ತುಳು ಸಿನಿಮಾ (Cinema) ಕಲಾವಿದರ ಅರವಿಂದ್ ಬೋಳಾರ್ (Aravind Bolar) ಅವರು ಅಪಘಾತಕ್ಕೊಳಗಾಗಿ (Accident) ಆಸ್ಪತ್ರೆಗೆ (Hospital) ದಾಖಲಾಗಿದ್ದು ಎಲ್ಲರಿಗೂ ಗೊತ್ತು. ಆದರೆ ನಟನ ಆರೋಗ್ಯದ ಬಗ್ಗೆ ಬಹಳಷ್ಟು ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ (Social Media) ಹರಿದಾಡುತ್ತಿತ್ತು. ನಟನ ಸ್ಥಿತಿ ಗಂಭೀರವಾಗಿದೆ, ಅರವಿಂದ್ ಬೋಳಾರ್ ಸೀರಿಯಸ್ ಆಗಿದ್ದಾರೆ ಎಂಬೆಲ್ಲ ಸುದ್ದಿಗಳು ವಾಟ್ಸಾಪ್ ಸೇರಿದಂತೆ ಹಲವು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ನಲ್ಲಿ ಓಡಾಡುತ್ತಿತ್ತು. ಇದೀಗ ಈ ಎಲ್ಲ ವಿಚಾರಗಳಿಗೆ ತೆರೆ ಬಿದ್ದಿದೆ. ನಟ ಅರವಿಂದ್ ಅವರೇ ತಮ್ಮ ಆರೋಗ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ ಕೊಟ್ಟಿದ್ದಾರೆ.
ಅರವಿಂದ್ ಬೋಳಾರ್ ಅವರ ಆರೋಗ್ಯ ಚೆನ್ನಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅರವಿಂದ್ ಸ್ಥಿತಿ ಚಿಂತಾಜನಕವಾಗಿದೆ. ಆರೋಗ್ಯ ಗಂಭೀರವಾಗಿದೆ ಎಂದು ಬಹಳಷ್ಟು ಜನರು ಸುದ್ದಿ ಹರಡುತ್ತಿದ್ದಾರೆ. ಆದರೆ ಈಗ ಅರವಿಂದ್ ಅವರು ಆಸ್ಪತ್ರೆಯಿಂದಲೇ ಮಾತನಾಡಿದ್ದಾರೆ.
ಅರವಿಂದ್ ಅವರು ಏನಂದ್ರು?
ಎಲ್ಲರಿಗೂ ನಮಸ್ಕಾರ. ನಾನು ನಿಮ್ಮ ಅರವಿಂದ್ ಬೋಳರ್. ನಾನು ಆರೋಗ್ಯವಾಗಿದ್ದೇನೆ. ಆಕ್ಸಿಡೆಂಟ್ ಆಗಿದ್ದು ನಿಜ. ಆದರೆ ಅಂಥದ್ದೇನೂ ಆಗಿಲ್ಲ. ಸ್ಕಿಡ್ ಆಗಿ ಬಿದ್ದಿದ್ದು ಕಾಲು ಸ್ವಲ್ಪ ತಾಗಿದೆ. ಕಣ್ಣಿಗೂ ಏನೂ ಆಗಿಲ್ಲ. ನೀವೆಲ್ಲರೂ ನನ್ನನ್ನು ಅಷ್ಟು ಪ್ರೀತಿಸುತ್ತೀರಿ. ನಿಮ್ಮ ಆಶಿರ್ವಾದದಿಂದ ನಂಗೇನೂ ಆಗಿಲ್ಲ ಎಂದುಕೊಳ್ಳುತ್ತೇನೆ. ನಾನು ರೈಡ್ ಮಾಡುವಾಗ ಹೆಲ್ಮೆಟ್ ಹಾಕಿದ್ದೆ. ಹೆಲ್ಮೆಟ್ ಇಲ್ಲದಿದ್ದರೆ ತುಂಬಾ ಕಷ್ಟ ಆಗ್ತಿತ್ತು. ಹೆಲ್ಮೆಟ್ ಹಾಕಿದ ಕಾರಣ ಸೇಫಾಗಿದ್ದೇನೆ ಎಂದಿದ್ದಾರೆ.
ನಟನಿಗೆ ಏನಾಗಿತ್ತು?
ಸಿನಿಮಾ ಹಾಗೂ ರಂಗಭೂಮಿ ಕಲಾವಿದರಾಗಿ ಹೆಸರು ಮಾಡಿರುವ ನಟ ಅರವಿಂದ್ ಬೋಳಾರ್ ಜನವರಿ 30ರಂದು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಮಂಗಳೂರಿನ ಪಂಪ್ ವೆಲ್ ರಸ್ತೆಯಲ್ಲಿ ಅವಘಡ ಸಂಭವಿಸಿದ್ದು, ಅಪಘಾತದಲ್ಲಿ ಅರವಿಂದ್ ಬೋಳಾರ್ ಗಾಯಗೊಂಡರು.
ಗಾಯಗೊಂಡ ನಟ ಅರವಿಂದ ಬೋಳಾರ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿತ್ತು. ಹಾಸ್ಯ ಕಲಾವಿದ ಅರವಿಂದ ಬೋಳಾರ ಚಲಿಸುತ್ತಿದ್ದ ಸ್ಕೂಟರ್ ಸ್ಕಿಡ್ ಆಗಿ ಅವಘಡ ಸಂಭವಿಸಿದೆ.
ಇದನ್ನೂ ಓದಿ: Arvind Bolar: ರಸ್ತೆ ಅಪಘಾತದಲ್ಲಿ ಗಾಯಗೊಂಡ ತುಳು ಹಾಸ್ಯ ಕಲಾವಿದ, ಅರವಿಂದ್ ಬೋಳಾರ್ ಆರೋಗ್ಯ ಈಗ ಹೇಗಿದೆ?
ಆಸ್ಪತ್ರೆಗೆ ಭೇಟಿ ನೀಡಿದ ನಟ , ನಿರ್ದೇಶಕ ದೇವದಾಸ್ ಕಾಪಿಕ್ಕಾಡ್, ಅರವಿಂದ ಬೋಳಾರ್ ಕಾಲಿಗೆ ಪೆಟ್ಟಾಗಿದ್ದು ಚಿಕಿತ್ಸೆ ನೀಡಲಾಗ್ತಿದೆ ಎಂದು ಹೇಳಿದ್ದಾರೆ.
ತನ್ನ ಅದ್ಭುತ ನಟನೆ, ವಿಶಿಷ್ಟ ಮ್ಯಾನರಿಸಂ ಮೂಲಕ ತುಳು ರಂಗಭೂಮಿ ಮತ್ತು ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿ ಅತ್ಯಧಿಕ ಅಭಿಮಾನಿಗಳನ್ನು ಹೊಂದಿದವರು ಅರವಿಂದ್. ತುಳು ರಂಗಭೂಮಿಯ ಹಾಸ್ಯ ಚಕ್ರವರ್ತಿ ಎಂದೇ ಕರೆಯಲ್ಪಡುವ ಅರವಿಂದ್ ಬೋಳಾರ್ ಮೇಲೆ ಈ ಹಿಂದೆ ದೂರು ದಾಖಲಾಗಿತ್ತು.ಈ ವೇಳೆ ಅನೇಕ ಕಲಾವಿದರು ಇವರ ಬೆಂಬಲಕ್ಕೆ ನಿಂತಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ