Arjun Kapoor: ಅರ್ಜುನ್​ ಕಪೂರ್​ರನ್ನೇ ಟ್ರೋಲ್​ ಮಾಡಿದ ಪರಿಣಿತಿ ಚೋಪ್ರಾ..!

Mera Naam Joker: ಸಿನಿಮಾ ಬಿಟ್ಟು ನಿಜ ಜೀವನದಲ್ಲಿ ಒಳ್ಳೆಯ ಸ್ನೇಹಿತರಾಗಿರುವ ಅರ್ಜುನ್​-ಪರಿಣಿತಿ ಆಗಾಗ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುತ್ತಿರುತ್ತಾರೆ. ಈ ಸಲ ಪರಿಣಿತಿಯ ಸರದಿ. ಅರ್ಜುನ್​ ಮಾಡಿದ ಪೋಸ್ಟ್​ನಿಂದಾಗಿ, ಅವರನ್ನೇ ಟ್ರೋಲ್​ ಮಾಡಿದ್ದಾರೆ ಪರಿಣಿತಿ.

ಅರ್ಜುನ್​ ಹಾಗೂ ಪರಿಣಿತಿ ಚೋಪ್ರಾ

ಅರ್ಜುನ್​ ಹಾಗೂ ಪರಿಣಿತಿ ಚೋಪ್ರಾ

  • Share this:
ಅರ್ಜುನ್​ ಕಪೂರ್​ ಹಾಗೂ ಪರಿಣಿತಿ ಚೋಪ್ರಾ ಒಂದೇ ಸಿನಿಮಾ ಮೂಲಕ ಬಾಲಿವುಡ್​ಗೆ ಪರಿಚಿತರಾದವರು. 'ಇಷಕ್​ಝಾದೆ' ಚಿತ್ರದ ಮೂಲಕ ಡೆಬ್ಯೂ ಮಾಡಿದ ಇವರು ನಂತರವೂ ಒಟ್ಟಿಗೆ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಬಿಟ್ಟು ನಿಜ ಜೀವನದಲ್ಲಿ ಒಳ್ಳೆಯ ಸ್ನೇಹಿತರಾಗಿರುವ ಅರ್ಜುನ್​-ಪರಿಣಿತಿ ಆಗಾಗ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುತ್ತಿರುತ್ತಾರೆ. ಈ ಸಲ ಪರಿಣಿತಿಯ ಸರದಿ. ಅರ್ಜುನ್​ ಮಾಡಿದ ಪೋಸ್ಟ್​ನಿಂದಾಗಿ, ಅವರನ್ನೇ ಟ್ರೋಲ್​ ಮಾಡಿದ್ದಾರೆ ಪರಿಣಿತಿ.

Arjun Kapoor Posts Mera naam JOKER Picture and Parineeti Chopra Trolls Him in Comments
ಅರ್ಜುನ್​ ಕಪೂರ್​


ಅರ್ಜುನ್​ ಕಪೂರ್​ ಇತ್ತೀಚೆಗೆ ಹಾಲಿವುಡ್​ ಸಿನಿಮಾ 'ಜೋಕರ್​' ಚಿತ್ರದಲ್ಲಿ ಜಾಕ್ವಿನ್ ಫಿನಿಕ್ಸ್​ ಅವರಂತೆ ಮುಖಕ್ಕೆ ಪೇಂಟ್​ ಮಾಡಿಕೊಂಡು ಒಂದು ಫೋಟೋ ತೆಗೆದು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಮೇರ ನಾಮ್ ಜೋಕರ್​ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಚಿತ್ರಕ್ಕೆ ಪರಿಣಿತಿ ಸಖತ್​ ಹ್ಯೂಮರಸ್​ ಆಗಿ ಕಾಲೆಳೆಯುವಂತೆ ಕಮೆಂಟ್​ ಮಾಡಿದ್ದಾರೆ.



 




View this post on Instagram




 

Mera naam JOKER


A post shared by Arjun Kapoor (@arjunkapoor) on





ಕೇವಲ ಫೋಟೋವಲ್ಲ, ವರ್ತನೆಯೂ ಹಾಗೆ ಇದೆ ಅಂತ ಪರಿಣಿತಿ ಕಮೆಂಟ್​ ಮಾಡಿದರೆ, ಅದಕ್ಕೆ ನಟಿ ರಾಕುಲ್​ ಪ್ರೀತ್​ ಸಿಂಗ್​ ನಿಜವಾದ ಮಾತು ಎಂದು ಪ್ರತಿಕ್ರಿಯಿಸಿದ್ದಾರೆ. ಇದೇ ಚಿತ್ರಕ್ಕೆ ಕತ್ರಿನಾ ಕೈಫ್​ ಸಹ ಕಮೆಂಟ್​ ಮಾಡಿದ್ದಾರೆ. ​

ಇದನ್ನೂ ಓದಿ: ಮದುಮಗಳಾದ ನಟಿ ಕತ್ರಿನಾ ಕೈಫ್​: ವೈರಲ್​ ಆಗುತ್ತಿವೆ ಚಿತ್ರಗಳು..!

ಅರ್ಜುನ್​ ಬಣ್ಣದ ಲೋಕದ ಸೆಲೆಬ್ರಿಟಿ ಸ್ನೇಹಿತರ ಕಾಲೆಳೆಯುವುದಕ್ಕೆ ಖ್ಯಾತರಾದವರು. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಸ್ನೇಹಿತರ ಪೋಸ್ಟ್​ಗಳಿಗೆ ಮಾಡುವ ಕಮೆಂಟ್​ಗಳು ಓದುಗರಿಗೆ ಮಜ ಕೊಡುತ್ತವೆ. ಆದರೆ ಈ ಸಲ ಪರಿಣಿತಿ ಮಾಡಿದ ಕೆಲಸಕ್ಕೆ ಅರ್ಜುನ್​ ಪರಿಸ್ಥಿತಿ ನೋಡಲಾಗುತ್ತಿಲ್ಲ.

'ನಮಸ್ತೆ ಇಂಗ್ಲೆಂಡ್​' ಸಿನಿಮಾದ ನಂತರ ಮೂರನೇ ಬಾರಿಗೆ ಅರ್ಜುನ್​ ಹಾಗೂ ಪರಿಣಿತಿ ಒಟ್ಟಿಗೆ 'ಸಂದೀಪ್​ ಔರ್​ ಪಿಂಕಿ ಫರಾರ್​​' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಪ್ರಕಟವಾಗಲಿದೆ.

Parineeti Chopra: ಮಾಲ್ಡೀವ್ಸ್​ನಲ್ಲಿ ಬಿಕಿನಿ ತೊಟ್ಟು ಕ್ಯಾಮೆರಾಗೆ ಪೋಸ್​ ಕೊಟ್ಟ ಪರಿಣಿತಿ ಚೋಪ್ರಾ..!

First published: