Pavitra Lokesh: ಒಂದೇ ರೂಮಲ್ಲಿ ಇದ್ದಾರಾ ನರೇಶ್-ಪವಿತ್ರಾ ಲೋಕೇಶ್? ಹೋಟೆಲ್‌ ಮುಂದೆಯೇ ಕುಳಿತಿದ್ದಾರಂತೆ ರಮ್ಯಾ ರಘುಪತಿ!

ಹೌದು, ಇಂಥದ್ದೊಂದು ಗುಸು ಗುಸು ಈಗ ಭಾರಿ ಸುದ್ದಿ ಮಾಡುತ್ತಿದೆ. ನಟಿ ಪವಿತ್ರಾ ಲೋಕೇಶ್ ಹಾಗೂ ನಟ ನರೇಶ್ ಒಂದೇ ರೂಮ್‌ನಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಇನ್ನು ಹೋಟೆಲ್‌ನ ಅದೇ ಕೋಣೆ ಮುಂದೆ ನರೇಶ್ ಪತ್ನಿ ರಮ್ಯಾ ರಘುಪತಿ ಕೂಡ ಕುಳಿತಿದ್ದಾರೆ ಎನ್ನಲಾಗಿದೆ.

ಪವಿತ್ರಾ ಲೋಕೇಶ್, ನರೇಶ್ ಮತ್ತು ರಮ್ಯಾ ರಘುಪತಿ ಸಂಗ್ರಹ ಚಿತ್ರ

ಪವಿತ್ರಾ ಲೋಕೇಶ್, ನರೇಶ್ ಮತ್ತು ರಮ್ಯಾ ರಘುಪತಿ ಸಂಗ್ರಹ ಚಿತ್ರ

  • Share this:
ಮೈಸೂರು: ನಟಿ (Actress) ಪವಿತ್ರಾ ಲೋಕೇಶ್ (Pavitra Lokesh), ತೆಲುಗು ನಟ (Telugu Actor) ನರೇಶ್ (Naresh) ಹಾಗೂ ಅವರ ಪತ್ನಿ ರಮ್ಯಾ ರಘುಪತಿ (Ramya Raghupati) ನಡುವಿನ ವಿವಾದ (Controversy) ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ತೆಲುಗು ಸೂಪರ್ ಸ್ಟಾರ್ ಕೃಷ್ಣ (Telugu Super Star Krishna) ಅವರ ಪುತ್ರನೂ ಆಗಿರುವ ಪೋಷಕ ನಟ ನರೇಶ್ ಹೆಂಡತಿಗೆ (Wife) ಡಿವೋರ್ಸ್ (Divorce) ನೀಡದೇ ಪವಿತ್ರಾ ಲೋಕೇಶ್ ಅವರನ್ನು ವಿವಾಹವಾಗಿದ್ದಾರೆ (Marriage) ಎನ್ನುವ ಗುಸುಗುಸು ಕೇಳಿ ಬಂದಿತ್ತು. ಅಲ್ಲಿಂದ ಶುರುವಾದ ವಿವಾದ ಮೂವರ ಬಾಳಲ್ಲಿ ಭಾರೀ ಕೋಲಾಹಲವನ್ನೇ ಎಬ್ಬಿಸಿತ್ತು. ನರೇಶ್ ಹಾಗೂ ಪವಿತ್ರಾ ಲೋಕೇಶ್ ರಮ್ಯಾ ರಘುಪತಿ ಮೇಲೆ ಆರೋಪಗಳ ಸುರಿಮಳೆ ಸುರಿಸಿದ್ರೆ, ಅತ್ತ ರಮ್ಯಾ ರಘುಪತಿ ಇವರಿಬ್ಬರ ಮೇಲೆ ಪ್ರತ್ಯಾರೋಪ ಮಾಡಿದ್ರು. ಇದೀಗ ಮೈಸೂರಿನ (Mysore) ಖಾಸಗಿ ಹೋಟೆಲ್‌ನ (Hotel) ಒಂದೇ ರೂಮ್‌ನಲ್ಲಿ (Room) ಪವಿತ್ರಾ ಲೋಕೇಶ್ ಹಾಗೂ ನರೇಶ್ ಇದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೇ ನರೇಶ್ ಪತ್ನಿ ರಮ್ಯಾ ರಘುಪತಿ ಕೂಡ ಅದೇ ಹೋಟೆಲ್‌ನ, ಅದೇ ಕೋಣೆ ಮುಂದೆ ಪಟ್ಟು ಹಿಡಿದು ಕುಳಿತಿದ್ದಾರೆ ಎಂಬ ಗುಸು ಗುಸು ಕೇಳಿ ಬರುತ್ತಿದೆ. ಈ ಹಿಂದೆ ಅವರಿಬ್ಬರು ಒಂದೇ ಮನೆಯಲ್ಲಿದ್ದಾರೆ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿತ್ತು, ಒಂದೇ ಹೋಟೆಲ್‌ನಲ್ಲಿದ್ದಾರೆ ಎಂಬ ಬಗ್ಗೆ ವದಂತಿ ಕೇಳಿ ಬರುತ್ತಿದೆ.

ಒಂದೇ ರೂಮ್‌ನಲ್ಲಿದ್ದಾರಾ ಪವಿತ್ರಾ ಲೋಕೇಶ್, ನರೇಶ್?

ಹೌದು, ಇಂಥದ್ದೊಂದು ಗುಸು ಗುಸು ಈಗ ಭಾರಿ ಸುದ್ದಿ ಮಾಡುತ್ತಿದೆ. ನಟಿ ಪವಿತ್ರಾ ಲೋಕೇಶ್ ಹಾಗೂ ನಟ ನರೇಶ್ ಒಂದೇ ರೂಮ್‌ನಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಮೈಸೂರಿನ ಡಿಸಿ ಕಚೇರಿ ಬಳಿ ಇರುವ ದಿ ಕೋರಂ ಎನ್ನುವ ಖಾಸಗಿ ಹೋಟೆಲ್‌ನ ರೂಮ್ ಒಂದರಲ್ಲಿ ಇಬ್ಬರೂ ಇದ್ದಾರೆ ಎನ್ನಲಾಗುತ್ತಿದೆ.

ಹೋಟೆಲ್ ರೂಂ ಮುಂದೆ ಪಟ್ಟು ಹಿಡಿದು ಕುಳಿತ ರಮ್ಯಾ ರಘುಪತಿ?

ಇನ್ನು ದಿ ಕೋರಂ ಹೋಟೆಲ್‌ನ ಅದೇ ಕೋಣೆ ಮುಂದೆ ನರೇಶ್ ಪತ್ನಿ ರಮ್ಯಾ ರಘುಪತಿ ಕೂಡ ಕುಳಿತಿದ್ದಾರೆ ಎನ್ನಲಾಗಿದೆ. ರೂಂನ ಬಾಗಿಲು ಬಡಿಯುತ್ತಿದ್ದರೂ ನರೇಶ್ ಹಾಗೂ ಪವಿತ್ರಾ ಲೋಕೇಶ್ ಹೊರಗೆ ಬರುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ನರೇಶ್ ಪತ್ನಿ ರಮ್ಯಾ ಕೃಷ್ಣಮೂರ್ತಿ ಕೂಡ ರೂಂ ಮುಂದೆ ಕುಳಿತಿದ್ದಾರೆ ಅಂತ ಹೇಳಲಾಗುತ್ತಿದೆ.

ಇದನ್ನೂ ಓದಿ: Pavitra Lokesh: ಮೈಸೂರಿನ ಒಂದೇ ಮನೆಯಲ್ಲಿದ್ದಾರಾ ಪವಿತ್ರಾ - ನರೇಶ್​? ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆ!

ಮೈಸೂರಿನ ಮನೆಯಲ್ಲಿದ್ದಾರಾ ನರೇಶ್​? 

ಹೌದು, ಕರ್ನಾಟಕದ ಮೈಸೂರಿನಲ್ಲಿರುವ ಪವಿತ್ರಾ ಮನೆಯಲ್ಲಿ ನರೇಶ್​ ಇದ್ದಾರೆ ಎನ್ನುವ ಅನುಮಾನ ಶುರುವಾಗಿದೆ. ಕೆಲ ವಿಡಿಯೋಗಳನ್ನು ಗಮನಿಸಿರುವ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಡಿಯೋದಲ್ಲಿ ಪಿಲ್ಲೋ ಕವರ್  ಹಾಗೂ ವುಡ್ ಎಲ್ಲಾ ಸೇಮ್ ಇದೆ ಎಂದು ಕಾಮೆಂಟ್​ ಮಾಡಿ ಕ್ಲಾಸ್​ ತೆಗೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಪವಿತ್ರಾ ಲೋಕೇಶ್​ ಹಾಗೂ ನರೇಶ್​ ಸಂಬಂಧದ ಬಗ್ಗೆ ಹಲವಾರು ಸುದ್ದಿಗಳು ಬಹಿರಂಗವಾಗುತ್ತಿದೆ. ಯಾವುದು ಸತ್ಯ? ಯಾವುದು ಸುಳ್ಳು? ಎಂಬುದು ಮಾತ್ರ ಗೊತ್ತಿಲ್ಲ.

ನರೇಶ್, ಪವಿತ್ರಾ ಬಗ್ಗೆ ರಮ್ಯಾ ರಘುಪತಿ ಆಕ್ರೋಶ

ನರೇಶ್​ ಮೂರನೇ ಪತ್ನಿ ರಮ್ಯಾ ರಘುಪತಿ ಕೂಡ ಮಾಧ್ಯಗಳ ಮುಂದೆ ಬಂದು ಪವಿತ್ರಾ ಹಾಗೂ ನರೇಶ್​ ಬಗ್ಗೆ ಕೆಂಡಕಾರಿದ್ದಾರೆ. ನ್ಯೂಸ್​ 18 ಕನ್ನಡ ಪ್ರತಿನಿಧಿ ಜೊತೆ ಮಾತನಾಡಿದ್ದ ನರೇಶ್​ ಮೂರನೇ ಪತ್ನಿ ರಮ್ಯಾ ಪವಿತ್ರಾ ಲೋಕೇಶ್ ವಿರುದ್ದ ಕೆಂಡಕಾರಿದ್ದರು.

ಇದನ್ನೂ ಓದಿ: Pavitra Lokesh: ಪವಿತ್ರಾ ಲೋಕೇಶ್ ಕತ್ತಲ್ಲಿ ನರೇಶ್‌ ಅಮ್ಮನ ನೆಕ್ಲೆಸ್ ಇದೆಯಾ? ರಮ್ಯಾ ರಘುಪತಿಯಿಂದ ಗಂಭೀರ ಆರೋಪ

ಪವಿತ್ರಾ ಲೋಕೇಶ್ ಒಂದು ಸಲ ನಮ್ಮ ಮನೆಗೆ ಬಂದಿದ್ಲು. ನಾನೇ  ನನ್ನ ಕೈಯಾರೆ ಬೆಳ್ಳಿ ತಟ್ಟೆಯಲ್ಲಿ  ಅನ್ನ ತುಪ್ಪದ ಊಟದ ಹಾಕಿದ್ದೆ. ನನ್ನ ಮನೆ ಬೆಳ್ಳಿ ತಟ್ಟೆಯನ್ನು ಪವಿತ್ರಾ ಲೋಕೇಶ್ ರಂಧ್ರ ಮಾಡ್ತಾಳೆ  ಅಂತ ನಾನು ಅನ್ಕೊಂಡಿರಲಿಲ್ಲ ಎಂದು ರಮ್ಯಾ ಪವಿತ್ರಾ ಲೋಕೇಶ್​ ವಿರುದ್ಧ ಕಿಡಿಕಾರಿದ್ದಾರೆ.
Published by:Annappa Achari
First published: