Arjun Janya: ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾದ ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ..!

ಅರ್ಜುನ್​ ಜನ್ಯ ಅವರು ಮೈಸೂರಿನ ತಮ್ಮ ನಿವಾಸದಲ್ಲಿರುವಾಗ ಹೃದಯಾಘಾತಕ್ಕೊಳಗಾಗಿದ್ದಾರೆ. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಅರ್ಜುನ್​ ಜನ್ಯ

ಅರ್ಜುನ್​ ಜನ್ಯ

  • Share this:
ಸ್ಯಾಂಡಲ್​ವುಡ್​ನ ಸ್ಟಾರ್​ ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಅರ್ಜುನ್​ ಜನ್ಯ ಅವರು ಮೈಸೂರಿನ ತಮ್ಮ ನಿವಾಸದಲ್ಲಿರುವಾಗ ಹೃದಯಾಘಾತಕ್ಕೊಳಗಾಗಿದ್ದಾರೆ. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಸಮೀಪದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

Music Director Arjun Janya joined the hands with Darshan Starrer Roberrt Movie team
ದರ್ಶನ್​ ಹಾಗೂ ಅರ್ಜುನ್​ ಜನ್ಯ


ಸಂಗೀತ ದಿಗ್ಗಜನಿಗೆ ಲಘು ಹೃದಯಾಘಾತವಾಗಿರುವ ಬಗ್ಗೆ ಆಸ್ಪತ್ರೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ತಡರಾತ್ರಿಯಿಂದಲೇ ಅರ್ಜುನ್ ಜನ್ಯ ಅವರಿಗೆ ಚಿಕಿತ್ಸೆ ಆರಂಭಿಸಿದ್ದು, ರಾತ್ರಿಯೇ ಆ್ಯಂಜಿಯೋಪ್ಲ್ಯಾಸ್ಟಿ ಮಾಡಲಾಗಿದೆಯಂತೆ. ಅರ್ಜುನ್​ ಜನ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಸದ್ಯ ಅವರ  ಆರೋಗ್ಯ ಸ್ಥಿರವಾಗಿದೆ. ಚಿಕಿತ್ಸೆ ಮುಂದುವರೆಸಿರುವ ವೈದ್ಯರು, ಅವರನ್ನು ತೀವ್ರ ನಿಗಾ ಘಟಕದಲ್ಲಿ ಇಟ್ಟಿದ್ದಾರೆ. 10 ಗಂಟೆಗೆ ಆಸ್ಪತ್ರೆ ವತಿಯಿಂದ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: Pooja Hegde: ಉಟ್ಟ ಸೀರೆ ಎಲ್ಲಿ ಜಾರಿ ಹೋಗುತ್ತೋ ಎಂದು ಭಯಪಡುತ್ತಿದ್ದರಂತೆ ಕರಾವಳಿ ಸುಂದರಿ ಪೂಜಾ ಹೆಗ್ಡೆ

ಸಮಯ ಸಿಕ್ಕಾಗಲೆಲ್ಲ ಅರ್ಜುನ್​ ಮೈಸೂರಿಗೆ ಬಂದು ಉಳಿದುಕೊಳ್ಳುತ್ತಿದ್ದರಂತೆ.  ನಿನ್ನೆಯೂ ಮೈಸೂರಿನ ಬೋಗಾದಿ ರಸ್ತೆಯ ಬಳಿ ಇರುವ ಐಷಾರಾಮಿ ವಿಲ್ಲಾದಲ್ಲಿರುವಾಗಲೇ ಈ ಘಟನೆ ನಡೆದಿದೆ.

39 ವರ್ಷದ ಸಂಗೀತ ನಿರ್ದೇಶಕ ಅರ್ಜುನ್​ ಜನನ್ಯ ಸ್ಯಾಂಡಲ್​ವುಡ್​ನಲ್ಲಿ ಸಾಕಷ್ಟು ಹಿಟ್​ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ತೆರೆಕಂಡ ದರ್ಶನ್​ ಅಭಿನಯದ 'ಒಡೆಯ' ಸಿನಿಮಾಗೆ ಹಾಗೂ ಇನ್ನೇನು ತೆರೆ ಕಾಣಬೇಕಿರುವ 'ರಾಬರ್ಟ್' ಚಿತ್ರಕ್ಕೆ ಇವರೇ ಸಂಗೀತ ನಿರ್ದೇಶನ ಮಾಡಿದ್ದಾರೆ.

Niveditha - Chandan Shetty Marriage Photos: ಚಂದನ್​-ಗೊಂಬೆ ವಿವಾಹದ ಕ್ಯೂಟ್​ ಫೋಟೋಸ್​..!


First published: