Nishabdham Trailer: ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸುತ್ತದೆ ಅನುಷ್ಕಾ ಶೆಟ್ಟಿ ಅಭಿನಯದ 'ನಿಶ್ಯಬ್ಧಂ' ಟ್ರೇಲರ್​..!

Anushka Shetty's Nishabdham Movie Trailer: ತುಂಬಾ ಸಮಯದ ನಂತರ ಅನುಷ್ಕಾ ಶೆಟ್ಟಿ ನಟಿಸುತ್ತಿರುವ ಬಹುಭಾಷಾ ಸಿನಿಮಾ 'ನಿಶ್ಯಬ್ದಂ'. ಈ ಸಿನಿಮಾದ ಟ್ರೇಲರ್​ ಬಿಡುಗಡೆಯಾಗಿದೆ.

ಅನುಷ್ಕಾ ಶೆಟ್ಟಿ ಅಭಿನಯದ 'ನಿಶ್ಯಬ್ಧಂ' ಸಿನಿಮಾದ ಪೋಸ್ಟರ್​

ಅನುಷ್ಕಾ ಶೆಟ್ಟಿ ಅಭಿನಯದ 'ನಿಶ್ಯಬ್ಧಂ' ಸಿನಿಮಾದ ಪೋಸ್ಟರ್​

  • Share this:
ಅನುಷ್ಕಾ ಶೆಟ್ಟಿ 'ಭಾಗಮತಿ' ಸಿನಿಮಾದಲ್ಲಿ ಅಭಿನಯಿಸಿದ ನಂತರ ಮತ್ತೆ ಯಾವುದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿಲ್ಲ. ಕರಾವಳಿ ಸುಂದರಿಗೆ ದೇಹದ ತೂಕವೇ ಸಿನಿಮಾ ಅವಕಾಶಗಳಿಂದ ವಂಚಿತವಾಗುವಂತೆ ಮಾಡಿತ್ತು. ತೆಲುಗು ಸಿನಿಮಾವೊಂದಕ್ಕಾಗಿ ಹೆಚ್ಚಿಸಿಕೊಂಡಿದ್ದ ದೇಹದ ತೂಕವನ್ನು ಅನುಷ್ಕಾ ಕಡಿಮೆ ಮಾಡಿಕೊಳ್ಳಲು ಒದ್ದಾಡುತ್ತಿದ್ದರು. ಇದರಿಂದಾಗಿ ಸಾಕಷ್ಟು ಸಿನಿಮಾಗಳ ಅವಕಾಶ ಕೈ ತಪ್ಪಿತ್ತು ಎನ್ನಲಾಗುತ್ತದೆ.

ಅನುಷ್ಕಾ ಕಡೆಗೆ ವಿದೇಶಕ್ಕೆ ತೆರಳಿ ಅಲ್ಲಿ ಪಕೃತಿ ಚಿಕತ್ಸೆ ಮೂಲಕ ಮತ್ತೆ ಮೊದಲಿನಂತೆ ಆಗಿ ಹಿಂತಿರುಗಿದರು. ಅವರು ವಾಪಸಾದ ಕೂಡಲೇ ಬಹು ಭಾಷಾ ಸಿನಿಮಾ 'ನಿಶ್ಯಬ್ಧಂ'ನಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಈಗಾಗಲೇ ಈ ಸಿನಿಮಾದ ಪೋಸ್ಟರ್​ ಹಾಗೂ ಟೀಸರ್​ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.



ಅನುಷ್ಕಾ ಮಾತು ಬಾರದ ಚಿತ್ರ ಕಲಾವಿದೆಯಾಗಿ ನಟಿಸಿರುವ ಈ ಸಿನಿಮಾದಲ್ಲಿ ಮಾಧವನ್​, ಅರ್ಜುನ್​ ರೆಡ್ಡಿ ಖ್ಯಾತಿಯ ಅಂಜಲಿ,  ಸುಬ್ಬರಾಜು ಹಾಗೂ ಮತ್ತಿತರರು ನಟಿಸಿದ್ದಾರೆ. ಸಸ್ಪೆನ್ಸ್​ ಥ್ರಿಲ್ಲರ್​ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಹಾರರ್​ ಟಚ್​ ಕೊಡಲಾಗಿದ್ದು, ಈ ಸಿನಿಮಾದ ಟ್ರೇಲರ್​ ಬಿಡುಗಡೆಯಾಗಿದೆ.



ತೆಲುಗು, ಹಿಂದಿ, ತಮಿಳು, ಮಲಯಾಳಂ ಹಾಗೂ ಇಂಗ್ಲಿಷ್​ನಲ್ಲಿ ಈ ಸಿನಿಮಾ ತೆರೆ ಕಾಣಲಿದ್ದು, ಸದ್ಯ ಇಂಗ್ಲಿಷ್​ ಹೊರತುಪಡಿಸಿ ಉಳಿದೆಲ್ಲ ಭಾಷೆಗಳಲ್ಲೂ ಟ್ರೇಲರ್ ಬಿಡುಗಡೆಯಾಗಿದೆ.







ಹೇಮಂತ್​ ಮಧುಕರ್​ ನಿರ್ದೇಶನದ ಈ ಚಿತ್ರ ಇಂಗ್ಲಿಷ್​ನಲ್ಲಿ 'ಸೈಲೆನ್ಸ್'​ ಟೈಟಲ್​ನಲ್ಲಿ ರಿಲೀಸ್​ ಆಗಿದೆ. ಕೋನಾ ಫಿಲ್ಮ್ಸ್​ ಕಾರ್ಪೋರೇಷನ್ಸ್​ ಹಾಗೂ ಪೀಪಲ್​ ಮೀಡಿಯಾ ಫ್ಯಾಕ್ಟರಿ ಸಹಯೋಗದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಏಪ್ರಿಲ್​ 2ಕ್ಕೆ ತೆರೆಕಾಣಲಿದೆ.

 

Sara Ali Khan: ಬಿಕಿನಿ ತೊಟ್ಟು ಸಹೋದರನ ಜೊತೆ ಪೋಸ್​ ಕೊಟ್ಟ ಸಾರಾ ಅಲಿಖಾನ್​: ಟ್ರೋಲ್​ ಮಾಡಿದ ಟ್ರೋಲಿಗರು



 
First published: