Malaika-Arjun: ಪ್ರಿಯತಮೆ ಮಲೈಕಾಗೆ ಥ್ಯಾಂಕ್ಸ್​ ಹೇಳಿದ ಅರ್ಜುನ್​ ಕರ್ಪೂರ್​.. ಅದಕ್ಕೂ ಒಂದು ಕಾರಣವುಂಟು ಇಲ್ಲಿದೆ ನೋಡಿ!

ತನ್ನ ಹೊಸ ಬಾಯ್ ಫ್ರೆಂಡ್(Boyfriend) ಬಾಲಿವುಡ್ ನಟ ಅರ್ಜುನ್ ಕಪೂರ್(Arjun Kapoor) ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ನಟಿ ಮಲೈಕಾ ಅರೋರಾ(Malaika Arora) ಬಗ್ಗೆ ಗುಸುಗುಸು ಕೇಳಿ ಬಂದಿದ್ದವು.

ಅರ್ಜುನ್​ ಕಪೂರ್​, ಮಲೈಕಾ ಅರೋರಾ

ಅರ್ಜುನ್​ ಕಪೂರ್​, ಮಲೈಕಾ ಅರೋರಾ

 • Share this:
  ಇತ್ತೀಚೆಗೆ ಒಂದು ಜೋಡಿ ತನ್ನ ಬ್ರೇಕಪ್(Breakup) ವದಂತಿಯಿಂದ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಸುದ್ದಿಯಾಗಿದ್ದು ನಮಗೆಲ್ಲರಿಗೂ ತಿಳಿದಂತಹ ವಿಷಯವೇ ಆಗಿದೆ. ಅದೇ ತನ್ನ ಹೊಸ ಬಾಯ್ ಫ್ರೆಂಡ್(Boyfriend) ಬಾಲಿವುಡ್ ನಟ ಅರ್ಜುನ್ ಕಪೂರ್(Arjun Kapoor) ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ನಟಿ ಮಲೈಕಾ ಅರೋರಾ(Malaika Arora) ಬಗ್ಗೆ ಗುಸುಗುಸು ಕೇಳಿ ಬಂದಿದ್ದವು. ಅದರ ನಂತರ ತಾನು ಹಾಕಿಕೊಳ್ಳುವ ತನ್ನ ಉಡುಗೆಗಳಿಗಾಗಿ ಸದಾ ಟೀಕೆಗೆ ಒಳಗಾಗುವ ಬಗ್ಗೆ ಮನ ಬಿಚ್ಚಿ ಮಾತಾಡಿ ನನಗೆ ಯಾವ ರೀತಿ ಬಟ್ಟೆಯನ್ನು ಧರಿಸಬೇಕೆಂದು ನನಗೆ ಗೊತ್ತಿದೆ. ನಾನೇನೂ ದಡ್ಡಿಯಲ್ಲ ಎಂದು ಹೇಳಿದ್ದರು. ಈ ಜೋಡಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಆದರೆ ಈ ಬಾರಿ ಒಳ್ಳೆಯ ಕಾರಣಕ್ಕೆ ಸುದ್ದಿಯಲ್ಲಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

  ಸಖತ್​ ಬೆವರಿಳಿಸುತ್ತಿದ್ದಾರೆ ಅರ್ಜುನ್​ ಕಪೂರ್!

  ಈ ಜೋಡಿ ಕಳೆದ ಕೆಲವು ತಿಂಗಳುಗಳಿಂದ ಯಾವುದಾದರೂ ಒಂದು ವಿಷಯಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಅಥವಾ ಟಿವಿ ಮಾಧ್ಯಮಗಳಲ್ಲಿ ಸುದ್ದಿಯಲ್ಲಿದೆ ಎಂದು ಹೇಳಬಹುದು. ಬಾಯ್‌ಫ್ರೆಂಡ್ ಮತ್ತು ನಟ ಅರ್ಜುನ್ ಕಪೂರ್ ಕೆಲವು ಸಮಯದಿಂದ ಹಾರ್ಡ್ ಕೋರ್ ಫಿಟ್ನೆಸ್ ನಡೆಸುತ್ತಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ವ್ಯಾಯಾಮ ಮತ್ತು ಕಠಿಣವಾದ ತಾಲೀಮು ಮಾಡುತ್ತಿರುವ ವಿಡಿಯೋಗಳನ್ನು ಆಗಾಗ್ಗೆ ತಮ್ಮ ಅಭಿಮಾನಿಗಳ ಸಲುವಾಗಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

  ಗೆಳತಿ ಮಲೈಕಾಗೆ ಧನವ್ಯಾದ ತಿಳಿಸಿದ ಅರ್ಜುನ್​ ಕಪೂರ್​!

  ಈಗ ಈ ನಟ ಕೆಲವು ಯೋಗದಲ್ಲಿ ಮತ್ತು ತಾಲೀಮಿನಲ್ಲಿ ತೊಡಗಿರುವ ತಮ್ಮ ಫೋಟೋಗಳ ಮತ್ತೊಂದು ಸೆಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಈ ಹೊಸ ಫಿಟ್ನೆಸ್ ಪ್ರಯಾಣವನ್ನು ಪ್ರಾರಂಭಿಸಲು ಸಹಾಯ ಮಾಡಿದ್ದಕ್ಕಾಗಿ ಅವರು ತಮ್ಮ ಗೆಳತಿ ಮಲೈಕಾ ಅರೋರಾ ಅವರಿಗೆ ಧನ್ಯವಾದ ಅರ್ಪಿಸಿರುವುದು ಅಭಿಮಾನಿಗಳ ಗಮನ ಸೆಳೆದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ತನ್ನ ಬಾಯ್‌ಫ್ರೆಂಡ್ ಅರ್ಜುನ್‌ನ ಸಂದೇಶಕ್ಕೆ ನಟಿ ಮಲೈಕಾ ಅವರು ಸಹ ಪ್ರತಿಕ್ರಿಯಿಸಿದ್ದಾರೆ ನೋಡಿ.

  ಅರ್ಜುನ್​ ವರ್ಕೌಟ್​ ಫೋಟೋ ವೈರಲ್​!

  ನಟ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಮೊದಲ ಫೋಟೋದಲ್ಲಿ ಅರ್ಜುನ್ ಕಪೂರ್ ಮೊಣಕಾಲುಗಳ ಮೇಲೆ ಕುಳಿತು, ಅಂಗೈಗಳಿಂದ ಹಿಮ್ಮಡಿಗಳನ್ನು ಸ್ಪರ್ಶಿಸುತ್ತಿರುವಾಗ ತಲೆಯನ್ನು ಮೇಲಕ್ಕೆತ್ತುತ್ತಾ ಹಿಂದಕ್ಕೆ ಬಾಗಿರುವುದನ್ನು ನಾವು ನೋಡಬಹುದು. ನಂತರದ ಫೋಟೋದಲ್ಲಿ ಅವರು ತನ್ನ ಎರಡೂ ಕಾಲುಗಳನ್ನು ಚಾಚಿರುವುದನ್ನು ನಾವು ನೋಡಬಹುದು. ಹಿಂದೆ ಇರುವ ಕಾಲನ್ನು ಚಾಚಿ, ಮುಂಭಾಗದಲ್ಲಿ ಇನ್ನೊಂದು ಕಾಲನ್ನು ಮಡಚಿ. ಮೂರನೆಯ ಫೋಟೋದಲ್ಲಿ ನಟ ಅರ್ಜುನ್ ಅವರು ತನ್ನ ತಲೆಯನ್ನು ಮುಂದೆ ಬಾಗಿಸಿ ಕಾಲುಗಳನ್ನು ಚಾಚಿ ಕುಳಿತ್ತಿರುವುದನ್ನು ನಾವು ಇಲ್ಲಿ ನೋಡಬಹುದಾಗಿದೆ.
  View this post on Instagram


  A post shared by Arjun Kapoor (@arjunkapoor)

  ಇದನ್ನೂ ಓದಿ: ಬಿಗ್​ಬಾಸ್​ ರೂಲ್ಸ್​ನಿಂದ ತೂಕ ಕಳೆದುಕೊಂಡ ನಟಿ.. ಹೇಗಿದ್ದವ್ರು, ಹೇಗಾಗಿದ್ದಾರೆ ನೋಡಿ!

  ಈ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಅವರು ಅದಕ್ಕೆ "ನಾನು ಈಗಷ್ಟೇ ಅಯ್ಯಂಗಾರ್ ಯೋಗವನ್ನು ಕಂಡುಕೊಂಡು ಹೊಸ ಪ್ರಯಾಣವನ್ನು ಪ್ರಾರಂಭಿಸಿದ್ದೇನೆ. ಇದು ನನ್ನ ದೇಹವನ್ನು ಸಡಿಲಗೊಳಿಸಲು, ನನ್ನ ಸೊಂಟದ ಕೀಲನ್ನು ಸಡಿಲಗೊಳಿಸಲು ಮತ್ತು ನನ್ನ ಬೆನ್ನಿನ ಕೆಳಭಾಗದ ಗಾಯದ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಇದನ್ನು ಪ್ರಾರಂಭ ಮಾಡಿದ್ದೇನೆ. ಸರ್ವೇಶ್ ಶಶಿ, ಮಲೈಕಾ ಮತ್ತು ನನ್ನ ಬೋಧಕರಿಗೆ ಧನ್ಯವಾದಗಳು, ನಾನು ಹೀಗೆ ಮಾಡುವುದರಿಂದ ನನ್ನ ಮನಸ್ಸನ್ನು ಮತ್ತೊಮ್ಮೆ ಸಕ್ರಿಯಗೊಳಿಸುವುದಕ್ಕೆ ಸಾಧ್ಯವಾಗಿದೆ. ಎಂದೆಂದಿಗೂ ಕೃತಜ್ಞ" ಎಂದು ಶೀರ್ಷಿಕೆಯಲ್ಲಿ ಬರೆದು ಕೊಂಡಿದ್ದಾರೆ.

  ಇದನ್ನೂ ಓದಿ: 2 ಮಕ್ಕಳ ತಾಯಿಯಾಗಿದ್ರೂ ಸಖತ್​ ಫಿಟ್​ ಕರೀನಾ ಕಪೂರ್​! ಅವ್ರ ಡಯೆಟ್​ನಲ್ಲಿ ಏನೇನಿದೆ ಅಂತ ನೀವೇ ನೋಡಿ..

  ಅರ್ಜುನ್​ ಕಪೂರ್​​ ಪೋಸ್ಟ್​ಗೆ ಮಲೈಕಾ ಪ್ರತಿಕ್ರಿಯೆ!

  ಇದಕ್ಕೆ ಮಲೈಕಾ ಅರೋರಾ ಸಹ ಪ್ರತಿಕ್ರಿಯಿಸಿ ಕೈಜೋಡಿಸಿದ ಎಮೋಜಿ ಮತ್ತು ಸ್ನಾಯು ಬಲದ ಎಮೋಜಿಯನ್ನು ಹಾಕಿ ಪ್ರತಿಕ್ರಿಯಿಸಿದ್ದಾರೆ. ಇವರ ಈ ಫೋಟೋಗಳನ್ನು ಈಗಾಗಲೇ 40,000ಕ್ಕೂ ಹೆಚ್ಚು ಜನರು ಇಷ್ಟ ಪಟ್ಟಿದ್ದಾರೆ ಎಂದು ಹೇಳಬಹುದು. ಈ ಮಧ್ಯೆ, ಕೆಲಸದ ವಿಷಯದಲ್ಲಿ, ಅರ್ಜುನ್ ಕಪೂರ್ ಸಾಕಷ್ಟು ರೋಮಾಂಚಕ ಯೋಜನೆಗಳನ್ನು ಸಾಲು ಸಾಲಾಗಿ ಹೊಂದಿದ್ದಾರೆ. ಅವರು ಮುಂದೆ ವಿಶಾಲ್ ಭಾರದ್ವಾಜ್ ಅವರ ಮಗ ಆಸ್ಮಾನ್ ಭಾರದ್ವಾಜ್ ಅವರ ‘ಕುತ್ತೇ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
  Published by:Vasudeva M
  First published: