ಕಡೆಗೂ ಕನ್ನಡಕ್ಕೆ ಬಂದ 'ಮಾಲ್ಗುಡಿ ಡೇಸ್​': ಬೆಳ್ಳಿ ತೆರೆಗೆ ಕಥೆಯಾದ ಕಿರುತೆರೆಯ ಖ್ಯಾತ ಸರಣಿ..!

Anitha E | news18
Updated:February 5, 2019, 6:14 PM IST
ಕಡೆಗೂ ಕನ್ನಡಕ್ಕೆ ಬಂದ 'ಮಾಲ್ಗುಡಿ ಡೇಸ್​': ಬೆಳ್ಳಿ ತೆರೆಗೆ ಕಥೆಯಾದ ಕಿರುತೆರೆಯ ಖ್ಯಾತ ಸರಣಿ..!
'ಮಾಲ್ಗುಡಿ ಡೇಸ್​' ಸಿನಿಮಾದ ಟೈಟಲ್​ ಬಿಡುಗಡೆ ಮಾಡಿದ ನಟ ಪುನೀತ್​ ರಾಜ್​ಕುಮಾರ್​
Anitha E | news18
Updated: February 5, 2019, 6:14 PM IST
'ಮಾಲ್ಗುಡಿ' ಎಂಬ ಹೆಸರು ಕೇಳಿದ ಕೂಡಲೇ ನೆನಪಾಗೋದು ನಟ-ನಿರ್ದೇಶಕ ಶಂಕರ್​ನಾಗ್. ಅವರ ನಿರ್ದೇಶನದ ಖ್ಯಾತ ಧಾರಾವಾಹಿ 'ಮಾಲ್ಗುಡಿ ಡೇಸ್'. ಖ್ಯಾತ ಕಾದಂಬರಿಕಾರ ಹಾಗೂ ಮೈಸೂರಿನವರೇ ಆಗಿದ್ದ ಆರ್​.ಕೆ. ನಾರಾಯಣ್ ಅವರ ಕಥೆಗಳನ್ನು ಅದ್ಭುತವಾಗಿ ಜೋಡಿಸಿ 'ಮಾಲ್ಗುಡಿ ಡೇಸ್​' ಹೆಸರಲ್ಲಿ ತೆರೆ ಮೇಲೆ ತರಲಾಗಿತ್ತು.ಮಾಲ್ಗುಡಿ ಅನ್ನೋ ಪುಟ್ಟ ಹಳ್ಳಿಯ ಜೀವನದ ಚಿತ್ರಣವನ್ನು'ಮಾಲ್ಗುಡಿ ಡೇಸ್​'ನಲ್ಲಿ ಬಲು ಸುಂದರವಾಗಿ ಕಟ್ಟಿಕೊಟ್ಟಿದ್ದರು ಶಂಕರ್​ನಾಗ್​. ಇನ್ನು ಕನ್ನಡದ ಅಭಿಮಾನಿಗಳು 'ಮಾಲ್ಗುಡಿ ಡೇಸ್' ಸರಣಿ ಕನ್ನಡದಲ್ಲಿ ಯಾವಾಗ ಬರುತ್ತೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಇದಕ್ಕೆ ಈಗ ಉತ್ತರ ಸಿಕ್ಕಿದೆ.'ಮಾಲ್ಗುಡಿ ಡೇಸ್'​ ಎಂಬ ಎವರ್​ ಟ್ರೆಂಡಿಗ್ ಧಾರಾವಾಹಿಯ ಹೆಸರನ್ನೇ ಇದೀಗ ಸಿನಿಮಾವೊಂದಕ್ಕೆ ಶೀರ್ಷಿಕೆಯಾಗಿ ಇಡಲಾಗಿದೆ. ನಟ ವಿಜಯ್​ ರಾಘವೇಂದ್ರ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅಪ್ಪೆ ಟೀಚರ್​ ಖ್ಯಾತಿಯ  ನಿರ್ದೇಶಕ ಕಿಶೋರ್ ಮೂಡಬಿದ್ರೆ ಇದಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ.

ಈ ಸಿನಿಮಾದ ಪ್ರಮುಖ ವಿಷಯವೆಂದರೆ ಇದರಲ್ಲಿ ಬಹುತೇಕ 'ಮಾಲ್ಗುಡಿ ಡೇಸ್​' ಕಥೆಗಳನ್ನೇ ಹೆಣೆಯಲಾಗಿದ್ದು, ಫೆಬ್ರವರಿಯಲ್ಲಿ‌ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.
Loading...

ಇದನ್ನೂ ಓದಿ: ಅಮೆಜಾನ್​ ಪ್ರೈಮ್​ನಲ್ಲಿ 'ಕೆ.ಜಿ.ಎಫ್​': 18 ಕೋಟಿಗೆ ಮಾರಾಟವಾಗಿದೆ ಈ ಸಿನಿಮಾದ ಡಿಜಿಟಲ್​ ಹಕ್ಕು..!

ಇನ್ನು ಚಿತ್ರದ ಟೈಟಲ್​ನ್ನು ಪವರ್​ಸ್ಟಾರ್ ಪುನೀತ್​ ರಾಜ್​​​​​​​​​​​​​​​​​​​​​ಕುಮಾರ್​ ಬಿಡುಗಡೆ ಮಾಡುವ ಮೂಲಕ ಸಂಬಂಧಿ ವಿಜಯ್ ರಾಘವೇಂದ್ರ ಅವರಿಗೆ ಬೆಂಬಲ ನೀಡಿದ್ದಾರೆ. ಕೆ. ರತ್ನಾಕರ್ ಕಾಮತ್ ಅವರ ನಿರ್ಮಾಣದ ಈ ಸಿನಿಮಾ ಸದ್ಯದಲ್ಲೇ 'ಮಾಲ್ಗುಡಿ ಡೇಸ್'ನಂತೆ ಚಂದನವದಲ್ಲಿ ಸದ್ದು ಮಾಡಲಿದೆ.

ಕಾಮಿಡಿ ಕಿಂಗ್​ ಕಪಿಲ್​ ಶರ್ಮಾ ಜತೆ ಕಿಚ್ಚ ಸುದೀಪ್​
First published:February 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626