• Home
 • »
 • News
 • »
 • entertainment
 • »
 • Divya Uruduga: ದಿವ್ಯಾ ಉರುಡುಗ ಮತ್ತು ಅರವಿಂದ್ ಅವರದ್ದು 'ಅರ್ಧಂಬರ್ಧ ಪ್ರೇಮ ಕಥೆ'ಯಾ?

Divya Uruduga: ದಿವ್ಯಾ ಉರುಡುಗ ಮತ್ತು ಅರವಿಂದ್ ಅವರದ್ದು 'ಅರ್ಧಂಬರ್ಧ ಪ್ರೇಮ ಕಥೆ'ಯಾ?

ದಿವ್ಯಾ ಉರುಡುಗ-ಅರವಿಂದ್ ಕೆ.ಪಿ

ದಿವ್ಯಾ ಉರುಡುಗ-ಅರವಿಂದ್ ಕೆ.ಪಿ

'ಹುಚ್ಚು ಮನಸ ಹುಡುಗ, ಹುಚ್ಚು ಮನಸ ಹುಡುಗಿ, ಹುಚ್ಚು ಹಿಡಿದ ವಿಷಯ, ಹುಚ್ಚು ಹಿಡಿದ ಹೃದಯ, ಹೀಗೊಂದು ವರದಿ, ಇದು ಪ್ರಯಾಣದ ಸರದಿ'

 • News18 Kannada
 • Last Updated :
 • Karnataka, India
 • Share this:

  ದಿವ್ಯಾ ಉರುಡುಗ (Divya Uruduga), ಅರವಿಂದ್ ಕೆ.ಪಿ. (Aravind K P) ಅಂದಾಕ್ಷಣ ನೆನಪಾಗೋದ ಬಿಗ್ ಬಾಸ್ (Bigg Boss) ಕನ್ನಡ ಸೀಸನ್ 8. ಅದರಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು. ಬಿಗ್ ಬಾಸ್ ಸೀಸನ್ 8 ರ ಟಾಪ್ 5 ಸ್ಪರ್ಧಿಗಳಲ್ಲಿ ಇವರು ಇದ್ದರು. ಬಿಗ್ ಬಾಸ್‍ಗೆ ಹೋದಾಗಿನಿಂದ ದಿವ್ಯಾ ಉರುಡುಗ ಹೆಚ್ಚು ಜನ ಪ್ರಿಯತೆಯನ್ನು ಹೊಂದಿದ್ದಾರೆ. ಅಲ್ಲದೇ ಅರವಿಂದ್ ಕೆ.ಪಿ ಜೊತೆ ಸದಾ ಇರುತ್ತಿದ್ದರು. ಅವಿ ಆಗಿದ್ದ ಈ ಜೋಡಿ ಎಲ್ಲರಿಗೂ ಇಷ್ಟ ಆಗಿತ್ತು. ಇಬ್ಬರದ್ದು ಒಳ್ಳಯ ಜೋಡಿ ಎಂದು ಜನ ಮೆಚ್ಚಿದ್ದರು. ಈಗ ಇವರಿಬ್ಬರು 'ಅರ್ಧಂಬರ್ಧ  ಪ್ರೇಮ ಕಥೆ' ಸಿನಿಮಾದಲ್ಲಿ (Film) ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಅದರ ಪೋಸ್ಟ್ ನ್ನು ಅರವಿಂದ್ ಕೆ.ಪಿ ಅವರು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದಾರೆ.


  'ಅರ್ಧಂಬರ್ಧ  ಪ್ರೇಮ ಕಥೆ' ಚಿತ್ರದಲ್ಲಿ ನಟನೆ
  ದಿವ್ಯಾ ಉರುಡುಗ ಅವರು ಅಧರ್ಂಬರ್ಧ ಪ್ರೇಮ ಕಥೆ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ದಿವ್ಯಾ ಸ್ನೇಹಿತ ಅರವಿಂದ್ ಕೂಡ ನಟಿಸುತ್ತಿದ್ದಾರೆ ಎನ್ನಲಾಗ್ತಿತ್ತು. ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. 'ಅರ್ಧಂಬರ್ಧ  ಪ್ರೇಮ ಕಥೆ'ಯಲ್ಲಿ ದಿವ್ಯಾ ಮತ್ತು ಅರವಿಂದ್ ಕೆ.ಪಿ ಬಣ್ಣ ಹಚ್ಚಿದ್ದಾರೆ. ಇಬ್ಬರ ಜೋಡಿಯನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯ್ತಾ ಇದ್ದಾರೆ.


  ಅರವಿಂದ್ ಕೆ.ಪಿ ಹೇಳಿದ್ದೇನು?
  'ಹುಚ್ಚು ಮನಸ ಹುಡುಗ, ಹುಚ್ಚು ಮನಸ ಹುಡುಗಿ, ಹುಚ್ಚು ಹಿಡಿದ ವಿಷಯ, ಹುಚ್ಚು ಹಿಡಿದ ಹೃದಯ, ಹೀಗೊಂದು ವರದಿ, ಇದು ಪ್ರಯಾಣದ ಸರದಿ' ಎಂದು ದಿವ್ಯಾ ಜೊತೆ ಇರೋ ಫೋಟೋದ ಜೊತೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅರವಿಂದ ಕೆ.ಪಿ ಬೈಕ್ ರೇಸರ್, ದಿವ್ಯಾ ಉರುಡುಗ ನಟಿ.


  ಇದನ್ನೂ ಓದಿ: Bigg Boss Kannada: ನೀವು ಸತ್ತ ಕುದುರೆ ತರ, ಆರ್ಯವರ್ಧನ್-ರೂಪೇಶ್ ರಾಜಣ್ಣ ಮಧ್ಯೆ ಜೋರು ಜಗಳ! 


  ಬಿಗ್ ಬಾಸ್ 09ರಲ್ಲೂ ಸ್ಪರ್ಧಿ
  ದಿವ್ಯಾ ಉರುಡುಗ ಅವರು ಬಿಗ್ ಬಾಸ್ ಸೀಸನ್ 09ಕ್ಕೆ ಪ್ರವೀಣರಾಗಿ ಎಂಟಿ ಕೊಟ್ಟಿದ್ದಾರೆ. ಅರವಿಂದ್ ಕೆ.ಪಿ ಅವರೇ ಸ್ಟೇಜ್ ತನಕ ಬಂದು ಬಿಟ್ಟು ಹೋಗಿದ್ದಾರೆ. ಕಳೆದ ಸೀಸನ್ ನಲ್ಲಿ ಅರವಿಂದ್ ಜೊತೆ ಇದ್ದದ್ದಕ್ಕೆ ಹೆಚ್ಚು ಕಾಲ ಇದ್ರು ಎನ್ನೋ ಅಪವಾದ ಇದೆ. ಅದಕ್ಕೆ ಈ ಬಾರಿ ಅದನ್ನು ಸುಳ್ಳು ಮಾಡಲು ಬಂದಿದ್ದಾರೆ. ಬಿಗ್ ಬಾಸ್ ಗೆಲ್ಲಲೇ ಬೇಕು ಎಂಬ ಹಠದಿಂದ ಎಂಟ್ರಿ ಆಗಿದ್ದಾರೆ.


  aravind k p and divya uruduga, aravind k p and divya uruduga instagram, aravind k p and divya film, divya uruduga instagram hashtag, ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ.ಪಿ, 'ಅರ್ಧಂಬರ್ಧ ಪ್ರೇಮ ಕಥೆ' ಚಿತ್ರ, kannada news, karnataka news,
  ದಿವ್ಯಾ ಉರುಡುಗ-ಅರವಿಂದ್ ಕೆ.ಪಿ


  ದಿವ್ಯಾ ಉರುಡುಗ ಬಗ್ಗೆ ನಿಮಗೆಷ್ಟು ಗೊತ್ತು?
  ದಿವ್ಯಾ ಉರುಡುಗ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಯುವ ಪ್ರತಿಭಾನ್ವಿತ ನಟಿ. ಕಿರುತೆರೆಯಲ್ಲಿ ಕೆಲವು ಸೀರಿಯಲ್‍ಗಳ ಮೂಲಕ ಮನೆಮಾತಾಗಿರುವ ದಿವ್ಯಾ `ಹುಲಿರಾಯ' ಚಿತ್ರದಿಂದ ಚಂದನವನದಲ್ಲಿ ಸಿನಿಪಯಣ ಆರಂಭಸಿದರು.


  ಮೂಲತಃ ಶಿವಮೊಗ್ಗದ ತೀರ್ಥಹಳ್ಳಿಯವರಾದ ದಿವ್ಯಾ ಶಾಲಾದಿನಗಳಲ್ಲಿ ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದರು. ಶಿಕ್ಷಣಕ್ಕಾಗಿ ಮಂಗಳೂರಿನಲ್ಲಿದ್ದಾಗ ಇವರಿಗೆ ಕಿರುತೆರೆಯಲ್ಲಿ ನಟಿಸಿಲು ಆಫರ್ ಬಂತು.


  aravind k p and divya uruduga, aravind k p and divya uruduga instagram, aravind k p and divya film, divya uruduga instagram hashtag, ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ.ಪಿ, 'ಅರ್ಧಂಬರ್ಧ ಪ್ರೇಮ ಕಥೆ' ಚಿತ್ರ, kannada news, karnataka news,
  ದಿವ್ಯಾ ಉರುಡುಗ-ಅರವಿಂದ್ ಕೆ.ಪಿ


  ಕಿರುತೆರೆಯಲ್ಲಿ ಚಿಟ್ಟೆ ಹೆಜ್ಜೆ, ಅಂಬಾರಿ, ಖುಷಿ, ಓಂ ಶಕ್ತಿ ಓಂ ಶಾಂತಿ ಸೀರಿಯಲ್‍ಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾದರು. ಉದಯ ಟಿವಿಯಲ್ಲಿ ಪ್ರಸಾರವಾದ `ಸೂಪರ್ ಕಬ್ಬಡ್ಡಿ' ರಿಯಾಲಿಟಿ ಶೋನಲ್ಲಿ ಕೂಡ ಭಾಗಿಯಾಗಿದ್ದರು.


  ಇದನ್ನೂ ಓದಿ: Ramachari: ಚಾರು ಹೃದಯದ ಚಕ್ರವ್ಯೂಹದಲ್ಲಿ ರಾಮಾಚಾರಿ ಬಂಧಿಯಾಗ್ತಾನಾ? ಅದ್ಧೂರಿ ಪ್ರಪೋಸಲ್ ನೋಡಿ! 


  2017 ರಲ್ಲಿ ತೆರೆಕಂಡ ಅರವಿಂದ್ ಕೌಶಿಕ್ ನಿರ್ದೇಶನದ ಹುಲಿರಾಯ ಚಿತ್ರದಿಂದ ಸಿನಿಪಯಣ ಆರಂಭಿಸಿದ ದಿವ್ಯಾ ಈ ಚಿತ್ರದ ನಟನೆಗಾಗಿ ಸೈಮಾಗೆ ನಾಮ ನಿರ್ದೇಶನಗೊಂಡಿದ್ದರು. ರಾಜಕೀಯ ಆಧಾರಿತ ಧ್ವಜ ಮತ್ತು ಫೇಸ್ 2 ಪೇಸ್'ಎಂಬ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

  Published by:Savitha Savitha
  First published: