HBD Anushka Shetty: ಸ್ಟಾರ್​ ನಟಿಯರು ನಿರಾಕರಿಸಿದ್ದ ಅರುಂಧತಿ ಪಾತ್ರಕ್ಕೆ ಜೀವ ತುಂಬಿದ ಅನುಷ್ಕಾ ಶೆಟ್ಟಿ..!

Arundati Movie: ಅರುಂಧತಿ ಪಾತ್ರಕ್ಕೆ ಅನುಷ್ಕಾ ಮೊದಲ ಆಯ್ಕೆ ಆಗಿರಲಿಲ್ಲವಂತೆ. ಹೀಗೆಂದು ಈ ಸಿನಿಮಾದ ನಿರ್ದೇಶಕ ಕೋಡಿ ರಾಮಕೃಷ್ಣ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಈ ಪಾತ್ರಕ್ಕೆ ಯಾರೂ ಸಿಗದಿದ್ದಾಗ ಅನುಷ್ಕಾರನ್ನು ಬೇರೆ ದಾರಿ ಇಲ್ಲದೆ ಆಯ್ಕೆ ಮಾಡಲಾಗಿತ್ತಂತೆ. ಅದೂ ಸಹ ತುಂಬಾ ಪರೀಕ್ಷೆಗಳ ನಂತರ.

Anitha E | news18-kannada
Updated:November 7, 2019, 4:18 PM IST
HBD Anushka Shetty: ಸ್ಟಾರ್​ ನಟಿಯರು ನಿರಾಕರಿಸಿದ್ದ ಅರುಂಧತಿ ಪಾತ್ರಕ್ಕೆ ಜೀವ ತುಂಬಿದ ಅನುಷ್ಕಾ ಶೆಟ್ಟಿ..!
ಅರುಂಧತಿ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ
  • Share this:
ಕನ್ನಡತಿ ಅನುಷ್ಕಾ ಶೆಟ್ಟಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 38ನೇ ವಸಂತಕ್ಕೆ ಕಾಲಿಟ್ಟಿರುವ ಈ ಚೆಲುವೆಗೆ ಇನ್ನೂ ಬೇಡಿಕೆ ತಗ್ಗಿಲ್ಲ. ಹೀಗಾಗಿಯೇ ಪಂಚ ಭಾಷಾ ಸಿನಿಮಾದಲ್ಲಿ ಅನುಷ್ಕಾ ಬ್ಯುಸಿಯಾಗಿದ್ದಾರೆ.

'ಸೂಪರ್' ಸಿನಿಮಾದ ಮೂಲಕ ಟಾಲಿವುಡ್​ಗೆ ಎಂಟ್ರಿಕೊಟ್ಟ ಅನುಷ್ಕಾಗೆ ಹೆಸರು ತಂದುಕೊಟ್ಟಿದ್ದು ಮಾತ್ರ 'ಅರುಂಧತಿ'. ಕೋಡಿ ರಾಮಕೃಷ್ಣ ನಿರ್ದೇಶನದ ಈ ಸಿನಿಮಾದಲ್ಲಿ ಜೇಜಮ್ಮ ಅರುಂಧತಿಯಾಗಿ ಮಿಂಚಿದ್ದ ಅನುಷ್ಕಾರ ಅಭಿನಯಕ್ಕೆ ಲಕ್ಷಾಂತರ ಮಂದಿ ಅಭಿಮಾನಿಗಳು ಫಿದಾ ಆದರು.

Actress Anushka Shetty was looking stunning in Black Saree at Royal Albert hall London
ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ


ಆದರೆ ಅರುಂಧತಿ ಪಾತ್ರಕ್ಕೆ ಅನುಷ್ಕಾ ಮೊದಲ ಆಯ್ಕೆ ಆಗಿರಲಿಲ್ಲವಂತೆ. ಹೀಗೆಂದು ಈ ಸಿನಿಮಾದ ನಿರ್ದೇಶಕ ಕೋಡಿ ರಾಮಕೃಷ್ಣ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಮೋಹನ್​ ಬಾಬು ಮಗಳು ಮಂಚು ಲಕ್ಷ್ಮಿ ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಲಾಗಿತ್ತಂತೆ.

ಇದನ್ನೂ ಓದಿ: Rashmika Mandanna: ಕೆಟ್ಟದಾಗಿ ಟ್ರಾಲ್​ ಮಾಡಿದವರಿಗೆ ಬಿಸಿ ಮುಟ್ಟಿಸಿದ ರಶ್ಮಿಕಾ..! 

ಆದರೆ ಆಗ ಮಂಚು ಲಕ್ಷ್ಮಿ ಆಗ ಅಮೆರಿಕದಲ್ಲಿದ್ದು, ಡೇಟ್ಸ್​ ಸಮಸ್ಯೆಯಿಂದಾಗಿ ಅವಕಾಶ  ಮಮತಾ ಮೋಹನ್​ ದಾಸ್​ ಅವರ ಬಳಿ ಹೋಗಿತ್ತು. ಆದರೆ ಕ್ಯಾನ್ಸರ್ ಕಾರಣದಿಂದಾಗಿ ಅವರೂ ಈ ಪಾತ್ರ ಮಾಡಲಾಗಲಿಲ್ಲ. ನಂತರ ಇದು ಅನುಷ್ಕಾರ ಬಳಿಗೆ ಹೋಗಿತ್ತು. ಅದು ಸಹ ಅಷ್ಟಕಷ್ಟದ ಮೇರೆಗೆ ಎಂದು ಇಂದಿಗೂ ಮಾತನಾಡಿಕೊಳ್ಳಲಾಗುತ್ತದೆ.

ಈ ಪಾತ್ರಕ್ಕಾಗಿ ನಿರ್ಮಾಪಕ ಶ್ಯಾಮ್​ ಪ್ರಸಾದ್​ ರೆಡ್ಡಿ ಕೇರಳದಿಂದ ಕೆಲವರು ವಿನ್ಯಾಸಕಾರರನ್ನು ಕರೆಸಿ, ಅನುಷ್ಕಾರ ಮೇಲೆ ಡಮ್ಮಿ ಶೂಟ್ ಮಾಡಿಸಲಾಗಿತ್ತು. ಅಷ್ಟೇ ಅಲ್ಲದೆ ಮತ್ತೆ ಅದೇ ಡ್ರೆಸ್​ ಹಾಗೂ ಆಭರಣಗಳನ್ನು ಸೆಟ್​ನಲ್ಲೂ ಅನುಷ್ಕಾಗೆ ತೊಡಿಸಿ ಮತ್ತೆ ಶೂಟ್​ ಮಾಡಿಸಲಾಗಿತ್ತಂತೆ. ಇಷ್ಟೆಲ್ಲ ಆದ ನಂತರ ಅನುಷ್ಕಾಗೆ ಈ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದು.

ಅವಕಾಶಗಳ ಕೊರತೆಯಿಂದಾಗಿ ಬೋಲ್ಡ್​ ಫೋಟೋಶೂಟ್​ ಮೊರೆ ಹೋದ ಖ್ಯಾತ ಸ್ಯಾಂಡಲ್​ವುಡ್​ ನಟಿಯ ಮಗಳು..!


First published:November 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading