Dear Comrade: ಕರಣ್​ ಜೋಹರ್​ ಕೊಟ್ಟ 40 ಕೋಟಿ ಆಫರ್​ ನಿರಾಕರಿಸಿದ ಅರ್ಜುನ್​ ರೆಡ್ಡಿ: ನಾಟ್​ ಇಂಟರೆಸ್ಟೆಡ್​ ಎಂದಿದ್ದೇಕೆ ದೇವರಕೊಂಡ..!

Dear Comrade: ಈ ಹಿಂದಿ ರಿಮೇಕ್​ಗಾಗಿ ನಿರ್ದೇಶಕ ಕರಣ್​ ಜೋಹರ್,​ ವಿಜಯ್​ ದೇವರಕೊಂಡ ಅವರಿಗೆ  ಆಫರ್ ಕೊಟ್ಟಿದ್ದರಂತೆ. ಅದನ್ನು ಅರ್ಜುನ್​ ರೆಡ್ಡಿ ಖ್ಯಾತಿಯ ನಟ ನಿರಾಕರಿಸಿದ್ದಾರೆ. ಮುಂಬೈ ಮಿರರ್​ ಮಾಡಿರುವ ವರದಿ ಪ್ರಕಾರ ವಿಜಯ್​ ದೇವರಕೊಂಡ ಸ್ಟಾರ್ ನಿರ್ದೇಶಕನ ಈ ಆಫರ್​ಗೆ ನಾಟ್​ ಇಂಟರೆಸ್ಟೆಡ್​ ಎಂದಿದ್ದಾರಂತೆ.

news18
Updated:August 3, 2019, 2:20 PM IST
Dear Comrade: ಕರಣ್​ ಜೋಹರ್​ ಕೊಟ್ಟ 40 ಕೋಟಿ ಆಫರ್​ ನಿರಾಕರಿಸಿದ ಅರ್ಜುನ್​ ರೆಡ್ಡಿ: ನಾಟ್​ ಇಂಟರೆಸ್ಟೆಡ್​ ಎಂದಿದ್ದೇಕೆ ದೇವರಕೊಂಡ..!
ನಟ ವಿಜಯ್​ ದೇವರಕೊಂಡ ಹಾಗೂ ನಿರ್ದೇಶಕ ಕರಣ್​ ಜೋಹರ್​
  • News18
  • Last Updated: August 3, 2019, 2:20 PM IST
  • Share this:
ದಕ್ಷಿಣ ಭಾರತದ ಹೊಸ ಸೂಪರ್ ಸ್ಟಾರ್​ ನಟ ವಿಜಯ್​ ದೇವರಕೊಂಡ 'ಡಿಯರ್​ ಕಾಮ್ರೆಡ್​'​ ಸಿನಿಮಾದಿಂದಾಗಿ ಈಗ ಸುದ್ದಿಯಲ್ಲಿದ್ದಾರೆ. ಕರಣ್​ ಜೋಹರ್​ ತೆಲುಗಿನ 'ಡಿಯರ್​ ಕಾಮ್ರೆಡ್​' ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡುತ್ತಿರುವ ವಿಷಯ ಗೊತ್ತೇ ಇದೆ. ಈಗ ಈ ಅಡ್ಡಾದಿಂದ ಹೊಸದೊಂದು ಸುದ್ದಿ ಹೊರ ಬಿದ್ದಿದೆ.

ಈ ಹಿಂದಿ ರಿಮೇಕ್​ಗಾಗಿ ನಿರ್ದೇಶಕ ಕರಣ್​ ಜೋಹರ್,​ ವಿಜಯ್​ ದೇವರಕೊಂಡ ಅವರಿಗೆ  ಆಫರ್ ಕೊಟ್ಟಿದ್ದರಂತೆ. ಅದನ್ನು ಅರ್ಜುನ್​ ರೆಡ್ಡಿ ಖ್ಯಾತಿಯ ನಟ ನಿರಾಕರಿಸಿದ್ದಾರೆ. ಮುಂಬೈ ಮಿರರ್​ ಮಾಡಿರುವ ವರದಿ ಪ್ರಕಾರ ವಿಜಯ್​ ದೇವರಕೊಂಡ ಸ್ಟಾರ್ ನಿರ್ದೇಶಕನ ಈ ಆಫರ್​ಗೆ ನಾಟ್​ ಇಂಟರೆಸ್ಟೆಡ್​ ಎಂದಿದ್ದಾರಂತೆ.

Rashmika and vijay devarakonda in dear comrade movie
'ಡಿಯರ್​ ಕಾಮ್ರೆಡ್​'ನಲ್ಲಿ ರಶ್ಮಿಕಾ ಹಾಗೂ ವಿಜಯ್​ ದೇವರಕೊಂಡ


ಕರಣ್​ ಜೋಹರ್ ಅವರಿಗೆ ವಿಜಯ್​ ದೇವರಕೊಂಡ ಅಭಿನಯ ತುಂಬಾ ಇಷ್ಟವಾಗಿದ್ದು, ಹಿಂದಿ ಸಿನಿಮಾಗಾಗಿ 40 ಕೋಟಿ ಆಫರ್​ ಮಾಡಿದ್ದರಂತೆ. ಆದರೆ ವಿಜಯ್​ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಲಿಲ್ಲವಂತೆ. ಇದಾದ ನಂತರವೂ ಕರಣ್ ಧರ್ಮ ಪ್ರೊಡಕ್ಷನ್​ನಲ್ಲಿ ​ ದೇವರಕೊಂಡ ಅವರನ್ನು ಬಾಲಿವುಡ್​ನಲ್ಲಿ ಲಾಂಚ್​ ಮಾಡುವ ಉದ್ದೇಶದಿಂದ ತುಂಬಾ ಪ್ರಯತ್ನಿಸಿದ್ದಾರಂತೆ. ಆದರೆ ಅವರ ಕಷ್ಟ ಫಲಿಸಲಿಲ್ಲ.

ಇದನ್ನೂ ಓದಿ: Rashmika Mandanna: ಸಿನಿಮಾಗಾಗಿ ಮೈ ಚಳಿ ಬಿಟ್ಟ ರಶ್ಮಿಕಾ ಮಂದಣ್ಣ

ಹಿಂದಿ ರಿಮೇಕ್​ ಬಗ್ಗೆ ದೇವರಕೊಂಡ ಹೇಳಿದ್ದು ಹೀಗೆ...!

'ಡಿಯರ್​ ಕಾಮ್ರೆಡ್​' ಸಿನಿಮಾದ ರಿಮೇಕ್​ ಬಗ್ಗೆ ನಟ ವಿಜಯ್​ ದೇವರಕೊಂಡ  ಇತ್ಮಾತೀಚೆಗೆ ಸಂದರ್ಶನವೊಂದರಲ್ಲಿ ಮಾನಾಡಿದ್ದಾರೆ. ಅವರಿಗೆ ಒಂದೇ ಸಿನಿಮಾವನ್ನು ಮತ್ತೊಮ್ಮೆ ಮಾಡುವುದು ಎಂದರೆ ಅವರಿಂದಾಗ ಕೆಲಸವಂತೆ. ಅದರಲ್ಲೂ ಅವರು ತಮ್ಮ ಭವಿಷ್ಯವನ್ನು ಹಿಂದಿಯಲ್ಲಿ ನೋಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎರಡೂ ಭಾಷೆಗಳಲ್ಲಿ ಏಕಕಾಲದಲ್ಲಿ ಅಭಿನಯಿಸಲು ಯಾವುದಾದರೂ ಸಿನಿಮಾದಲ್ಲಿ ಅವಕಾಶ ಸಿಕ್ಕರೆ ಓಕೆ ಎಂದಿದ್ದಾರಂತೆ ವಿಜಯ್​. ಅಂದರೆ ತೆಲುಗು ಹಾಗೂ ಹಿಂದಿಯಲ್ಲಿ ಒಂದೇ ಸಿನಿಮಾ ಬಂದಾಗ ಅದರಲ್ಲಿ ನಟಿಸೋಕೆ ಸೈ ಆದರೆ ತೆಲುಗಿನಲ್ಲಿ ಮಾಡಿದ ಚಿತ್ರವನ್ನೇ ಮತ್ತೆ ಹಿಂದಿಯಲ್ಲಿ ನಾನೇ ಮಾಡುವುದು ನನಗೆ ಸರಿ ಎನಿಸುತ್ತಿಲ್ಲ ಎಂದಿದ್ದಾರೆ ಅರ್ಜುನ್​ ರೆಡ್ಡಿ ಖ್ಯಾತಿಯ ನಟ. 

Katrina Kaif: ಮಾಲ್ಡೀವ್ಸ್​ನ ಬೀಚ್​ಗಳಲ್ಲಿ ಬಿಕಿನಿಯಲ್ಲಿ ನೀರಾಟವಾಡಿದ ಕತ್ರಿನಾ..!

First published:August 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading