news18-kannada Updated:February 26, 2021, 10:17 PM IST
arivu
ಸ್ಯಾಂಡಲ್ವುಡ್ನಲ್ಲಿ ವಿಭಿನ್ನ ಪ್ರಯೋಗಗಳ ಮೂಲಕ ಸದಾ ಸುದ್ದಿಯಲ್ಲಿರುವ ವರುಣ್ ಸ್ಟುಡಿಯೋಸ್ ಹೊಸ ಹಾಡೊಂದನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಹಲವು ಸ್ಟಾರ್ ನಟ-ನಟಿಯರನ್ನು ಒಂದುಗೂಡಿಸಿ ನಮ್ಮ ಭಾರತ ಹಾಡಿನ ಮೂಲಕ ದೇಶಭಕ್ತಿ ಸಾರಿದ್ದ ವರುಣ್ ಸ್ಟುಡಿಯೋಸ್, ಈ ಬಾರಿ ಅರಿವು ಎಂಬ ಆಲ್ಬಂ ಹಾಡಿನ ಮೂಲಕ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಸಮೂಹದಲ್ಲಿನ ಭಾವನೆಗಳನ್ನು ಅಭಿವ್ಯಕ್ತಪಡಿಸುವ ಈ ಗೀತೆಯನ್ನು ಹಾಡಿರುವುದು ಯುವ ಗಾಯಕಅ ಅರ್ಫಾಜ್ ಉಲ್ಲಾಳ್. ರ್ಯಾಪ್ ಶೈಲಿಯಲ್ಲಿ ಮೂಡಿಬಂದಿರುವ ಹಾಡಿಗೆ ಸಂಗೀತ ಸಂಯೋಜಿಸಿರುವುದು ಅನ್ಸ್ರುದ್ದ್ ಮತ್ತು ಸಂಸ್ಕಾರ್. ಅಲ್ಲದೆ ಕೇಳುಗರು ಮತ್ತೆ ಮತ್ತೆ ಹಾಡಿನ ವಿಡಿಯೋ ನೋಡುವಂತೆ ಸೊಗಸಾಗಿ ನಿರ್ದೇಶನ ಮಾಡಿದ್ದಾರೆ ನಿರ್ದೇಶಕ ಗಿರೀಶ್ ಅವಧಾನಿ. ಇನ್ನು ಪ್ರತಾಪ್ ಭಟ್ ಯುವ ಸಮೂಹದ ಭಾವನೆಗಳನ್ನು ಪದಪುಂಜಗಳಲ್ಲಿ ಮನಮೋಹಕವಾಗಿ ಕಟ್ಟಿಕೊಟ್ಟಿದ್ದಾರೆ.
ವರುಣ್ ಸ್ಟುಡಿಯೊಸ್ ಯೌಟ್ಯೂಬ್ ಚಾನೆಲ್ ಬಿಡುಗಡೆಯಾಗಿರುವ ಈ ಹಾಡನ್ನು ನಿರ್ಮಿಸಿರುವುದು ಅನ್ಸ್ರುದ್ದ್ ಮತ್ತು ಸಂಸ್ಕಾರ್ ಎಂಬುದು ವಿಶೇಷ. ಒಟ್ಟಿನಲ್ಲಿ ಯುವ ಸಮೂಹಕ್ಕೆ ಹೇಳಿ ಮಾಡಿಸಿದಂತಿರುವ ಅರಿವು ಹಾಡು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
Published by:
zahir
First published:
February 26, 2021, 10:17 PM IST