ನಟಿ ಅನುಷ್ಕಾ ಶೆಟ್ಟಿ ತೂಕ ಇಳಿಸಿಕೊಂಡ ನಂತರ ಅವರಿಗೆ ಒಂದರ ಹಿಂದೆ ಒಂದರಂತೆ ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ. ಇತ್ತೀಚೆಗಷ್ಟೆ ಅನುಷ್ಕಾಗೆ ಚಿರು ನಟಿಸುತ್ತಿರುವ 'ಆಚಾರ್ಯ' ಚಿತ್ರದಿಂದ ಅವಕಾಶ ಅರಸಿ ಬಂದಿತ್ತು.
ಕನ್ನಡತಿಯಾಗಿ ಟಾಲಿವುಡ್ನಲ್ಲಿ ಮಿಂಚಿದ ನಟಿ ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿ. ಟಾಲಿವುಡ್ನಲ್ಲಿ ಸ್ಟಾರ್ ನಟಿಯಾಗಿರುವ ಅನುಷ್ಕಾ ಈಗ ಕನ್ನಡತಿಯಾಗಿ ಬೆಳ್ಳಿ ಪರದೆ ಮೇಲೆ ಮಿಂಚಲಿದ್ದಾರೆ. ನಂಜನಗೂಡಿನ ಖ್ಯಾತ ಗಾಯಕಿಯ ಪಾತ್ರದಲ್ಲಿ ಸ್ವೀಟಿ ನಟಿಸಲಿದ್ದಾರೆ.
![Finally for the first time Anushka Shetty spoke about casting couch]()
ಅನುಷ್ಕಾ ಶೆಟ್ಟಿ
ಅನುಷ್ಕಾ ನಟನೆಯ 'ನಿಶ್ಯಬ್ಧಂ' ಬಿಡುಗಡೆಯ ಹೊಸ್ತಿಲಲ್ಲಿದೆ. ಇದರ ಜೊತೆಗೆ ಆಚಾರ್ಯ ಸಿನಿಮಾದಲ್ಲೂ ನಾಯಕಿಯಾಗಿ ನಟಿಸೋಕೆ ಅವಕಾಶ ಸಿಕ್ಕಿತ್ತು. ಅಲ್ಲದೆ ಟಾಲಿವುಡ್ನಲ್ಲಿ ನಿರ್ಮಾಣವಾಗಲಿರುವ ಬಯೊಪಿಕ್ ಒಂದರಲ್ಲಿ ಅನುಷ್ಕಾಗೆ ಬಂಪರ್ ಅವಕಾಶ ಸಿಕ್ಕಿದೆಯಂತೆ.
ಇದನ್ನೂ ಓದಿ: Roberrt Darshan: ರಾಬರ್ಟ್ ಸಿನಿಮಾಗಾಗಿ ಮಾಂಸಾಹಾರ ತ್ಯಜಿಸಿದ್ದ ಡಿಬಾಸ್ ದರ್ಶನ್..!
ಹೌದು, ಅನುಷ್ಕಾ ಶೆಟ್ಟಿಗೆ 'ನಿಶ್ಯಬ್ಧಂ' ನಂತರ ಅವಕಾಶಗಳ ಸುರಿಮಳೆಯಾಗುತ್ತಿದೆ. ಆದರೆ ಸ್ವೀಟಿ ಸದ್ಯಕ್ಕೆ ಚಿರು ಸಿನಿಮಾಗೆ ಒಲ್ಲೆ ಎಂದ ನಂತರ ಈಗ ಬಯೊಪಿಕ್ ಒಂದಕ್ಕೆ ಓಕೆ ಮಾಡಿದ್ದಾರಂತೆ.
ಟಾಲಿವುಡ್ನಲ್ಲಿ ಬಯೊಪಿಕ್ಗಳಿಗೇನು ಕೊರತೆ ಇಲ್ಲ. ಸಾವಿತ್ರಿ ಅವರ ಜೀವನಾಧಾರಿತ ಸಿನಿಮಾ ನಂತರ ಜಯಲಲಿತಾ ಅವರ ಬಯೊಪಿಕ್ ಸಿದ್ಧಗೊಳ್ಳುತ್ತಿದೆ. ಹೀಗಿರುವಾಗಲೇ ಮತ್ತೊಂದು ಸಿನಿಮಾ ಈಗ ಸೆಟ್ಟೇರಲು ಸಿದ್ಧವಾಗಿದೆ.
ಇದನ್ನೂ ಓದಿ: Ranveer Singh: ಕೊರೋನಾ ಎಫೆಕ್ಟ್ನಿಂದಾಗಿ ಜೋಂಬಿಯಾಗ್ತಾರಂತೆ ರಣವೀರ್ ಸಿಂಗ್..!
ಹಿರಿಯ ನಿರ್ದೇಶಕ ಸಿಂಗಿತಂ ಶ್ರೀನಿವಾಸ ರಾವ್ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಕನ್ನಡತಿ ಬೆಂಗಳೂರು ನಾಗರತ್ನಮ್ಮ ಅವರ ಜೀವನಾಧಾರಿತ ಚಿತ್ರದಲ್ಲಿ ಅನುಷ್ಕಾ ನಟಿಸಲಿದ್ದಾರೆ. ಕರ್ನಾಟಿಕ್ ಸಂಗೀತದ ಶ್ರೇಷ್ಠ ಗಾಯಕಿಯಾದ ನಾಗರತ್ನಮ್ಮ ಅವರು ಮೂಲತಃ ನಂಜನಗೂಡಿನವರು.
ಸದ್ಯ ಅನುಷ್ಕಾ ಶೆಟ್ಟಿ ನಟನೆಯ 'ನಿಶ್ಯಬ್ಧಂ' ಕೊರೋನಾ ಭೀತಿಯಿಂದಾಗಿ ನಿರ್ಧಾರಿತ ಸಮಯಕ್ಕೆ ಅಂದರೆ ಏ. 2ಕ್ಕೆ ಬಿಡುಗಡೆಯಾಗುವುದು ಅನುಮಾನವಾಗಿದೆ.
33ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಾಲಿವುಡ್ ಕ್ವೀನ್ ಕಂಗನಾ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ