Kantara Movie: ಲೈವ್ ಶೋನಲ್ಲಿ ವರಾಹ ರೂಪಂ ಹಾಡಿದ ಬಾಲಿವುಡ್ ಸಿಂಗರ್

ವರಾಹ ರೂಪಂ ಹಾಡು

ವರಾಹ ರೂಪಂ ಹಾಡು

ಬಾಲಿವುಡ್​ನ ಖ್ಯಾತ ಗಾಯಕ ಕಾಂತಾರ ಸಿನಿಮಾದ ವರಾಹ ರೂಪಂ ಹಾಡನ್ನು ಹಾಡಿದ್ದಾರೆ. ಬೆಂಗಳೂರಿನ ಕಾರ್ಯಕ್ರಮದಲ್ಲಿ ಹಾಡಿ ಸರ್ಪೈಸ್ ಕೊಟ್ಟಿದ್ದಾರೆ.

  • News18 Kannada
  • 3-MIN READ
  • Last Updated :
  • Bangalore, India
  • Share this:

ಭಾರತೀಯ ಚಿತ್ರರಂಗದಲ್ಲಿ ಹೊಂಬಾಳೆ ಫಿಲ್ಮ್ಸ್ (Hombale Films) ನಿರ್ಮಾಣದ ಕಾಂತಾರ (Kantara) ಸಿನಿಮಾ ಹೊಸ ದಾಖಲೆ ಬರೆಯಿತು. ವ್ಯಾಪಕವಾಗಿ ಸಿನಿಮಾ ಮೆಚ್ಚುಗೆಯನ್ನು ಪಡೆಯಿತು. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಸಿನಿಮಾ (Cinema) ಭರ್ಜರಿಯಾಗಿ ಲಾಭ ಗಳಿಸಿತು. ಸಿನಿಮಾದಲ್ಲಿ ನಟಿಸಿದವರೆಲ್ಲ ಫೇಮಸ್ ಆದರು. ಭಾರತ ಮಾತ್ರವಲ್ಲ ಜಾಗತಿಕಮಟ್ಟದಲ್ಲಿ ಕಾಂತಾರ ಸಿನಿಮಾ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದೆ. ಸಿನಿಮಾ ರಿಲೀಸ್ ಆದಾಗಿನಿಂದಲೂ ಅದರ ಕ್ರೇಜ್ ಸ್ವಲ್ಪವೂ ಕಮ್ಮಿಯಾಗಿಲ್ಲ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಲೈವ್ ಕನ್ಸರ್ಟ್​ನಲ್ಲಿ ಬಾಲಿವುಡ್ (Bollywood) ಖ್ಯಾತ ಗಾಯಕ ಅರ್ಜಿತ್ ಸಿಂಗ್ (Arijit Singh) ಅವರು ವರಹಾ ರೂಪಂ ಹಾಡಿದಾಗ ಪ್ರೇಕ್ಷಕ ವರ್ಗ ಅದ್ಭುತ ಪ್ರತಿಕ್ರಿಯೆ ನೀಡಿದೆ.


ಹಿನ್ನೆಲೆ ಗಾಯಕ ಅರಿಜಿತ್ ಸಿಂಗ್ ಅವರು ತಮ್ಮ ಮ್ಯಾಜಿಕಲ್ ವಾಯ್ಸ್​ನಿಂದ ವರಾಹ ರೂಪಂ ಹಾಡನ್ನು ಹಾಡಿದ್ದಾರೆ. ಆದರೆ ಅವರ ಹಾಡುಗಳಲ್ಲಿ ವರಾಹ ರೂಪಂ ಭರ್ಜರಿ ಪ್ರತಿಕ್ರಿಯೆ ಪಡೆಯಿತು. ಅರಿಜಿತ್ ಸಿಂಗ್ ಅವರು ಸುಮಧುರ ಧ್ವನಿಯಲ್ಲಿ ವರಾಹ ರೂಪಂ ಹಾಡನ್ನು ಹಾಡಿದ್ದಾರೆ. ಬಾಲಿವುಡ್ ಸಿನಿಮಾಗಳಲ್ಲಿ ಭರ್ಜರಿ ಮೆಲೊಡಿ ಹಾಡುಗಳನ್ನು ಕೊಟ್ಟ ಅರ್ಜಿತ್ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ.



ಅಭಿಮಾನಿಗಳು ಅವರ ಹಾಡಿನ ವಿಡಿಯೋ ಕ್ಲಿಪ್​ಗಳನ್ನು ಹಂಚಿಕೊಂಡರು. ಅರ್ಜಿತ್ ಸಿಂಗ್ ಅವರು ವರಾಹರೂಪವನ್ನು ಲೈವ್ ಆಗಿ ಹಾಡುವ ಮೂಲಕ ಹಾಡಿನಲ್ಲಿಯೇ ಮಾಂತ್ರಿಕನಂತೆ ಮೋಡಿ ಮಾಡಿದರು. ನಿಸ್ಸಂದೇಹವಾಗಿ ಜಗತ್ತು ಕಂಡ ಅತ್ಯುತ್ತಮ ಮನಮೋಹಕ ಪ್ರದರ್ಶಕರಲ್ಲಿ ಒಬ್ಬರು ಅರಿಜಿತ್ ಸಿಂಗ್ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಇನ್ನೊಬ್ಬರು, ಅರಿಜಿತ್ ಸಿಂಗ್ ಅವರ ವರಾಹರೂಪಂ. ತಮ್ಮ ಅಭಿಮಾನಿಗಳಿಗೆ ಏನು ಉಡುಗೊರೆಯಾಗಿ ನೀಡಬೇಕು ಎಂದು ಅರ್ಜಿತ್ ಅವರಿಗೆ ತಿಳಿದಿದೆ ಎಂದು ಹೊಗಳಿದ್ದಾರೆ.



ಇದಲ್ಲದೇ ಕೆಲವು ದಿನಗಳ ಹಿಂದೆ ನಮ್ಮ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಬಾರಿಸು ಕನ್ನಡದ ಡಿಂ ಡಿಮವ’ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿದಾಗ, ಡಾ.ಸಿ.ಕೆ.ರಮೇಶ್ ಮತ್ತು ಅವರ ತಂಡದವರು ಕಾಂತಾರ ವರಾಹ ರೂಪ ಹಾಡಿನ ಪ್ರದರ್ಶನ ಕೊಟ್ಟರು.


ಇದನ್ನೂ ಓದಿ: Rishab Shetty: ನಮ್ದು ಕಪ್​ ಕೇಕ್ ಫ್ಯಾಮಿಲಿ ಎಂದ ಡಿವೈನ್ ಸ್ಟಾರ್ ಪತ್ನಿ!


ಕಾಂತಾರ ಕನ್ನಡ ಮತ್ತು ಹಿಂದಿ ಆವೃತ್ತಿಯಲ್ಲಿ ಕ್ರಮವಾಗಿ ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 14 ರಂದು ಬಿಡುಗಡೆಯಾಯಿತು. ಚಿತ್ರವನ್ನು ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿದ್ದಾರೆ. ಹೊಂಬಾಳೆ ಫಿಲಂಸ್ ಅಡಿಯಲ್ಲಿ ವಿಜಯ್ ಕಿರಗಂದೂರು ಮತ್ತು ಚಲುವೇಗೌಡ ನಿರ್ಮಿಸಿರುವ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ, ಸಪ್ತಮಿ ಗೌಡ ಮತ್ತು ಕಿಶೋರ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


ಕನ್ನಡಿಗರ ಮನಗೆದ್ದ ಹಿಂದಿ ನಟಿ


ತೇಜಸ್ವಿ ಕನ್ನಡಿಗರ ಮನ ಗೆದ್ದಿದ್ದಾರೆ. ಕಾಂತಾರ ಸಿನಿಮಾದ ಕರ್ಮದ ಕಲ್ಲನು’ ಹಾಡನ್ನು ಕನ್ನಡದಲ್ಲಿ ಹಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತೇಜಸ್ವಿ ಪ್ರಕಾಶ್ ಬಣ್ಣದ ಲೋಕಕ್ಕೆ ಕಾಲಿಟ್ಟು 11 ವರ್ಷ ಆಯಿತು. ಕರಣ್ ಜೊತೆ ಡೇಟಿಂಗ್ ಮಾಡುತ್ತಿರುವ ನಟಿ ಇತ್ತೀಚೆಗೆ ಕನ್ನಡ ಹಾಡು ಹಾಡಿದರು.


‘ಕರ್ಮದ ಕಲ್ಲನು ಎಡವಿದ ಮನುಜನ, ಬೆರಳಿನ ಗಾಯವು ಮಾಯದು


ಹಗೆಯಲಿ ಕೋವಿಗೆ ತಲೆ ಕೊಡೊ ಮರುಳರ ಗುಡಿಯಲಿ ದೈವವು ಕಾಯದು


ಕತ್ತಲನು ಮಣಿಸೋಕೆ ಹಚ್ಚಿ ಇಟ್ಟ ದೀಪ, ಊರನ್ನೇ ಸುಡುವಂತ ಜ್ವಾಲೆ ಆಯಿತೇನೋ..’ ಎಂಬ ಕಾಂತಾರ ಸಿನಿಮಾ ಹಾಡಿನ ಅರ್ಥವನ್ನು ಇಂಗ್ಲಿಷ್​ನಲ್ಲಿ ಬರೆದುಕೊಂಡಿದ್ದಾರೆ.

Published by:Divya D
First published: