Rajinikanth ಚಿತ್ರಕ್ಕಾಗಿ ಕೆಲಸ ಮಾಡಿದ್ದು ನರಕ ದರ್ಶನ ಮಾಡಿಸಿತ್ತು ಎಂದಿದ್ದೇಕೆ A R Rahman ..!

ಎ.ಆರ್. ರೆಹಮಾನ್​ ಅವರು ರಜಿನಿಕಾಂತ್​ ಅಭಿನಯದ ಚಲನಚಿತ್ರಗಳಾದ ಶಿವಾಜಿ: ದಿ ಬಾಸ್, ಎಂದಿರನ್‌ನಂತಹ ತಲೈವಾ ಅವರ ಹಲವಾರು ಚಲನಚಿತ್ರಗಳಿಗೆ ಸಂಗೀತ ನೀಡಿದ್ದಾರೆ ಮತ್ತು ತುಂಬಾ ಇತ್ತೀಚಿನದು ಎಂದರೆ 2.0 ಸಿನಿಮಾ.

ಕೊಚ್ಚಾಡಿಯಾನ್​ ಸಿನಿಮಾಗಾಗಿ ಹಾಡಿದ್ದ ರಜಿನಿಕಾಂತ್​. ಈ ವೇಳೆ ರೆಹಮಾನ್​ ಸಹ ಅಲ್ಲೇ ಇದ್ದರು.

ಕೊಚ್ಚಾಡಿಯಾನ್​ ಸಿನಿಮಾಗಾಗಿ ಹಾಡಿದ್ದ ರಜಿನಿಕಾಂತ್​. ಈ ವೇಳೆ ರೆಹಮಾನ್​ ಸಹ ಅಲ್ಲೇ ಇದ್ದರು.

  • Share this:
ಬಾಲಿವುಡ್ ಮತ್ತು ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ತಮ್ಮದೇ ಆದ ವಿಭಿನ್ನ ತರಹದ ಸಂಗೀತ ಸಂಯೋಜನೆಯಿಂದ ಮತ್ತು ಗಾಯನದಿಂದ ಬಹುತೇಕರ ಮನ ಗೆದ್ದ ಎ.ಆರ್.ರೆಹಮಾನ್ (A R Rahman) ಈ ಬಾರಿ ಸುದ್ದಿಯಲ್ಲಿರುವುದು ತಮ್ಮ ಗಾಯನದಿಂದ ಅಲ್ಲ. ಹೊರತಾಗಿ ತಮಿಳು ಚಿತ್ರರಂಗದ ದಿಗ್ಗಜ ನಟರಾದ ರಜನಿಕಾಂತ್ (Rajinikanth) ಚಿತ್ರಕ್ಕಾಗಿ ಕೆಲಸ ಮಾಡುವ ಅನುಭವವನ್ನು ಹಂಚಿಕೊಂಡಿರುವುದರಿಂದ ಎಂದರೆ ತಪ್ಪಾಗುವುದಿಲ್ಲ. ಎ.ಆರ್.ರೆಹಮಾನ್ ಸಂಗೀತ ಸಂಯೋಜಿಸಿದ ಮತ್ತು ಹಾಡಿದ ಹಾಡುಗಳಿಗೆ ಅಭಿಮಾನಿಗಳು ಈಗಲೂ ಫುಲ್ ಫಿಧಾ ಆಗುತ್ತಾರೆ. ಆದರೆ ಅವರು ಈ ಹಾಡುಗಳನ್ನು ರಚಿಸುವಾಗ ಅಥವಾ ಸಂಯೋಜಿಸುವಾಗ ಅವರಿಗಾದ ಅನುಭವದ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಸರಿ, ಹಾಗಾದರೆ ಬನ್ನಿ ಖುದ್ದು ಗಾಯಕ ಎ.ಆರ್.ರೆಹಮಾನ್ ಅವರೇ ಇತ್ತೀಚೆಗೆ ತಲೈವಾ ರಜನಿಕಾಂತ್ ಚಲನಚಿತ್ರಗಳಿಗಾಗಿ ಕೆಲಸ ಮಾಡಿದ ದಿನಗಳನ್ನು ಒಮ್ಮೆ ನೆನಪಿಸಿಕೊಂಡಿದ್ದಾರೆ.

ಈ ಪ್ರಸಿದ್ಧ ಸಂಗೀತ ಸಂಯೋಜಕರು ರಜನಿ ಚಲನಚಿತ್ರಗಳಾದ ಶಿವಾಜಿ: ದಿ ಬಾಸ್, ಎಂದಿರನ್‌ನಂತಹ ತಲೈವಾ ಅವರ ಹಲವಾರು ಚಲನಚಿತ್ರಗಳಿಗೆ ಸಂಗೀತ ನೀಡಿದ್ದಾರೆ ಮತ್ತು ತುಂಬಾ ಇತ್ತೀಚಿನದು ಎಂದರೆ 2.0 ಸಿನಿಮಾ.

rajinikanth annaatthe movie released today worldwide more than 1000 screens 1st show exclusive review
ಅಣ್ಣಾತೆ ಸಿನಿಮಾ ಪೋಸ್ಟರ್​


ಎ.ಆರ್. ರೆಹಮಾನ್ ಇತ್ತೀಚೆಗೆ ಸ್ಟುಪಿಡ್ ರಿಯಾಕ್ಷನ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಸಂದರ್ಶನ ನೀಡಿದ್ದರು. ಅದರಲ್ಲಿ ರಜನಿಕಾಂತ್ ಚಿತ್ರದಲ್ಲಿ ಕೆಲಸ ಮಾಡುವ ಬಗ್ಗೆ ಮಾತನಾಡಲು ಪ್ರಾರಂಭಿಸಿ, ಕೆಲಸದ ಭಾರಿ ಹೊರೆಯಿಂದಾಗಿ ಮತ್ತು ಅದನ್ನು ಬೇಗನೆ ಮುಗಿಸಿಕೊಡಬೇಕೆಂಬ ಒತ್ತಡ ಇದ್ದ ಕಾರಣಕ್ಕೆ  ಆ ಅನುಭವವನ್ನು 'ನರಕ' ಎಂದು ಹೇಳಿದ್ದಾರೆ. ಎ.ಆರ್. ರೆಹಮಾನ್ 'ಕೆಲಸದ ಒತ್ತಡ' ಎಂಬ ಪದದ ಮೇಲೆ ಹೆಚ್ಚು ಒತ್ತಿ ಹೇಳಿದರು ಮತ್ತು ಅದನ್ನು ದೊಡ್ಡ ಸಮಸ್ಯೆ ಎಂದಿದ್ದಾರೆ.

ಇದನ್ನೂ ಓದಿ: ಕರ್ಮಫಲದ ಬಗ್ಗೆ ಮಾತನಾಡುತ್ತಾ Sorry ಕೇಳಿದ ನಟಿ Ragini Dwivedi

"ಕನಿಷ್ಠ ಈಗ ಅದು ಉತ್ತಮವಾಗಿದೆ. ಆದರೆ, ಅದು ಮೊದಲು, ನಾವು ಮಾರ್ಚ್‌ನಲ್ಲಿ ನಾನು ರಜನಿಕಾಂತ್ ಚಲನಚಿತ್ರಗಳಿಗೆ ಕೆಲಸ ಮಾಡಲು ಪ್ರಾರಂಭಿಸಿದರೆ, ಆ ಚಲನಚಿತ್ರವು ದೀಪಾವಳಿ ವೇಳೆಗೆ ಬಿಡುಗಡೆ ಮಾಡಬೇಕಾಗುತ್ತದೆ ಎಂದು ಅವರು ಹೇಳುತ್ತಿದ್ದರು. ತದನಂತರ, ನಾನು ಹಾಡುಗಳನ್ನು ಮಾಡಬೇಕಾಗುತ್ತಿತ್ತು. ಜೊತೆಗೆ ಹಿನ್ನೆಲೆ ಸಂಗೀತ ಬೇರೆ. ನಾನು ಇದ್ದಂತಹ ಸ್ಥಳದಲ್ಲಿ ವಿದ್ಯುತ್ ಅಭಾವ ತುಂಬಾನೇ ಇರುವುದರಿಂದ ಎರಡು ಜನರೇಟರ್‌ಗಳನ್ನು ಇರಿಸಿಕೊಂಡಿದ್ದೆ. ಒಟ್ಟಿನಲ್ಲಿ ಆ ಸಂದರ್ಭ ನರಕ ತೋರಿಸಿತ್ತು” ಎಂದು ರೆಹಮಾನ್ ಹೇಳಿದ್ದಾರೆ.

“ನಂತರ ಸಂಯೋಜಕರು ರಜನಿಕಾಂತ್ ಚಲನಚಿತ್ರಗಳಿಗೆ ನಿರಂತರವಾಗಿ ಆದ್ಯತೆ ನೀಡುತ್ತಾರೆ ಎಂದು ಅವರು ಕೆಲಸ ಮಾಡುತ್ತಿದ್ದ ಇತರ ನಿರ್ದೇಶಕರನ್ನು ಕೆರಳಿಸುತ್ತಿತ್ತು” ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ನಟ ಪುನೀತ್ ರಾಜ್‍ಕುಮಾರ್ ನಿಧನಕ್ಕೆ Rajinikanth ಸಂತಾಪ: ಸಿಟ್ಟಿಗೆದ್ದ ನೆಟ್ಟಿಗರು..!

ಆ ದಿನಗಳಲ್ಲಿ ಏಕಕಾಲದಲ್ಲಿ ಹಲವಾರು ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅವರು ಹೇಳಿದರು. "ನಾನು 3 ಚಲನಚಿತ್ರಗಳನ್ನು ಮಾಡುತ್ತಿದ್ದೆ, ಆದ್ದರಿಂದ ಇತರ ನಿರ್ದೇಶಕರು ಸಹ ನಮ್ಮ ಚಿತ್ರಗಳು ದೀಪಾವಳಿಯ ದಿನವೇ ಬಿಡುಗಡೆಯಾಗಲಿದೆ ಎ ಆರ್' ಎಂದು ಹೇಳುತ್ತಿದ್ದರು. ಅದು ನರಕವಾಗಿತ್ತು. ನಾನು ಈ ಎಲ್ಲಾ ಹಬ್ಬಗಳನ್ನು ದ್ವೇಷಿಸುತ್ತಿದ್ದೆ, ಏಕೆಂದರೆ ಅವು ನನಗೆ ದೀಪಾವಳಿ ಅಥವಾ ಹೊಸ ವರ್ಷ ಅಥವಾ ಪೊಂಗಲ್ ಆಗಿರಲಿ ಖುಷಿಯಿಂದ ಆಚರಿಸಲು ಸಮಯವೇ ನೀಡುತ್ತಿರಲಿಲ್ಲ. ಆದರೆ ಈಗ, ಬಿಡುವಿನ ಸಮಯವಿದೆ" ಎಂದು ರೆಹಮಾನ್ ಹೇಳಿದರು.

ರೆಹಮಾನ್ ಇದುವರೆಗೆ ಆರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಎರಡು ಅಕಾಡೆಮಿ ಪ್ರಶಸ್ತಿಗಳು, ಎರಡು ಗ್ರ್ಯಾಮಿ ಪ್ರಶಸ್ತಿಗಳು, ಬಾಫ್ಟಾ ಪ್ರಶಸ್ತಿ, ಗೋಲ್ಡನ್ ಗ್ಲೋಬ್ ಪ್ರಶಸ್ತಿ, ಹದಿನೈದು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಡಿದ್ದಾರೆ.
First published: