• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • The Kerala Story: 'ದಿ ಕೇರಳ ಸ್ಟೋರಿ' ವಿವಾದದ ನಡುವೆ ಮಸೀದಿಯಲ್ಲಿ ನಡೆದ ಹಿಂದೂ ವಿವಾಹದ ವಿಡಿಯೋ ಹಂಚಿಕೊಂಡ ಎಆರ್ ರೆಹಮಾನ್!

The Kerala Story: 'ದಿ ಕೇರಳ ಸ್ಟೋರಿ' ವಿವಾದದ ನಡುವೆ ಮಸೀದಿಯಲ್ಲಿ ನಡೆದ ಹಿಂದೂ ವಿವಾಹದ ವಿಡಿಯೋ ಹಂಚಿಕೊಂಡ ಎಆರ್ ರೆಹಮಾನ್!

ಎಆರ್​ ರೆಹಮಾನ್ ಮತ್ತು ದಿ ಕೇರಳ ಸ್ಟೋರಿ ಪೋಸ್ಟರ್​

ಎಆರ್​ ರೆಹಮಾನ್ ಮತ್ತು ದಿ ಕೇರಳ ಸ್ಟೋರಿ ಪೋಸ್ಟರ್​

ದಿ ಕೇರಳ ಸ್ಟೋರಿ ವಿವಾದದ ಮಧ್ಯೆ, ಅಕಾಡೆಮಿ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎಆರ್ ರೆಹಮಾನ್ ಅವರು 2020 ರಲ್ಲಿ ಕೇರಳದ ಮಸೀದಿಯೊಂದರಲ್ಲಿ ನಡೆದ ಹಿಂದೂ ವಿವಾಹದ ಕುರಿತು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

  • Share this:

ಹಿಂದಿ ಚಲನಚಿತ್ರ 'ದಿ ಕೇರಳ ಸ್ಟೋರಿ' (The Kerala Story) ವಿವಾದದ ನಡುವೆಯೇ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ (AR Rehman) ಕೇರಳದ ಮಸೀದಿಯೊಂದರಲ್ಲಿ ನಡೆದ ಹಿಂದೂ ವಿವಾಹದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸುದೀಪ್ತೋ ಸೇನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಹಿಂದಿ (Hindi Cinema) ಚಿತ್ರ 'ದಿ ಕೇರಳ ಸ್ಟೋರಿ' ಈಗಾಗಲೇ ವಿವಾದಕ್ಕೆ ಕಾರಣವಾಗಿದ್ದು, ಕೇರಳದ ಆಡಳಿತಾರೂಢ ಎಡರಂಗ ಮತ್ತು ಕಾಂಗ್ರೆಸ್‌ನಿಂದ ಟೀಕೆಗೆ ಗುರಿಯಾಗಿದೆ.


ವಿವಾದದ ಕೇಂದ್ರಬಿಂದುವಾಗಿರುವ ದಿ ಕೇರಳ ಸ್ಟೋರಿ


ಅಂದಾಜು 32,000 ಮಹಿಳೆಯರು ರಾಜ್ಯದಿಂದ ನಾಪತ್ತೆಯಾಗಿದ್ದು ಈ ಮಹಿಳೆಯರು ಇಸ್ಲಾಂಗೆ ಮತಾಂತರಗೊಂಡಿರುವುದಾಗಿ ಹಾಗೂ ISIS ಗೆ ಸೇರ್ಪಡೆಗೊಂಡಿರುವುದಾಗಿರುವ ಚಿತ್ರದ ಹೇಳಿಕೆಯು ಇದೀಗ ವಿವಾದಕ್ಕೆ ಗುರಿಯಾಗಿರುವ ಅಂಶವಾಗಿದೆ.


ಕೇರಳದ ಸಿಪಿಐ(ಎಂ) ಮತ್ತು ಕಾಂಗ್ರೆಸ್ ಈ ಹೇಳಿಕೆ ನಿಜವಲ್ಲ ಹಾಗೂ ಸತ್ಯಕ್ಕೆ ವಿರುದ್ಧವಾಗಿವೆ ಎಂದು ವಾದಿಸಿದರೆ, ನಿರ್ಮಾಪಕ ವಿಪುಲ್ ಅಮೃತಲಾಲ್ ಶಾ ಸೇರಿದಂತೆ ಸಂಪೂರ್ಣ ಚಿತ್ರ ನಿರ್ಮಾಪಕ ತಂಡ, ಚಿತ್ರವು ನೈಜ ಘಟನೆಯನ್ನು ಆಧರಿಸಿದೆ ಹಾಗೂ ಚಿತ್ರದಲ್ಲಿರುವ ಪ್ರತಿಯೊಂದು ದೃಶ್ಯವೂ ಸತ್ಯವಾದುದು ಎಂದು ಸಮರ್ಥಿಸಿಕೊಂಡಿದ್ದಾರೆ.


ಮಸೀದಿಯಲ್ಲಿ ನಡೆದ ಹಿಂದೂ ವಿವಾಹದ ವಿಡಿಯೋ ಹಂಚಿಕೊಂಡ ಎಆರ್ ರೆಹಮಾನ್


ಈ ವಿವಾದದ ಮಧ್ಯೆ, ಅಕಾಡೆಮಿ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎಆರ್ ರೆಹಮಾನ್ ಅವರು 2020 ರಲ್ಲಿ ಕೇರಳದ ಮಸೀದಿಯೊಂದರಲ್ಲಿ ನಡೆದ ಹಿಂದೂ ವಿವಾಹದ ಕುರಿತು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: ಮರತೇ ಹೋದ ಮಿತ್ರನಿಗೆ ಮರು ಜೀವ ಕೊಟ್ಟ ರಾಘವೇಂದ್ರ ಸ್ಟೋರ್ಸ್ಸ್


ಅಂಜು ಹಾಗೂ ಶರತ್ ದಂಪತಿಗಳ ವಿವಾಹ ಸಮಾರಂಭವನ್ನು ಹಿಂದೂ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಹಿಂದೂ ಅರ್ಚಕರು ಮಸೀದಿಯಲ್ಲಿ ನೇರವೇರಿಸಿಕೊಟ್ಟಿರುವುದು ವೈರಲ್ ವಿಡಿಯೋದಲ್ಲಿರುವ ಪ್ರಮುಖ ಅಂಶವಾಗಿದೆ.


ಟ್ವಿಟರ್‌ನಲ್ಲಿ ವೈರಲ್ ಆದ ವಿಡಿಯೋ


ವಿವಾಹದ ವಿಡಿಯೋವನ್ನು ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದು ಇದೀಗ ಇನ್ನೊಂದು ಕೇರಳ ಸ್ಟೋರಿ ಎಂಬ ಹ್ಯಾಶ್‌ಟ್ಯಾಗ್ ನೀಡಿ ಅದನ್ನು ವೈರಲ್‌ಗೊಳಿಸಿದ್ದಾರೆ.


ಎಆರ್ ರೆಹಮಾನ್ ಅವರು ಕೋಮು ಸೌಹಾರ್ದತೆಯ ಸ್ಪಷ್ಟ ಸಂಕೇತವಾಗಿ ಈ ವಿವಾಹ ವಿಡಿಯೋವನ್ನು ಹಂಚಿಕೊಂಡಿದ್ದು ಶಹಭಾಷ್, ಮಾನವೀಯತೆಯ ಮೇಲಿನ ಪ್ರೀತಿಯು ಷರತ್ತುರಹಿತವಾಗಿರಬೇಕು ಹಾಗೂ ಉಪಶಮನಗೊಳಿಸುವಂತಿರಬೇಕು ಎಂಬ ಶೀರ್ಷಿಕೆ ನೀಡಿದ್ದಾರೆ.


ಎಆರ್​ ರೆಹಮಾನ್ ಮತ್ತು ದಿ ಕೇರಳ ಸ್ಟೋರಿ ಪೋಸ್ಟರ್​


ಚಿತ್ರದ ಬಗ್ಗೆ ಅಸಾಮಾಧಾನ ತಾಳಿರುವ ಶಶಿ ತರೂರ್


ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಕೇರಳ ಸ್ಟೋರಿ ಚಿತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಚಿತ್ರ ನಿರ್ಮಾಪಕರು ರಾಜ್ಯದ ವಾಸ್ತವತೆಯನ್ನು ವಿರೂಪಗೊಳಿಸುವಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಜರೆದಿದ್ದಾರೆ. ಅಂತೆಯೇ ಶುಕ್ರವಾರ ಮೇ 5 ರಂದು ಬಿಡುಗಡೆಯಾಗಲಿರುವ ವಿವಾದಾತ್ಮಕ ಚಿತ್ರದ ವಿರುದ್ಧದ ಅರ್ಜಿಗಳನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.



ಚಿತ್ರವು ಶುಕ್ರವಾರದಂದೇ ಬಿಡುಗಡೆಯಾಗಲಿದೆ ಎಂದು ತಿಳಿಸಿರುವ ಸುಪ್ರೀಂ ಕೋರ್ಟ್, ಕೇರಳ ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ಅರ್ಜಿದಾರರಿಗೆ ತಾಕೀತು ಮಾಡಿದೆ.


ದಿ ಕೇರಳ ಸ್ಟೋರಿ ಯಾವುದರ ಕುರಿತಾಗಿದೆ?


ಚಿತ್ರವು ಇಸ್ಲಾಂಗೆ ಮತಾಂತರಗೊಂಡು ಐಸಿಸ್‌ಗೆ ಸೇರಿದ ರಾಜ್ಯದ ಮಹಿಳೆಯರ ಗುಂಪಿನ ಕುರಿತಾಗಿದೆ. ಚಿತ್ರ ನಿರ್ಮಾಪಕರ ಪ್ರಕಾರ ಕೇರಳದಿಂದ ಕಾಣೆಯಾಗಿದ್ದರು ಎಂದು ಹೇಳಲಾದ ಸುಮಾರು 32,000 ಮಹಿಳೆಯರ ಕುರಿತಾದ ಘಟನೆಗಳನ್ನು ಬಹಿರಂಗಪಡಿಸುತ್ತದೆ.




ಸುದೀಪ್ತೋ ಸೇನ್ ಬರೆದು ನಿರ್ದೇಶಿಸಿದ ಈ ಚಿತ್ರದಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ ಮತ್ತು ಸಿದ್ಧಿ ಇದ್ನಾನಿ ಚಿತ್ರದ ಪ್ರಮುಖ ತಾರಾಗಣದಲ್ಲಿ ಅಭಿನಯಿಸಿದ್ದಾರೆ.


ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪ


ಸುಪ್ರೀಂ ಕೋರ್ಟ್‌ನಲ್ಲಿರುವ ಅರ್ಜಿದಾರರ ಪೈಕಿ ಜಮಿಯತ್ ಉಲಾಮಾ-ಇ-ಹಿಂದ್ ಅವರು ಚಲನಚಿತ್ರದ ಬಿಡುಗಡೆಗೆ ತಡೆ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದು, ಇದು ಸಂಪೂರ್ಣ ಮುಸ್ಲಿಂ ಸಮುದಾಯಕ್ಕೆ ಮಾಡಿರುವ ಅವಮಾನವಾಗಿದೆ ಎಂದು ತಿಳಿಸಿದ್ದಾರೆ. ಚಿತ್ರದ ಶೀರ್ಷಿಕೆಗೆ ಇದು ಕಾಲ್ಪನಿಕ ಕೃತಿ ಎಂಬ ಹಕ್ಕು ನಿರಾಕರಣೆ ಸೇರಿಸಬೇಕು ಎಂದು ಮುಸ್ಲಿಂ ಸಂಸ್ಥೆ ಕೋರಿದೆ.


ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಚಲನಚಿತ್ರ ನಿರ್ಮಾಪಕರ ವಿರುದ್ಧ ವಾಗ್ದಾಳಿ ನಡೆಸಿದ್ದು ಲವ್ ಜಿಹಾದ್ ವಿಷಯವನ್ನು ಹೈಲೈಟ್ ಮಾಡುವ ಮೂಲಕ ರಾಜ್ಯವನ್ನು ಧಾರ್ಮಿಕ ಉಗ್ರವಾದದ ಕೇಂದ್ರವೆಂದು ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


https://www.moneycontrol.com/news/trends/ar-rahman-shares-post-on-hindu-wedding-inside-mosque-amid-the-kerala-story-row-10524431.html

top videos


    Shwetha PS

    First published: