ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿ ಜೀವನದಲ್ಲಿ ಇಂದು ತುಂಬಾ ವಿಶೇಷವಾದ ದಿನ. ಅರುಂಧತಿಯಿಂದ ರುದ್ರಮಾ ದೇವಿವರೆಗೂ ಯಾವ ಪಾತ್ರಕ್ಕಾದರೂ ಸೈ ಎನ್ನುವ ಅಭಿನಯ ಅನುಷ್ಕಾರದ್ದು.
ಯಾವುದೇ ಪಾತ್ರ ಕೊಟ್ಟರೂ ಅನುಷ್ಕಾ ಬೆಟ್ಟು ಮಾಡಿ ತೋರಿಸಿಕೊಳ್ಳದಂತೆ ನಟಿಸುತ್ತಾರೆ. ಗ್ಲಾಮರಸ್, ಐತಿಹಾಸಿಕ ಹೀಗೆ ಯಾವ ಪಾತ್ರವಾದರೂ ಪರಕಾಯ ಪ್ರವೇಶ ಮಾಡುವ ನಟಿ ಈ ಸ್ವೀಟಿ. ಇಂತಹ ನಟಿ ಸಿನಿ ರಂಗಕ್ಕೆ ಕಾಲಿಟ್ಟು ಇಂದಿಗೆ 15 ವರ್ಷ.
![]()
ಅನುಷ್ಕಾ ಶೆಟ್ಟಿ
ಟಾಲಿವುಡ್ನಲ್ಲಿ ನಾಗಾರ್ಜುನ ಹಾಗೂ ಸೋನು ಸೂದ್ ನಟಿಸಿದ್ದ 'ಸೂಪರ್' ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಅನುಷ್ಕಾ ಕಾಣಿಸಿಕೊಂಡಿದ್ದರು. ಸರಿಯಾಗಿ ಮಾರ್ಚ್ 12ರಂದು 'ಸೂಪರ್' ಸಿನಿಮಾಗಾಗಿ ಅನುಷ್ಕಾ ಕ್ಯಾಮೆರಾ ಮುಂದೆ ಬಂದಿದ್ದು. ಆದರೆ ಈ ಸಿನಿಮಾದಲ್ಲಿ ಅನುಷ್ಕಾಗೆ ಅಷ್ಟಾಗಿ ಹೆಸರು ಮಾಡಲಾಗಲಿಲ್ಲವಾದರೂ, 'ಅರುಂಧತಿ' ಚಿತ್ರದ ಮೂಲಕ ಸ್ವೀಟಿಗೆ ಟಾಲಿವುಡ್ನಲ್ಲಿ ತನ್ನದೇ ಆದ ಸ್ಥಾನ ಸಿಕ್ಕಿತು.
ಇದನ್ನೂ ಓದಿ: Aindrita Ray: ಕನ್ನಡ ಹಾಡಿಗೆ ಹಿಂದಿ ನಟನೊಂದಿಗೆ ಟಿಕ್ಟಾಕ್ ಮಾಡಿದ ಐಂದ್ರಿತಾ ರೇ: ದಿಗಂತ್ ಎಲ್ಲಿದ್ದೀಯಪ್ಪಾ ಎಂದ ನೆಟ್ಟಿಗರು..!
ನಂತರ 'ಬಾಹುಬಲಿ', 'ರುದ್ರಮಾ ದೇವಿ', 'ಭಾಗಮತಿ' ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುವುದರೊಂದಿಗೆ ಮಹಿಳಾ ಪ್ರಧಾನ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗಲೂ ಅನುಷ್ಕಾ ಅಭಿನಯದ 'ನಿಶ್ಯಬ್ಧಂ' ಸಿನಿಮಾ ಏ.2ಕ್ಕೆ ತೆರೆಗಪ್ಪಳಿಸಲು ಸಿದ್ಧವಾಗಿದೆ.
Nysa Photos: ಇನ್ಸ್ಟಾದಲ್ಲಿ ಮಗಳ ಫೋಟೋಗಳನ್ನು ಹಂಚಿಕೊಂಡ ಕಾಜೋಲ್: ಬಾಲಿವುಡ್ಗೆ ಎಂಟ್ರಿ ಕೊಡಲಿದ್ದಾರಾ ನ್ಯಾಸಾ..?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ