ಅನುಷ್ಕಾ ಶೆಟ್ಟಿ ಬಹಳ ದಿನಗಳ ನಂತರ ನಟಿಸಿರುವ ಸಿನಿಮಾ ನಿಶ್ಯಬ್ಧಂ. ಈ ಸಿನಿಮಾವನ್ನು ಐದು ಭಾಷೆಗಳಲ್ಲಿ ನಿರ್ಮಿಸಿದ್ದು, ಇದನ್ನು ಚಿತ್ರಮಂದಿರದಲ್ಲೇ ರಿಲೀಸ್ ಮಾಡುವುದಾಗಿ ಈ ಹಿಂದೆ ಹೇಳಲಾಗಿತ್ತು. ಆದರೆ ಈಗ ಈ ಸಿನಿಮಾ ಒಟಿಟಿ ಮೂಲಕ ರಿಲೀಸ್ಗೆ ಸಿದ್ಧವಾಗಿದೆ. ಭಾಗಮತಿ ಸಿನಿಮಾದ ನಂತರ ಅನುಷ್ಕಾ ಶೆಟ್ಟಿ ಯಾವ ಚಿತ್ರಗಳಲ್ಲೂ ಕಾಣಿಸಿಕೊಳ್ಳಲಿಲ್ಲ. ಕಾರಣ ಅವರ ಹೆಚ್ಚಿದ್ದ ಅವರ ದೇಹದ ತೂಕ. ಸೈಜ್ ಝೀರೋ ಚಿತ್ರಕ್ಕಾಗಿ ಅನುಷ್ಕಾ ಶೆಟ್ಟಿ ದೇಹದ ತೂಕ ಹೆಚ್ಚಿಸಿಕೊಂಡಿದ್ದರು. ಆದರೆ ಈ ಚಿತ್ರದ ನಂತರ ಮೊದಲಿನಂತೆ ಮತ್ತೆ ತೂಕ ಇಳಿಸಿಕೊಳ್ಳಲು ಆಗಲೇ ಇಲ್ಲ. ಇದರಿಂದಾಗಿ ಅನುಷ್ಕಾ ಶೆಟ್ಟಿಗೆ ಸಾಕಷ್ಟು ಸಿನಿಮಾ ಅವಕಾಶಗಳು ಕೈ ತಪ್ಪಿದ್ದವು. ಇನ್ನು ದೇಹದ ತೂಕ ಇಳಿಸಿಕೊಳ್ಳಲು ಹರಸಾಹಸ ಪಟ್ಟ ಸ್ವೀಟಿ, ಕಡೆಗೆ ಪ್ರಾಕೃತಿಕ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದರು. ಅಲ್ಲಿ ಚಿಕಿತ್ಸೆ ಪಡೆದು ಬಂದ ನಂತರ ಅನುಷ್ಮಾ ಶೆಟ್ಟಿ ನಿಶ್ಯಬ್ಧಂ ಎಂಬ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಇದೇ ಕಾರಣಕ್ಕೆ ಈ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಇದೆ.
ಅನುಷ್ಕಾ ಶೆಟ್ಟಿ ನಿಶ್ಯಬ್ಧಂ ಸಿನಿಮಾದ ಚಿತ್ರೀಕರಣ ಮುಗಿದು, ಇನ್ನೇನು ರಿಲೀಸ್ ಆಗಬೇಕು ಆಗಲೇ ಕೊರೋನಾ ಲಾಕ್ಡೌನ್ ಆರಂಭವಾಗಿತ್ತು. ಆಗಿನಿಂದ ಇಲ್ಲಿಯವರೆಗೆ ಸಿನಿಮಾ ರಿಲೀಸ್ ಮಾಡದೆ ಬೆಳ್ಳಿ ಪರದೆಯಲ್ಲೇ ಚಿತ್ರವನ್ನು ಬಿಡುಗಡೆ ಮಾಡಲು ಕಾಯಲಾಗುತ್ತಿತ್ತು. ಈ ಸಿನಿಮಾದಲ್ಲಿ ಆರ್. ಮಾಧವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಹಿಂದಿ, ತೆಲುಗು, ತಮಿಳು, ಮಲಯಾಳಂ ಹಾಗೂ ಇಂಗ್ಲಿಷ್ನಲ್ಲಿ ತೆರೆ ಕಾಣಲಿದೆ.
![Anushka Shetty will be sharing screen with Vijay Sethupathi in Tamil Movie]()
ಕರಾವಳಿ ಹುಡುಗಿ ಅನುಷ್ಕಾ ಶೆಟ್ಟಿ
ಆದರೆ, ಈ ಹಿಂದೆ ಸಹ ನಿಶ್ಯಬ್ಧಂ ಸಿನಿಮಾ ಇನ್ನೇನು ಒಟಿಟಿ ಮೂಲಕ ರಿಲೀಸ್ ಆಗಲು ಸಜ್ಜಾಗುತ್ತಿದೆ ಎಂದು ಹೇಳಲಾಗುತ್ತಿತ್ತು. ಆಗಲೇ ನಟಿ ಅನುಷ್ಕಾ ಶೆಟ್ಟಿ ಇದು ಗಾಳಿ ಸುದ್ದಿ ಎಂದಿದ್ದರು. ಜೊತೆಗೆ ಈ ಸಿನಿಮಾದ ನಿರ್ಮಾಪಕ ಚಿತ್ರ ನಿರ್ಮಾಣಕ್ಕಾಗಿ ಮಾಡಿರುವ ಸಾಲ ತೀರಿಸಲಾಗದೆ, ಇದನ್ನು ಒಟಿಟಿ ಮೂಲಕ ರಿಲೀಸ್ ಮಾಡಲು ಕಾಯುತ್ತಿದ್ದು, ಅದಕ್ಕೆ ಅನುಷ್ಕಾ ಸೇರಿದಂತೆ ಕೆಲ ಸ್ಟಾರ್ಗಳು ಅನುಮತಿ ನೀಡುತ್ತಿಲ್ಲ ಎಂದೂ ಹೇಳಲಾಗುತ್ತಿತ್ತು.
ಇದನ್ನೂ ಓದಿ: ಶಾರುಖ್ ಅಭಿನಯಿಸುತ್ತಿರುವ ಹೊಸ ಸಿನಿಮಾದಲ್ಲಿ ತಾಪ್ಸಿ ಪನ್ನು ನಾಯಕಿ..!
ಇಲ್ಲಿಯವರೆಗೂ ಚಿತ್ರಮಂದಿರಗಳು ತೆರೆಯಲಿವೆ ಎಂದು ಕಾಯುತ್ತಿದ್ದ ನಿರ್ಮಾಪಕರು ಈಗ ಅನ್ಲಾಕ್ ಆದಾಗ ಚಿತ್ರತಂದಿರಗಳು ತೆರೆಯಲಿವೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಸಲವೂ ಅನ್ಲಾಕ್ 4ರ ಮಾರ್ಗಸೂಚಿಯಲ್ಲೂ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ಸಿಗಲೇ ಇಲ್ಲ. ಇದರಿಂದಾಗಿಯೇ ಈಗ ನಿಶ್ಯಬ್ಧಂ ನಿರ್ಮಾಪಕರು ಅಮೆಜಾನ್ ಪ್ರೈಂಗೆ ಈ ಚಿತ್ರದ ಪ್ರದರ್ಶನದ ಹಕ್ಕನ್ನು 25 ಕೋಟಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲೆ ಅಕ್ಟೋಬರ್ 2ರಂದು ನಿಶ್ಯಬ್ಧಂ ಅಮೆಜಾನ್ ಪ್ರೈಂನಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ: ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಐಂದ್ರಿತಾ ರೇ..!
ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಮಾತಬಾರದ ಚಿತ್ರಕಲಾವಿದೆಯಾಗಿ ಅಭಿನಯಿಸಿದ್ದಾರೆ. ಈ ಸಿನಿಮಾ ಒಂದು ಹಾರರ್ ಥ್ರಿಲ್ಲರ್ ಆಗಿದ್ದು, ಇದರ ಟೀಸರ್ ರಿಲೀಸ್ ಆದಾಗಲೇ ಈ ಚಿತ್ರದ ಮೇಲಿದ್ದ ನಿರೀಕ್ಷೆ ದುಪ್ಪಟ್ಟಾಗಿತ್ತು. ಇನ್ನು ಬಹಳ ಸಮಯದ ನಂತರ ಅನುಷ್ಕಾ ಶೆಟ್ಟಿ ಸಿನಿಮಾದಲ್ಲಿ ನಟಿಸಿದ್ದು, ಅದನ್ನು ಬೆಳ್ಳಿ ತೆರೆಯ ಮೇಲೆಯೇ ನೋಡಬೇಕೆಂದು ಪ್ರೇಕ್ಷಕರು ಆಸೆ ಪಟ್ಟಿದ್ದರು. ಆದರೆ ಲಾಕ್ಡೌನ್ನಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ಇನ್ನು ಸ್ವೀಟಿಯನ್ನು ದೊಡ್ಡ ಪರದೆ ಮೇಲೆ ಕಣ್ತುಂಬಿಕೊಳ್ಳುವ ಅವಕಾಶ ಸಹ ಅಭಿಮಾನಿಗಳಿಗೆ ಈಗ ಇಲ್ಲದಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ