ಆರ್​​ ಯು ವರ್ಜಿನ್​? ಎಂಬ ಅಭಿಮಾನಿಯ ಪ್ರಶ್ನೆಗೆ ಟ್ರೈಗರ್​ ಶ್ರಾಫ್​ ನೀಡಿದ ಉತ್ತರವೇನು ಗೊತ್ತಾ?

ತಮಗೆ ಎಷ್ಟು ಮಂದಿ ಗರ್ಲ್​ ಫ್ರೆಂಡ್​ ಇದ್ದಾರೆ? ಎಂಬ ಪ್ರಶ್ನೆಗೆ ಸಾಕಷ್ಟು ಮಂದಿ ಇಲ್ಲ ಎಂದು ಉತ್ತರಿಸಿದ್ದಾರೆ. ನೀವು ದಿಶಾ ಪಟಾನಿಯೊಂದಿಗೆ ಡೇಟಿಂಗ್​ನಲ್ಲಿ ಇದ್ದೀರಾ ? ಎಂಬ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಆ ಯೋಗ್ಯತೆ ನನಗಿಲ್ಲ ಬಿಡಿ ಎಂದು ಟೈಗರ್​​ ಪ್ರತಿಕ್ರಿಯೆ ನೀಡಿದ್ದಾರೆ.

news18
Updated:August 12, 2019, 10:42 PM IST
ಆರ್​​ ಯು ವರ್ಜಿನ್​? ಎಂಬ ಅಭಿಮಾನಿಯ ಪ್ರಶ್ನೆಗೆ ಟ್ರೈಗರ್​ ಶ್ರಾಫ್​ ನೀಡಿದ ಉತ್ತರವೇನು ಗೊತ್ತಾ?
ಟೈಗರ್​ ಶ್ರಾಪ್​ ಮತ್ತು ದಿಶಾ ಪಟಾನಿ
  • News18
  • Last Updated: August 12, 2019, 10:42 PM IST
  • Share this:
ಬಾಲಿವುಡ್​ ನಟ ಟೈಗರ್​ ಶ್ರಾಫ್ ಅವರು​ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಕೆಂಡಾಮಂಡಲವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟೀವ್​ ಆಗಿರುವ ಟೈಗರ್​ ಶ್ರಾಫ್​ ದೈನಂದಿನ ಚಟುವಟಿಕೆಗಳನ್ನು ಅಪ್​ಡ್ಡೇಟ್​ ಮಾಡುತ್ತಿರುತ್ತಾರೆ. ಆದರೆ ಅಭಿಮಾನಿಯೊಬ್ಬ ಅವರ ವೈಯಕ್ತಿಕ ಬದುಕಿಗೆ ಸಂಭಂದಿಸಿ ಪ್ರಶ್ನೆಗಳನ್ನು ಕೇಳಿದ್ದನು. ಈ ಪ್ರಶ್ನೆಗೆ ಟೈಗರ್​ ಶ್ರಾಪ್​ ಕೋಪದಿಂದ ಉತ್ತರ ಕೊಟ್ಟಿದ್ದಾರೆ.

ಇತ್ತೀಚೆಗೆ ಟೈಗರ್​ ಶ್ರಾಪ್​ ಇನ್​​ಸ್ಟಾಗ್ರಾಂನಲ್ಲಿ ‘ಆಸ್ಕ್​​ ಮಿ ಎನಿಥಿಂಗ್​‘ ಸೆಷನ್​ ಹಮ್ಮಿಕೊಂಡಿದ್ದರು. ಈ ವೇಳೆ ಅಭಿಮಾನಿಗಳೊಂದಿಗೆ ನೀವು ಏನು​ ಬೇಕಾದರೂ ಕೇಳ ಬಹುದು ಎಂದು ಹೇಳಿದ್ದಾರೆ. ಸಾಕಷ್ಟು ಅಭಿಮಾನಿಗಳು ವೈಯಕ್ತಿಕ ಬದುಕಿಗೆ ಸಂಭಂದಿಸಿದ ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಅಭಿಮಾನಿಯೊಬ್ಬ ನೀವು ವರ್ಜಿನ್​ ಹೌದಾ? ಅಲ್ಲವಾ? ಎಂಬ ಪ್ರಶ್ನೆ ಕೇಳಿದ್ದಾರೆ.

ಇದನ್ನೂ ಓದಿ: ಭಾರೀ ಮಳೆ ಹಿನ್ನಲೆ: ಸಿಎಂ ಯಡಿಯೂರಪ್ಪ ನೇತೃತ್ವ ದಲ್ಲಿ ರಕ್ಷಣಾ ಕಾರ್ಯಾಚರಣೆ: ಶ್ರೀರಾಮುಲು

ಈ ಪ್ರಶ್ನೆಗೆ ಉತ್ತರಿಸಿದ ಟೈಗರ್​ ಶ್ರಾಫ್​ ‘‘ ಅಯ್ಯೋ ನಾಚಿಕೆ ಇಲ್ಲದವನೆ! ನಮ್ಮ ತಂದೆ ತಾಯಿ ಕೂಡ ನನ್ನನ್ನು ಫಾಲೋ ಮಾಡುತ್ತಿದ್ದಾರೆ‘ ಈ ಪ್ರಶ್ನೆಗೆ ಉತ್ತರ ಕೊಟ್ಟರೆ ಅವರಿಗೂ ಗೊತ್ತಾಗಲ್ಲವೇ ಎಂದಿದ್ದಾರೆ.ತಮಗೆ ಎಷ್ಟು ಮಂದಿ ಗರ್ಲ್​ ಫ್ರೆಂಡ್​ ಇದ್ದಾರೆ? ಎಂಬ ಪ್ರಶ್ನೆಗೆ ಸಾಕಷ್ಟು ಮಂದಿ ಇಲ್ಲ ಎಂದು ಉತ್ತರಿಸಿದ್ದಾರೆ. ನೀವು ದಿಶಾ ಪಟಾನಿಯೊಂದಿಗೆ ಡೇಟಿಂಗ್​ನಲ್ಲಿ ಇದ್ದೀರಾ ? ಎಂಬ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಆ ಯೋಗ್ಯತೆ ನನಗಿಲ್ಲ ಬಿಡಿ ಎಂದು ಟೈಗರ್​​ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಂದೆಡೆ ದಿಶಾ ಪಟಾನಿ ಹಾಗೂ ಟೈಗರ್​ ಶ್ರಾಫ್​ ಹಲವು ವರ್ಷಗಳಿಂದ ಡೇಟಿಂಗ್​ನಲ್ಲಿದ್ದಾರೆ ಎಂಬ ಗಾಳಿ ಸುದ್ದಿಗಳು ಹರಿದಾಡುತ್ತಿವೆ.
First published:August 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ