Malaika-Arjun: ಕುನಾಲ್ ರಾವಲ್ ಮದುವೆಯಲ್ಲಿ ಮಲೈಕಾ, ಅರ್ಜುನ್ ಫುಲ್ ಮಿಂಚಿಂಗ್!

ಮುಂಬೈನಲ್ಲಿ ನಡೆದ ಡಿಸೈನರ್ ಕುನಾಲ್ ರಾವಲ್ ಮತ್ತು ಅರ್ಪಿತಾ ಮೆಹ್ತಾ ಮದುವೆಯ ಸಮಾರಂಭದಲ್ಲಿ ನಟ ಅರ್ಜುನ್ ಮತ್ತು ನಟಿ ಮಲೈಕಾ ಏನೆಲ್ಲಾ ಮಾಡಿದ್ದಾರೆ ಗೊತ್ತೇ? ತೆರೆಮರೆಯಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಇವರು ಹಂಚಿಕೊಂಡಿದ್ದಾರೆ ನೋಡಿ. ಆ ಫೋಟೋಗಳಿಗೆ 'ಕಂಟೆಂಟ್ ಕ್ರೆಡಿಟ್' ಅನ್ನು ನಟ ಶಾಹಿದ್ ಕಪೂರ್ ಅವರಿಗೆ ನೀಡಿದ್ದಾರೆ.

ಕುನಾಲ್ ರಾವಲ್, ಅರ್ಪಿತಾ ಮೆಹ್ತಾ ಮದುವೆಯಲ್ಲಿ ಮಲೈಕಾ ಮತ್ತು ಅರ್ಜುನ್

ಕುನಾಲ್ ರಾವಲ್, ಅರ್ಪಿತಾ ಮೆಹ್ತಾ ಮದುವೆಯಲ್ಲಿ ಮಲೈಕಾ ಮತ್ತು ಅರ್ಜುನ್

  • Share this:
ಮೊನ್ನೆ ಎಂದರೆ ಆಗಸ್ಟ್ 28 ರಂದು ಮುಂಬೈನಲ್ಲಿ ನಡೆದ ಡಿಸೈನರ್ ಕುನಾಲ್ ರಾವಲ್ (designers Kunal Rawal) ಮತ್ತು ಅರ್ಪಿತಾ ಮೆಹ್ತಾ ಅವರ ವಿವಾಹದಲ್ಲಿ ನಟಿ ಮಲೈಕಾ ಅರೋರಾ (Malaika Arora) ಮತ್ತು ನಟ ಅರ್ಜುನ್ ಕಪೂರ್ (Arjun Kapoor) ಸಹ ಬಂದಿದ್ದರಂತೆ. ಇವರಷ್ಟೇ ಅಲ್ಲದೆ ನಟ ಶಾಹಿದ್ ಕಪೂರ್, ಮೀರಾ ರಜಪೂತ್, ರಿಯಾ ಕಪೂರ್, ವರುಣ್ ಧವನ್, ನತಾಶಾ ದಲಾಲ್ ಮತ್ತು ಮೋಹಿತ್ ಮಾರ್ವಾ ಸೇರಿದಂತೆ ಅನೇಕ ಬಾಲಿವುಡ್ ನಟ, ನಟಿಯರು ಮದುವೆ ಸಮಾರಂಭದಲ್ಲಿ ಬಂದಿದ್ದರು. ನಟ ಅರ್ಜುನ್ ಮತ್ತು ನಟಿ ಮಲೈಕಾ ಇಬ್ಬರು ಅರ್ಪಿತಾ ಮತ್ತು ಕುನಾಲ್ ಅವರ ಮದುವೆಯ (Wedding) ಸಮಾರಂಭದಲ್ಲಿ ಏನೆಲ್ಲಾ ಮಾಡಿದ್ದಾರೆ ಗೊತ್ತೇ? ತೆರೆಮರೆಯಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಇವರು ಹಂಚಿಕೊಂಡಿದ್ದಾರೆ ನೋಡಿ. ಆ ಫೋಟೋಗಳಿಗೆ 'ಕಂಟೆಂಟ್ ಕ್ರೆಡಿಟ್' ಅನ್ನು ನಟ ಶಾಹಿದ್ ಕಪೂರ್ (Shahid Kapoor) ಅವರಿಗೆ ನೀಡಿದ್ದಾರೆ.

ವರನ ಜೊತೆ ತುಂಟಾಟವಾಡಿದ ಫೋಟೋ ಶೇರ್
ಹೌದು.. ಸೋಮವಾರ ನಟಿ ಮಲೈಕಾ ಮತ್ತು ನಟ ಅರ್ಜುನ್ ಇಬ್ಬರು ಮದುವೆ ಸ್ಥಳದಲ್ಲಿ ವರನೊಂದಿಗೆ ಹೇಗೆಲ್ಲಾ ತುಂಟಾಟಗಳನ್ನು ಮಾಡಿದ್ದಾರೆ ಅಂತ ನೀವು ನೋಡಿದರೆ ಖುಷಿ ಆಗುವುದಂತೂ ಗ್ಯಾರೆಂಟಿ. ಇವರು ಹೇಗೆಲ್ಲಾ ಪೋಸ್ ನೀಡಿದ್ದಾರೆ ಅಂತ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿರುವ ಫೋಟೋಗಳನ್ನು ನೀವು ನೋಡಿದರೆ ಅರ್ಥವಾಗುತ್ತದೆ.

ಇದನ್ನೂ ಓದಿ:  Bipasha and Karan: ಮೊದಲ ಮಗು ವೆಲ್ಕಮ್ ಮಾಡಲು ಸಜ್ಜಾದ ಬಿಪಾಶಾ, ಕರಣ್ ದಂಪತಿ!

ಕುನಾಲ್ ಅವರೊಂದಿಗೆ ಪೋಸ್ ನೀಡಿದ ಸಣ್ಣ ಕ್ಲಿಪ್ ಅನ್ನು ಸಹ ಅರ್ಜುನ್ ಹಂಚಿಕೊಂಡಿದ್ದಾರೆ. ಈ ಒಂದು ಫೋಟೋದಲ್ಲಿ ಅರ್ಜುನ್ ಅವರು ಕುನಾಲ್ ಅವರ ಕೆನ್ನೆಗಳನ್ನು ಎಳೆಯುತ್ತಿದ್ದರೆ, ಮಲೈಕಾ ಕುನಾಲ್ ಕೆನ್ನೆಗೆ ಮುತ್ತು ನೀಡುತ್ತಿರುವುದನ್ನು ನೋಡಬಹುದು. ಈ ಫೋಟೋ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ.

ಮತ್ತೊಂದು ವೈರಲ್ ವಿಡಿಯೋದಲ್ಲಿ ಏನಿದೆ?
ಇನ್ನೊಂದು ವಿಡಿಯೋದಲ್ಲಿ, ಅರ್ಜುನ್ ಅವರು ಕುನಾಲ್ ಅವರ ಪಕ್ಕದಲ್ಲಿ ನಿಂತಾಗ ನಗುತ್ತಿದ್ದಾರೆ, ಆದರೆ ಮಲೈಕಾ ಮೂವರು ಒಟ್ಟಿಗೆ ಪೋಸ್ ನೀಡಿದಾಗ ಇತರ ಮದುವೆಯ ಅತಿಥಿಗಳು ಮಾಡಿದ ತಮಾಷೆಯ ಕಾಮೆಂಟ್ ಅನ್ನು ಕೇಳಿ ಸಿಡಿಮಿಡಿಗೊಂಡರು. ಅರ್ಜುನ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಅನ್ನು ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. "ಈ ಒಂದು ಸುಂದರವಾದ ಫೋಟೋವನ್ನು ತೆರೆಮರೆಯಲ್ಲಿ ಸರಿಯಾಗಿ ನಿಂತು ತೆಗೆದದ್ದು ಶಾಹಿದ್ ಕಪೂರ್ ಮತ್ತು ಕರಿಷ್ಮಾ ಕರಮ್ ಚಂದಾನಿ” ಅಂತ ಹೇಳಿದ್ದಾರೆ.


View this post on Instagram


A post shared by Arjun Kapoor (@arjunkapoor)
ಶೋ ಸ್ಟಾಪರ್ ಆಗಿ ರ್‍ಯಾಂಪ್ ಮೇಲೆ ನಡೆದ ಅರ್ಜುನ್ 
ಈ ಮದುವೆಗಾಗಿ ಕ್ರೀಮ್ ಮತ್ತು ಚಿನ್ನದ ಬಣ್ಣದ ಸೀರೆಯನ್ನು ಧರಿಸಿದ್ದ ಮಲೈಕಾ ಅವರು ಈ ಪೋಸ್ಟ್ ಗೆ ಕಾಮೆಂಟ್ ಮಾಡಿ "ಕುನಾಲ್ ರಾವಲ್ ನಗುತ್ತಿದ್ದಾರೆಯೇ ಅಥವಾ ಅಳುತ್ತಿದ್ದಾರೆಯೇ" ಎಂದು ಅವರು ಬರೆದಿದ್ದಾರೆ. ಆಗಸ್ಟ್ 20 ರಂದು ಸಹೋದರಿ ಮತ್ತು ನಟಿ ಸೋನಮ್ ಕಪೂರ್ ತನ್ನ ಗಂಡು ಮಗುವನ್ನು ಸ್ವಾಗತಿಸಿದ ನಂತರ ಮದುವೆಗೆ ಹಾಜರಾಗಿದ್ದ ರಿಯಾ, ಕುನಾಲ್ ಅವರೊಂದಿಗಿನ ಮಲೈಕಾ ಮತ್ತು ಅರ್ಜುನ್ ಅವರ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗೆ, ಕುನಾಲ್ ಎಫ್‌ಡಿಸಿಐ ಇಂಡಿಯಾ ಕೌಚರ್ ವೀಕ್ ನಲ್ಲಿ ತಮ್ಮ ಕಲೆಕ್ಷನ್ಸ್ ಗಳನ್ನು ಪ್ರದರ್ಶಿಸಿದರು, ಅಲ್ಲಿ ಅರ್ಜುನ್ ಶೋ ಸ್ಟಾಪರ್ ಆಗಿ ರ್‍ಯಾಂಪ್ ಮೇಲೆ ನಡೆದರೆ, ಮಲೈಕಾ ಮುಂದಿನ ಸಾಲಿನಲ್ಲಿ ಕುಳಿತು ಅರ್ಜುನ್ ಅವರನ್ನು ಹುರಿದುಂಬಿಸಿದರು.

ಇದನ್ನೂ ಓದಿ:  Hrithik and Sussanne: ಮಾಜಿ ಪತ್ನಿ ಸುಸೇನ್ ಖಾನ್ ಜೊತೆ ಬಾಲಿವುಡ್​ ನಟ ಹೃತಿಕ್!

ಮಾಡುವೆ ಸಮಾರಂಭದಲ್ಲಿ ಯಾರ‍್ಯಾರು ಭಾಗಿಯಾಗಿದ್ರು
ಕುನಾಲ್ ರಾವಲ್ ಮತ್ತು ಅರ್ಪಿತಾ ಮೆಹ್ತಾ ಅವರು ಶುಕ್ರವಾರ ಅದ್ಧೂರಿಯಾಗಿ ವಿವಾಹಪೂರ್ವ ಔತಣಕೂಟವನ್ನು ಸಹ ಆಯೋಜಿಸಿದ್ದರು. ಫ್ಯಾಷನ್ ಜಗತ್ತು ಮತ್ತು ಚಿತ್ರೋದ್ಯಮದ ತಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗಾಗಿ ನಡೆದ ಪಾರ್ಟಿಯಲ್ಲಿ ಜಾಹ್ನವಿ ಕಪೂರ್, ಆದಿತ್ಯ ರಾಯ್ ಕಪೂರ್, ಅನಿಲ್ ಕಪೂರ್, ವರುಣ್ ಧವನ್, ಶನಾಯಾ ಕಪೂರ್, ಕರಣ್ ಜೋಹರ್, ಅರ್ಜುನ್ ಕಪೂರ್, ಮಲೈಕಾ ಅರೋರಾ, ಮಹೀಪ್ ಕಪೂರ್, ಸಂಜಯ್ ಕಪೂರ್, ಮಸಾಬಾ ಗುಪ್ತಾ, ರಾಕುಲ್ ಪ್ರೀತ್ ಸಿಂಗ್, ಜಾಕಿ ಭಗ್ನಾನಿ, ಅನ್ಶುಲಾ ಕಪೂರ್, ರಿಯಾ ಕಪೂರ್ ಮತ್ತು ಇತರರು ಭಾಗವಹಿಸಿದ್ದರು.
Published by:Ashwini Prabhu
First published: