ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ 152ನೇ ಸಿನಿಮಾ 'ಆಚಾರ್ಯ' ಸಾಕಷ್ಟು ವಿಷಯಗಳಿಂದ ಸುದ್ದಿಯಲ್ಲಿದೆ. ಒಂದು ಸಲ ಸಿನಿಮಾದ ಬಿಗ್ ಬಜೆಟ್, ಚಿತ್ರದಲ್ಲಿ ನಟಿಸಲಿರುವ ನಟಿಯರು ಹೀಗೆ... ಒಂದಲ್ಲಾ ಒಂದು ವಿಷಯಗಳಿಂದಾಗಿಯೇ ಈ ಚಿತ್ರ ಸದ್ದು ಮಾಡುತ್ತಿದೆ.
ಚಿರಂಜೀವಿ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಸಿನಿಮಾ
'ಆಚಾರ್ಯ'. ಇದರಲ್ಲಿ ಮೊದಲು ನಟಿ ತ್ರಿಶಾ ನಟಿಸಲಿದ್ದಾರೆ ಅನ್ನೋದು ಖಚಿತವಾಗಿತ್ತು. ಆದರೆ ಮೊನ್ನೆಯಷ್ಟೆ ನಟಿ ತ್ರಿಶಾ ಕೆಲವು ಭಿನ್ನಾಭಿಪ್ರಾಯಗಳಿಂದಾಗಿ ಈ ಚಿತ್ರದಿಂದ ಹೊರಗಡೆ ಹೋಗುತ್ತಿರುವುದಾಗಿ ಟ್ವೀಟ್ ಮಾಡಿದ್ದರು.
Sometimes things turn out to be different from what was initially said and discussed.Due to creative differences,I have chosen not to be part of Chiranjeevi sirs film.Wishing the team https://t.co/sfaMfRrWmT my lovely Telugu audiences-hope to see you soon in an exciting project.
ಆದರೆ ಈಗ ಈ ಸಿನಿಮಾದ ನಾಯಕಿ ಯಾರು ಅನ್ನೋದು ಅಭಿಮಾನಿಗಳ ಪ್ರಶ್ನೆಯಾಗಿತ್ತು. ಅದಕ್ಕೂ ಉತ್ತರ ಸಿಕ್ಕಿದೆ. ನಟಿ ಅನುಷ್ಕಾ ಶೆಟ್ಟಿ 'ಆಚಾರ್ಯ' ಚಿತ್ರಕ್ಕೆ ಹೊಸ ನಾಯಕಿಯಂತೆ. ತ್ರಿಶಾ ಜಾಗಕ್ಕೆ ಈಗ ಸ್ವೀಟಿ ಎಂಟ್ರಿಯಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣಗಾಗಿ ಟ್ವಿಟರ್ನಲ್ಲಿ ಅಭಿಯಾನ ಆರಂಭಿಸಿದ ಅಭಿಮಾನಿಗಳು..!
ಅನುಷ್ಕಾ ಶೆಟ್ಟಿ ಈಗಷ್ಟೆ 'ನಿಶ್ಯಬ್ಧಂ' ಚಿತ್ರದ ಚಿತ್ರೀಕರಣ ಮುಗಿಸಿದ್ದು, ಆ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಸದ್ಯಕ್ಕೆ ಸ್ವೀಟಿ ಕೈಯಲ್ಲಿ ಯಾವುದೇ ಚಿತ್ರಗಳಿಲ್ಲದ ಕಾರಣಕ್ಕೆ ಈ ಸಿನಿಮಾ ಅನುಷ್ಕಾಗೆ ಮತ್ತೊಂದು ಬ್ರೇಕ್ ಕೊಡುವುದರಲ್ಲಿ ಅನುಮಾನವೇ ಇಲ್ಲ. 'ಭಾಗಮತಿ' ನಂತರ ಅನುಷ್ಕಾ ಶೆಟ್ಟಿ ನಟಿಸುತ್ತಿರುವ ಪಕ್ಕಾ ತೆಲುಗು ಚಿತ್ರ ಇದಾಗಿರುವ ಕಾರಣಕ್ಕೆ ಅಭಿಮಾನಿಗಳಲ್ಲಿ ಕೂತೂಹಲ ಹೆಚ್ಚಿದೆ.
Tamannaah Bhatia: ತೂಕ ಇಳಿಸಿಕೊಂಡ ಟಾಲಿವುಡ್ನಲ್ಲಿ ಮಿಲ್ಕಿ ಬ್ಯೂಟಿ ತಮನ್ನಾಗೆ ಹೆಚ್ಚಿದೆ ಬೇಡಿಕೆ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ