ನಟಿಯ ಕೈಯಲ್ಲಿ ಬೈಗುಳ ತಿಂದು ಸಿನಿಮಾ ಅವಕಾಶ ಗಿಟ್ಟಿಸಿಕೊಂಡ ಯುವಕ!

news18
Updated:June 22, 2018, 3:28 PM IST
ನಟಿಯ ಕೈಯಲ್ಲಿ ಬೈಗುಳ ತಿಂದು ಸಿನಿಮಾ ಅವಕಾಶ ಗಿಟ್ಟಿಸಿಕೊಂಡ ಯುವಕ!
news18
Updated: June 22, 2018, 3:28 PM IST
ನ್ಯೂಸ್ 18 ಕನ್ನಡ 

ಅದೃಷ್ಟ ಅನ್ನೋದು ಎಲ್ಲರನ್ನೂ ಅರಸಿ ಬರೋದಿಲ್ಲ. ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗಷ್ಟೇ ಕಣ್ ಹೊಡೆದು ರಾತ್ರೋರಾತ್ರಿ ಸ್ಟಾರ್​ ಆದ ಪ್ರಿಯಾ ವಾರಿಯರ್​ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದರು. ಜೊತೆಗೆ ಮೊನ್ನೆಯಷ್ಟೆ ಯಾವುದೋ ಕಾರ್ಯಕ್ರಮದಲ್ಲಿ ಅಂಕಲ್ ಡ್ಯಾನ್ಸ್ ಮಾಡಿ, ರಾತ್ರೋ ರಾತ್ರಿ ಸೆಲೆಬ್ರಿಟಿಯಾದರು. ಅದರಂತೆ ಸದ್ಯ ಖ್ಯಾತ ನಟಿಯ ಬೈಗುಳ ಕೇಳಿದ ವ್ಯಕ್ತಿಯ ಬಳಿಗೀಗ ಸಾಲು ಸಾಲು ಸಿನಿಮಾಗಳ ಆಫರ್ ಬರುತ್ತಿದೆಯಂತೆ. ಆ ನಟಿಯಾರು ? ಬೈಗುಳ ತಿಂದ ಆ ವ್ಯಕ್ತಿಯಾರು ? ಈ ಕುರಿತ ಆಸಕ್ತಿಕರ ವರದಿ ಇಲ್ಲಿದೆ ಓದಿ.

ಆ ವ್ಯಕ್ತಿ ಅದ್ಯಾವ ಟೈಮಲ್ಲಿ ಐಷಾರಾಮಿ ಕಾರಿನಿಂದ ಕಸವನ್ನು ಎಸೆದರೋ ಏನೋ ? ರಾತ್ರೋರಾತ್ರಿ ಆ ಶ್ರೀಮಂತ ವ್ಯಕ್ತಿ ಸಿಕ್ಕಾಪಟ್ಟೆ ಜನಪ್ರಿಯವಾಗಿಬಿಟ್ಟರು. ಅವತ್ತು ಅನುಷ್ಕಾ ಆ ವ್ಯಕ್ತಿ ಪ್ಲಾಸ್ಟಿಕ್ ಬಿಸಾಕಿದ ವಿಡಿಯೋವನ್ನ ಪತಿ ವಿರಾಟ್ ಕೊಹ್ಲಿ ಟ್ವಿಟ್ಟರ್​ನಲ್ಲಿ ಶೇರ್ ಮಾಡಿದ್ದೇ ತಡ, ಆ ಅಪರಿಚಿತ ವ್ಯಕ್ತಿ ಒಂದೇ ಸಲಕ್ಕೆ ಟ್ರೆಂಡಿಂಗ್ ಆಗಿ ಹೋದರು.

ಅಷ್ಟಕ್ಕೂ ಆ ಅಪರಿಚಿತ ವ್ಯಕ್ತಿಯ ಹೆಸರು ಅರ್ಹಾನ್ ಸಿಂಗ್. ಇವರೂ ಸಹ ಒಬ್ಬ ನಟ. ಇನ್ನೂ ಆಸಕ್ತಿಕರ ವಿಷಯ ಅಂದರೆ ಅನುಷ್ಕಾ ಕೆಂಗಣ್ಣಿಗೆ ಗುರಿಯಾದ ಅರ್ಹಾನ್ ಸಿಂಗ್, ಈಗಾಗಲೇ ಶಾರುಖ್​ಖಾನ್ ಜೊತೆ 'ಇಂಗ್ಲೀಷ್ ಬಾಬು ದೇಸಿ ಮೆಮ್', ಶಾಹಿದ್ ಕಪೂರ್ ಜೊತೇಲಿ 'ಪಾಠಶಾಲಾ' ಹಾಗೂ ಮಾಧುರಿ ದೀಕ್ಷಿತ್​ ಜೊತೆ 'ರಾಜಾ' ಬಾಲನಟನಾಗಿ ಬಣ್ಣ ಹಚ್ಚಿದ್ದಾರೆ. ಇದರ ಜೊತೆಗೆ ಧಾರಾವಾಹಿಯಲ್ಲೂ ಅಭಿನಯಿಸಿದ್ದಾರಂತೆ ಅರ್ಹಾನ್.

ಒಟ್ಟಾರೆ ಇತ್ತೀಚೆಗೆ ರಾತ್ರೋರಾತ್ರಿ ಸ್ಟಾರ್ ಆಗುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರೆ ತಪ್ಪಿಲ್ಲ.
First published:June 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...