ಸಂಗೀತ ಮಾಂತ್ರಿಕನೆಂದೇ ಖ್ಯಾತಿ ಪಡೆದ ಎ. ಆರ್ ರೆಹಮಾನ್ (AR Rahman), ಸಂಗೀತದಿಂದಲೇ ವಿಶ್ವಕ್ಕೆ ಮೋಡಿ ಮಾಡಿದವರು. ಆದರೆ ರೆಹಮಾನ್ ಅವರ ವೈಯಕ್ತಿಕ ವಿಷಯಗಳು ಅಷ್ಟಾಗಿ ಸುದ್ದಿಯಾಗಿಲ್ಲ. ಈ ಮಧ್ಯೆ ರೆಹಮಾನ್ ಅವರು ತಮ್ಮ ಮದುವೆಯ (Marriage) ಸಂದರ್ಭದ ಬಗ್ಗೆ ಹಾಗೂ ಮೊದಲ ಬಾರಿ ಹುಡುಗಿಯನ್ನು (Bride) ನೋಡೋಕೆ ಹೋದ ಸಂದರ್ಭದ ಬಗ್ಗೆ ಕೆಲವಷ್ಟು ಇಂರೆಟೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಇತ್ತೀಚಿಗೆ ಸುದ್ದಿ ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದ ವೇಳೆ ತಾವು ಸೈರಾ ಅವರನ್ನು ಹೇಗೆ ಭೇಟಿಯಾಗಿದ್ದು ಮತ್ತು ವಿವಾಹಕ್ಕೆ ಒಪ್ಪಿಗೆ ಕೊಟ್ಟಿದ್ದು ಹೇಗೆ ಅನ್ನೋದನ್ನು ಅವರು ಹಂಚಿಕೊಂಡಿದ್ದಾರೆ.
ರೆಹಮಾನ್ ಸೈರಾ ಅವರದ್ದು ಅರೇಂಜ್ಡ್ ಮ್ಯಾರೇಜ್
ಹೌದು, ಸೈರಾ ಹಾಗೂ ರೆಹಮಾನ್ರದ್ದು ಹಿರಿಯರು ನೋಡಿ ಮಾಡಿದ ಅರೇಂಜ್ಡ್ ಮ್ಯಾರೇಜ್. 'ದಿಲ್ ಸೇ' ಕಂಪೋಸರ್ ಆಗ ತುಂಬಾನೇ ಬ್ಯುಸಿಯಾಗಿದ್ದರಿಂದ ಅವರಿಗೆ ವಧುವನ್ನು ಹುಡುಕೋಕೆ ಸಮಯವೇ ಇರಲಿಲ್ಲವಂತೆ.
ಆಗ ಸೂಪರ್ಹಿಟ್ ಚಿತ್ರಗಳಾದ ರೋಜಾ ಹಾಗೂ ಬಾಂಬೆ ಪ್ಯಾನ್ ಇಂಡಿಯಾ ಯಶಸ್ಸಿನ ಸಮಯವಾಗಿತ್ತು. ಅವರು ಆಗಲೇ ರಂಗೀಲಾ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದರು.
ಆ ಸಂದರ್ಭದಲ್ಲಿ ಅವರಿಗೆ 29 ವರ್ಷವಾಗಿತ್ತು. ಮದುವೆಯಾಗೋಕೆ ಇದು ಸರಿಯಾದ ಸಮಯ ಅಂತಾ ಅವರಿಗೆ ತಿಳಿದಿತ್ತು. ಆದ್ರೆ ಅವರು ತುಂಬಾನೇ ಬ್ಯುಸಿ ಇದ್ದದ್ದರಿಂದ ತಾಯಿಗೆ ಸ್ವತಃ ಅವರಿಗಾಗಿ ವಧು ಹುಡುಕಲು ಹೇಳಿದ್ದರಂತೆ.
ಸ್ಪೂರ್ತಿ ನೀಡುವ, ತೊಂದರೆ ಕೊಡದ, ಸಿಂಪಲ್ ಹುಡುಗಿ ಬೇಕು ಎಂದಿದ್ದೆ!
ಎ.ಆರ್. ರೆಹಮಾನ್ ಅವರು ಹೇಳುವ ಪ್ರಕಾರ ತುಂಬಾ ಸರಳ ಹುಡುಗಿಯನ್ನು ಹುಡುಕಿ ಕೊಡುವಂತೆ ಅವರು ತಾಯಿಗೆ ಹೇಳಿದ್ದರಂತೆ. "ನನಗೆ ಹೆಚ್ಚು ತೊಂದರೆ ನೀಡದೇ ಹೋದರೆ ನಾನು ನನ್ನ ಸಂಗೀತವನ್ನು ಮುಂದುವರಿಸಬಹುದು. ಸ್ವಲ್ಪ ವಿದ್ಯೆ, ಸ್ವಲ್ಪ ಸೌಂದರ್ಯ ಮತ್ತು ನಮ್ರತೆಯನ್ನು ಹೊಂದಿರುವ ವಧು ಬೇಕು. ಆಕೆ ಸ್ಪೂರ್ತಿ ನೀಡುವಂಥವಳಾಗಿರಬೇಕು” ಎಂಬುದಾಗಿ ತಾಯಿಗೆ ಹೇಳಿದ್ದರಂತೆ.
ಮೊದಲ ಭೇಟಿ ತಮಾಷೆಯದಾಗಿತ್ತು!
ತನ್ನ ತಾಯಿ ಹಾಗೂ ಸೈರಾ ಅವರ ಸಹೋದರಿಯನ್ನು ಸೂಫಿ ದೇಗುಲದ ಬಳಿ ಭೇಟಿಯಾಗಿ ಮಾತುಕತೆ ನಡೆಸಿದರು. ಇನ್ನು ತನ್ನ ಹಾಗೂ ಸೈರಾ ಮೊದಲ ಭೇಟಿ ಸಾಕಷ್ಟು ಫನ್ನಿಯಾಗಿತ್ತು ಎಂಬುದಾಗಿ 'ತಾಲ್' ಕಂಪೋಸರ್ ನೆನಪಿಸಿಕೊಳ್ಳುತ್ತಾರೆ.
ಇದನ್ನೂ ಓದಿ: AR Rahman Birthday: ಟಾಪ್ ಸಿಮ್ಕಾರ್ಡ್ ಟ್ಯೂನ್ ಕಂಪೋಸ್ ಮಾಡಿದ್ದು ಇವರೇ! ರೆಹಮಾನ್ ಕುರಿತು ನೀವರಿಯದ ಸಂಗತಿಗಳಿವು
ಏಕೆಂದರೆ "ಅಲ್ಲಿಯವರೆಗೆ ನಾನು ಎಂದಿಗೂ ಹುಡುಗಿಯನ್ನು ನೋಡುವಂತಹ ಉದ್ದೇಶವನ್ನು ಹೊಂದಿರಲಿಲ್ಲ. ಅಂತಹ ನೋಟವನ್ನು ಹೊಂದಿ ಹುಡುಗಿಯನ್ನು ನೋಡುವುದು ತಮಾಷೆಯಾಗಿತ್ತು” ಎಂದು ಅವರು ಹೇಳಿದ್ದಾರೆ.
“ನಿಮಗೆ ನನ್ನನ್ನು ಮದುವೆಯಾಗಲು ಇಷ್ಟವಿದೆಯಾ? ಅಥವಾ ನಿಮ್ಮ ಮನಸ್ಸಿನಲ್ಲಿ ಬೇರೇನಾದರೂ ಇದೆಯಾ?” ಎಂದು ನಾನು ಸೈರಾಳನ್ನು ಕೇಳಿದೆ.
ಅದಕ್ಕೆ ಆಕೆ ಇಷ್ಟವಿದೆ ಅಂತ ಉತ್ತರ ನೀಡಿದರು. ನಂತರ ಚಹಾ ಉಪಹಾರದ ಜೊತೆ ಸಾಂಪ್ರದಾಯಿಕವಾಗಿ ನಡೆಯುವಂತೆ ಮದುವೆ ಮಾತುಕತೆ ನಡೆದವು. ಅಲ್ಲಿ ರೆಹಮಾನ್ ಸಂಯೋಜಿಸಿದ್ದ ಹಾಡುಗಳ ಬಗ್ಗೆಯೂ ಚರ್ಚೆ ನಡೆಯಿತು" ಎಂದು ರೆಹಮಾನ್ ಹೇಳಿಕೊಂಡರು.
ಆರಂಭದಲ್ಲಿ ಬೇಸರಗೊಂಡಿದ್ದರಂತೆ ಸೈರಾ !
ಎ. ಆರ್. ರೆಹಮಾನ್ ಸಂಗೀತದಲ್ಲಿಯೇ ಸಾಕಷ್ಟು ಬ್ಯುಸಿ ಇದ್ದ ಕಾಲವದು. ಹಾಗಾಗಿ ಮದುವೆಯಾದ ಹೊಸತರಲ್ಲಿ ಸಹಜವಾಗಿಯೇ ಸೈರಾ ಹತಾಶೆಗೊಂಡರು ಎಂಬುದನ್ನು ಅವರು ನೆನಪಿಸಿಕೊಂಡರು.
ಆರಂಭದಲ್ಲಿ ಸೈರಾ ನಿರಾಶೆಗೊಳ್ಳುತ್ತಿದ್ದರು. ಸಾಮಾನ್ಯವಾಗಿ ನಾವು ಶಾಪಿಂಗ್ ಗೆ ಹೋಗಲಾಗುತ್ತಿರಲಿಲ್ಲ. ಹೊರಗೆ ಸುತ್ತಾಡಲು ಆಗುತ್ತಿರಲಿಲ್ಲ. ಆದ್ರೆ ಈ ಹೊಂದಾಣಿಕೆ ಮೊದಲೆ ಮಾಡಿಕೊಂಡಿದ್ದ ಒಪ್ಪಂದವಾಗಿತ್ತು ಎಂಬುದಾಗಿ ರೆಹಮಾನ್ ಹೇಳುತ್ತಾರೆ.
ಸೈರಾ ಯಾವ ರೀತಿ ಜೀವನ ನಡೆಸಬೇಕಾಗುತ್ತದೆ ಎಂಬ ಬಗ್ಗೆ ನಾನು ಆರಂಭದಲ್ಲಿಯೇ ಹೇಳಿದ್ದೆ ಎಂಬುದಾಗಿ ರೆಹಮಾನ್ ಹೇಳಿದರು.
ಇನ್ನು, 1995 ರಲ್ಲಿ ಮದುವೆಯಾಗಿದ್ದ ರೆಹಮಾನ್ ಹಾಗೂ ಸೈರಾಗೆ ಖತೀಜಾ ಮತ್ತು ರಹೀಮಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಖತೀಜಾ ಅವರು 2022 ರಲ್ಲಿ ವಿವಾಹವಾಗಿದ್ದು, ಅವರ ಮದುವೆಯ ಫೋಟೋಗಳು ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್ ಆಗಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ