ಅನುಷ್ಕಾ ಶೆಟ್ಟಿ ಭಾವನಾತ್ಮಕ ಪತ್ರ; ವಿಶೇಷ ವ್ಯಕ್ತಿಗಳಿಗೆ ಹೃದಯ ಪೂರ್ವಕ ಧನ್ಯವಾದ ತಿಳಿಸಿದ ಕನ್ನಡತಿ

ಕೊರೋನಾ ಮುಗಿದ ನಂತರ ಹೇಗೆ ಬದುಕಬೇಕು ಎಂಬುದನ್ನು ಅನುಷ್ಕಾ ಶೆಟ್ಟಿ ತಮ್ಮ ಪತ್ರದಲ್ಲಿ ಬರೆದುಕೊಂಡಿದ್ದಾರೆ

ಅನುಷ್ಕಾ ಶೆಟ್ಟಿ ಲಾಕ್​ಡೌನ್​ನಲ್ಲಿ ಕಡೆಗೂ ಖುಷಿಯ ವಿಷಯ ಹಂಚಿಕೊಂಡಿದ್ದಾರೆ.

ಅನುಷ್ಕಾ ಶೆಟ್ಟಿ ಲಾಕ್​ಡೌನ್​ನಲ್ಲಿ ಕಡೆಗೂ ಖುಷಿಯ ವಿಷಯ ಹಂಚಿಕೊಂಡಿದ್ದಾರೆ.

 • Share this:
  ಕರೋನಾ ವಿರುದ್ಧ ಹೋರಾಟಕ್ಕೆ ಅನೇಕ ನಟಿ-ನಟಿಯರುಕೈ ಜೋಡಿಸಿದ್ದಾರೆ.  ದೇಣಿಗೆಯನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಇನ್ನು ಕೆಲವರು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇದೀಗ ಕನ್ನಡತಿ ಅನುಷ್ಕಾ ಶೆಟ್ಟಿ ಪತ್ರವೊಂದನ್ನು ಬರೆಯುವ ಮೂಲಕ ಕೊರೋನಾ ವಿರುದ್ಧ ಹೋರಾಡುತ್ತಿರುವ ವಿಶೇಷ ವ್ಯಕ್ತಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

  ಅನುಷ್ಕಾ ಶೆಟ್ಟಿ ಬರೆದಿರುವ ಆ ಪತ್ರದಲ್ಲಿ ‘ಬೇರೆಯಾಗಿದ್ದೇವೆ, ನಾವೆಲ್ಲರು ಬೇರೆಯಾಗಿದ್ದೇವೆ ಎಂದು ಅನಿಸುತ್ತಿದೆ… ಆದರೆ ನಾವೆಲ್ಲರು ಒಟ್ಟಾಗಿ ನಿಂತಿದ್ದೇವೆ.ಇಡೀ ಜಿವನಕ್ಕೆ ಹೊಸ ಸ್ವರೂಪ ಸಿಕ್ಕಿದಂತಿತೆ. ಈ ಹಿಂದೆ ಕಲಿತದ್ದನೆಲ್ಲ ಹೊಸದಾಗಿ ಕಲಿಯಬೇಕಾಗಿ ಬಂದಿದೆ. ಹೊಸ ದೃಷ್ಠಿಕೋನ ಮೂಡಿದೆ. ಅಸಾಧ್ಯವೆಂಬುದು ಸಾಧ್ಯವಾಗಿದೆ. ಸಾಧ್ಯವೆಂಬುದು ಕಣ್ಣರೆಯಾಗಿದೆ. ಭೌಗೋಳಿಕವಾಗಿ ದೂರವಾಗಿದ್ದೇವೆ ಎಂದು ಅಂದುಕೊಂಡರು ಹೃದಯಲ್ಲಿನ ಪ್ರೀತಿ ಮತ್ತು ಪ್ರಾರ್ಥನೆಯಿಂದ ನಾವು ಜೊತೆಯಾಗಿದ್ದೇವೆ ಎಂದು ಅನುಷ್ಕಾ ಬರೆದುಕೊಂಡಿದ್ದಾರೆ.

  ಇಂತಹ ಪರಿಸ್ಥಿತಿಯಲ್ಲಿ ನಮಗಾಗಿ ಹೋರಾಡುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೂ ನನ್ನ ಪ್ರೀತಿ ಮತ್ತು ಧನ್ಯವಾದ ಸಲ್ಲಬೇಕು. ಅದನ್ನು ವ್ಯಕ್ತಪಡಿಸಲು ಸೂಕ್ತ ಪದವೇ ಸಿಗುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ ನಟಿ ಅನುಷ್ಕಾ ಶೆಟ್ಟಿ.

  ಕೊರೋನಾ ಮುಗಿದ ನಂತರ ಹೇಗೆ ಬದುಕಬೇಕು ಎಂಬುದನ್ನು ಅನುಷ್ಕಾ ಶೆಟ್ಟಿ ತಮ್ಮ ಪತ್ರದಲ್ಲಿ ಬರೆದುಕೊಂಡಿದ್ದಾರೆ. ‘ ಈ ಸಮಸ್ಯೆ ಮುಗಿದ ನಂತರ ನಮಗೆಲ್ಲರಿಗೂ ನಮ್ಮದೇ ಆದ ಕರ್ತವ್ಯಗಳಿವೆ ಎಂಬುದನ್ನು ಅರಿತಿರಬೇಕು. ಯಾರು ಇಲ್ಲಿ ಮೇಲು-ಕೀಳು ಇಲ್ಲ. ಮಾನವೀಯತೆ ಮೆರೆಯುತ್ತಾ ಬದುಕೋಣ ಎಂದು ಅಭಿಮಾನಿಗಳಿಗೆ ಭಾವುಕದ ಪತ್ರ ಬರೆದಿದ್ದಾರೆ ನಟಿ ಅನುಷ್ಕಾ ಶೆಟ್ಟಿ.

  ಇದನ್ನೂ ಓದಿ: ಕೆ.ಜಿ.ಎಫ್ ಚಿತ್ರದ ಅಭಿಮಾನಿಗಳಿಗೆ ಸರ್​​ಪ್ರೈಸ್​​ ಕೊಟ್ಟ ಪ್ರಶಾಂತ್ ನೀಲ್; ಟ್ವಿಟ್ಟರ್​​​ನಲ್ಲಿ ಟ್ಯೂನ್ ರಿಲೀಸ್!

  ಇದನ್ನೂ ಓದಿ: ಕೊರೋನಾ ವೈರಸ್​ ಕಡಿಮೆಯಾದ ನಂತರ ಈ ನಟಿಯ ಮೊದಲ ಆಸೆ ಏನುಗೊತ್ತಾ?
  First published: