ತೆರೆ ಮೇಲೆ ಸಲ್ಲು ಭಾಯ್​ ಒಮ್ಮೆಯೂ ಕಿಸ್​ ಮಾಡಿಲ್ಲ ಏಕೆ?; ಅರ್ಬಾಜ್​​ ಖಾನ್​ ಕೊಟ್ಟ ಕಾರಣ ಕೇಳಿದ್ರೆ ದಂಗಾಗ್ತೀರ...

3 ದಶಕಗಳಿಂದ ಬಾಲಿವುಡ್​ ಸಿನಿಮಾಗಳಲ್ಲಿ ನಟಿಸುತ್ತಿರುವ ಸಲ್ಮಾನ್​ ಖಾನ್​ ಇದುವರೆಗೂ ತೆರೆಯ ಮೇಲೆ ಒಮ್ಮೆಯೂ ಚುಂಬನದ ದೃಶ್ಯದಲ್ಲಿ ಕಾಣಿಸಿಕೊಂಡಿಲ್ಲ!

ದಬಂಗ್​ ಸಿನಿಮಾದಲ್ಲಿ ಸಲ್ಮಾನ್​ ಖಾನ್

ದಬಂಗ್​ ಸಿನಿಮಾದಲ್ಲಿ ಸಲ್ಮಾನ್​ ಖಾನ್

  • News18
  • Last Updated :
  • Share this:
ಬಾಲಿವುಡ್​ನ ಮೋಸ್ಟ್​ ಎಲಿಜಿಬಲ್ ಬ್ಯಾಚುಲರ್, ಬ್ಯಾಡ್​ ಬಾಯ್​ ಎಂದೇ ಪ್ರಸಿದ್ಧಿ ಪಡೆದಿರೋ ಸಲ್ಮಾನ್​ ಖಾನ್​ ಇದುವರೆಗೂ ತೆರೆಯ ಮೇಲೆ ಚುಂಬನದ ದೃಶ್ಯದಲ್ಲಿ ಅಭಿನಯಿಸಿಲ್ಲ. ಇದಕ್ಕೆ ಏನು ಕಾರಣ ಗೊತ್ತಾ?

ಬಾಲಿವುಡ್​ ನಟ ಸಲ್ಮಾನ್​ ಖಾನ್​ ಈ ಮೊದಲು ಸೂರಜ್​ ಪಾಂಚೋಲಿ ಹಾಗೂ ಅತಿಯಾ ಶೆಟ್ಟಿ ಅಭಿನಯದ 'ಹೀರೋ' ಸಿನಿಮಾ ಟ್ರೈಲರ್​ ಬಿಡುಗಡೆ ಸಮಾರಂಭದಲ್ಲೂ ಚುಂಬನದ ಬಗ್ಗೆ ಮಾತನಾಡಿದ್ದರು. ಸಿನಿಮಾಗೆ ಕಿಸ್​ ಸೀನ್​ಗಳು ಅನಿವಾರ್ಯ ಎಂದು ನನಗೆ ಅನಿಸುವುದಿಲ್ಲ. ಈ ಸಿನಿಮಾದಲ್ಲಿ ಅಂತಹ ದೃಶ್ಯಗಳು ಇಲ್ಲ. ನಾನು ಕೂಡ ಇದುವರೆಗೂ ಅಂತಹ ಯಾವ ದೃಶ್ಯಗಳಲ್ಲೂ ಅಭಿನಯಿಸಿಲ್ಲ ಎಂದು ಹೇಳಿದ್ದರು.

ಸಂದರ್ಶನವೊಂದರಲ್ಲಿ ಮಾತನಾಡುವಾಗಲೂ ಚುಂಬನದ ದೃಶ್ಯದ ಬಗ್ಗೆ ಪ್ರಸ್ತಾಪಿಸಿದ್ದ ಸಲ್ಮಾನ್​ ಖಾನ್, ನಮ್ಮ ಮನೆಯ ವಿಡಿಯೋ ಹೋಂ ಸಿಸ್ಟಂನಲ್ಲಿ ಎಲ್ಲರೂ ಒಟ್ಟಾಗಿ ಕುಳಿತು ಇಂಗ್ಲಿಷ್​ ಸಿನಿಮಾ  ನೋಡುತ್ತಿರುತ್ತೇವೆ. ಆಗ ಕಿಸ್​ ಸೀನ್​ ಬಂದರೆ ಎಲ್ಲರೂ ಬೇರೆ ಕಡೆಗೆ ತಿರುಗಿಕೊಂಡು ಏನಾದರೂ ಮಾತನಾಡತೊಡಗುತ್ತೇವೆ. ಎಲ್ಲರಿಗೂ ಆ ದೃಶ್ಯ ಮುಜುಗರ ಉಂಟುಮಾಡುತ್ತದೆ. ಅದೇ ನನ್ನ ಮನಸಿನಲ್ಲಿ ಅಚ್ಚೊತ್ತಿದೆ. ನಮ್ಮ ಕುಟುಂಬದವರಿಗೆ ಆದ ಹಾಗೇ ಬೇರೆಯವರಿಗೂ ಆಗಬಹುದು ಎಂದು ನಾನು ಅಂತಹ ದೃಶ್ಯಗಳನ್ನು ಒಪ್ಪುವುದಿಲ್ಲ ಎಂದು ತಮ್ಮ ನಿರ್ಧಾರದ ಹಿಂದಿನ ಉದ್ದೇಶವನ್ನು ಹೇಳಿಕೊಂಡಿದ್ದರು.

ಇದನ್ನೂ ಓದಿ: ಸ್ಯಾಂಡಲ್​ವುಡ್​ಗೆ ಐಟಿ ಶಾಕ್​; 'ಕೆಜಿಎಫ್​' ಸ್ಟಾರ್​ ಯಶ್​ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ!

ಅಂದಹಾಗೆ, ಇದೇ ಪ್ರಶ್ನೆ ಕಪಿಲ್​ ಶರ್ಮ ಅವರ ಶೋನಲ್ಲೂ ಕೇಳಿಬಂತು. ಕಪಿಲ್​ ಶರ್ಮ ಕೂಡ ಸಲ್ಮಾನ್​ ಯಾಕೆ ಹೀರೋಯಿನ್​ಗಳ ಜೊತೆಗೆ ಕಿಸ್ಸಿಂಗ್​ ಸೀನ್​ನಲ್ಲಿ ನಟಿಸುವುದಿಲ್ಲ ಎಂದು ಕೇಳಿದರು. ಆಗ 'ನನಗೆ ಅದು ಅಗತ್ಯ ಎಂದು ಅನಿಸಿಲ್ಲವಾದ್ದರಿಂದ ನಾನು ಅಂತಹ ದೃಶ್ಯಗಳಲ್ಲಿ ನಟಿಸಿಲ್ಲ' ಎಂದು ಸಲ್ಮಾನ್​ ಖಾನ್​ ಹೇಳಿದರು. ತಕ್ಷಣ ಅದಕ್ಕೆ ಕೌಂಟರ್​ ಕೊಟ್ಟ ಸಲ್ಮಾನ್​ ಖಾನ್​ ಸೋದರ ಅರ್ಬಾಜ್​ ಖಾನ್​, 'ಅವರಿಗೆ ತೆರೆಯ ಹಿಂದೇ ಬೇಕಾದಷ್ಟು ಕಿಸ್​ಗಳು ಸಿಗುವುದರಿಂದ ಆನ್​ಸ್ಕ್ರೀನ್​ನಲ್ಲಿ ಕಿಸ್​ ಮಾಡೋ ಅಗತ್ಯವೇ ಇಲ್ಲ' ಎಂದು ಕಿಚಾಯಿಸಿದರು. ಈ ಮಾತು ಕೇಳಿದ ಕೂಡಲೆ ಕಪಿಲ್​, ಸಲ್ಮಾನ್​, ಸೊಹೈಲ್​ ಖಾನ್​ ನಗಲಾರಂಭಿಸಿದ ಪ್ರೋಮೋ ಎಲ್ಲಡೆ ಹರಿದಾಡುತ್ತಿದೆ. ಆ ವಿಡಿಯೋ ಇಲ್ಲಿದೆ, ನೀವೂ ನೋಡಿ..

 


First published: