Anushka Sharma: ಅಮ್ಮ ಹೇಳಿಕೊಟ್ಟ ಅಡುಗೆ ಟ್ರೈ ಮಾಡಿದ ಅನುಷ್ಕಾ ಶರ್ಮಾ, ರೆಸಿಪಿ ಇಲ್ಲಿದೆ..ನೀವೂ ಟ್ರೈ ಮಾಡಿ 

Paella Recipe: ನೀವೇನಾದರೂ ಭೋಜನಪ್ರಿಯರಾಗಿದ್ದರೆ, ಅರ್ಚನಾ ದೋಶಿ ಅವರ ಈ ಪಾಯೆಲ್ಲಾ ರೆಸಿಪಿಯನ್ನು ಖಂಡಿತಾ ಪ್ರಯತ್ನಿಸಬಹುದು.

ಅನುಷ್ಕಾ ಶರ್ಮಾ

ಅನುಷ್ಕಾ ಶರ್ಮಾ

  • Share this:
    ನಟಿ ಅನುಷ್ಕಾ ಶರ್ಮಾಗೆ (Anushka Sharma) ಮನೆ ಊಟ (Home Food) ಅಂದ್ರೆ ತುಂಬಾ ಇಷ್ಟವಂತೆ. ಅವರು ಅಸ್ವಾದಿಸಿದ ತಮ್ಮ ಮನೆಯಲ್ಲೇ ಮಾಡಿದ ಪಾಯೆಲ್ಲಾದ (paella) ಝಲಕ್ ಅನ್ನು ಸೋಮವಾರ ಹಂಚಿಕೊಂಡರು. ಅವರು ತಮ್ಮ ಇನ್‍ಸ್ಟಾಗ್ರಾಂ (Instagram) ಖಾತೆಯಲ್ಲಿ ಆ ತಿನಿಸಿನ ಫೋಟೋ ಹಂಚಿಕೊಂಡು, “ಮನೆಯಲ್ಲೇ ಮಾಡಿದ ವೀಗನ್ ಸಾಸೇಜ್ ಪಾಯೆಲ್ಲಾ, ಅಮ್ಮನ ಕೃಪೆ” ಎಂದು ಅದಕ್ಕೆ ಅಡಿಬರಹ ನೀಡಿದ್ದರು.

    ಪಾಯೆಲ್ಲಾ ಸ್ಪೆನ್ ಮೂಲದ ವಿಶೇಷ ವೆಲೆನ್ಸಿಯಲ್ ಅನ್ನದ ಖಾದ್ಯ.

    ಪಾಯೆಲ್ಲಾ, ಸ್ಥಳೀಯ ಸ್ಪಾನಿಶ್ ರೈತರು, ಒಂದು ಪ್ಯಾನ್‍ನಲ್ಲಿ ಮಾಂಸ, ಅಕ್ಕಿ, ಕೇಸರಿ ಮತ್ತು ತರಕಾರಿಗಳನ್ನು ಹಾಕಿ ಮಾಡುವ ಸಾಂಪ್ರದಾಯಿಕ ಅಡುಗೆ. ಈ ದಿನಗಳಲ್ಲಿ ಹಲವಾರು ವಿಧಗಳಲ್ಲಿ ತಯಾರಿಸಲ್ಪಡುವ ಜನಪ್ರಿಯ ಖಾದ್ಯ ಇದಾಗಿದೆ. “ಪಾಯೆಲ್ಲಾ, ಸೀಫುಡ್, ಮಾಂಸ, ಕೇಸರಿ ಮತ್ತು ಲಿಂಬೆ ಹಾಕಿ ತಯಾರಿಸುವ ಸ್ಪ್ಯಾನಿಶ್ ಅನ್ನದ (ಬೊಂಬಾ) ಖಾದ್ಯವಾಗಿದೆ. ನಮ್ಮ ಪ್ರೀತಿಯ ಬಿರಿಯಾನಿಯ ಇನ್ನೊಂದು ರೂಪವಿದು” ಎನ್ನುತ್ತಾರೆ ಕೆಫೆ ಡೆಲ್ಲಿ ಹೈಟ್ಸ್‌ನ ಕಾರ್ಪೊರೇಟ್ ಶೆಫ್ ಆಶಿಶ್ ಸಿಂಗ್.

    “ವೇಗನ್ ಪಾಯೆಲ್ಲಾವನ್ನು ಮಾಂಸದಂತೆ ಕಾಣುವ ಪದಾರ್ಥಗಳಿಂದ ತಯಾರಿಸುತ್ತಾರೆ. ಇಲ್ಲವಾದಲ್ಲಿ, ಸೋಯಾ ಚಂಕ್ಸ್ ಮತ್ತು ಮಶ್ರೂಮ್‍ನಂತಹ ತರಕಾರಿಗಳನ್ನು ಬಳಸಬಹುದು. ಆದರೆ, ಪ್ರಾಮಾಣಿಕವಾಗಿ ಹೇಳುವುದಾದರೆ, ವೆಗನ್ ಪಾಯೆಲ್ಲಾ ಎಂಬುದಿಲ್ಲ, ಅದೊಂದು ಸಮಕಾಲೀನ ಪ್ರಯತ್ನವಷ್ಟೆ” ಎನ್ನುತ್ತಾರೆ ಸಿಂಗ್.

    ನೀವೇನಾದರೂ ಭೋಜನಪ್ರಿಯರಾಗಿದ್ದರೆ, ಅರ್ಚನಾ ದೋಶಿ ಅವರ ಈ ಪಾಯೆಲ್ಲಾ ರೆಸಿಪಿಯನ್ನು ಖಂಡಿತಾ ಪ್ರಯತ್ನಿಸಬಹುದು.

    ಇದನ್ನು ಓದಿ: Duniya Vijay ಬರೋವರೆಗೂ ತಾಳಿ ಕಟ್ಟಿಸಿಕೊಳ್ಳಲ್ಲ: ಹಠ ಹಿಡಿದ ದಾವಣೆಗೆರೆಯ ಮದುಮಗಳು!

    ಸಾಮಗ್ರಿಗಳು:

    1 ಕಪ್ – ಅಕ್ಕಿ, ಚಿಕ್ಕ / ಮಧ್ಯಮ ಧಾನ್ಯ
    1 – ಕತ್ತರಿಸಿದ ಈರುಳ್ಳಿ
    3- ಲವಂಗ, ಸಣ್ಣದಾಗಿ ಕತ್ತರಿಸಿದ ಅಥವಾ ಜಜ್ಜಿದ ಬೆಳ್ಳುಳ್ಳಿ
    1 – ಉದ್ದಕ್ಕೆ ಹೋಳು ಮಾಡಿದ ಕೆಂಪು ಕ್ಯಾಪ್ಸಿಕಮ್
    1 – ಉದ್ದಕ್ಕೆ ಹೋಳು ಮಾಡಿದ ಹಸಿರು ಕ್ಯಾಪ್ಸಿಕಮ್
    1 – ಉದ್ದಕ್ಕೆ ಹೋಳು ಮಾಡಿದ ಹಳದಿ ಕ್ಯಾಪ್ಸಿಕಮ್
    1/2 ಕಪ್ – ಕತ್ತರಿಸಿದ ಬಟನ್ ಮಶ್ರೂಮ್ (ನೀವು ಬೀನ್ಸ್, ಬಟಾಣಿ, ಬದನೆಕಾಯಿ, ಜ್ಯುಕಿನಿಯಂತಹ ತರಕಾರಿಗಳನ್ನು ಬಳಸಬಹುದಿತ್ತು)
    1 ಟೇಬಲ್ ಚಮಚ – ಎಕ್ಸ್ಟ್ರಾ ವರ್ಜಿನ್ ಆಲಿವ್ ಎಣ್ಣೆ
    1/4 ಚಮಚ – ಅರಿಶಿನ
    1/2 ಕಪ್ – ಮನೆಯಲ್ಲೇ ತಯಾರಿಸಿದ ಟೊಮ್ಯಾಟೋ ಪ್ಯೂರಿ
    2 1/2 ಕಪ್ – ವೆಜಿಟೆಬಲ್ ಸ್ಟಾಕ್
    1 ಚಿಟಿಕೆ – ಕೇಸರಿ ದಳಗಳು
    1 ಚಮಚ - ಪ್ಯಾಪ್ರಿಕ ಪುಡಿ
    1/2 ಚಮಚ – ಕರಿ ಮೆಣಸು, ರುಚಿಗೆ ತಕ್ಕಷ್ಟು ಪುಡಿ ಮಾಡಿದ ಉಪ್ಪು
    ಅಲಂಕಾರಕ್ಕೆ ಅರ್ಧ ಕತ್ತರಿಸಿದ 5-6 ಕಪ್ಪು ಆಲಿವ್
    ಅಲಂಕಾರಕ್ಕೆ ಕತ್ತರಿಸಿದ ಪಾಸ್ರ್ಲೆ ಸೊಪ್ಪು
    ನಿಂಬೆ ಹಣ್ಣಿನ ತುಂಡುಗಳು

    ಇದನ್ನು ಓದಿ: Navya Nair- ‘ದೃಶ್ಯ’ ನಟಿ ನವ್ಯಾ ನಾಯರ್ ಖರೀದಿಸಿದ್ದಾರೆ ಐಷಾರಾಮಿ Mini Countryman ಕಾರು



    ವಿಧಾನ :

    • ಕೇಸರಿಯನ್ನು ಪುಡಿ ಮಾಡಿ, ತೆಗೆದಿಡಿ.

    • ನಂತರ, ಪ್ಯಾನ್‍ನಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇರಿಸಿ. ಈರುಳ್ಳಿ ಗುಲಾಬಿ ಬಣ್ಣಕ್ಕೆ ತಿರುಗುವವರೆಗೆ 1-2 ನಿಮಿಷ ಹುರಿಯಿರಿ.

    • ಬಳಿಕ ಮಶ್ರೂಮ್ ಮತ್ತು ಕ್ಯಾಪ್ಸಿಕಮ್‍ಗಳನ್ನು ಹಾಕಿ , ಅವು ಮೆತ್ತಗಾಗುವವರೆಗೆ ಒಂದೆರಡು ನಿಮಿಷ ಹುರಿಯಿರಿ. ಅದರಿಂದ ಒಂದಿಷ್ಟು ಮಶ್ರೂಮ್ ಮತ್ತು ಕ್ಯಾಪ್ಸಿಕಮ್, ನಂತರ ಗಾರ್ನಿಶ್ ಮಾಡಲು ತೆಗೆದಿಡಿ.

    • ಪ್ಯಾನ್‍ಗೆ ಉಳಿದ ತರಕಾರಿಗಳನ್ನು ಹಾಕಿ ಹುರಿಯುವುದನ್ನು ಮುಂದುವರೆಸಿ. ಅದಕ್ಕೆ ಅರಿಶಿನ, ಹೊಗೆಯಾಡಿಸಿದ ಪ್ಯಾಪ್ರಿಕಾ ಮತ್ತು ಟೊಮ್ಯಾಟೋ ಪ್ಯೂರಿ ಸೇರಿಸಿ, ಕೆಲವು ನಿಮಿಷಗಳವರೆಗೆ ಮಂದ ಉರಿಯಲ್ಲಿ ಬೇಯಿಸಿ.

    • ಅದಕ್ಕೆ ಸ್ಟಾಕ್, ಉಪ್ಪು ಮತ್ತು ಕೇಸರಿ ಸೇರಿಸಿ ಕದಡಿಸಿ. ಕುದಿ ಬರುವವರೆಗೆ ಮಂದ ಉರಿಯಲ್ಲಿ ಬೇಯಿಸುತ್ತಿರಿ.

    • ಬಳಿಕ , ಅಕ್ಕಿ ಹಾಕಿ ಚೆನ್ನಾಗಿ ತಿರುವಿ ಮತ್ತು ಪ್ಯಾನ್ ಅನ್ನು ಮುಚ್ಚಿ. ಅಕ್ಕಿಯನ್ನು ನೀರು ಇಂಗುವವರೆಗೆ (12-15 ನಿಮಿಷ) ಬೇಯಿಸಿ. ಬೇಯಲು ಅಗತ್ಯವಿದ್ದರೆ ಕೊಂಚ ಸ್ಟಾಕ್ ಸೇರಿಸಿ. ಉದುರು ಉದುರಾಗಿ ಬೆಂದರೆ ಸಾಕು, ತುಂಬಾ ಮೆತ್ತಗಾಗುವಂತೆ ಬೇಯಿಸಬೇಡಿ.

    • ಬೆಂದ ನಂತರ ಒಲೆ ಆರಿಸಿ. ಪಾಯೆಲ್ಲಾವನ್ನು ಅದೇ ಪಾತ್ರೆಯಲ್ಲಿ ಅಥವಾ ಬೇರೆ ಪಾತ್ರೆಗೆ ಹಾಕಿ ಅಥವಾ ತಟ್ಟೆಯಲ್ಲಿ ಬಡಿಸಿ.

    • ಮಶ್ರೂಮ್, ಕ್ಯಾಪ್ಸಿಕಮ್ ಮತ್ತು ಆಲಿವ್ ತುಂಡುಗಳಿಂದ , ಕತ್ತರಿಸಿದ ಪಾಸ್ರ್ಲೆ ಮತ್ತು ಲಿಂಬೆ ಹೋಳುಗಳಿಂದ ಅಲಂಕರಿಸಿ.
    Published by:Harshith AS
    First published: