Anushka Shetty Marriage: ಅನುಷ್ಕಾ ಶೆಟ್ಟಿ ಮದುವೆ ಕುರಿತ ಹೊಸ ಅಪ್ಡೇಟ್​: ಸ್ಪಷ್ಟನೆ ಕೊಟ್ಟ ಸ್ವೀಟಿ..!

Anushka Shetty Marriage: 38ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ಅನುಷ್ಕಾ ಯಾವಾಗ ಹಾಗೂ ಯಾರನ್ನು ಮದುವೆಯಾಗಲಿದ್ದಾರೆ ಅನ್ನೋ ಕುತೂಹಲ ಅವರ ಅಭಿಮಾನಿಗಳದ್ದು. ಈ ಹಿಂದೆ ಅನುಷ್ಕಾ ಹೆಸರು ಬಹಳ ಹಿಂದಿನಿಂದ ಟಾಲಿವುಡ್​ ಬಾಹುಬಲಿ ಪ್ರಭಾಸ್ ಜತೆ ಕೇಳಿ ಬರುತ್ತಿತ್ತು. ಆದರೆ ಈಗ ಟಾಲಿವುಡ್​ ಸ್ವೀಟಿ ಹೆಸರು ಕ್ರಿಕೆಟಿಗರೊಬ್ಬರೊಂದಿಗೆ ಮದುವೆ ವಿಷಯದಲ್ಲಿ ಕೇಳಿ ಬರುತ್ತಿದೆ.

Anitha E | news18-kannada
Updated:February 24, 2020, 12:22 PM IST
Anushka Shetty Marriage: ಅನುಷ್ಕಾ ಶೆಟ್ಟಿ ಮದುವೆ ಕುರಿತ ಹೊಸ ಅಪ್ಡೇಟ್​: ಸ್ಪಷ್ಟನೆ ಕೊಟ್ಟ ಸ್ವೀಟಿ..!
ನಟಿ ಅನುಷ್ಕಾ ಶೆಟ್ಟಿ ಮದುವೆ ವಿಷಯ ಮತ್ತೊಮ್ಮೆ ಸದ್ದು ಮಾಡುತ್ತಿದೆ.
  • Share this:
ಟಾಲಿವುಡ್​ ಹಾಗೂ ಸ್ಯಾಂಡಲ್​ವುಡ್​ನಲ್ಲಿ ಬೋರ್​ ಆಗದೆ ಇರುವ ವಿಷಯ ಅಂದರೆ ಅದು ನಟಿ ಅನುಷ್ಕಾ ಶೆಟ್ಟಿ ಮದುವೆ ಸುದ್ದಿ. ಅನುಷ್ಕಾ ಶೆಟ್ಟಿ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಅವರ ಚಿತ್ರಕ್ಕಿಂತ ಹೆಚ್ಚಾಗಿ ಮದುವೆ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಹೌದು, 38ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ಅನುಷ್ಕಾ ಶೆಟ್ಟಿ ಯಾವಾಗ ಹಾಗೂ ಯಾರನ್ನು ಮದುವೆಯಾಗಲಿದ್ದಾರೆ ಅನ್ನೋ ಕುತೂಹಲ ಅವರ ಅಭಿಮಾನಿಗಳದ್ದು. ಈ ಹಿಂದೆ ಅನುಷ್ಕಾ ಹೆಸರು ಬಹಳ ಹಿಂದಿನಿಂದ ಟಾಲಿವುಡ್​ 'ಬಾಹುಬಲಿ' ಪ್ರಭಾಸ್ ಜತೆ ಕೇಳಿ ಬರುತ್ತಿತ್ತು. ಆದರೆ ಈಗ ಟಾಲಿವುಡ್​ ಸ್ವೀಟಿ ಹೆಸರು ಕ್ರಿಕೆಟಿಗರೊಬ್ಬರೊಂದಿಗೆ ಮದುವೆ ವಿಷಯದಲ್ಲಿ ಕೇಳಿ ಬರುತ್ತಿದೆ.

Actress Anushka Shetty is going to marry team India cricketer and news going viral
ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್​


ಪ್ರಭಾಸ್ ಹಾಗೂ ಅನುಷ್ಕಾ ಯಾವಾಗ ಮದುವೆಯಾಗಲಿದ್ದಾರೆ ಅಂತ ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಈ ಜೋಡಿ ನಾವಿಬ್ಬರು ಒಳ್ಳೆಯ ಸ್ನೇಹಿತರು ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಕಹಿ ಸುದ್ದಿ ನೀಡಿದ್ದರು.

ಇದನ್ನೂ ಓದಿ: Nikhil-Revathi Wedding Card: ಸಿಂಪಲ್ಲಾಗಿದೆ ನಿಖಿಲ್​-ರೇವತಿ ಲಗ್ನಪತ್ರಿಕೆ: ಕರೆಯೋಲೆಯಲ್ಲಿದೆ ಕುಮಾರಸ್ವಾಮಿ ಬರೆದ ಪತ್ರ..!

ಆದರೆ ಅನುಷ್ಕಾರ 38ನೇ ಹುಟ್ಟುಹಬ್ಬದ ನಂತರ ಮತ್ತೆ ಅವರ ಮದುವೆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈಗ ಇದರಿಂದಾಗಿ ಸ್ವೀಟಿ ಸಖತ್​ ಸಿಟ್ಟಾಗಿದ್ದಾರಂತೆ. ಅಲ್ಲದೆ ಇತ್ತೀಚೆಗೆ ತೆಲುಗು ಸಿನಿಮಾವೊಂದರ ಕಾರ್ಯಕ್ರಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತನ್ನ ಮದುವೆ ವಿಷಯದ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Janhvi Kapoor: ಅಗಲಿದ ಶ್ರೀದೇವಿಯನ್ನು ನೆನೆದು ಭಾವುಕರಾದ ಮಗಳು ಜಾಹ್ನವಿ ಕಪೂರ್​..!ಸದ್ಯ ನನ್ನ ಗಮನ ಏನಿದ್ದರೂ ಸಿನಿಮಾಗಳತ್ತ. 'ನಿಶ್ಯಬ್ಧಂ' ಸಿನಿಮಾದ ಕೆಲಸಗಳಲ್ಲಿ ವ್ಯಸ್ತವಾಗಿದ್ದು, ಈಗಲೇ ಮದುವೆಯಾಗುವುದಿಲ್ಲ ಎಂದಿದ್ದಾರೆ. ಅಲ್ಲಿಗೆ ಅನುಷ್ಕಾರ ಮದುವೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಸುದ್ದಿಗಳೆಲ್ಲ ಗಾಳಿ ಮಾತುಗಳು ಅಂತ ಸ್ಪಷ್ಟಪಡಿಸಿದ್ದಾರೆ.

Rashmika Mandanna: ಐಟಿ ದಾಳಿ ನಂತರ ಹೈದರಾಬಾದಿನಲ್ಲಿ ಮನೆ ಖರೀದಿಸಲಿದ್ದಾರಂತೆ ರಶ್ಮಿಕಾ..!


 
First published:February 24, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading