ಬಾಲಿವುಡ್ (Bollywood) ನಟಿ ಮಲೈಕಾ ಅರೋರಾ (Malaika Arora) ಮತ್ತು ಅರ್ಜುನ್ ಕಪೂರ್ (Arjun Kapoor) ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ, ಮಲೈಕಾ ಪ್ರೆಗ್ನೆಂಟ್ (Pregnant) ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಮಲೈಕಾ ಅರೋರಾ ಗರ್ಭಿಣಿ ಅನ್ನೋ ವಿಚಾರವನ್ನು ಅರ್ಜುನ್ ಕಪೂರ್ ನಿರಾಕರಿಸಿದ್ದಾರೆ. ಅಲ್ಲದೇ ಮಲೈಕಾ ಅರೋರ್ ಗರ್ಭಿಣಿ ಎಂದು ಸುದ್ದಿ ಮಾಡಿದ್ದ ವೆಬ್ ಸೈಟ್ ವಿರುದ್ಧ ಅರ್ಜುನ್ ಗರಮ ಆಗಿದ್ದಾರೆ. ನಮ್ಮ ವೈಯಕ್ತಿಕ ಬದುಕಿನೊಂದಿಗೆ ಆಟವಾಡಲು ಧೈರ್ಯ ಮಾಡಬೇಡಿ ಎಂದು, ವೆಬ್ ಸೈಟ್ ಮತ್ತು ಪತ್ರಕರ್ತರ ವಿರುದ್ಧ ಸಿಡಿದೆದ್ದಿದ್ದಾರೆ. ಕಸದ ಸುದ್ದಿಗಳನ್ನು ಸಾಗಿಸುವ ಸಂದರ್ಭದಲ್ಲಿ ಎಚ್ಚರ (Warning) ವಹಿಸಿ ಎಂದಿದ್ದಾರೆ. ನಾನು ಸುಮ್ಮನಿರಲ್ಲ ಎಂದು ಹೇಳಿದ್ದಾರೆ.
ಅರ್ಜುನ್ ಕಪೂರ್ ಟೀಕೆ
ಮಲೈಕಾ ಅರೋರಾ ಅರ್ಜುನ್ ಕಪೂರ್ ನಟನೊಂದಿಗೆ ತನ್ನ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾಳೆ ಎಂಬ ವರದಿಯನ್ನು ಅರ್ಜುನ್ ಕಪೂರ್ ಟೀಕಿಸಿದ್ದಾರೆ. ಮಲೈಕಾ ಅರೋರಾ ಮಗುವಿನ ನಿರೀಕ್ಷೆಯಲ್ಲಿದ್ದಾರೆಯೇ? ಲೇಖನದ ಶೀರ್ಷಿಕೆಯನ್ನು ಓದಿ. ಅವರ ಇನ್ಸ್ಟಾಗ್ರಾಮ್ ಸ್ಟೋರಿ ತೆಗೆದುಕೊಂಡು ಎಚ್ಚರಿಕೆ ನೀಡಿದ್ದಾರೆ.
ವೆಬ್ಸೈಟ್ ಮತ್ತು ಪತ್ರಕರ್ತರ ವಿರುದ್ಧ ಗರಂ
ಮಲೈಕಾ ಅರೋರಾ ಗರ್ಭಿಣಿ ಎಂದು ಹೇಳುವ ಎಕ್ಸ್ಕ್ಲೂಸಿವ್ ಸ್ಟೋರಿ ಹಾಕಿದ ವೆಬ್ಸೈಟ್ ಮತ್ತು ಪತ್ರಕರ್ತರ ವಿರುದ್ಧ ಅರ್ಜುನ್ ಕಪೂರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಸದ ಸುದ್ದಿಗಳನ್ನು ಸಾಗಿಸುವ ಸಂದರ್ಭದಲ್ಲಿ ಸಂವೇದನಾಶೀಲ ಮತ್ತು ಸಂಪೂರ್ಣವಾಗಿ ನೈತಿಕತೆಯಿಂದ ಮಾಡಿ ಎಂದಿದ್ದಾರೆ.
ಇದನ್ನೂ ಓದಿ: Rashmika Mandanna: ಡೈರೆಕ್ಟ್ ಓಟಿಟಿಯಲ್ಲಿ ಮಿಷನ್ ಮಜ್ನು? ಬಾಲಿವುಡ್ನಲ್ಲಿ ರಶ್ಮಿಕಾಗೆ ನೋ ಲಕ್
ಅರ್ಜುನ್ ವಾರ್ನಿಂಗ್
'ಈ ಪತ್ರಕರ್ತರು ನಿಯಮಿತವಾಗಿ ಇಂತಹ ಸುದ್ದಿಗಳು ಬರೆಯುತ್ತಿದ್ದಾರೆ. ಮತ್ತು ಅದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಏಕೆಂದರೆ ನಾವು ಈ ನಕಲಿ ಗಾಸಿಪ್ ಲೇಖನಗಳು ಮಾಧ್ಯಮಗಳಲ್ಲಿ ಹರಡಿದಾಗ, ಅವುಗಳನ್ನು ನಿರ್ಲಕ್ಷಿಸುತ್ತೇವೆ. ನಮ್ಮ ವೈಯಕ್ತಿಕ ಬದುಕಿನೊಂದಿಗೆ ಆಟವಾಡಲು ಧೈರ್ಯ ಮಾಡಬೇಡಿ' ಎಂದು ಎಚ್ಚರಿಕೆ ನೀಡಿದ್ದಾರೆ.
ಮಲೈಕಾ ಮತ್ತು ಅರ್ಜುನ್ ಕಪೂರ್ ಸಂಬಂಧ
ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಜೋಡಿಯಾಗಿ ಓಡಾಡುತ್ತಿದ್ದಾರೆ. ಅರ್ಜುನ್ ಕಪೂರ್ ವದಂತಿಗಳಿಗೆ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಒಮ್ಮೆ ಇಬ್ಬರು ದೂರವಾಗಿದ್ದಾರೆ ಎಂಬ ಸುದ್ದಿ ಹರಡಿದಾಗ "ಶ್ಯಾಡಿ ವದಂತಿಗಳಿಗೆ ಇಲ್ಲಿ ಸ್ಥಾನವಿಲ್ಲ, ಜಾಗರೂಕರಾಗಿರಿ' ಎಂದು ಹೇಳಿದ್ದರು.
ಅರ್ಜುನ್ ಕಪೂರ್ ಬ್ಯುಸಿ
ಅರ್ಜುನ್ ಕಪೂರ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ದಿ ಲೇಡಿ ಕಿಲ್ಲರ್ನಲ್ಲಿ ಅವರು ಭೂಮಿ ಪೆಡ್ನೇಕರ್ ಅವರೊಂದಿಗೆ ನಟಿಸಲಿದ್ದಾರೆ. ಹೆಚ್ಚುವರಿಯಾಗಿ, ಅವರು ಭೂಮಿ ಪೆಡ್ನೇಕರ್ ಮತ್ತು ರಾಕುಲ್ ಪ್ರೀತ್ ಸಿಂಗ್ ಅವರೊಂದಿಗೆ ಹೆಸರಿಡದ ನಿರ್ಮಾಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ತೀರಾ ಇತ್ತೀಚೆಗೆ ಕಾಣಿಸಿಕೊಂಡ ಆಕ್ಷನ್ ಚಿತ್ರ ಏಕ್ ವಿಲನ್ ರಿಟನ್ರ್ಸ್.
ಇದನ್ನೂ ಓದಿ: Malaika Arora-Arjun Kapoor: ಮದುವೆಯಾಗದೇ 49ನೇ ವಯಸ್ಸಲ್ಲಿ ತಾಯಿಯಾಗ್ತಿದ್ದಾರೆ ಮಲೈಕಾ!
ಹೊಸ ರಿಯಾಲಿಟಿ ಶೋನ ನಿರೂಪಣೆ
ಇನ್ನೊಂದು ಕಡೆ ನಟಿ ಮಲೈಕಾ ಹೊಸ ರಿಯಾಲಿಟಿ ಶೋನ ನಿರೂಪಣೆಯ ಜವಬ್ದಾರಿ ಹೊತ್ತಿದ್ದಾರೆ. ಮೂವಿಂಗ್ ಇನ್ ವಿತ್ ಮಲೈಕಾ' ಶೋ ಮೂಲಕ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಇದರ ಜೊತೆ ಮಲೈಕಾ ಅವರ ಮಗ ಅರ್ಹಾನ್ ಖಾನ್ ಕೂಡ ಚಿತ್ರರಂಗಕ್ಕೆ ಲಗ್ಗೆ ಇಡಲು ಸಕಲ ಸಿದ್ಧತೆ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ