- ನ್ಯೂಸ್18 ಕನ್ನಡ
ಬೆಂಗಳೂರು(ಮಾ. 21): ಕಿಶೋರ್ ಮೂಡಬಿದ್ರೆ ನಿರ್ದೇಶನದ 'ಅಪ್ಪೆ ಟೀಚರ್' ತುಳು ಸಿನಿಮಾ ಇದೇ ಶುಕ್ರವಾರ ತೆರೆಗೆ ಅಪ್ಪಳಿಸುತ್ತಿದೆ. ಮೂರು ತಿಂಗಳ ನಂತರ ತೆರೆಕಾಣುತ್ತಿರುವ ಮೊದಲ ಕೋಸ್ಟಲ್ವುಡ್ ಸಿನಿಮಾವಾಗಿರುವ ಅಪ್ಪೆ ಟೀಚರ್ ಭಾರೀ ನಿರೀಕ್ಷೆ ಮೂಡಿಸಿದೆ. ಕಿಶೋರ್ ಮೂಡಬಿದ್ರೆ ಅವರ ಚೊಚ್ಚಲ ನಿರ್ದೇಶನದ ಈ ಸಿನಿಮಾದ ಟ್ರೇಲರ್ ಕೂಡ ಈಗಾಗಲೇ ರಿಲೀಸ್ ಆಗಿ ಜೋರು ಸದ್ದು ಮಾಡುತ್ತಿದೆ. "ಮಾಮಿನಾ ಮಗಳೆನಾ" ಸೇರಿದಂತೆ ಈ ಸಿನಿಮಾದ ಹಾಡುಗಳೂ ಜನಪ್ರಿಯಗೊಂಡಿವೆ. ನಿರ್ದೇಶಕ ಕಿಶೋರ್ ಅವರೇ ಕಥೆ, ಚಿತ್ರಕಥೆ ಸಿದ್ಧ ಮಾಡಿದ್ದಾರೆ. ಇದು ಪಕ್ಕಾ ಕಾಮಿಡಿ ಸಿನಿಮಾವಾಗಿದ್ದು, 100 ಪರ್ಸೆಂಟ್ ಎಂಟರ್ಟೈನ್ಮೆಂಟ್ ಕೊಡುತ್ತೆ ಎಂತಾರೆ ನಿರ್ದೇಶಕರು.
ರತ್ನಾಕರ್ ಕಾಮತ್ ನಿರ್ಮಾಣ, ಉದಯ ಲೀಲಾ ಛಾಯಾಗ್ರಹಣ, ಪ್ರದೀಪ್ ನಾಯಕ್ ಸಂಕಲನ, ವಾಣಿಲ್ ವೈಗಾಸ್ ಸಂಗೀತ ಈ ಚಿತ್ರಕ್ಕಿದೆ. ಸುನೀಲ್, ನಿರೀಕ್ಷಾ ಶೆಟ್ಟಿ, ನವೀನ್ ಪಡೀಲ್, ಅರವಿಂದ್ ಬೋಳಾರ, ಕಾಮಿಡಿ ಕಿಲಾಡಿ ಹಿತೇಶ್ ಮೊದಲಾದವರು ಅಭಿನಯಿಸಿದ್ದಾರೆ. ಸಾಕಷ್ಟು ಹೊಸಮುಖಗಳಿಗೆ ಚಿತ್ರದಲ್ಲಿ ಅವಕಾಶ ಕೊಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ