Shalini Pandey: ಮಾಲ್ಡೀವ್ಸ್​ನಲ್ಲಿ ಎಂಜಾಯ್ ಮಾಡ್ತಿದ್ದಾರೆ ಅರ್ಜುನ್ ರೆಡ್ಡಿ ನಟಿ ಶಾಲಿನಿ ಪಾಂಡೆ

ಪ್ರಸ್ತುತವಾಗಿ ನಟಿ ಶಾಲಿನಿ ಪಾಂಡೆ ಮಾಲ್ಡೀವ್ಸ್ ನಲ್ಲಿ ತಮ್ಮ ರಜಾ ದಿನಗಳನ್ನು ಮಜಾ ಮಾಡುತ್ತಿದ್ದಾರೆ. ಅವರು ತಮ್ಮ ರಜಾ ದಿನಗಳಲ್ಲಿ ಕ್ಲಿಕ್ಕಿಸಿಕೊಂಡ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ನಟಿ ದ್ವೀಪ ರಾಷ್ಟ್ರದಲ್ಲಿ ತನ್ನ ಸ್ವಿಮ್ಮಿಂಗ್ ಪೂಲ್ ನಲ್ಲಿ ಇರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಮತ್ತು ಅವರು ಅದಕ್ಕೆ "ಇಲ್ಲಿಯವರೆಗೆ, ತುಂಬಾ ಒಳ್ಳೆಯ ಸಮಯ ಕಳೆಯುತ್ತಿದ್ದೇನೆ" ಎಂದು ಶೀರ್ಷಿಕೆ ನೀಡಿದ್ದಾರೆ.

 ಶಾಲಿನಿ ಪಾಂಡೆ

ಶಾಲಿನಿ ಪಾಂಡೆ

  • Share this:
ತೆಲುಗಿನ ಅರ್ಜುನ್ ರೆಡ್ಡಿ (Arjun Reddy) ಚಿತ್ರ ಯಾರಿಗೆ ತಾನೇ ನೆನಪಿರುವುದಿಲ್ಲ ಹೇಳಿ? ಆ ಚಿತ್ರದಲ್ಲಿ ಅರ್ಜುನ್ ರೆಡ್ಡಿ ಪಾತ್ರದಲ್ಲಿ ನಟಿಸಿದ್ದ ನಟ ವಿಜಯ್ ದೇವರಕೊಂಡ (Vijay Deverakonda) ಅವರ ಪ್ರಿಯತಮೆಯಾಗಿ ನಟಿಸಿದ್ದು ಆ ಮುಗ್ಧ ಮುಖದ ಶಾಲಿನಿ ಪಾಂಡೆ ಅಂತ ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಅಷ್ಟಕ್ಕೂ ಅರ್ಜುನ್ ರೆಡ್ಡಿ ಚಿತ್ರ ಸೂಪರ್ ಹಿಟ್ ಆದ ನಂತರ ನಟಿ ಶಾಲಿನಿ (Shalini) ಅವರಿಗೆ ಬೇರೆ ಯಾವ ಯಾವ ಚಿತ್ರಗಳ ಆಫರ್ ಗಳು ಹುಡುಕಿಕೊಂಡು ಬಂದವು ಅಂತ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಏಕೆಂದರೆ, ಶಾಲಿನಿ ಪಾಂಡೆ ಅವರು 100% ಕಾದಲ್ ತಮಿಳು ಚಿತ್ರದಲ್ಲಿ ಮತ್ತು ಮಹಾನಟಿ, ಇದ್ದರಿ ಲೋಕಂ ಒಕ್ಕಟೆ, ನಿಶಬ್ಧಮ್ ಮತ್ತು 118 ಸೇರಿದಂತೆ ಒಂದೆರಡು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡರು. 

ಮಾಲ್ಡೀವ್ಸ್ ನಲ್ಲಿ ತಮ್ಮ ರಜಾ ದಿನಗಳನ್ನು ಮಜಾ ಮಾಡುತ್ತಿರುವ ನಟಿ 
ಈಗ ಪ್ರಸ್ತುತವಾಗಿ ನಟಿ ಶಾಲಿನಿ ಪಾಂಡೆ ಮಾಲ್ಡೀವ್ಸ್ ನಲ್ಲಿ ತಮ್ಮ ರಜಾ ದಿನಗಳನ್ನು ಮಜಾ ಮಾಡುತ್ತಿದ್ದಾರೆ. ಅವರು ತಮ್ಮ ರಜಾ ದಿನಗಳಲ್ಲಿ ಕ್ಲಿಕ್ಕಿಸಿಕೊಂಡ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ನಟಿ ದ್ವೀಪ ರಾಷ್ಟ್ರದಲ್ಲಿ ತನ್ನ ಸ್ವಿಮ್ಮಿಂಗ್ ಪೂಲ್ ನಲ್ಲಿ ಇರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಮತ್ತು ಅವರು ಅದಕ್ಕೆ "ಇಲ್ಲಿಯವರೆಗೆ, ತುಂಬಾ ಒಳ್ಳೆಯ ಸಮಯ ಕಳೆಯುತ್ತಿದ್ದೇನೆ" ಎಂದು ಶೀರ್ಷಿಕೆ ನೀಡಿದ್ದಾರೆ.

ಮಾಲ್ಡೀವ್ಸ್ ನಲ್ಲಿ ಮಜಾ ಮಾಡಿದ ಫೋಟೋಗಳು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್
ನಟಿ ಸಮುದ್ರದ ತೀರದಲ್ಲಿರುವ ಮರಳಿನಲ್ಲಿ ಇನ್‌ಸ್ಟಾಗ್ರಾಮ್ ರೀಲ್ ಅನ್ನು ಸಹ ಚಿತ್ರೀಕರಿಸಿದ್ದಾರೆ. ಈ ವಿಡಿಯೋದಲ್ಲಿ, ನಟಿ ಶಾಲಿನಿ ಪಾಂಡೆ ಗ್ರೂವಿಂಗ್ ಮತ್ತು ಕ್ಯಾಮೆರಾಗೆ ಪೋಸ್ ನೀಡುವುದನ್ನು ಕಾಣಬಹುದು.

ಇದನ್ನೂ ಓದಿ: Bigg Boss OTT: ಮದುವೆಯಾಗಿ ಮಗು ಇದ್ದವನ ಜೊತೆ ರಿಲೇಷನ್​​ಶಿಪ್​ನಲ್ಲಿ ಇದ್ದ ಮಾರಿಮುತ್ತು ಮೊಮ್ಮಗಳು


View this post on Instagram


A post shared by Shalini Pandey (@shalzp)
ಅವರು ಈ "ಕಡಲತೀರದಲ್ಲಿ ಅತ್ಯಂತ ಸಂತೋಷವಾಗಿದ್ದಾರೆ" ಮತ್ತು ಅವರ ಶೀರ್ಷಿಕೆ ಸಹ ನಿಖರವಾಗಿ ಅದನ್ನೇ ಹೇಳುತ್ತಿದೆ. ಇಷ್ಟೇ ಅಲ್ಲದೆ ಅವರು ಮಾಲ್ಡೀವ್ಸ್ ನಿಂದ ತನ್ನ ಬೆರಗುಗೊಳಿಸುವ ಫೋಟೋಗಳನ್ನು ಸಹ ಪೋಸ್ಟ್ ಮಾಡಿದ್ದಾರೆ. ಕಡಲತೀರದಲ್ಲಿ ಶಾಲಿನಿ ನೀಲಿ ಈಜುಡುಗೆಯನ್ನು ಆರಿಸಿಕೊಂಡಿದ್ದನ್ನು ನಾವು ನೋಡಬಹುದು. ಅವರ ಪೋಸ್ಟಿಗೆ "ಸೂರ್ಯ ಮತ್ತು ಮರಳು" ಎಂದು ಶೀರ್ಷಿಕೆ ನೀಡಲಾಗಿದೆ.

ಜಯೇಶ್‌ಭಾಯ್ ಜೋರ್ದಾರ್ ಬಾಲಿವುಡ್ ಗೆ ಪಾದಾರ್ಪಣೆ
ಶಾಲಿನಿ ಪಾಂಡೆ ಈ ವರ್ಷದ ಆರಂಭದಲ್ಲಿ ರಣವೀರ್ ಸಿಂಗ್ ಅವರೊಂದಿಗೆ ನಟಿಸಿದ ಯಶ್ ರಾಜ್ ಫಿಲ್ಮ್ಸ್ ನ ಜಯೇಶ್‌ಭಾಯ್ ಜೋರ್ದಾರ್ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು. ತನ್ನ ದೊಡ್ಡ ಚೊಚ್ಚಲ ಚಿತ್ರದ ಬಿಡುಗಡೆಯ ನಂತರ ಅವರು ಒಂದು ಟಿಪ್ಪಣಿಯನ್ನು ಸಹ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು, ಅದರಲ್ಲಿ ಅವರು "ಜಯೇಶ್‌ಭಾಯ್ ಜೋರ್ದಾರ್ ಅಂತಹ ಚಿತ್ರವನ್ನು ನೀವು ಬಾಲಿವುಡ್ ನಲ್ಲಿ ನಿಮ್ಮ ದೊಡ್ಡ ಪರದೆಯ ಪಾದಾರ್ಪಣೆಯಾಗಿ ಪಡೆಯುವುದು ತುಂಬಾನೇ ಅಪರೂಪವಾದ ಸಂಗತಿ.

ಇದನ್ನೂ ಓದಿ: Taapsee Pannu: ಲೈಂಗಿಕ ಜೀವನದ ಬಗ್ಗೆ ತಾಪ್ಸಿ ಏನಂದ್ರು ಗೊತ್ತಾ? ಕಾಫಿ ವಿತ್ ಕರಣ್​ ಕಾರ್ಯಕ್ರಮದ ಬಗ್ಗೆ ಕಾಮೆಂಟ್ ಮಾಡಿದ ದೊಬಾರ ನಟಿ

ಸೂಪರ್ ಸ್ಟಾರ್ ರಣವೀರ್ ಸಿಂಗ್ ಅವರನ್ನು ನಿಮ್ಮ ಸಹನಟನಾಗಿ ಪಡೆಯುವುದು ಅಷ್ಟೊಂದು ಸುಲಭದ ಮಾತಲ್ಲ. ಇದೆಲ್ಲಾ ನೋಡುತ್ತಿದ್ದರೆ, ನಾನು ತುಂಬಾ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ! ಇದು ನಿಜವೇ ಅಂತ ತಿಳಿಯಲು ನಾನು ಇನ್ನೂ ನನ್ನನ್ನು ಚಿವುಟಿಕೊಳ್ಳುತ್ತಿದ್ದೇನೆ. ಜಯೇಶ್‌ಭಾಯ್ ಜೋರ್ದಾರ್ ಅಂತಹ ಚಿತ್ರದಲ್ಲಿ ಕೆಲಸ ಮಾಡುವುದು ನನಗೆ ಒಂದು ನಟನೆ ಹೇಳಿ ಕೊಡುವ ಶಾಲೆಗೆ ದಾಖಲಾದಂತೆ ಇತ್ತು. ನಾನು ಅವರನ್ನು ಗುರೂಜಿ ಎಂದು ಕರೆಯುವುದರಲ್ಲಿ ಆಶ್ಚರ್ಯವೇನಿಲ್ಲ" ಎಂದು ಶಾಲಿನಿ ಹೇಳಿದ್ದರು.

ಅರ್ಜುನ್ ರೆಡ್ಡಿ ಸಿನೆಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ
ಸಂದೀಪ್ ರೆಡ್ಡಿ ವಂಗಾ ಅವರ 2017 ರ ತೆಲುಗು ಚಿತ್ರ ಅರ್ಜುನ್ ರೆಡ್ಡಿ ಮೂಲಕ ಶಾಲಿನಿ ಪಾಂಡೆ ನಟನೆಗೆ ಪಾದಾರ್ಪಣೆ ಮಾಡಿದರು. ಈ ಚಿತ್ರ ದೊಡ್ಡ ಹಿಟ್ ಆಗಿತ್ತು, ಶಾಹಿದ್ ಕಪೂರ್ ಮತ್ತು ಕಿಯಾರಾ ಅಡ್ವಾಣಿ ನಟಿಸಿದ 2019 ರಲ್ಲಿ ಬಿಡುಗಡೆಯಾದ ಕಬೀರ್ ಸಿಂಗ್ ಚಿತ್ರವು ಅರ್ಜುನ್ ರೆಡ್ಡಿಯ ಹಿಂದಿ ರಿಮೇಕ್ ಆಗಿದೆ.
Published by:Ashwini Prabhu
First published: