Anushka Shetty: ದಸರಾ ಹಬ್ಬಕ್ಕೆ ಕನ್ನಡದಲ್ಲೇ ಶುಭ ಕೋರಿದ ಅನುಷ್ಕಾ ಶೆಟ್ಟಿ..!

ದಸರಾ ಹಬ್ಬಕ್ಕೂ ನಟಿ ಅನುಷ್ಕಾ ಶೆಟ್ಟಿ ಕನ್ನಡದಲ್ಲೇ ಶುಭ ಕೋರಿದ್ದಾರೆ. ಇನ್ನು ಈ ನಟಿ ಕನ್ನಡದಲ್ಲಿ ವಿಶ್ ಮಾಡಿರುವುದು ನಿಜಕ್ಕೂ ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತಿದೆ. 

ಅನುಷ್ಕಾ ಶೆಟ್ಟಿ

ಅನುಷ್ಕಾ ಶೆಟ್ಟಿ

  • Share this:
ಅನುಷ್ಕಾ ಶೆಟ್ಟಿ ಕನ್ನಡಕ್ಕಿಂತ ಟಾಲಿವುಡ್​ನಲ್ಲೇ ಇವರ ಹೆಸರು ಕೇಳಿ ಬರುತ್ತಿರುತ್ತದೆ. ಟಾಲಿವುಡ್​ನ ಸ್ಟಾರ್​ ನಟಿಯರಲ್ಲಿ ಒಬ್ಬರಾಗಿ ಅನುಷ್ಕಾ ಶೆಟ್ಟಿಗೆ ಕಳೆದ ಕೆಲ ಸಮಯದಿಂದ ಸಿನಿಮಾ ಅವಕಾಶಗಳು ಕಡಿಮೆಯಾಗಿದ್ದರೂ, ಈಗ ಮತ್ತೆ ಅವಕಾಶಗಳು ಅವರನ್ನು ಅರಸಿ ಬರುತ್ತಿವೆ. ಇತ್ತೀಚೆಗಷ್ಟೆ ಅವರ ಅಭಿನಯದ ನಿಶ್ಯಬ್ದಂ ಸಿನಿಮಾ ಒಟಿಟಿ ಮೂಲಕ ರಿಲೀಸ್​ ಆಗಿದೆ. ಆದರೆ ಊಹಿಸಿದಷ್ಟು ಈ ಚಿತ್ರಕ್ಕೆ ಪ್ರತಿಕ್ರಿಯೆ ಸಿಗಲಿಲ್ಲ. ಇನ್ನು ಇತ್ತೀಷೆಗಷ್ಟೆ ಅನುಷ್ಕಾ ಶೆಟ್ಟಿ ಟ್ವಿಟರ್​ಗೂ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ಇನ್​ಸ್ಟಾಗ್ರಾಂನಲ್ಲಿದ್ದ ಸ್ವೀಟಿ ನಿಶ್ಯಬ್ಧಂ ಸಿನಿಮಾ ರಿಲೀಸ್​ ಆಗುತ್ತಿದ್ದಂತೆಯೇ ಟ್ವಿಟರ್​ ಖಾತೆ ತೆರೆದಿದ್ದಾರೆ. ಇನ್ನು   ಕರಾವಳಿಯ ಕನ್ನಡತಿ ಆದರೂ ಇವರಿಗೆ ಕನ್ನಡ ನೆಲದಲ್ಲಿ ಅವಕಾಶಗಳು ಸಿಗಲಿಲ್ಲ. ಆದರೂ ಹುಟ್ಟಿ ಬೆಳೆದ ನಾಡಿನ ಬಗ್ಗೆ ಇವರಿಗೆ ಇರುವ ಪ್ರೀತಿ ಕೊಂಚವೂ ಕಡಿಮೆಯಾಗಿಲ್ಲ. ಇದೇ ಕಾರಣದಿಂದ ಅನುಷ್ಕಾ ಶೆಟ್ಟಿ ಆಗಾಗ  ಸಾಮಾಜಿಕ ಜಾಲತಾಣದಲ್ಲಿ ಕನ್ನಡದಲ್ಲಿ ಪೋಸ್ಟ್​ ಮಾಡುವ ಮೂಲಕ  ಕನ್ನಡದ ಅಭಿಮಾನಿಗಳನ್ನು ಸಂತೋಷ ಪಡಿಸುತ್ತಿರುತ್ತಾರೆ. 

ಹುಟ್ಟಿ ಬೆಳೆದಿದ್ದು ಕನ್ನಡ ನೆಲದಲ್ಲಾದರೂ ವೃತ್ತಿ ಜೀವನಕ್ಕೆ ಕೈ ಬೀಸಿ ಕರೆದದ್ದು ಪಕ್ಕದ ರಾಜ್ಯ. ಟಾಲಿವುಡ್​ನಲ್ಲಿ ಸ್ಟಾರ್​ ನಟಿಯಾಗಿರುವ ಅನುಷ್ಕಾರಿಗೆ ಕನ್ನಡ, ಕನ್ನಡಿಗರು, ಕರ್ನಾಟಕ ಎಂದರೆ ಎಲ್ಲಿಲ್ಲದ ಪ್ರೀತಿ. ಅದಕ್ಕೆ ಅವರು ಆಗಾಗ ಮಾಡುವ ಪೋಸ್ಟ್​ಗಳೇ ಉದಾಹರಣೆ. ತಮ್ಮ ಅಮ್ಮನ ಹುಟ್ಟುಹಬ್ಬಕ್ಕೂ ಅನುಷ್ಕಾ ಕನ್ನಡದಲ್ಲೇ ಪೋಸ್ಟ್​ ಮಾಡಿದ್ದರು.
View this post on Instagram

#ಕನ್ನಡರಾಜ್ಯೋತ್ಸವ to all the people of #Karnataka 💛❤️


A post shared by AnushkaShetty (@anushkashettyofficial) on


ಈಗ ದಸರಾ ಹಬ್ಬಕ್ಕೂ ನಟಿ ಅನುಷ್ಕಾ ಶೆಟ್ಟಿ ಕನ್ನಡದಲ್ಲೇ ಶುಭ ಕೋರಿದ್ದಾರೆ. ಇನ್ನು ಈ ನಟಿ ಕನ್ನಡದಲ್ಲಿ ವಿಶ್ ಮಾಡಿರುವುದು ನಿಜಕ್ಕೂ ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತಿದೆ.
View this post on Instagram

Wishing you all a very #HappyDussehra ದಸರಾ ಹಬ್ಬದ ಶುಭಾಶಯಗಳು   Stay Safe ...Stay Blessed 🤗


A post shared by AnushkaShetty (@anushkashettyofficial) on


ಕನ್ನಡ ನಾಡಿನಲ್ಲೇ ಹುಟ್ಟಿ, ಇಲ್ಲೇ ವೃತ್ತಿ ಜೀವನ ಆರಂಭಿಸಿದವರಲ್ಲಿ ಕೆಲವರು ಕನ್ನಡ ಮಾತನಾಡುವುದೇ ಇಲ್ಲ. ಬದಲಿಗೆ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಲಾರಂಭಿಸುತ್ತಿದ್ದಂತೆಯೇ ಆ ಭಾಷೆಯನ್ನು ಕಲಿತು ಮಾತನಾಡಲಾರಂಭಿಸುತ್ತಾರೆ. ಇಂತಹ ನಟಿಯರ ನಡುವೆ ಅನುಷ್ಕಾ ಶೆಟ್ಟಿ  ಅವರಿಗೆ ಕನ್ನಡ ಚಿತ್ರರಂಗದಿಂದ ಅವಕಾಶ ಸಿಗದಿದ್ದರೂ ಕನ್ನಡವನ್ನು ಗೌರವಿಸುತ್ತಾರೆ. ಅವರ ಈ ಗುಣ ಕನ್ನಡಿಗರಿಗೆ ತುಂಬಾ ಇಷ್ಟವಾಗುತ್ತದೆ.
Published by:Anitha E
First published: