Apthamitra: 18 ವರ್ಷದ 'ಆಪ್ತ'ಮಿತ್ರನನ್ನು ನೆನೆದ ರಮೇಶ್ ಅರವಿಂದ್, ಫೋಟೋ ನೋಡಿ ನೆಟ್ಟಿಗರು ಭಾವುಕ

ಸಿನಿಮಾದಲ್ಲಿ ವಿಷ್ಣುವರ್ಧನ್ ಆಪ್ತ ಮಿತ್ರನಾಗಿದ್ದ ರಮೇಶ್ ಅರವಿಂದ್ ಅವರು ಸಾಮಾಜಿಕ ಜಾಲತಾಣದಲ್ಲಿ ಆಪ್ತಮಿತ್ರ ಚಿತ್ರದ ಫೋಟೋ ಶೇರ್ ಮಾಡಿದ್ದಾರೆ. ಚಿತ್ರ ಬಂದು 18 ವರ್ಷ ಆಯ್ತು ಎಂದು ನೆನಪು ಮಾಡಿಕೊಂಡಿದ್ದಾರೆ.

ಆಪ್ತಮಿತ್ರ ಚಿತ್ರ

ಆಪ್ತಮಿತ್ರ ಚಿತ್ರ

  • Share this:
    ಆಪ್ತಮಿತ್ರ (Apthamitra) ಚಿತ್ರ (Film) ಯಾರಿಗೆ ನೆನಪಿಲ್ಲ ಹೇಳಿ. ಆಪ್ತಮಿತ್ರ ಅಂದಾಕ್ಷಣ ನೆನಪಾಗೋದೇ ಸಾಹಸಸಿಂಹ' ಡಾ. ವಿಷ್ಣುವರ್ಧನ್ (Vishnuvardhan). 2004ರಲ್ಲಿ ಆಪ್ತಮಿತ್ರ ಚಿತ್ರ ತೆರೆಕಂಡಿತ್ತು. ಸೈಕಾಲಾಜಿಕಲ್ ಹಾರರ್  (Horror) ಥ್ರಿಲ್ಲರ್ ಸಿನಿಮಾ ತೆರೆಕಂಡು 18 ವರ್ಷಗಳಾಗಿವೆ (18 years). ಸಿನಿಮಾದಲ್ಲಿ ವಿಷ್ಣುವರ್ಧನ್ ಆಪ್ತ ಮಿತ್ರನಾಗಿದ್ದ ರಮೇಶ್ ಅರವಿಂದ್ (Ramesh Arvind) ಅವರು, ಸಿನಿಮಾ ಬಂದ 18 ವರ್ಷ ಆಯ್ತು ಎಂದು ನೆನಪು ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ (Social media) ಆಪ್ತಮಿತ್ರ ಚಿತ್ರದ ಫೋಟೋಗಳನ್ನು (Photos) ಹಂಚಿಕೊಂಡು, ಈ ಸಿನಿಮಾವನ್ನು ನೆನಪು ಮಾಡಿಕೊಂಡಿದ್ದಾರೆ. ಸಾಹಸಸಿಂಹ' ಡಾ. ವಿಷ್ಣುವರ್ಧನ್ ಅವರ ಕರಿಯರ್​ನ ಟಾಪ್ 5 ಸಿನಿಮಾಗಳಲ್ಲಿ ಆಪ್ತಮಿತ್ರ ಚಿತ್ರ ಸಹ ಒಂದು. ಇದು ಬಿಡುಗಡೆಯಾಗದಾಗ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿತ್ತು.

    ಫೋಟೋ ಶೇರ್ ಮಾಡಿದ ರಮೇಶ್ ಅರವಿಂದ್
    ಸಿನಿಮಾದಲ್ಲಿ ವಿಷ್ಣುವರ್ಧನ್ ಆಪ್ತ ಮಿತ್ರನಾಗಿದ್ದ ರಮೇಶ್ ಅರವಿಂದ್ ಅವರು ಸಾಮಾಜಿಕ ಜಾಲತಾಣದಲ್ಲಿ ಆಪ್ತಮಿತ್ರ ಚಿತ್ರದ ಫೋಟೋ ಶೇರ್ ಮಾಡಿದ್ದಾರೆ. ಚಿತ್ರ ಬಂದು 18 ವರ್ಷ ಆಯ್ತು ಎಂದು ನೆನಪು ಮಾಡಿಕೊಂಡಿದ್ದಾರೆ.


    ಬಾಕ್ಸ್ ಆಫೀಸ್‍ನಲ್ಲಿ ಧೂಳೆಬ್ಬಿಸಿದ್ದ ಆಪ್ತಮಿತ್ರ
    ಆಪ್ತಮಿತ್ರ ಚಿತ್ರ, ಸೈಕಾಲಾಜಿಕಲ್ ಹಾರರ್ ಥ್ರಿಲ್ಲರ್ ಸಿನಿಮಾವಾಗಿದ್ದು, ಮಲಯಾಳಂನ 'ಮಣಿಚಿತ್ರತ್ತಾಳ್' ಚಿತ್ರದ ರಿಮೇಕ್ ಚಿತ್ರ ಇದು. ಕನ್ನಡದಲ್ಲಿ ಪಿ. ವಾಸು ಇದನ್ನು ರಿಮೇಕ್ ಮಾಡಿದ್ದರು. ಡಾ. ವಿಜಯ್ ಪಾತ್ರದಲ್ಲಿ ವಿಷ್ಣುವರ್ಧನ್ ನಟಿಸಿದ್ದರೆ, ಗಂಗಾ ಮತ್ತು ನಾಗವಲ್ಲಿಯಾಗಿ ಸೌಂದರ್ಯಾ ನಟಿಸಿದ್ದಾರೆ. ದುರಾದೃಷ್ಟವೆಂದರೆ, ಈ ಇಬ್ಬರು ಮಹಾನ್ ತಾರೆಯರು ಇಂದು ನಮ್ಮೊಂದಿಗೆ ಇಲ್ಲ. ಹಾಗೆಯೇ ಪೋಷಕರ ಪಾತ್ರವೊಂದಕ್ಕೆ ಜೀವ ತುಂಬಿದ್ದ ಹಿರಿಯ ನಟ ಶಿವರಾಮ್ ಅವರು ಕೂಡ ನಿಧನರಾಗಿದ್ದಾರೆ.

    ಇದನ್ನೂ ಓದಿ: Nammamma Super Star: ಬರ್ತಿದೆ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2, ನಿಮ್ಮೂರಲ್ಲೂ ನಡೆಯುತ್ತೆ ಆಡಿಷನ್​

    ಚಿತ್ರದ ಕಲಾವಿದರು ಯಾರು?
    ಗೆಳೆಯನಾಗಿ ರಮೇಶ್ ಅರವಿಂದ್, ನಟಿ ಪ್ರೇಮಾ, ಸತ್ಯಜಿತ್, ದ್ವಾರಕೀಶ್, ಪ್ರಮೀಳಾ ಜೋಷಾಯ್, ಅವಿನಾಶ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದರು. ಬಹಳ ದಿನಗಳ ನಂತರ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಈ ಸಿನಿಮಾಗಾಗಿ ಒಂದಾಗಿದ್ದರು. ಹೌದು, ದ್ವಾರಕೀಶ್ ನಿರ್ಮಾಣದ ಈ ಸಿನಿಮಾದಲ್ಲಿ ವಿಷ್ಣು ತುಂಬ ಗ್ಯಾಪ್ ನಂತರ ಬಣ್ಣ ಹಚ್ಚಿದ್ದರು. ಚಿತ್ರ ಕೂಡ ದೊಡ್ಡಮಟ್ಟದ ಯಶಸ್ಸು ಕಂಡಿತ್ತು.

    1 ವರ್ಷ ಪ್ರದರ್ಶನ ಕಂಡ ಚಿತ್ರ
    ಈ ಸಿನಿಮಾಕ್ಕೆ ಗುರುಕಿರಣ್ ಸಂಗೀತ ನೀಡಿದ್ದರು. ಹಾಡುಗಳು ಆ ಕಾಲಕ್ಕೆ ದೊಡ್ಡ ಇತಿಹಾಸವನ್ನೇ ಸೃಷ್ಟಿಸಿದ್ದವು. 'ರಾ.. ರಾ..' ಹಾಡು ಇಂದಿಗೂ ಕೇಳುಗರಿಗೆ ಇಷ್ಟವಾದ ಸಾಂಗ್. ಇನ್ನು, ಈ ಸಿನಿಮಾ ಬೆಂಗಳೂರಿನ ಸಂತೋಷ್ ಚಿತ್ರಮಂದಿರ ಸೇರಿದಂತೆ ರಾಜ್ಯದ ಪ್ರಮುಖ ಚಿತ್ರಮಂದಿರಗಳಲ್ಲಿ ಅಮೋಘ 1 ವರ್ಷ ಪ್ರದರ್ಶನ ಕಂಡಿತ್ತು.

    2004ರಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಖ್ಯಾತಿಯು ಆಪ್ತಮಿತ್ರ ಚಿತ್ರಕ್ಕೆ ಸಲ್ಲುತ್ತದೆ. ಅಲ್ಲದೆ, ಈ ಸಿನಿಮಾಕ್ಕೆ ಐದು ಫಿಲ್ಮ್‍ಫೇರ್ ಪ್ರಶಸ್ತಿಗಳು ಲಭಿಸಿವೆ. ವಿಷ್ಣುವರ್ಧನ್, ಸೌಂದರ್ಯಾ ಅವರಿಗೆ ಅತ್ಯುತ್ತಮ ನಟ- ನಟಿ ಪ್ರಶಸ್ತಿ, ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಸಂಗೀತ ಪ್ರಶಸ್ತಿಗಳು ಸಿಕ್ಕಿದ್ದವು.



    ಇದನ್ನೂ ಓದಿ: Meghana Raj: ಮೇಘನಾ ಮನದಲ್ಲಿ ಚಿರು ಉಸಿರು, ಕೈಯಲ್ಲಿ ಚಿರು ಹೆಸರು! ಗಂಡ, ಮಗನ ಹೆಸರು ಟ್ಯಾಟೂ ಹಾಕಿಸಿಕೊಂಡ ನಟಿ

    ಕನ್ನಡದಲ್ಲಿ 'ಆಪ್ತಮಿತ್ರ' ಸಿನಿಮಾ ಹಿಟ್ ಆದಮೇಲೆ ಇದೇ ಸಿನಿಮಾವನ್ನು ತಮಿಳಿನಲ್ಲಿ ಚಂದ್ರಮುಖಿ ಹೆಸರಿನಲ್ಲಿ ರಜನಿಕಾಂತ್‍ಗೆ ಸಿನಿಮಾ ಮಾಡಿದ್ದರು ಪಿ. ವಾಸು. 'ಚಂದ್ರಮುಖಿ' ಕೂಡ ಬಾಕ್ಸ್ ಆಫೀಸ್‍ನಲ್ಲಿ ಹಿಟ್ ಆಗಿತ್ತು.
    Published by:Savitha Savitha
    First published: