Darshans Roberrt movie: ರಾಬರ್ಟ್​ ಚಿತ್ರಕ್ಕೆ ಸಂಗೀತ ನಿರ್ದೇಶಕ ಫಿಕ್ಸ್: ಈ ಬಾರಿ ಹರಿಕೃಷ್ಣ ಅಲ್ವಂತೆ..!

ಈ ಹಿಂದೆ ದರ್ಶನ್ ಅಭಿನಯದ ಚಕ್ರವರ್ತಿ, ತಾರಕ್ ಚಿತ್ರಗಳಿಗೆ ಜನ್ಯ ಸಂಗೀತ ನೀಡಿದ್ದರು. ಇದೀಗ ಡಿ ಬಾಸ್ ಚಿತ್ರಕ್ಕೆ ಮೂರನೇ ಬಾರಿ ರಾಗ ಸಂಯೋಜಿಸುವ ಅವಕಾಶ ಯುವ ಸಂಗೀತ ನಿರ್ದೇಶಕರ ಪಾಲಾಗಿದೆ ಎನ್ನಲಾಗುತ್ತಿದೆ. ಈ ಹಿಂದೆ ಚೌಕ ಸಿನಿಮಾದ ಅಪ್ಪ ಐ ಲವ್ ಯೂ ಪಾ... ಗೀತೆಯನ್ನು ಅರ್ಜುನ್ ಕಂಪೋಸ್ ಮಾಡಿದ್ದರು.

zahir | news18
Updated:June 11, 2019, 10:17 PM IST
Darshans Roberrt movie: ರಾಬರ್ಟ್​ ಚಿತ್ರಕ್ಕೆ ಸಂಗೀತ ನಿರ್ದೇಶಕ ಫಿಕ್ಸ್: ಈ ಬಾರಿ ಹರಿಕೃಷ್ಣ ಅಲ್ವಂತೆ..!
ದರ್ಶನ್
zahir | news18
Updated: June 11, 2019, 10:17 PM IST
ಸ್ಯಾಂಡಲ್​ವುಡ್​ನಲ್ಲಿ 'ರಾಬರ್ಟ್'​ ಸುದ್ದಿಗಳು ಸಖತ್ತಾಗೆ ರೌಂಡ್ ಹೊಡೆಯುತ್ತಿದೆ. ಸಿನಿಮಾ ಆರಂಭವಾಗಿ ತಿಂಗಳುಗಳು ಕಳೆದರೂ ಚಿತ್ರದ ಸಂಪೂರ್ಣ ಮಾಹಿತಿಯನ್ನು ನಿರ್ದೇಶಕ ತರುಣ್ ಸುಧೀರ್ ಇನ್ನೂ ಕೂಡ ಎಲ್ಲೂ ಬಿಟ್ಟು ಕೊಟ್ಟಿಲ್ಲ. 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಚಿತ್ರವಾಗಿರುವುದರಿಂದ 'ರಾಬರ್ಟ್'​ ಬಗ್ಗೆ ಅಲ್ಲೊಂದು ಇಲ್ಲೊಂದು ಸುದ್ದಿಗಳು ಆಗಾಗ್ಗೆ ಹುಟ್ಟಿಕೊಳ್ಳುತ್ತಿದೆ.

ಇದೀಗ ಚಿತ್ರಕ್ಕೆ ಯಾರು ಸಂಗೀತ ನೀಡಲಿದ್ದಾರೆಂಬ ಕುತೂಹಲಕಾರಿ ಪ್ರಶ್ನೆಗೆ ಗಾಂಧಿನಗರದಿಂದ ಉತ್ತರ ಸಿಕ್ಕಿದೆ. ಏಕೆಂದರೆ 'ಚೌಕ'ದಲ್ಲಿ ನಾಲ್ವರು ಸಂಗೀತ ನಿರ್ದೇಶಕರಿಂದ ತರುಣ್ ಸುಧೀರ್ ಭರ್ಜರಿ ಬ್ಯಾಂಡ್ ಬಜಾಯಿಸಿದ್ದರು. ಹೀಗಾಗಿ ತಮ್ಮ ಎರಡನೇ ಚಿತ್ರಕ್ಕೆ ನಿರ್ದೇಶಕರು ಯಾರನ್ನು ಆಯ್ಕೆ ಮಾಡಲಿದ್ದಾರೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಡಿ ಬಾಸ್ ಅಭಿಮಾನಿಗಳಲ್ಲಿತ್ತು.

ಇದಕ್ಕೆ ಉತ್ತರ ಎಂಬಂತೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ 'ರಾಬರ್ಟ್'​ ಜತೆ ತಳುಕು ಹಾಕಿಕೊಂಡಿದೆ. ದರ್ಶನ್ ಚಿತ್ರಗಳಿಗೆ ಗಾನ ಬಜಾಯಿಸುವ ಖಾಸ ದೋಸ್ತ್ ವಿ.ಹರಿಕೃಷ್ಣ ಈ ಬಾರಿ ಇರಲ್ವಂತೆ. ಬದಲಿಗೆ 'ರಾಬರ್ಟ್'​​ರನ್ನು ಕುಣಿಸಲು ಅರ್ಜುನ್ ಜನ್ಯ ಫಿಕ್ಸ್ ಆಗಿದ್ದಾರೆ ಎನ್ನಲಾಗಿದೆ.

ಅತ್ತ ಕಡೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಸಹ ಅರ್ಜುನ್ ಜನ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಇತ್ತ ಕಡೆಯಿಂದ ಮ್ಯಾಜಿಕಲ್ ಕಂಪೋಸರ್ ಕೂಡ 'ದಾಸ'ನ ಚಿತ್ರಕ್ಕೆ ಸಂಗೀತ ನೀಡಲು ಒಕೆ ಅಂದಿದ್ದಾರೆ ಎಂಬ ಸುದ್ದಿಗಳಿವೆ.

ಈ ಹಿಂದೆ ದರ್ಶನ್ ಅಭಿನಯದ 'ಚಕ್ರವರ್ತಿ', 'ತಾರಕ್' ಚಿತ್ರಗಳಿಗೆ ಜನ್ಯ ಸಂಗೀತ ನೀಡಿದ್ದರು. ಇದೀಗ ಡಿ ಬಾಸ್ ಚಿತ್ರಕ್ಕೆ ಮೂರನೇ ಬಾರಿ ರಾಗ ಸಂಯೋಜಿಸುವ ಅವಕಾಶ ಯುವ ಸಂಗೀತ ನಿರ್ದೇಶಕರ ಪಾಲಾಗಿದೆ ಎನ್ನಲಾಗುತ್ತಿದೆ. ಈ ಹಿಂದೆ 'ಚೌಕ' ಸಿನಿಮಾದ 'ಅಪ್ಪ ಐ ಲವ್ ಯೂ ಪಾ...' ಗೀತೆಯನ್ನು ಅರ್ಜುನ್ ಕಂಪೋಸ್ ಮಾಡಿದ್ದರು. ಈ ಗೀತೆ ಭಾರೀ ಜನಮನ್ನಣೆಗಳಿಸಿತ್ತು. ಹೀಗಾಗಿ ಜನ್ಯರನ್ನೇ 'ರಾಬರ್ಟ್'​ಗಾಗಿ ತರುಣ್ ಆಯ್ಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.



ಇನ್ನು 'ಅಲ್ಲಾಡುಸು ಅಲ್ಲಾಡುಸು..' ಎಂದು 'ಚೌಕ'ದಲ್ಲಿ ಸ್ವಲ್ಪ ಜಾಸ್ತಿನೇ ಸೌಂಡ್ ಮಾಡಿ ಎಲ್ಲರನ್ನು ಕುಣಿಸಿದ್ದ ವಿ.ಹರಿಕೃಷ್ಣ ಸದ್ಯ ಚಿತ್ರ ನಿರ್ದೇಶನದತ್ತ ಹೆಚ್ಚು ಗಮನ ಹರಿಸಿದ್ದಾರೆ. 'ಯಜಮಾನ'ನ ಯಶಸ್ಸಿನ​ ಬಳಿಕ ನಿರ್ದೇಶಕ ಹರಿಕೃಷ್ಣ ಅವರು ಹೊಸ ಕಥೆಯ ಸೃಷ್ಟಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಡಿ ಬಾಸ್​ನ 53ನೇ ಚಿತ್ರಕ್ಕೆ ಅರ್ಜುನ್ ಜನ್ಯರಿಗೆ ಮಣೆ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.
Loading...



ಈ ಬಗ್ಗೆ ನಿರ್ದೇಶಕ ತರುಣ್ ಸುಧೀರ್ ಇನ್ನೂ ಕೂಡ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಹೀಗಾಗಿ 'ಚೌಕ' ಚಿತ್ರದಲ್ಲಿ ಬ್ಯಾಂಡ್ ಬಜಾಯಿಸಿದ್ದ ಸಂಗೀತ ನಿರ್ದೇಶಕರಾದ ಗುರುಕಿರಣ್, ಅರ್ಜುನ್ ಜನ್ಯ, ಅನೂಪ್ ಸೀಳಿನ್ ಹಾಗೂ ವಿ. ಹರಿಕೃಷ್ಣ 'ರಾಬರ್ಟ್'​ನಲ್ಲೂ ಮತ್ತೆ ಕೈ ಜೋಡಿಸಿದರೆ ಅಚ್ಚರಿ ಪಡಬೇಕಿಲ್ಲ.

ಇದನ್ನೂ ಓದಿ: Roberrt movie heroine: ಇವರೇ ಅಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ರಾಬರ್ಟ್' ಚಿತ್ರದ ನಾಯಕಿ..!
First published:June 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...