ಪ್ರಭಾಸ್ ಭುಜದ ಮೇಲೆ ನಡೆದ ಅನುಷ್ಕಾ:  ದೊಡ್ಡ ಕಾರ್ಯಕ್ರಮದಲ್ಲಿ ಶೆಟ್ಟಿ ಬಾಯಿಬಿಟ್ಟ ಸತ್ಯವೇನು?

news18
Updated:July 24, 2018, 5:07 PM IST
ಪ್ರಭಾಸ್ ಭುಜದ ಮೇಲೆ ನಡೆದ ಅನುಷ್ಕಾ:  ದೊಡ್ಡ ಕಾರ್ಯಕ್ರಮದಲ್ಲಿ ಶೆಟ್ಟಿ ಬಾಯಿಬಿಟ್ಟ ಸತ್ಯವೇನು?
news18
Updated: July 24, 2018, 5:07 PM IST
ನ್ಯೂಸ್​ 18 ಕನ್ನಡ 

ಮಂಗಳೂರು ಬ್ಯೂಟಿ ಅನುಷ್ಕಾ ಶೆಟ್ಟಿಗೆ ಅವರದ್ದೇ ಆದ ದೊಡ್ಡ ಅಭಿಮಾನಿ ಬಳಗವಿದೆ. ಕೇವಲ ಆಂಧ್ರದಲ್ಲಿ,  ತೆಲುಗು ಮಾತಾಡೋರಲ್ಲಿ ಅಲ್ಲ, ನೀವು ತಮಿಳುನಾಡು, ಕೇರಳ ಹೀಗೆ ದಕ್ಷಿಣ ಭಾರತದ ಯಾವುದೇ ರಾಜ್ಯಕ್ಕೆ ಹೋದರೂ, ಆಕೆ ವೇದಿಕೆ ಹತ್ತಿ ಮಾತಾಡಿದರೆ ಸಾಕು ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ.

ಪಕ್ಕದ ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ಒಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಮ್ಮ ಸ್ವೀಟಿ ಅನುಷ್ಕಾ ಬಾಗವಹಿಸಿದ್ದರು. ಅಲ್ಲಿನ ಕಾರ್ಯಕ್ರಮದ ನಿರೂಪಕರು ಕೇಳಿದ ಪ್ರಶ್ನೆಗೆ ಅನುಷ್ಕಾ ಎಲ್ಲರೂ ದಂಗಾಗುವಂತೆ ಉತ್ತರಿಸಿದ್ದಾರೆ.

ನೀಳ ಕಾಲಿನ ಸುಂದರಿ ಅನುಷ್ಕಾ ನಕ್ಕರೂ, ಕೋಪದಿಂದ ತಿರುಗಿನೋಡಿದರೂ ಸೋ ಸ್ವೀಟ್ ಅಲ ಅನ್ನೋ ಹುಚ್ಚು ಅಭಿಮಾನಿಗಳು ತುಂಬಾ ಜನ ಇದ್ದಾರೆ.'ಬಾಹುಬಲಿ 2:  ದ ಕನ್​ಕ್ಲೂಷನ್​' ಸಿನಿಮಾ ನೋಡಿದರೆ ನಿರ್ದೇಶಕ ರಾಜಮೌಳಿ ಒಂದು ಕ್ಯೂಟ್ ದೃಶ್ಯವೊಂದನ್ನ ಕಂಪೋಸ್ ಮಾಡಿದ್ದಾರೆ. ಅದರಲ್ಲಿ ಪ್ರಭಾಸ್ ಭುಜದ ಮೇಲೆ ಸ್ವೀಟಿ ನಡೆದುಬರೊ ದೃಶ್ಯವಿದೆ.

ಈ ದೃಶ್ಯದಲ್ಲಿ ಎಲ್ಲರೂ ತುಂಬಾ ಕ್ಯೂಟ್ ಅಂತಂದಿದ್ದಲ್ಲದೆ, ಹೆಣ್ಣು ಮಕ್ಕಳು ಇಂಥ ಬಾಹುಬಲ ಇರೊ ಬಾಹುಬಲಿ ನನಗೂ ಸಿಕ್ಕರೆ ಅದೆಷ್ಟು ಚೆನ್ನಾಗಿರುತ್ತೊ ಅಂತ ಮನ್ಸಲ್ಲೇ ಕನಸಿನ ರಂಗೋಲಿ ಹಾಕಿದ್ದರು. ಅದೇ ದೃಶ್ಯದ ಬಗ್ಗೆ ಅನುಷ್ಕಾರನ್ನ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ನಿರೂಪಕರು ಪ್ರಶ್ನೆ ಕೇಳಿದ್ದರು. ಅದಕ್ಕೆ ಅನುಷ್ಕಾ ಕೊಟ್ಟ ಉತ್ತರ ಏನು ಗೊತ್ತಾ?

'ಪ್ರಭಾಸ್​ ಎಂದೊಡನೆ ನಾಚಿ ನೀರಾಗುತ್ತಲೇ ಉತ್ತರಿಸಿದ ಅನುಷ್ಕಾ ನಿಜ ಜೀವನದಲ್ಲಿ ಹಾಗೆಲ್ಲ ಭುಜದ ಮೇಲೆ ನಡೆಯೋದು ನನಗೆ ಮುಜುಗರದ ವಿಷಯ. ಆದರೆ ಆ ಸಿನಿಮಾದಲ್ಲಿ ದೇವಸೇನಾ ಪಾತ್ರಕ್ಕೆ ಅದು ಅಗತ್ಯವಿತ್ತು. ಆ ಪಾತ್ರವನ್ನು ಅಷ್ಟೊಂದು ಗಟ್ಟಿಯಾಗಿಸಿದ್ದು ನಿರ್ದೇಶಕರು' ಎಂದು ಬಹಳ ಸೂಕ್ಷ್ಮವಾಗಿಯೇ ಉತ್ತರಿಸಿದ್ದಾರೆ.

ಪ್ರತಿ ಬಾರಿಯೂ ಪ್ರಭಾಸ್ ಸಿಕ್ಕಾಗ ಅನುಷ್ಕಾ ಬಗ್ಗೆ, ಅನುಷ್ಕಾ ಸಿಕ್ಕಾಗ ಪ್ರಭಾಸ್ ಬಗ್ಗೆ ಕೇಳಿದರೆ ಅದೇನೊ ಒಂಥರಾ ಚಾರ್ಮು ಇಬ್ಬರ ಮುಖದಲ್ಲೂ ಕಾಣಿಸುತ್ತೆ. ಅದು ಸ್ನೇಹಾನಾ ಅಥವಾ ಪ್ರೀತೀನಾ, ಬಹುಶಹಃ ದೇವರಿಗೂ ಗೊತ್ತಿಲ್ಲ ಅನ್ನಿಸುತ್ತೆ. ಆದರೆ ಈ ಬಾರಿಯೂ ಈ ಜೋಡಿಯ ಗುಟ್ಟು ಮಾತ್ರ ರಟ್ಟಾಗಲಿಲ್ಲ.
Loading...

 
First published:July 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ