• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Arijit Singh: ಬಾಲ್ಯದಲ್ಲಿ ಕಲಿತ ಶಾಲೆಗೆ ಹೈಫೈ ಪ್ಲೇ ಗ್ರೌಂಡ್! ಅರಿಜಿತ್​ ಕಾರ್ಯಕ್ಕೆ ಮೆಚ್ಚುಗೆ

Arijit Singh: ಬಾಲ್ಯದಲ್ಲಿ ಕಲಿತ ಶಾಲೆಗೆ ಹೈಫೈ ಪ್ಲೇ ಗ್ರೌಂಡ್! ಅರಿಜಿತ್​ ಕಾರ್ಯಕ್ಕೆ ಮೆಚ್ಚುಗೆ

ಗಾಯಕ ಅರಿಜಿತ್ ಸಿಂಗ್ ಮಹತ್ವದ ಕೆಲಸ

ಗಾಯಕ ಅರಿಜಿತ್ ಸಿಂಗ್ ಮಹತ್ವದ ಕೆಲಸ

ತಾವು ಕಲಿತ ಶಾಲೆಯ ನೆನಪಿಟ್ಟು ನೆರವಾಗುವವರು ತುಂಬಾ ಕಡಿಮೆ. ಆದರೆ ಯಾವಾಗಲೂ ಸರಳತೆಯಿಂದಲೇ ಸುದ್ದಿಯಾಗಿರುವ ಖ್ಯಾತ ಗಾಯಕ ಅರಿಜಿತ್ ಸಿಂಗ್ ಈಗ ಮತ್ತೊಂದು ಕೆಲಸಕ್ಕೆ ಕೈ ಹಾಕಿದ್ದಾರೆ.

  • Local18
  • 4-MIN READ
  • Last Updated :
  • Mumbai, India
  • Share this:

ಅರಿಜಿತ್ ಸಿಂಗ್ (Arijit Singh) ಭಾರತೀಯ ಗಾಯಕರಲ್ಲಿ ಅತ್ಯಂತ ಬೇಡಿಕೆಯಲ್ಲಿರುವ ಒಬ್ಬ ಸಿಂಗರ್. ಯುವ ಜನರ ನೆಚ್ಚಿನ ಗಾಯಕ (Singer). ಅವರು 2005ರ ಗುರುಕುಲ್​ನಿಂದ ತೊಡಗಿ 2023ರ ಜೂಮೆ ಜೋ ಪಠಾಣ್ (Pathaan) ತನಕ ವಿಶ್ವಾದ್ಯಂತ ಖ್ಯಾತಿ ಗಳಿಸಿದ್ದಾರೆ. ಸೂಪರ್ ಹಿಟ್ ಹಾಡುಗಳನ್ನು (Songs) ಕೊಟ್ಟಿರುವ ಈ ಗಾಯಕ ತುಂಬಾ ಸರಳ ವ್ಯಕ್ತಿತ್ವದ ಸೆಲೆಬ್ರಿಟಿ. ಇಂದು ಪ್ರಪಂಚವೇ ತಿಳಿಯಲ್ಪಡುವ ಈ ಗಾಯಕ ಮುರ್ಷಿದಾಬಾದ್​ನವರು. ಇತ್ತೀಚೆಗೆ ಅವರು ಸಿಲಿಗುರಿಯಲ್ಲಿ ಸಂಗೀತ ಕಾರ್ಯಕ್ರಮ (Music Program) ನಡೆಸಿಕೊಟ್ಟರು. ಅವರು ಸಿಲಿಗುರಿಯ ವೇದಿಕೆಯಿಂದಲೇ ತಮ್ಮ ಕೆಲವು ಪ್ಲಾನ್​ಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅರಿಜಿತ್ ಅವರು ಎಷ್ಟೇ ಎತ್ತರಕ್ಕೆ ತಲುಪಿದರೂ ತಮ್ಮೂರಾಗಿದ್ದ ಮುರ್ಷಿದಾಬಾದ್ ಅನ್ನು ಮರೆತಿಲ್ಲ. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ರಾಜೀವ್ ವಿಜಯ್ ಸಿಂಗ್ ಶಾಲೆಯಲ್ಲಿ ಮುಗಿಸಿದ್ದಾರೆ. ಇದೀಗ ಅರಿಜಿತ್ ಸಿಂಗ್ ಅವರು ಈ ಶಾಲೆಯ ಮ್ಯಾನೇಜ್ಮೆಂಟ್​ನ ಅಧ್ಯಕ್ಷರಾಗಿದ್ದಾರೆ.


ಸಿಲಿಗುರಿ ಸಂಗೀತ ಕಾರ್ಯಕ್ರಮದ ಮೊದಲು ಅರಿಜಿತ್ ಅವರ ಅಭಿಮಾನಿಗಳು ಆ ಪ್ರದೇಶದಲ್ಲಿ ಸಂಭ್ರಮ ಆಚರಿಸಿದ್ದರು. ಸಿಲಿಗುರಿ ಮಾತ್ರವಲ್ಲದೆ ಸಿಕ್ಕಿಂ, ಅಸ್ಸಾಂ, ಬಿಹಾರದಿಂದಲೂ ಅರಿಜಿತ್ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಂಡಿದ್ದರು. ಅರಿಜಿತ್ ಅವರ ಲೈವ್ ಶೋ ನೋಡಲು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು.


Arijit Singh took initiative to renovate ground of his own school
ಗಾಯಕ ಅರಿಜಿತ್ ಸಿಂಗ್ ಮಹತ್ವದ ಕೆಲಸ


ಅರಿಜಿತ್ ಅವರು ತಮ್ಮ ಊರಿನಿಂದ 25 ಜನರನ್ನು ಸಿಲಿಗುರಿಗೆ ಕರೆದುಕೊಂಡು ಬಂದಿದ್ದರು. ಅವರು ಬೆಳಗ್ಗೆ 3 ಗಂಟೆಯ ಹೊತ್ತಿಗೆ ಸಿಲುಗುರಿಗೆ ತಲುಪಿದ್ದರು. ಕೂಡಲೇ ಸ್ಟೇಜ್ ಮೇಲೆ ಸೌಂಡ್ ಚೆಕ್ ಕೂಡಾ ಮಾಡಲಾಗಿದೆ.




ಅವರು ಈಗಾಗಲೇ ತಮ್ಮ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ಹಾಗೂ ಮಾನವ ಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ತಮ್ಮ ಗ್ರಾಮ ಮತ್ತು ಅಲ್ಲಿನ ಜನರೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದ್ದಾರೆ.


ಶಾಲೆಯ ಮೈದಾ ಅಭಿವೃದ್ಧಿ ಕೆಲಸ


ಅರಿಜಿತ್ ಸಿಂಗ್ ಕಲಿತಿದ್ದ ಶಾಲೆಯ ಮೈದಾನವನ್ನು ಬಹಳಷ್ಟು ಸಮಯದಿಂದ ನಿರ್ಲಕ್ಷಿಸಿಕೊಂಡು ಬರಲಾಗುತ್ತಿತ್ತು. ನವೀಕರಣವಿಲ್ಲದೆ ಮೈದಾನ ಹಾಳಾಗಿತ್ತು. ಇದೀಗ ಈ ಮೈದಾನವನ್ನು ಅರಿಜಿತ್ ಸಿಂಗ್ ಅವರ ಮೇಲ್ವಿಚಾರಣೆಯಲ್ಲಿ ಸುಸಜ್ಜಿತವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಅಲ್ಲಿ ಕ್ರೀಡಾ ಕೇಂದ್ರವನ್ನೂ ಕಟ್ಟಲಾಗುತ್ತಿದೆ. ಇದೇ ಶಾಲೆಯಲ್ಲಿ ಅರಿಜಿತ್ ಸಿಂಗ್ ಓದಿದ್ದರು. ಅವರ ಮಗನನ್ನು ಪಶ್ಚಿಮ ಬಂಗಾಳದ ಜಿಯಾಗಂಜ್ ಶಾಲೆಗೆ ಸೇರಿಸಿದ್ದಾರೆ. ಅವರು ಜಿಯಾಗಂಜ್​ನಲ್ಲಿ ಕ್ರೀಡಾ ಮೈದಾನ ಅಭಿವೃದ್ಧಿಪಡಿಸಿದ್ದಾರೆ.


ಇದನ್ನೂ ಓದಿ: Shine Shetty: ಸಿನಿಮಾ ಬಿಟ್ಟು ಗ್ಯಾರೇಜ್ ಕೆಲಸಕ್ಕೆ ಹೊರಟ್ರಾ ಶೈನ್ ಶೆಟ್ಟಿ? ಇಲ್ಲಿದೆ ನೋಡಿ ಅಸಲಿ ಮ್ಯಾಟರ್!


ವರ್ಲ್ಡ್​ ಕ್ಲಾಸ್ ಕ್ರಿಕೆಟ್ ಗ್ರೌಂಡ್ ಹಾಗೂ ಟ್ರೈನಿಂಗ್ ಕ್ಯಾಂಪ್


ಅರಿಜಿತ್ ಅವರು ವರ್ಲ್ಡ್​ ಕ್ಲಾಸ್ ಕ್ರಿಕೆಟ್ ಗ್ರೌಂಡ್ ಹಾಗೂ ಟ್ರೈನಿಂಗ್ ಕ್ಯಾಂಪ್ ತೆರೆಯಲು ಅರಿಜಿತ್ ಯೋಜಿಸಿರುವುದಾಗಿ ಅವರ ಶಿಕ್ಷಕರು ತಿಳಿಸಿದ್ದಾರೆ. ಮ್ಯೂಸಿಕ್ ಜೊತೆ ಜೊತೆಗೇ ಅರಿಜಿತ್ ಸಿಂಗ್ ಜನಸಾಮಾನ್ಯರಿಗಾಗಿ ಕೆಲಸ ಮಾಡುತ್ತಲೇ ಇರುತ್ತಾರೆ. ಸಮಾಜ ಕಲ್ಯಾಣದ ಕೆಲಸಗಳನ್ನು ಮಾಡುತ್ತಾ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಪ್ರಾಯೋಗಿಕವಾಗಿ ವಿವಿಧ ಲೋಕೋಪಕಾರಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.


Arijit Singh

top videos


    ಒಂದು ವಾರದ ಹಿಂದೆ ಐಪಿಎಲ್ ಉದ್ಘಾಟನೆ ಸಮಾರಂಭ ನಡೆದಿತ್ತು. ಇದರಲ್ಲಿ ಸ್ಟಾರ್ ಸೆಲೆಬ್ರಿಟಿಗಳ ಕಾರ್ಯಕ್ರಮ ಇತ್ತು. ತಮನ್ನಾ, ರಶ್ಮಿಕಾ ಹಾಗೂ ಅರಿಜಿತ್ ಸಿಂಗ್ ಹೈಲೈಟ್ ಆಗಿದ್ದರು. ಅವರು ಕ್ರಿಕೆಟರ್ ಧೋನಿಗೆ ವಿಶ್ ಮಾಡಿದ್ದರು. ವಿನಮ್ರದಿಂದ ಧೋನಿ ಅವರಿಗೆ ವಿಶ್ ಮಾಡಿದ ಅರಿಜಿತ್ ಅವರ ವರ್ತನೆ ಧೋನಿ ಅಷ್ಟೇ ಅಲ್ಲ ಅಲ್ಲಿ ಸೇರಿದ್ದ ಅಭಿಮಾನಿಗಳಿಗೂ ಮೆಚ್ಚುಗೆಯಾಗಿದೆ.

    First published: