News18 India World Cup 2019

ಹಲವು ವರ್ಷಗಳ ನಂತರ ಬೆಳ್ಳಿತೆರೆಗೆ ನಟಿ ಅಪರ್ಣಾ

news18
Updated:August 25, 2018, 3:29 PM IST
ಹಲವು ವರ್ಷಗಳ ನಂತರ ಬೆಳ್ಳಿತೆರೆಗೆ ನಟಿ ಅಪರ್ಣಾ
news18
Updated: August 25, 2018, 3:29 PM IST
ನ್ಯೂಸ್ 18ಕನ್ನಡ

ನೀವೆಲ್ಲಾ ಸೃಜನ್ ಲೋಕೇಶ್ ನಡೆಸಿಕೊಡುತ್ತಿರುವ ಮಜಾ ಟಾಕೀಸ್ ಕಾರ್ಯಕ್ರಮವನ್ನು ನೋಡಿಯೇ ಇರುತ್ತೀರಿ. ಅವರಲ್ಲಿ ತುಂಬಾ ಗಮನ ಸೆಳೆಯುತ್ತಿರುವವರಲ್ಲಿ ಅಪರ್ಣಾ ಅವರೂ ಸಹ ಪ್ರಮುಖರು . ಕಳೆದ ದಶಕದ ಮಹತ್ತರ ಸಾರ್ವಜನಿಕ ಕಾರ್ಯಕ್ರಮಗಳ ಖ್ಯಾತ ನಿರೂಪಕಿಯಾಗಿ ತಮ್ಮ ವೃತ್ತಿಯನ್ನು ನಿರೂಪಿಸಿಕೊಂಡ ಅಪರ್ಣಾ ಕನ್ನಡವನ್ನು ಅಚ್ಚು ಕಟ್ಟಾಗಿ ಮಾತನಾಡುವ ‘ಕನ್ನಡತಿ’ ಎಂದು ಪ್ರಖ್ಯಾತಿ ಪಡೆದಿದ್ದಾರೆ.

ಈಗಾಗಲೇ ತನ್ನ ಮೊದಲ ನೋಟದಿಂದ ಗಮನ ಸೆಳೆದಿರುವ ‘ಗ್ರಾಮಾಯಣ’ ಚಿತ್ರವನ್ನು ರಂಗಭೂಮಿಯ ದೇವನೂರು ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ. ವಿನಯ್ ರಾಜ್ ಕುಮಾರ್ ಅಭಿನಯಿಸುತ್ತಿರುವ ನಾಲ್ಕನೆಯ ಚಿತ್ರ ಇದಾಗಿದ್ದು, ಈ ಚಿತ್ರದಲ್ಲಿ ಅಪರ್ಣಾರವರು ನಾಯಕನ ತಾಯಿಯ ಪಾತ್ರವನ್ನು ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ತಾಯಿಯ ಪಾತ್ರವೇ ಕೇಂದ್ರಬಿಂದುವಾಗಿದೆ.

ಬಹಳ ವರ್ಷಗಳ ನಂತರ ತೆರೆಗೆ

ಅಪರ್ಣರವರು 1984 ರಲ್ಲಿ ತೆರೆಗೆ ಬಂದಿದ್ದ “ಮಸಣದ ಹೂವು” ಚಿತ್ರದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರದ ನಂತರ ‘ಇನ್ಸಪೆಕ್ಟರ್ ವಿಕ್ರಮ್’, ‘ನಮ್ಮೂರ ರಾಜಾ’, ‘ಒಂದಾಗಿಬಾಳು’ ಚಿತ್ರಗಳಲ್ಲಿ ನಟಿಸಿದ್ದಾರೆ. ನಂತರ ಸಿನಿಮಾ ತೊರೆದು ಆಕಾಶವಾಣಿ, ಧಾರಾವಾಹಿಗಳಲ್ಲಿ ಮತ್ತು ಕಾರ್ಯಕ್ರಮಗಳ ನಿರೂಪಣೆಗಳಲ್ಲಿ ತೊಡಗಿಕೊಂಡರು. ಈ ನಡುವೆ ಬಿಗ್ ಬಾಸ್ ಸ್ಪರ್ಧೆಯಲ್ಲಿಯೂ ಭಾಗವಹಿಸಿದ್ದರು.

‘ಗ್ರಾಮಾಯಣ’ ಚಿತ್ರದಲ್ಲಿ ನಟ ವಿನಯ್ ರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ಬೆಂಗಳೂರಿನ ಅಮೃತಾ ಅಯ್ಯರ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಎನ್ ಎಲ್ ಎಲ್ ಮೂರ್ತಿ ನಿರ್ಮಿಸುತ್ತಿದ್ದು, ಸೆಪ್ಟೆಂಬರ್ 9 ಕ್ಕೆ ಚಿತ್ರದ ಟೀಸರ್ ಬಿಡುಗಡೆಯಾಗುತ್ತದೆ. ಚಿತ್ರಕ್ಕೆ ಪೂರ್ಣ ಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ಮಾಡಿದ್ದಾರೆ.
Loading...

 

 
First published:August 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...