A.R. Rahman​ ಪುತ್ರಿ ಖತಿಜಾ ಮದುವೆ, ಅಳಿಯ ರಿಯಾಸ್ದೀನ್ ಬಗ್ಗೆ 'ಮ್ಯೂಸಿಕ್​ ಮಾಂತ್ರಿ'ಕ ಹೀಗಂದ್ರು

ಕಳೆದ ವರ್ಷ ಡಿಸೆಂಬರ್​ನಲ್ಲಿ ಎ.ಆರ್​.ರೆಹಮಾನ್​ ಅವರ ಪುತ್ರಿ ಖತಿಜಾ ರೆಹಮಾನ್ (Khatija Rahman​) ನಿಶ್ಚಿತಾರ್ಥ ನೆರವೇರಿತ್ತು. ಇದೀಗ ಮಗಳ ವಿವಾಹ(Marriage)ದ ಫೋಟೋವನ್ನು ರೆಹಮಾನ್​ ಸೋಷಿಯಲ್​ ಮೀಡಿಯಾ(Social Media)ದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಶೇಖ್​ ಮೊಹಮ್ಮದ್​, ಖತೀಜಾ

ಶೇಖ್​ ಮೊಹಮ್ಮದ್​, ಖತೀಜಾ

  • Share this:
ಎ.ಆರ್.ರೆಹಮಾನ್ (A. R. Rahma) ಎಂದೇ ಖ್ಯಾತಿಯಾಗಿರುವ ಅಲ್ಲಾರಕ್ಕ ರೆಹಮಾನ್ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ಸಂಗೀತ ನಿರ್ದೇಶಕ. ಆರು ರಾಷ್ಟ್ರ ಪ್ರಶಸ್ತಿ (National Award), ಎರಡು ಅಕಾಡೆಮಿ ಮತ್ತು ಎರಡು ಗ್ರ್ಯಾಮಿ ಪ್ರಶಸ್ತಿ, 15 ಫಿಲ್ಮಪೇರ್ ಪ್ರಶಸ್ತಿ ಸೇರಿದಂತೆ ಹಲವಾರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ಪಡೆದಿರುವ ರೆಹಮಾನ್ ಭಾರತೀಯ ಚಿತ್ರರಂಗದ ಹಾಡುಗಳಿಗೆ ಅಂತರಾಷ್ಟ್ರೀಯ ಮನ್ನಣೆ ತಂದು ಕೊಟ್ಟ ಸಂಗೀತ ನಿರ್ದೇಶಕ. 1992 ರಲ್ಲಿ ತಮಿಳಿನ `ರೋಜಾ' (Roja) ಚಿತ್ರದಿಂದ ಸಂಗೀತ ಪಯಣ ಆರಂಭಿಸಿದರು. ಎ.ಆರ್​.ರೆಹಮಾನ್​ ತಮ್ಮ ವೈಯಕ್ತಿಕ ಜೀವನವನ್ನು ಎಂದಿಗೂ ಎಲ್ಲೂ ಹೇಳಿಕೊಂಡಿಲ್ಲ. ಕಳೆದ ವರ್ಷ ಡಿಸೆಂಬರ್​ನಲ್ಲಿ ಎ.ಆರ್​.ರೆಹಮಾನ್​ ಅವರ ಪುತ್ರಿ ಖತಿಜಾ ರೆಹಮಾನ್ (Khatija Rahman​) ನಿಶ್ಚಿತಾರ್ಥ ನೆರವೇರಿತ್ತು. ಇದೀಗ ಮಗಳ ವಿವಾಹ(Marriage)ದ ಫೋಟೋವನ್ನು ರೆಹಮಾನ್​ ಸೋಷಿಯಲ್​ ಮೀಡಿಯಾ(Social Media)ದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ರೆಹಮಾನ್​ ಪುತ್ರಿಯ ವಿವಾಹ!

ಖತೀಜಾ ರೆಹಮಾನ್​ ಮತ್ತು ರಿಯಾಸ್ದೀನ್​ ಶೇಖ್​ ಮೊಹಮ್ಮದ್​ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ, ಸ್ವರ ಮಾಂತ್ರಿಕ ಎ.ಆರ್​,ರೆಹಮಾನ್​ (A.R. Rahman​) ಪುತ್ರಿ ಖತೀಜಾ ರೆಹಮಾನ್ ​(Khatija Rahman) ಅವರನ್ನು ರಿಯಾಸ್ತೀನ್​ ಶೇಖ್​ ಮೊಹಮ್ಮದ್​ ಅವರು ಮದುವೆ ಆಗಿದ್ದಾರೆ. ಎ.ಆರ್​.ರೆಹಮಾನ್​ ಅವರಿಗೆ ಮೂವರು ಮಕ್ಕಳು. ಇಬ್ಬರು ಹೆಣ್ಣು ಮಕ್ಕಳ ಪೈಕಿ ಹಿರಿಯ ಪುತ್ರಿ ಖತೀಜಾ ರೆಹಮಾನ್​. ಡಿ.29ರಂದು ಖತೀಜಾ ರೆಹಮಾನ್​ ಮತ್ತು ಯಾಸ್ದೀನ್​ ಶೇಖ್​ ಮೊಹಮ್ಮದ್​ ನಿಶ್ಚಿತಾರ್ಥ ನಡೆದಿತ್ತು. ಇದೀಗ ಈ ಜೋಡಿ ಮದುವೆಯಾಗಿದ್ದಾರೆ.

ಅಪ್ಪನ ಹಾದಿಯಲ್ಲಿ ಖತೀಜಾ!

ಹೌದು. ಎ.ಆರ್​.ರೆಹಮಾನ್​ ಸಂಗೀತ ಹಿನ್ನಲೆ ಕುಟುಂಬದಿಂದ ಬಂದವರು.ಎ.ಆರ್​​.ರೆಹಮಾನ್​ ದಾರಿಯಲ್ಲೇ ಖತೀಜಾ ಸಾಗುತ್ತಿದ್ದಾರೆ. ತಂದೆಯಂತೆ ಖತೀಜಾ ಕೂಡ ಸಂಗೀತದಲ್ಲಿ ಆಸಕ್ತಿ ಹೊಂದಿದ್ದಾರೆ. ಗಾಯಕಿಯಾಗಿ ಅವರು ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾದ ‘ಮಿಮಿ’ ಸಿನಿಮಾದಲ್ಲಿ ಅವರೊಂದು ಗೀತೆ ಹಾಡಿದ್ದರು. ತಮಿಳು ಸಿನಿಮಾಗಳ ಅನೇಕ ಗೀತೆಗಳಿಗೆ ಖತೀಜಾ ಧ್ವನಿ ನೀಡಿದ್ದಾರೆ. ಭವಿಷ್ಯದಲ್ಲಿ ಅಪ್ಪನ ಹಾಗೇ ಒಳ್ಳೆಯ ಸಿಂಗರ್​ ಆಗಬೇಕು ಎಂದು ಯಾವಾಗಲು ಖತೀಜಾ ಹೇಳುತ್ತಿರುತ್ತಾರೆ.
View this post on Instagram


A post shared by ARR (@arrahman)

ಇದನ್ನೂ ಓದಿ: ಅರೇ, ಇದೇನು ಈ ನಟಿ ಜೇಬಲ್ಲಿ ಕಾಂಡೋಮ್​! ಫೋಟೋ ವೈರಲ್​-ಅಸಲಿಯತ್ತೇನು?

ಸೌಂಡ್​ ಇಂಜಿನಿಯರ್​ ರಿಯಾಸ್ದೀನ್​ ಶೇಖ್​!

ಅತ್ತ ಮಗಳು ಅಪ್ಪನ ಹಾದಿಯಲ್ಲಿ ನಡೆದರೆ, ಇತ್ತ ಅಳಿಯ ಕೂಡ ಮಾವನ ಹಾದಿಯಲ್ಲಿ ಇದ್ದಾರೆ. ಹೌದು, ರಿಯಾಸ್ದೀನ್​ ಶೇಖ್​ ಮೊಹಮ್ಮದ್​ ಕೂಡ ಸೌಂಡ್ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದಾರೆ. ಮಾವ ರೆಹಮಾನ್​ ಅವರ ಅನೇಕ ಸಂಗೀತ ಕಾರ್ಯಕ್ರಮಗಳಲ್ಲಿ ರಿಯಾಸ್ದೀನ್​ ಶೇಖ್​ ಮೊಹಮ್ಮದ್ ಸೌಂಡ್ ಇಂಜಿನಿಯರ್​ ಆಗಿ ಕೆಲಸ ಮಾಡಿದ ಅನುಭವ ಇದೆ.

ಇದನ್ನೂ ಓದಿ: ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ರಾಕಿ ಭಾಯ್​, ಡೈರೆಕ್ಟರ್​ ಫಿಕ್ಸ್​-ಕ್ಯಾರೆಕ್ಟರ್​ ಕೂಡ ರಿವೀಲ್​!

ನವಜೋಡಿಗೆ ಶುಭಾಶಯಗಳ ಮಹಾಪೂರ!

ಮದುವೆ ಫೋಟೋಗಳನ್ನು ರೆಹಮಾನ್​ ಅವರು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ಹೊಸ ದಂಪತಿಗಳ ಮೇಲೆ ದೇವರ ಕೃಪೆ ಇರಲಿ. ನಿಮ್ಮೆಲ್ಲ ಪ್ರೀತಿ,ಹಾರೈಕೆಗಳಿಗೆ ಮುಂಚಿತವಾಗಿಯೇ ಧನ್ಯವಾದಗಳು' ಎಂದು ಎ.ಆರ್​​ ರೆಹಮಾನ್​ ಬರೆದುಕೊಂಡಿದ್ದಾರೆ. ಇತ್ತ ಖತೀಜಾ ರೆಹಮಾನ್​ ಮತ್ತು ರಿಯಾಸ್ದೀನ್​ ಶೇಖ್​ ಮೊಹಮ್ಮದ್​ ಕೂಡ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ಖತೀಜಾ 'ಇದು ನನ್ನ ಜೀವನದ ಬಹುನಿರೀಕ್ಷಿತ ದಿನ' ಎಂದು ಬರೆದುಕೊಂಡಿದ್ದಾರೆ.
Published by:Vasudeva M
First published: