ತಮಿಳಿನಲ್ಲಿ ಕಿರಿಕ್​ ಮಾಡಿಕೊಂಡ 'ಅರ್ಜುನ್​ ರೆಡ್ಡಿ'! ಛೇ, ಚಿತ್ರವನ್ನು ಮತ್ತೆ ಶೂಟ್​ ಮಾಡ್ಬೇಕಂತೆ

ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಇ4 ಎಂಟರ್​ಟೈನ್​ಮೆಂಟ್​ಗೆ ಬಾಲ ಅವರ ಕೆಲಸ ಇಷ್ಟವಾಗಿಲ್ಲವಂತೆ! ಹಾಗಾಗಿ ಬೇರೆ ನಿರ್ದೇಶಕರನ್ನು ಹಾಕಿಕೊಂಡು ಸಂಪೂರ್ಣ ಚಿತ್ರವನ್ನು ಮತ್ತೆ ಶೂಟ್​ ಮಾಡುವ ನಿರ್ಧಾರಕ್ಕೆ ನಿರ್ಮಾಪಕರು ಬಂದಿದ್ದಾರೆ.

Rajesh Duggumane | news18
Updated:February 8, 2019, 4:35 PM IST
ತಮಿಳಿನಲ್ಲಿ ಕಿರಿಕ್​ ಮಾಡಿಕೊಂಡ 'ಅರ್ಜುನ್​ ರೆಡ್ಡಿ'! ಛೇ, ಚಿತ್ರವನ್ನು ಮತ್ತೆ ಶೂಟ್​ ಮಾಡ್ಬೇಕಂತೆ
ಧ್ರುವ
Rajesh Duggumane | news18
Updated: February 8, 2019, 4:35 PM IST
ತೆಲುಗಿನ ‘ಅರ್ಜುನ್​ ರೆಡ್ಡಿ’ ಹೆಚ್ಚು ಸೌಂಡ್​ ಮಾಡಿದ ಚಿತ್ರ. ಇದೇ ಕಾರಣಕ್ಕೆ ಚಿತ್ರ ತಮಿಳು ಹಾಗೂ ಹಿಂದಿಗೆ ರಿಮೇಕ್​ ಆಗುತ್ತಿದೆ. ಈ ಚಿತ್ರವನ್ನು ಕನ್ನಡಕ್ಕೆ ತರುವ ಪ್ರಯತ್ನವೂ ನಡೆಯುತ್ತಿದೆ ಎನ್ನುವ ಮಾತಿದೆ. ಹಿಂದಿಯಲ್ಲಿ ಸದ್ಯ ಶೂಟಿಂಗ್​ ಪ್ರಗತಿಯಲ್ಲಿದ್ದು, ತಮಿಳಿನಲ್ಲಿ ಫೆ.14ರಂದು ‘ವರ್ಮಾ’ ಹೆಸರಿನಲ್ಲಿ ಸಿನಿಮಾ ತೆರೆಗೆ ಬರಬೇಕಿತ್ತು. ಫೈನಲ್​ ಕಾಪಿ ಕೂಡ ಸಿದ್ಧಗೊಂಡಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಸಿನಿಮಾ ಡ್ರಾಪ್​ ಮಾಡಿದ್ದಾರೆ ನಿರ್ಮಾಪಕರು! ಈ ಬೆಳವಣಿಗೆ ಸದ್ಯ ಅಚ್ಚರಿ ಮೂಡಿಸಿದೆ.

ತಮಿಳಿನ ಖ್ಯಾತ ಹೀರೋ ಚಿಯಾನ್​ ವಿಕ್ರಂ ಪುತ್ರ ಧ್ರುವ ವಿಕ್ರಂ ಈ ಚಿತ್ರದ ನಾಯಕ. 'ವರ್ಮಾ' ಚಿತ್ರದ ಪೋಸ್ಟರ್, ಟೀಸರ್​ ಹಾಗೂ ಟ್ರೈಲರ್​ಗೆ ಮೆಚ್ಚುಗೆ ಕೇಳಿ ಬಂದಿದ್ದಕ್ಕಿಂತ ಟೀಕೆ ವ್ಯಕ್ತವಾಗಿದ್ದೇ ಹೆಚ್ಚು. ಹೀಗಿದ್ದರೂ ಚಿತ್ರದ ನಿರ್ಮಾಪಕರು ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಪ್ರೇಮಿಗಳ ದಿನದ ಅಂಗವಾಗಿ ಚಿತ್ರವನ್ನು ಫೆ.14ರಂದು ತೆರೆಗೆ ತರುವುದಾಗಿ ಹೇಳಿದ್ದರು. ಆದರೆ, ಈಗ ಈ ಲೆಕ್ಕಾಚಾರ ತಲೆಕೆಳಗಾಗಿದೆ.

ಇದನ್ನೂ ಓದಿ: ದರ್ಶನ್ ಅಭಿಮಾನಿಗಳ ಸಂಭ್ರಮ: ಫೆ.10ಕ್ಕೆ 'ಯಜಮಾನ' ಟ್ರೈಲರ್​ ಬಿಡುಗಡೆ..!

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಾಲ, ‘ವರ್ಮಾ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ನಿರ್ಮಾಣ ಸಂಸ್ಥೆ ಇ4 ಎಂಟರ್​ಟೈನ್​ಮೆಂಟ್​ಗೆ ಬಾಲ ಅವರ ಕೆಲಸ ಇಷ್ಟವಾಗಿಲ್ಲವಂತೆ! ಹಾಗಾಗಿ ಬೇರೆ ನಿರ್ದೇಶಕರನ್ನು ಹಾಕಿಕೊಂಡು ಸಂಪೂರ್ಣ ಚಿತ್ರವನ್ನು ಮತ್ತೆ ಶೂಟ್​ ಮಾಡುವ ನಿರ್ಧಾರಕ್ಕೆ ನಿರ್ಮಾಪಕರು ಬಂದಿದ್ದಾರೆ.

ಇದು ನಿರ್ಮಾಪಕರ ಪಾಲಿಗೆ ದೊಡ್ಡ ನಷ್ಟ. ಈಗ ಮತ್ತೆ ಚಿತ್ರವನ್ನು ಸಂಪೂರ್ಣವಾಗಿ ಶೂಟ್​ ಮಾಡಬೇಕು ಎಂದರೆ ಅದು ಚಿಕ್ಕ ಕೆಲಸವೂ ಅಲ್ಲ. ಆದಾಗ್ಯೂ ಇಂಥ ಸಾಹಸಕ್ಕೆ ನಿರ್ಮಾಪಕರು ಮುಂದಾಗಿರುವುದು ಚಿತ್ರರಂಗಕ್ಕೆ ಅಚ್ಚರಿ ಮೂಡಿಸಿದೆ. ಅಷ್ಟಕ್ಕೂ ನಿರ್ಮಾಪಕರು ಈ ರೀತಿ ಮಾಡಲು ಬೇರೆ ಏನಾದರೂ ಕಾರಣವಿದೆಯೇ ಎಂಬುದುಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

2017ರಲ್ಲಿ ತೆಲುಗಿನಲ್ಲಿ ತೆರೆಕಂಡಿದ್ದ 'ಅರ್ಜುನ್​ ರೆಡ್ಡಿ' ಚಿತ್ರಕ್ಕೆ ವಿಜಯ್​ ದೇವರಕೊಂಡ ನಾಯಕ. ಶಾಲಿನಿ ಪಾಂಡೆ ಚಿತ್ರದ ಹಿರೋಯಿನ್​. ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಗಳಿಕೆ ಮಾಡಿತ್ತು. ಅಷ್ಟೇ ಅಲ್ಲ, ಸಿನಿ ಪ್ರಿಯರಿಂದ ಮೆಚ್ಚುಗೆಯನ್ನೂ ಪಡೆದುಕೊಂಡಿತ್ತು.

ಇದನ್ನೂ ಓದಿ: ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್​ ಲಿಪ್​ ಲಾಕ್​ ದೃಶ್ಯ ವೈರಲ್!
Loading...

First published:February 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...