news18 Updated:June 16, 2020, 7:40 PM IST
ಅನುಷ್ಕಾ ಶೆಟ್ಟಿ
- News18
- Last Updated:
June 16, 2020, 7:40 PM IST
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಭಾನುವಾರದಂದು ತಮ್ಮ ಮುಂಬೈನಲ್ಲಿರುವ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಪ್ರತಿಭಾನ್ವಿತ ನಟನನ್ನು ಕಳೆದುಕೊಂಡಿದ್ದಕ್ಕೆ ಭಾರತೀಯ ಚಿತ್ರರಂಗದ ಅನೇಕ ನಟ-ನಟಿಯರು ಬೇಸರ ಹೊರಹಾಕಿದ್ದಾರೆ. ಇದೀಗ ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಕೂಡ ಸುಶಾಂತ್ ಸಾವಿಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ವೊಂದನ್ನು ಹಾಕಿಕೊಂಡಿರುವ ಅನುಷ್ಕಾ ಶೆಟ್ಟಿ ‘ಮನಸ್ಸಿನಲ್ಲಿರುವ ಬೇಸರವನ್ನು ಆಪ್ತರೊಂದಿಗೆ ಹಂಚಿಕೊಳ್ಳಬೇಕು. ಇನ್ನೊಬ್ಬರ ಮಾತುಗಳನ್ನು ಕೇಳಬೇಕು. ಪ್ರಪಂಚಲ್ಲಿ ಯಾರೂ ಪರಿಪೂರ್ಣರಲ್ಲ, ನಾವೆಲ್ಲಾ ನಮಗೆ ತಿಳಿದ ರೀತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ನಮಗೆ ಸರಿ ಎನಿಸಿದ ದಾರಿಯಲ್ಲಿ ನಾವು ಪ್ರಯಾಣಿಸುತ್ತೇವೆ‘.
‘ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ಮಾನಸಿಕ ಹಿಂಸೆ ಅನುಭವಿಸುತ್ತಿರುತ್ತೇವೆ. ಕೆಲವರು ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಇನ್ನು ಕೆಲವರು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹುಡುಕುತ್ತಾರೆ, ಮತ್ತೆ ಕೆಲವರು ಇತರರ ಸಹಾಯ ಬಯಸುತ್ತಾರೆ. ಆದರೆ ನಾವೆಲ್ಲರೂ ಜೊತೆ ಸೇರಿ ಇದಕ್ಕಿಂತ ಉತ್ತಮ ಮಾರ್ಗದಲ್ಲಿ ಜೀವಿಸಲು ಪ್ರಯತ್ನಿಸೋಣ’.
‘ಇನ್ನು ಮುಂದೆ ದಯೆಯಿಂದ ಬದುಕೋಣ, ನಿಮ್ಮೊಂದಿರುವವರ ಮಾತನ್ನು ಕೇಳಿ. ನಾವೆಲ್ಲರು ಮನುಷ್ಯರೇ, ನಗು, ಮಾತನ್ನು ಕೇಳುವ ಗುಣ, ಮನಸ್ಸು ನಿಮ್ಮೆದೆರಿರುವ ವ್ಯಕ್ತಿಯ ಜೀವನದಲ್ಲಿ ಎಷ್ಟೋ ಬದಲಾವಣೆಯನ್ನು ತರಬಹುದು’ ಎಂದು ಅನುಷ್ಕಾ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
Video Viral: ದನಕರುಗಳಿಗೆ ದರ್ಶನ್ ಮೇವು ಕಟಾವು; ಡಿಬಾಸ್ ಈಗ ಪಕ್ಕಾ ಕೃಷಿಕ!
Video: ಸರ್ಕಾರಿ ಜಾಹೀರಾತಿನಲ್ಲಿ ನೀಲಿ ಚಿತ್ರತಾರೆ; ನೆಟ್ವಿಗರು ಏನಂದ್ರು ಗೊತ್ತಾ?
First published:
June 16, 2020, 7:37 PM IST