ಒಂದು ತಿಂಗಳಲ್ಲಿ ನಡೆಯಲಿದೆಯಾ ಬಾಲಿವುಡ್​ ನಟಿ ಹಾಗೂ ಹಾಲಿವುಡ್​ ಗಾಯಕನ ನಿಶ್ಚಿತಾರ್ಥ?

news18
Updated:June 26, 2018, 6:57 PM IST
ಒಂದು ತಿಂಗಳಲ್ಲಿ ನಡೆಯಲಿದೆಯಾ ಬಾಲಿವುಡ್​ ನಟಿ ಹಾಗೂ ಹಾಲಿವುಡ್​ ಗಾಯಕನ ನಿಶ್ಚಿತಾರ್ಥ?
news18
Updated: June 26, 2018, 6:57 PM IST
ನ್ಯೂಸ್​ 18 ಕನ್ನಡ 

ರಣವೀರ್​-ದೀಪಿಕಾ ಅವರ ವಿವಾಹದ ದಿನಾಂಕದ ನಿಗದಿ ಸುದ್ದಿ ಇಗಾಗಲೇ ಎಲ್ಲೆಡೆ ಹರಿದಾಡುತ್ತಿದೆ. ಇದರ ಜೊತೆಗೆ ಈಗ ಬಾಲಿವುಡ್​ನಲ್ಲಿ ಮತ್ತೊಂದು ಸ್ಟಾರ್ ಜೋಡಿಯ ವಿವಾಹದ ಸುದ್ದಿ ಗುಲ್ಲಾಗಿದೆ. ಯಾರು ಆ ಸ್ಟಾರ್​ ಜೋಡಿ ಅಂತೀರಾ? ಅದನ್ನ ತಿಳಿಯೋಕೆ ಈ ವರದಿ ಓದಿ....

ಗೋವಾದಲ್ಲಿ ರಜೆಯ ಮಜವನ್ನು ಸವಿಯುತ್ತಿರುವ ಬಿ-ಟೌನ್​ ನಟಿ ಪ್ರಿಯಾಂಕಾ ಹಾಗೂ ಅವರ ಸ್ನೇಹಿತ ನಿಕ್​ ಜೋನಸ್​ ಸದ್ಯದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರಂತೆ. ಇನ್ನೂ ಒಂದೇ ತಿಂಗಳಲ್ಲಿ ಇವರ ನಿಶ್ಚಿತಾರ್ಥದ ದಿನಾಂಕ ನಿಗದಿಯಾಗಲಿದ್ದು, ಜುಲೈ ಕೊನೆಯ ವಾರ ಅಥವಾ ಆಗಸ್ಟ್​ ಮೊದಲ ವಾರದಲ್ಲಿ ಈ ನಿಶ್ಚಿತಾರ್ಥ ನಡೆಯಲಿದೆ ಎಂದು ಫಿಲ್ಮ್​ಫೇರ್​ ವರದಿ ಮಾಡಿದೆ.

ಮೊದ ಮೊದಲು ಈ ಜೋಡಿ ತಮ್ಮ ಪ್ರೀತಿಯ ವಿಷಯವನ್ನು ಬಹಿರಂಗಪಡಿಸಲು ಸ್ವಲ್ಪ ಹಿಂಜರಿಯುತ್ತಿದ್ದರು. ಆದರೆ ಈಗ ಈ ವಿಷಯ ಬಹಿರಂಗವಾಗಿದೆ. ಅಮೆರಿಕನ್​ ಗಾಯಕ ನಿಕ್​ ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂನಲ್ಲಿ ತಮ್ಮ ಸಂಬಂಧದ ಕುರಿತು ಪೋಸ್ಟ್​ ಮಾಡಿದ್ದರು.

 ಈ ವಿಡಿಯೋದಲ್ಲಿ ಪ್ರಿಯಾಂಕಾ ಸ್ಪೆಗೆಟಿ ತೊಟ್ಟಿದ್ದು, ಓಡಿಕೊಂಡು ನಿಕ್​ ಕಡೆ ಬರುತ್ತಾರೆ. ಇದಕ್ಕೆ ಹೃದಯದ ಚಿಹ್ನೆ ಇರುವ ಇಮೋಜಿ ಹಾಕಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ನಿಕ್​ ಪೋಸ್ಟ್ ಮಾಡಿದ್ದರು.ಪ್ರಿಯಾಕಾ ಅವರ ತಾಯಿಯನ್ನು ನಿಕ್​ ಈಗಾಗಲೇ ಭೇಟಿ ಮಾಡಿದ್ದಾರೆ. ಅಲ್ಲದೆ ಇದೇ ತಿಂಗಳಿನಲ್ಲಿ ನ್ಯೂ ಜೆರ್ಸಿಯಲ್ಲಿ ನಿಕ್​ ಅವರ ಸಂಬಂಧಿಕರ ವಿವಾಹದಲ್ಲಿ ಪ್ರಿಯಾಂಕಾ, ನಿಕ್​ ಜೋನಸ್​ ಅವರ ಕುಟುಂಬದವರನ್ನು ಭೇಟಿ ಮಾಡಿದ್ದಾರೆ.

ಸದ್ಯ ನಿಕ್​ ಹಾಗೂ ಪ್ರಿಯಾಂಕಾ ಗೋವಾದಲ್ಲಿದ್ದು, ಅಲ್ಲಿ ಪರಿಣಿತಿ ಚೋಪ್ರಾ ಸಹ ಜೊತೆಯಾಗಿದ್ದಾರೆ.

ಗೋವಾದಲ್ಲಿ ಪರಿಣಿತಿ ಹಾಗೂ ಪ್ರಿಯಾಂಕಾ 'ಟಿಪ್​ ಟಿಪ್ ಬರ್ಸಾ ಪಾನಿ' ಹಾಡನ್ನು ಹಾಡಿ ಕುಣಿದಿರುವ ವಿಡಿಯೋ ನೋಡಲು ಈ ಲಿಂಕ್​ ಕ್ಲಿಕ್​ ಮಾಡಿ .....

https://kannada.news18.com/news/entertainment/viral-video-of-priyanka-and-parinithi-chopra-56427.html

 
First published:June 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ