Arjun Rampal: ಬಾಲಿವುಡ್ ಸೂಪರ್ ಮಾಡೆಲ್​ ಪುತ್ರಿಯ ರ್ಯಾಂಪ್ ವಾಕ್! ತಂದೆ ಭಾವುಕ

ಅರ್ಜುನ್ ರಾಂಪಾಲ್ ಅವರ ಪುತ್ರಿ ಮೈರಾ

ಅರ್ಜುನ್ ರಾಂಪಾಲ್ ಅವರ ಪುತ್ರಿ ಮೈರಾ

ಇಲ್ಲೊಬ್ಬ ನಟ ಹೆಮ್ಮೆಯ ತಂದೆಯಾಗಿದ್ದಾರೆ ನೋಡಿ. ಹೌದು. ನಟ ಅರ್ಜುನ್ ರಾಂಪಾಲ್ ಮತ್ತು ಅವರ ಮಾಜಿ ಪತ್ನಿ ಮೆಹರ್ ಜೆಸಿಯಾ ಇಬ್ಬರು ಸಹ ಹಿಂದೆ ಸೂಪರ್ ಮಾಡೆಲ್​ಗಳಾಗಿದ್ದರು. ಇದು ಅವರ ಪುತ್ರಿಯ ರ್ಯಾಂಪ್ ವಾಕ್ ಕ್ಷಣ.

  • Share this:

ಕೆಲವೊಮ್ಮೆ ಈ ತಂದೆ ತಾಯಂದಿರಿಗೆ (Parents) ತಮ್ಮ ಮಕ್ಕಳು ಚೆನ್ನಾಗಿ ಓದಿಕೊಂಡು ಒಂದೊಳ್ಳೆಯ ಕೆಲಸವನ್ನು (Job) ಅವರ ಸ್ವ-ಸಾಮರ್ಥ್ಯದಿಂದ ಹುಡುಕಿಕೊಂಡಾಗ ಆಗುವ ಖುಷಿ ಮತ್ತು ಹೆಮ್ಮೆ ಅಷ್ಟಿಷ್ಟಲ್ಲ ನೋಡಿ. ಎಲ್ಲೆ ಹೋದರೂ ‘ನನ್ನ ಮಗ/ಮಗಳಿಗೆ ಇಂತಹ ದೊಡ್ಡ ಕಂಪನಿಯಲ್ಲಿ (Comapany) ಕೆಲಸ ಸಿಕ್ಕಿದೆ, ಕೈ ತುಂಬಾ ಸಂಬಳ ಸಿಗುತ್ತೆ’ ಅಂತ ತಮ್ಮ ಸ್ನೇಹಿತರಿಗೆ ಮತ್ತು ಬಂಧು ಬಳಗದವರ ಮುಂದೆಲ್ಲಾ ಹೋಗಿ ಹೇಳಿಕೊಂಡು ಬರುತ್ತಾರೆ. ಇದು ನಿಜಕ್ಕೂ ತಂದೆ (Father) ತಾಯಂದಿರಿಗೆ ಒಂದು ಹೆಮ್ಮೆಯ ವಿಷಯವೇ ಆಗಿರುತ್ತದೆ ಅಂತ ಹೇಳಬಹುದು.


ಹೀಗೆ ಈ ಸಿನಿಮಾ ನಟ ಮತ್ತು ನಟಿಯರು ಸಹ ತಮ್ಮ ಮಕ್ಕಳು ಯಾವುದಾದರೂ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದರೆ, ಅವರು ಯಾವುದಾದರೂ ಒಂದು ಕ್ರೀಡೆಯಲ್ಲಿ ಸಾಧನೆ ಮಾಡಿದರೆ, ಇಲ್ಲ ಅವರಂತೆಯೇ ನಟನೆಗೆ ಎಂಟ್ರಿ ಕೊಟ್ಟರೆ, ಆ ನಟ ಮತ್ತು ನಟಿಯರು ತಮ್ಮ ಮಕ್ಕಳ ಸಾಧನೆಯನ್ನು ತಮ್ಮೆಲ್ಲಾ ಅಭಿಮಾನಿಗಳ ಜೊತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಾರೆ ಮತ್ತು ಅವರು ತಮ್ಮ ಮಕ್ಕಳ ಹೆಮ್ಮೆಯ ತಂದೆ ಅಥವಾ ತಾಯಿ ಅಂತ ಬರೆದುಕೊಳ್ಳುವುದನ್ನು ನಾವು ಅನೇಕ ಬಾರಿ ನೋಡಿರುತ್ತೇವೆ.


ನಟ ಅರ್ಜುನ್ ಒಂದೊಮ್ಮೆ ಸೂಪರ್ ಮಾಡೆಲ್


ಇದನ್ನೆಲ್ಲಾ ಈಗೇಕೆ ಹೇಳುತ್ತಿದ್ದೇವೆ ಅಂತ ನಿಮಗೆ ಅನ್ನಿಸಬಹುದು, ಇಲ್ಲೊಬ್ಬ ನಟ ಹೆಮ್ಮೆಯ ತಂದೆಯಾಗಿದ್ದಾರೆ ನೋಡಿ. ಹೌದು. ನಟ ಅರ್ಜುನ್ ರಾಂಪಾಲ್ ಮತ್ತು ಅವರ ಮಾಜಿ ಪತ್ನಿ ಮೆಹರ್ ಜೆಸಿಯಾ ಇಬ್ಬರು ಸಹ ಹಿಂದೆ ಸೂಪರ್ ಮಾಡೆಲ್ ಗಳಾಗಿದ್ದು ನಮಗೆಲ್ಲಾ ಗೊತ್ತೇ ಇದೆ.
ಇವರಿಬ್ಬರೂ ಒಂದೊಮ್ಮೆ ರ್‍ಯಾಂಪ್ ಜಗತ್ತನ್ನು ಆಳಿದ್ದಾರೆ ಅಂತ ಹೇಳಿದರೆ ಬಹುಶಃ ತಪ್ಪಾಗಲಿಕ್ಕಿಲ್ಲ. ಇದೀಗ ಇವರಿಬ್ಬರ ಮಗಳು ಸಹ ತನ್ನ ಪೋಷಕರಂತೆಯೇ ರ್‍ಯಾಂಪ್ ವಾಕ್ ಮಾಡಿದರೆ ಹೇಗಿರುತ್ತದೆ? ಪೋಷಕರಿಗೆ ಇದಕ್ಕಿಂತ ಹೆಚ್ಚು ಸಂತೋಷ ನೀಡುವ ಸಂಗತಿ ಯಾವುದು ಇರುತ್ತೆ ನೀವೇ ಹೇಳಿ?
ನಟ ಅರ್ಜುನ್ ಅವರ ಮಗಳು ಮೈರಾ ಡಿಯೋರ್ ಗಾಗಿ ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರಂತೆ


ಅರ್ಜುನ್ ಅವರ ಮಗಳು ಸಹ ಅವರಂತೆಯೇ ಮಾಡೆಲಿಂಗ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದು, ತಂದೆ ಅರ್ಜುನ್ ರಾಂಪಾಲ್ ಅವರಿಗೆ ತುಂಬಾನೇ ಹೆಮ್ಮೆಯ ಕ್ಷಣವಾಗಿದೆ ಅಂತ ಹೇಳಬಹುದು.

View this post on Instagram


A post shared by Arjun Rampal (@rampal72)

ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಈ ಸಂದರ್ಭದಲ್ಲಿ ಅವರಿಗಾದ ಈ ಸಂತೋಷವನ್ನು ಹಂಚಿಕೊಳ್ಳಲು ಒಂದು ಭಾವನಾತ್ಮಕವಾದ ನೋಟ್ ಅನ್ನು ಬರೆದಿದ್ದಾರೆ ನೋಡಿ.


ಕ್ರಿಶ್ಚಿಯನ್ ಡಿಯೋರ್ ಗಾಗಿ ಮೈರಾ ರ್‍ಯಾಂಪ್ ನಲ್ಲಿ ವಾಕ್ ಮಾಡುತ್ತಿರುವ ಒಂದು ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ ಮತ್ತು ಅದಕ್ಕೆ "ಇಂದು ನನ್ನ ಸುಂದರ ಪುಟ್ಟ ರಾಜಕುಮಾರಿ, ತನ್ನ ಮೊದಲ ರ್‍ಯಾಂಪ್ ವಾಕ್ ಮಾಡಿದ್ದಾಳೆ. ಅದೂ ಕ್ರಿಶ್ಚಿಯನ್ ಡಿಯೋರ್ ಗೆ ಅನ್ನೋದು ಇನ್ನೊಂದು ತುಂಬಾನೇ ಹೆಮ್ಮೆ ತರುವ ವಿಷಯ.


Arjun Rampal is a proud dad as daughter Myra walks her first runway for Dior


ಇದೆಲ್ಲವನ್ನು ನನ್ನ ಮಗಳು ತನ್ನ ಸ್ವಂತ ಅರ್ಹತೆಯ ಮೇಲೆ ಸಾಧಿಸಿದ್ದಾಳೆ. ಆಡಿಷನ್ ನಿಂದ ಹಿಡಿದು ದಿರಿಸುಗಳ ಫಿಟ್ಟಿಂಗ್ ಗಳವರೆಗೆ ಎಲ್ಲವನ್ನೂ ಆಕೆಯೇ ನಿಭಾಯಿಸಿದ್ದಾಳೆ.


ಇದನ್ನೂ ಓದಿ: Rakhi Sawant: ಆದಿಲ್ ಖಾನ್ ನಾನು ಇಸ್ಲಾಂ ಸ್ವೀಕರಿಸುವಂತೆ ಮಾಡಿದ! ರಾಖಿ ಗಂಭೀರ ಆರೋಪ


ಅವಳು ನಮ್ಮೆಲ್ಲರನ್ನೂ ಹೆಮ್ಮೆ ಪಡುವಂತೆ ಮಾಡಿದ್ದಾಳೆ. ಆಕೆಗೆ ಹೆಚ್ಚಿನ ಯಶಸ್ಸು, ಪ್ರೀತಿ ಮತ್ತು ಸಂತೋಷವನ್ನು ಹಾರೈಸುತ್ತೇನೆ. ನೀನು ಸ್ಟಾರ್ ಅಗಿದ್ದೀಯಾ ಮಗಳೇ.. ನಿನಗೆ ಅಭಿನಂದನೆಗಳು” ಅಂತ ಸುಂದರವಾಗಿ ಬರೆದಿದ್ದಾರೆ.


ಡಿಯೋರ್ ಅವರು ಆಯೋಜಿಸಿದ್ದ ಈ ಫ್ಯಾಷನ್ ಪ್ರದರ್ಶನವನ್ನು ಯೂಟ್ಯೂಬ್ ನಲ್ಲಿ ನೇರ ಪ್ರಸಾರ ಮಾಡಲಾಯಿತು. ಬಾಲಿವುಡ್ ನ ನಟಿಯರಾದ ರೇಖಾ, ಅನುಷ್ಕಾ ಶರ್ಮಾ, ಸೋನಮ್ ಕಪೂರ್ ಮತ್ತು ಕರಿಷ್ಮಾ ಕಪೂರ್ ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

top videos
    First published: