ಭಾಗಮತಿ ಸಿನಿಮಾದ ನಂತರ ಅನುಷ್ಕಾ ಶೆಟ್ಟಿ ಯಾವ ಚಿತ್ರಗಳಲ್ಲೂ ಕಾಣಿಸಿಕೊಳ್ಳಲಿಲ್ಲ. ಕಾರಣ ಅವರ ಹೆಚ್ಚಿದ್ದ ಅವರ ದೇಹದ ತೂಕ. ಸೈಜ್ ಝೀರೋ ಚಿತ್ರಕ್ಕಾಗಿ ಅನುಷ್ಕಾ ಶೆಟ್ಟಿ ದೇಹದ ತೂಕ ಹೆಚ್ಚಿಸಿಕೊಂಡಿದ್ದರು. ಆದರೆ ಈ ಚಿತ್ರದ ನಂತರ ಮೊದಲಿನಂತೆ ಮತ್ತೆ ತೂಕ ಇಳಿಸಿಕೊಳ್ಳಲು ಆಗಲೇ ಇಲ್ಲ. ಇದರಿಂದಾಗಿ ಅನುಷ್ಕಾ ಶೆಟ್ಟಿಗೆ ಸಾಕಷ್ಟು ಸಿನಿಮಾ ಅವಕಾಶಗಳು ಕೈ ತಪ್ಪಿದ್ದವು. ಇನ್ನು ದೇಹದ ತೂಕ ಇಳಿಸಿಕೊಳ್ಳಲು ಹರಸಾಹಸ ಪಟ್ಟ ಸ್ವೀಟಿ, ಕಡೆಗೆ ಪ್ರಾಕೃತಿಕ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದರು. ಅಲ್ಲಿ ಚಿಕಿತ್ಸೆ ಪಡೆದು ಬಂದ ನಂತರ ಅನುಷ್ಮಾ ಶೆಟ್ಟಿ ನಿಶ್ಯಬ್ಧಂ ಎಂಬ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಈ ಸಿನಿಮಾದಲ್ಲಿ ಆರ್. ಮಾಧವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಅನುಷ್ಕಾ ಶೆಟ್ಟಿನಿಶ್ಯಬ್ಧಂ ಸಿನಿಮಾದ ಚಿತ್ರೀಕರಣ ಮುಗಿದು, ಇನ್ನೇನು ರಿಲೀಸ್ ಆಗಬೇಕು ಆಗಲೇ ಕೊರೋನಾ ಲಾಕ್ಡೌನ್ ಆರಂಭವಾಗಿತ್ತು. ಆಗಿನಿಂದ ಇಲ್ಲಿಯವರೆಗೆ ಸಿನಿಮಾ ರಿಲೀಸ್ ಮಾಡದೆ ಬೆಳ್ಳಿ ಪರದೆಯಲ್ಲೇ ಚಿತ್ರವನ್ನು ಬಿಡುಗಡೆ ಮಾಡಲು ಕಾಯಲಾಗುತ್ತಿತ್ತು. ಈ ಸಿನಿಮಾ ಹಿಂದಿ, ತೆಲುಗು, ತಮಿಳು, ಮಲಯಾಳಂ ಹಾಗೂ ಇಂಗ್ಲಿಷ್ನಲ್ಲಿ ತೆರೆ ಕಾಣಲಿದೆ.
ಇದನ್ನೂ ಓದಿ: ಹೇಳಿದ ಸಮಯಕ್ಕಿಂತ ಅರ್ಧಗಂಟೆ ತಡವಾಗಿ ರಿಲೀಸ್ ಆಯ್ತು ಕೋಟಿಗೊಬ್ಬ 3 ಸಿನಿಮಾದ ಟೀಸರ್
ಆದರೆ, ಈ ಹಿಂದೆ ಸಹ ನಿಶ್ಯಬ್ಧಂ ಸಿನಿಮಾ ಇನ್ನೇನು ಒಟಿಟಿ ಮೂಲಕ ರಿಲೀಸ್ ಆಗಲು ಸಜ್ಜಾಗುತ್ತಿದೆ ಎಂದು ಹೇಳಲಾಗುತ್ತಿತ್ತು. ಆಗಲೇ ನಟಿ ಅನುಷ್ಕಾ ಶೆಟ್ಟಿ ಇದು ಗಾಳಿ ಸುದ್ದಿ ಎಂದಿದ್ದರು. ಜೊತೆಗೆ ಈ ಸಿನಿಮಾದ ನಿರ್ಮಾಪಕ ಚಿತ್ರ ನಿರ್ಮಾಣಕ್ಕಾಗಿ ಮಾಡಿರುವ ಸಾಲ ತೀರಿಸಲಾಗದೆ, ಇದನ್ನು ಒಟಿಟಿ ಮೂಲಕ ರಿಲೀಸ್ ಮಾಡಲು ಕಾಯುತ್ತಿದ್ದು, ಅದಕ್ಕೆ ಅನುಷ್ಕಾ ಸೇರಿದಂತೆ ಕೆಲ ಸ್ಟಾರ್ಗಳು ಅನುಮತಿ ನೀಡುತ್ತಿಲ್ಲ ಎಂದೂ ಹೇಳಲಾಗುತ್ತಿತ್ತು.
![]()
ಅನುಷ್ಕಾ ಶೆಟ್ಟಿ
ಇಲ್ಲಿಯವರೆಗೂ ಚಿತ್ರಮಂದಿರಗಳು ತೆರೆಯಲಿವೆ ಎಂದು ಕಾಯುತ್ತಿದ್ದ ನಿರ್ಮಾಪಕರು ಈಗ ಅನ್ಲಾಕ್ ಆದಾಗ ಚಿತ್ರತಂದಿರಗಳು ತೆರೆಯಲಿವೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಸಲವೂ ಅನ್ಲಾಕ್ 4ರ ಮಾರ್ಗಸೂಚಿಯಲ್ಲೂ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ಸಿಗಲೇ ಇಲ್ಲ. ಇದರಿಂದಾಗಿಯೇ ಈಗ ನಿಶ್ಯಬ್ಧಂ ನಿರ್ಮಾಪಕರು ಅಮೆಜಾನ್ ಪ್ರೈಂಗೆ ಈ ಚಿತ್ರದ ಪ್ರದರ್ಶನದ ಹಕ್ಕನ್ನು 25 ಕೋಟಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗುತ್ತಿದೆ. ಸದ್ಯದಲ್ಲೇ ಈ ಸಿನಿಮಾ ರಿಲೀಸ್ ದಿನಾಂಕ ಸಹ ಹೊರಬೀಳಲಿದೆ ಅನ್ನೋ ಮಾತು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.
ಇನ್ನು ಬಹಳ ಸಮಯದ ನಂತರ ಅನುಷ್ಕಾ ಶೆಟ್ಟಿ ಸಿನಿಮಾದಲ್ಲಿ ನಟಿಸಿದ್ದು, ಅದನ್ನು ಬೆಳ್ಲಿ ತೆರೆಯ ಮೇಲೆಯೇ ನೋಡಬೇಕೆಂದು ಆಸೆ ಪಟ್ಟಿದ್ದರು. ಆದರೆ ಲಾಕ್ಡೌನ್ನಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ಇನ್ನು ಸ್ವೀಟಿಯನ್ನು ದೊಡ್ಡ ಪರದೆ ಮೇಲೆ ಕಣ್ತುಂಬಿಕೊಳ್ಳುವ ಅವಕಾಶ ಸಹ ಅಭಿಮಾನಿಗಳಿಗೆ ಈಗ ಇಲ್ಲದಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ