ಯೋಗವು ಒಮ್ಮೆ ಬರುವುದು ನಮಗೆ.. ಯೋಗ್ಯತೆ ಒಂದೇ ಉಳಿವುದು ಕೊನೆಗೆ.. ಸೂರ್ಯನೊಬ್ಬ.. ಚಂದ್ರನೊಬ್ಬ.. ಈ ರಾಜನೂ ಒಬ್ಬ ಹೌದು ನಮ್ಮ ರಾಜ ಅಂದರೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್(Power Star Puneeth Rajkumar) ಕೂಡ ಒಬ್ಬರೇ. ಅವರಿಗೆ ಅವರೇ ಸಾಟಿ. ಅವರು ನಮ್ಮೊಂದಿಗೆ ಇಲ್ಲ ಎನ್ನುವ ನೋವು(Pain) ಇಂದಿಗೂ ಕಿಂಚಿತ್ತು ಕಡಿಮೆಯಾಗಿಲ್ಲ. ಇಂದಿಗೂ ಅಪ್ಪು ನೆನಪಾದರೆ ಕಣ್ಣಂಚಲ್ಲಿ ನಮಗೆ ತಿಳಿಯದ ಹಾಗೇ ನೀರು ಬಂದಿರುತ್ತೆ. ಅಪ್ಪು ಇಲ್ಲ ಅನ್ನುವ ವಿಚಾರ ತಿಳಿದ ಮೇಲೆ ಕರುನಾಡಿನ ಪ್ರತಿಮನೆಯಲ್ಲಿ ಶೋಕ ಆವರಿಸಿಕೊಂಡಿತ್ತು. ಇಂದಿಗೂ ಅಪ್ಪು(Appu) ಅವರ ಕೆಲಸಗಳನ್ನು ನೆನೆದು ಅಭಿಮಾನಿಗಳು(Fans) ಕಣ್ಣೀರಿಡುತ್ತಿದ್ದಾರೆ. ರಾಜ್ಯದ ಪ್ರತಿಯೊಂದು ಬೀದಿಗಳಲ್ಲಿ ಅಪ್ಪು ಅವರ ಬ್ಯಾನರ್ಗಳು ಹಾಕಲಾಗಿದೆ. ಅದನ್ನು ಕಂಡಾಗೆಲ್ಲ ದುಖಃ ಉಮ್ಮಳಿಸಿ ಬರುತ್ತಿದೆ. ಇಷ್ಟೆಲ್ಲಾ ಒಳ್ಳೆ ಕೆಲಸಗಳನ್ನು ಮಾಡುತ್ತಿದ್ದರು, ಅಪ್ಪು ಎಂದಿಗೂ ಎಲ್ಲಿಯೂ ಈ ಬಗ್ಗೆ ಹೇಳಿಕೊಂಡಿರಲಿಲ್ಲ. ಆ ವಿಚಾರಗಳು ತಿಳಿದ ಮೇಲೆ ಅಪ್ಪು ಅವರನ್ನು ಒಮ್ಮೆ ಅಪ್ಪಿಕೊಳ್ಳುವ ಅವಕಾಶ ಕಲ್ಪಿಸು ದೇವರೇ(God) ಅಂತ ಅಭಿಮಾನಿಗಳು ಬೇಡಿಕೊಳ್ಳುತ್ತಿದ್ದಾರೆ. ಆದರೆ, ಅಪ್ಪು ಬಾರದ ಲೋಕಕ್ಕೆ ಹೋಗಿದ್ದಾರೆ. ಅಪ್ಪು ಅಭಿಮಾನಿಯೊಬ್ಬರು ಶಬರಿಮಲೆ(Sabarimala) ದೇಗುದಲ್ಲಿ ಅಪ್ಪು ಜಪ ಮಾಡಿದ್ದಾರೆ. ಹೌದು, ತಮ್ಮೊಂದಿಗೆ ಅಪ್ಪು ಅವರ ಫೋಟೋ(Appu Photo)ವನ್ನು ಹಿಡಿದು ಶಬರಿಮಲೆ ದೇಗುಲಕ್ಕೆ ತೆರಳಿದ್ದಾರೆ.
ಅಪ್ಪು ಫೋಟೋ ಹಿಡಿದು ಮೆಟ್ಟಿಲು ಹತ್ತಿದ ಅಭಿಮಾನಿ
ಶಬರಿಮಲೆ ಅಯ್ಯಪ್ಪ ದೇವರು ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ಈ ದೇಗುಲಕ್ಕೆ ಹೋಗಬೇಕೆಂದರೆ ಕೆಲವು ಆಚರಣೆಗಳಿಗೆ ಅದನ್ನು ಪಾಲಿಸಿಯೇ ಹೋಗಬೇಕು. ಇಲ್ಲೂ ಕೂಡ ಅಪ್ಪು ಅಭಿಮಾನಿಯೊಬ್ಬರು ಅಪ್ಪು ಫೋಟೋವನ್ನು ಹಿಡಿದು ಅಯ್ಯಪ್ಪ ದೇಗಲಕ್ಕೆ ಬೇಟಿ ನೀಡಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ. ಅಪ್ಪು ಅಭಿಮಾನಿಯೊಬ್ಬರು ಪೋಟೋವನ್ನು ಹಿಡಿದು ದೇಗಲದ 18 ಮೆಟ್ಟಿಲು ಹತ್ತಿ ಅಯ್ಯಪ್ಪನ ದರ್ಶನ ಮಾಡಿದ್ದಾರೆ. ಈ ದೃಶ್ಯವನ್ನು ನೋಡುತ್ತಿದ್ದರೆ ನಿಮ್ಮ ಕಣ್ಣು ನಿಮಗೆ ತಿಳಿಯದ ಹಾಗೇ ತೇವವಾಗುತ್ತೆ.
ಇದನ್ನು ಓದಿ : ಅಪ್ಪು ಕನಸು ನನಸು ಮಾಡುತ್ತಿರೋ ಅಶ್ವಿನಿ: ಪುನೀತ್ ಪತ್ನಿ ಕಡೆಯಿಂದ ಬಿಗ್ ಅನೌನ್ಸ್ಮೆಂಟ್!
ಅಯ್ಯಪ್ಪ ಭಕ್ತರು ರಾಜ್ ಕುಟುಂಬ!
ಕನ್ನಡ ಚಿತ್ರರಂಗದ ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರು ಅಯ್ಯಪ್ಪನ ಭಕ್ತರಾಗಿದ್ದರು. ಕೊನೆಯವರೆಗೂ ಮಾಲೆ ಧರಿಸಿ ಅಯ್ಯಪ್ಪನ ದರ್ಶನ ಮಾಡುವುದು ತಪ್ಪಿಸುತ್ತಿರಲಿಲ್ಲ. ಅವರ ಮಕ್ಕಳೂ ಅಯ್ಯಪ್ಪನ ವ್ರತ ಪಾಲಿಕೊಂಡು ಬಂದಿದ್ದರು. ರಾಜ್ ಕುಮಾರ್ ಅವರ ಅಯ್ಯಪ್ಪ ಸ್ವಾಮಿ ಮೇಲಿನ ನಂಬಿಕೆ ಅವರ ಮೂವರು ಮಕ್ಕಳಿಗೂ ಇದೆ. ಮಕ್ಕಳು ಆಗಾಗ ಅಯ್ಯಪ್ಪನ ಮಾಲೆ ಧರಿಸಿ ಕಟ್ಟುನಿಟ್ಟಾದ ವ್ರತ ಮಾಡಿ ಶಬರಿಮಲೆಗೆ ಹೋಗಿ ಬರುತ್ತಿದ್ದರು . ಶಿವರಾಜ್ ಕುಮಾರ್, ಪುನೀತ್ ರಾಜ್ಕುಮಾರ್ ಇಬ್ಬರೂ ಪ್ರತಿವರ್ಷ ಅಯ್ಯಪ್ಪನ ದರ್ಶನ ಮಾಡುತ್ತಿದ್ದರು. ಆದರೆ, ಈ ಬಾರಿ ಅವರ ಅಭಿಮಾನಿಯೊಬ್ಬ ಅಪ್ಪು ಫೋಟೋ ಹಿಡಿದು 18 ಮೆಟ್ಟಿಲು ಹತ್ತಿ ದೇವರ ದರ್ಶನ ಮಾಡಿದ್ದಾರೆ.
ಇದನ್ನು ಓದಿ : ಫೈಟ್ ಸೀನ್ಗೆ ಎಂದೂ Dupe ಬಳಸೇ ಇಲ್ಲ ಪವರ್ ಸ್ಟಾರ್, ಅವರ ಆಕ್ಷನ್ ನೋಡಿ Allu Arjun ಕೂಡಾ ಶಾಕ್ ಆಗಿದ್ರಂತೆ!
ಅಪ್ಪು ಸಾವಿನಿಂದ ಮನನೊಂದಿದ್ದ ಮತ್ತೊಬ್ಬ ಅಭಿಮಾನಿ ಆತ್ಮಹತ್ಯೆ
ಅಪ್ಪು ಸಾವಿನ ಬಳಿಕ ಖಿನ್ನತೆಗೊಳಗಾಗಿ ಮಂಕಾಗಿದ್ದ ಅಭಿಮಾನಿ ಮಯೂರ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಸನದ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾಗಿದ್ದ ದಿವಂಗತ ಹಾ.ರಾ.ನಾಗರಾಜ್ ಪುತ್ರ ಮಯೂರ.ಈ ಹಿಂದೆ ಪುನೀತ್ ರಾಜಕುಮಾರ್ ಅವರನ್ನು ಹಲವು ಭಾರಿ ಮಯೂರ ಭೇಟಿಯಾಗಿದ್ದರು. ಅಪ್ಪು ಅಂದರೆ ಅವರಿಗೆ ಪಂಚಪ್ರಾಣ.ಅವರ ಸಾವಿನ ಬಳಿಕ ಆಘಾತಗೊಂಡು ಮಾನಸಿಕವಾಗಿ ನೊಂದಿದ್ದರು. ನಿತ್ಯ ಅಪ್ಪುವಿನ ಹತ್ತಾರು ವಿಡಿಯೋಗಳನ್ನು ಸ್ಟೇಟಸ್ ಹಾಕಿಕೊಂಡು ದುಖಃ ಹೊರಹಾಕುತ್ತಿದ್ದರು. ಆದರೆ ನಿನ್ನೆ ರಾತ್ರಿ ಹಾಸನದ ರಾಜಕುಮಾರ ನಗರದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ