ಸ್ಟೈಲ್​ ಕಿಂಗ್​ ರಣವೀರ್ ಸಿಂಗ್​ ಫೋಟೋ ನೋಡಿ ಕಾಲೆಳೆದ ನಟ ಅರ್ಜುನ್ ಕಪೂರ್

ಅರ್ಜುನ್ ಕಪೂರ್ ಹಾಗೂ ರಣವೀರ್ ಸಿಂಗ್​

ಅರ್ಜುನ್ ಕಪೂರ್ ಹಾಗೂ ರಣವೀರ್ ಸಿಂಗ್​

ಸ್ಟೈಲ್​ ಕಿಂಗ್​ ರಣವೀರ್ ಸಿಂಗ್​ ಫೋಟೋ ನೋಡಿದ ಅರ್ಜುನ್ ಕಪೂರ್ ತಮಾಷೆಯಾಗಿ ಕಮೆಂಟ್​ ಮಾಡಿದ್ದಾರೆ. ಶರ್ಟ್​ ಬಟನ್ ಹಾಕದ ನಟನಿಗೆ ಅರ್ಜುನ್ ಕೊಟ್ಟ ಬಿರುದು ಏನು ಗೊತ್ತಾ..?

  • Trending Desk
  • 4-MIN READ
  • Last Updated :
  • Share this:

ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನಲ್ಲಿ ಸ್ಟೈಲಿಶ್ ಆಗಿ ಕಾಣುವಂತಹ ನಾಯಕ ನಟ ಎಂದರೆ ಅದು ರಣವೀರ್ ಸಿಂಗ್ ಎಂದರೆ ಅತಿಶಯೋಕ್ತಿಯಲ್ಲ. ನೋಡಲು ತುಂಬಾ ಸರಳವಾಗಿ ಕಂಡರೂ ಅವರು ತೊಡುವ  ವಿನ್ಯಾಸಿತ ಬಟ್ಟೆಗಳಿಂದ ತುಂಬಾನೇ ಸ್ಟೈಲಿಶ್ ಆಗಿ ಕಾಣುತ್ತಾರೆ ರಣವೀರ್ ಸಿಂಗ್​. ಇತ್ತೀಚೆಗೆ ರಣವೀರ್ ಸ್ಟೈಲಿಶ್ ಸೂಟ್ ಅನ್ನು ಧರಿಸಿರುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ರಣವೀರ್ ಸ್ಟೈಲಿಶ್ ಸೂಟ್ ಧರಿಸಿ  ಸ್ಟೈಲಿಶ್ ಆಗಿ ಕಾಣುತ್ತಿದ್ದ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಯಾವುದು ಈ ಫೋಟೋ ಅಂತೀರಾ?


ಅವರು ಕಪ್ಪು ಶರ್ಟ್ ಮತ್ತು ನೀಲಿ ಬಣ್ಣದ ಸೂಟ್ ಧರಿಸಿದ್ದನ್ನು ಫೋಟೋದಲ್ಲಿ ಕಾಣಬಹುದಾಗಿದೆ. ಸ್ಟೈಲ್ ಆಗಿ ತನ್ನ ಶರ್ಟ್‌ನ ಮೇಲಿನ ಗುಂಡಿಗಳನ್ನು ಹಾಕದೆ ಹಾಗೆಯೇ ಬಿಟ್ಟಿರುವುದನ್ನು ನೋಡಿ ಇನ್ನೊಬ್ಬ ಬಾಲಿವುಡ್ ನಟ ರಣವೀರ್ ಫೋಟೋಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.




ನಟ ಅರ್ಜುನ್ ಕಪೂರ್ ಮತ್ತು ರಣವೀರ್ ಸಿಂಗ್ ಉತ್ತಮ ಬಾಂಧವ್ಯ ಹೊಂದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ್ಗೆ ಪರಸ್ಪರರ ಕಾಲು ಎಳೆದುಕೊಳ್ಳುವುದನ್ನು ನಾವು ಕಾಣಬಹುದು. ರಣವೀರ್ ಹಂಚಿಕೊಂಡ ಫೋಟೋ ನೋಡಿ ಅರ್ಜುನ್ 'ಕ್ಲೀವೇಜ್ ಕಿಂಗ್' ಎಂದು ಬರೆದಿದ್ದಾರೆ.


ಇದನ್ನೂ ಓದಿ: Happy Birthday Kichcha Sudeep: ಸುದೀಪ್​ಗೆ ನೇರವಾಗಿ ಶುಭ ಕೋರುವ ಅವಕಾಶ ಇಲ್ಲಿದೆ..!


ವರುಣ್ ಶರ್ಮಾ ಮತ್ತು ಕರಿಷ್ಮಾ ತನ್ನಾ ಸೇರಿದಂತೆ ಹಿಂದಿ ಚಲನಚಿತ್ರೋದ್ಯಮದ ಇತರ ಅನೇಕ ನಟ ನಟಿಯರು ರಣವೀರ್ ಸಿಂಗ್ ಅವರ ಫೋಟೋಗೆ ಪ್ರತಿಕ್ರಿಯೆ ನೀಡಿದ್ದಾರೆ.
ರಣವೀರ್ ಸಿಂಗ್ ತಮ್ಮ ಫೋಟೋ ಹಂಚಿಕೊಂಡ ಆರು ಗಂಟೆಗಳಲ್ಲಿ ಒಂದು ಮಿಲಿಯನ್ ಜನರು ಇದನ್ನು ನೋಡಿ ಇಷ್ಟಪಟ್ಟಿದ್ದಾರೆ. ನೆಟ್ಟಿಗರಿಂದ ಸಾಕಷ್ಟು ಪ್ರಶಂಸೆಯನ್ನು ಪಡೆದುಕೊಳ್ಳುತ್ತಿದೆ ಈ ಫೋಟೋ.


ವಸ್ತ್ರ ವಿನ್ಯಾಸಕಾರರಾದ ಮನೀಶ್ ಮಲ್ಹೋತ್ರಾ ಕೂಡ ರಣವೀರ್ ಫೋಟೋಗೆ 'ಡ್ಯಾಪರ್' ಎಂದು ಬರೆದು ಪ್ರತಿಕ್ರಿಯಿಸಿದ್ದಾರೆ. ಇನ್​ಸ್ಟಾಗ್ರಾಂ ಖಾತೆಯಲ್ಲಿ ಇದೇ ತರಹದ ಸ್ಟೈಲಿಶ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.


ಮತ್ತೊಂದು ಪೋಸ್ಟ್‌ನಲ್ಲಿ ರಣವೀರ್ ಒಂದೆರಡು ಫೋಟೋಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು ಸರಳ ನೀಲಿ ಬಣ್ಣದ ರೌಂಡ್ ನೆಕ್ ಟಿ-ಶರ್ಟ್ ಧರಿಸಿದ್ದರು ಮತ್ತು ಸಣ್ಣದಾಗಿ ತಮ್ಮ ಕೂದಲನ್ನು ಹಿಂದಕ್ಕೆ ಕಟ್ಟಿದ್ದರು. ಈ ಫೋಟೋಗಳಿಗೂ ಮಿಲಿಯನ್​ಗೂ ಹೆಚ್ಚು ಜನರು ಲೈಕ್ಸ್​ ಸಿಕ್ಕಿದ್ದು, ವೈರಲ್ ಆಗಿದೆ.


ಇದನ್ನೂ ಓದಿ: Sidharth Shukla Passes Away: ಬಿಗ್ ಬಾಸ್​ ಸೀಸನ್ 13ರ ವಿನ್ನರ್​ ಸಿದ್ಧಾರ್ಥ್​ ಶುಕ್ಲಾ ನಿಧನ


ನಟ ತಮ್ಮ ಮುಂಬರುವ ಚಿತ್ರ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಯ ತೆರೆಮರೆಯ ವಿಡಿಯೋವನ್ನು ಸಹ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈಗ ಅದನ್ನೂ ಎರಡು ಮಿಲಿಯನ್ ಜನರು ವೀಕ್ಷಿಸಿದ್ದು, ವೈರಲ್ ಆಗಿದೆ. ಈ ಚಿತ್ರದಲ್ಲಿ ರಣವೀರ್‌ರೊಂದಿಗೆ ನಟಿ ಆಲಿಯಾ ಭಟ್ ನಟಿಸುತ್ತಿದ್ದು, ಕರಣ್ ಜೋಹರ್ ನಿರ್ದೇಶಿಸಿ ಬಂಡವಾಳ ಹೂಡಿರುವ ಚಿತ್ರದಲ್ಲಿ ಪೋಷಕ ಪಾತ್ರಗಳಲ್ಲಿ ಹಿರಿಯ ನಟ ನಟಿಯರಾದ  ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನ ಆಜ್ಮಿ ಸಹ ನಟಿಸಲಿದ್ದಾರೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

Published by:Anitha E
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು