸಾಧ್ಯವೇ? ರಿಹರ್ಸಲ್ ಸಂದರ್ಭದಲ್ಲಿ ನಾನು ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದರೆ ಘಟನೆ ನಡೆದ ತಕ್ಷಣ ಎಲ್ಲರ ಮುಂದೆಯೇ ಪ್ರತಿಭಟಿಸಬಹುದಿತ್ತು’ ಎಂದಿದ್ದಾರೆ.

ಇನ್ನು ಅರ್ಜುನ್​ ಸರ್ಜಾ ನೀಡಲಿರುವ ಹೇಳಿಕೆಯನ್ನು ಪೊಲೀಸರು ವಿಡಿಯೋ ರೆಕಾರ್ಡ್​ ಮಾಡಿದ್ದಾರೆ. ಇದರ ಜತೆಗೆ ಬರವಣಿಗೆಯಲ್ಲೂ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ. ಅರ್ಜುನ್​ ಜತೆ ಅವರ ಆಪ್ತ ಪ್ರಶಾಂತ್​ ಸಂಬರಗಿ, ಧ್ರುವ ಸರ್ಜಾ ಠಾಣೆಗೆ ಆಗಮಿಸಿದ್ದರು. ಈ ವೇಳೆ ಅವರು ತೆಗೆದುಕೊಂಡ ಸೆಲ್ಫಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ನು ಪೊಲೀಸ್​ ಠಾಣೆ ಎದುರು ಅಭಿಮಾನಿಗಳು ನೆರೆದಿದ್ದರಿಂದ ಟ್ರಾಫಿಕ್​ ಜ್ಯಾಮ್​ ಕೂಡ ಆಗಿತ್ತು.

ಸರ್ಜಾ ಪ್ರಕರಣಕ್ಕೆ ರಾಜಕೀಯ ತಿರುವು?:  ಅರ್ಜುನ್​ರನ್ನು ಧಾರ್ಮಿಕ ವಿಚಾರದ ಮೂಲಕ ಬಗ್ಗುಬಡಿಯಲು, ಲೈಂಗಿಕ ಕಿರಕುಳ ಅಸ್ತ್ರ ಬಳಿಸಿರುವ ಆರೋಪ ಕೇಳಿ ಬಂದಿತ್ತು. ಈಗ ಬಿಜೆಪಿ ನಾಯಕಿ ತೇಜಶ್ವಿನಿ‌ ಗೌಡ ತನಿಖಾಧಿಕಾರಿಗಳ ಎದುರೇ ಅರ್ಜುನ್​ರನ್ನು ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.

First published:November 5, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading